Asianet Suvarna News Asianet Suvarna News

ಉಕ್ಕಿ ಹರಿದ ಕಾವೇರಿ ನದಿ ತಟದಲ್ಲಿ ಸಿಲುಕಿದ ನಾಯಿಗೆ ಡ್ರೋನ್ ಮೂಲಕ ಬಿರಿಯಾನಿ ರವಾನೆ!

ಕಾವೇರಿ ನದಿ ಅಬ್ಬರಕ್ಕೆ ಸಿಲುಕಿ ನಾಯಿ ಸೇರಿದಂತೆ ಹಲವು ಪ್ರಾಣಿಗಳು ತತ್ತರಿಸಿದೆ. ಉಕ್ಕಿ ಹರಿಯುತ್ತಿರುವ ನೀರು, ಕಲ್ಲು ಬಂಡೆಗಳ ಮೇಲೆ ಅಸಹಾಯಕವಾಗಿ ಈ ನಾಯಿಗಳಿಗೆ ಇದೀಗ ಡ್ರೋನ್ ಮೂಲಕ ಬಿರಿಯಾನಿ ರವಾನಿಸಲಾಗಿದೆ. ಈ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
 

Drone airdrop biriyani food to stranded dog in overflow Cauvery river near mettur ckm
Author
First Published Aug 3, 2024, 4:52 PM IST | Last Updated Aug 3, 2024, 4:52 PM IST

ಮೆಟ್ಟೂರು(ಆ.03)  ಕೊಡುಗು ಸೇರಿದಂತೆ ಹಲವೆಡೆ ಸುರಿಯುತ್ತಿರುವ ಭಾರಿ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಕಾವೇರಿ ನದಿ ತಟಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಕೆಆರ್‌ಎಸ್ ಜಲಾಶಯದಿಂದಲೂ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಇದೀಗ ಮೆಟ್ಟೂರ್ ಬಳಿ ಹಲವು ನಾಯಿಗಳು ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಕಾರಣ ಸಿಲುಕಿ ಕೊಂಡಿದೆ. ಈ ನಾಯಿಗಳಿಗೆ ಇದೀಗ ಈ ನಾಯಿಗಳಿಗೆ ಜಿಯೋಟ್ ಟೆಕ್ನೋ ವ್ಯಾಲಿ ಸಂಸ್ಥೆ ಡ್ರೋನ್ ಮೂಲಕ ಬಿರಿಯಾನಿ ರವಾನೆ ಮಾಡಿದೆ. ಭಾನುವಾರ ಈ ನಾಯಿಗಳನ್ನು ರಕ್ಷಣೆ ಮಾಡಲು ತಯಾರಿ ನಡೆಸಲಾಗಿದೆ.

ತಮಿಳುನಾಡಿನ ಮೆಟ್ಟೂರ್ ಡ್ಯಾಮ್ ಕೆಳಭಾಗದಲ್ಲಿ ಕಾವೇರಿ ನದಿ ಕೆಲ ಮೀಟರ್ ದೂರ ಸೀಳಾಗಿ ಹರಿಯುತ್ತದೆ. ಈ ನಡುವಿನ ಕಲ್ಲು ಬಂಡೆಗಳ ಜಾಗದಲ್ಲಿ 7 ನಾಯಿಗಳು ಸಿಲುಕಿಕೊಂಡಿದೆ. ಏಕಾಏಕಿ ನೀರು ಹೆಚ್ಚಾಗಿರುವ ಕಾರಣ ಕಳೆದ ಮೂರು ದಿನಗಳಿಂದ ನಾಯಿ ದಡ ಸೇರಲು ಸಾಧ್ಯವಾಗದೆ, ಅತ್ತ ಆಹಾರ ಇಲ್ಲದೆ ಪರದಾಡುತ್ತಿದೆ. 

ಆಟವಾಡುತ್ತಿದ್ದ ಪುಟ್ಟ ಕಂದನ ದಾಳಿಯಿಂದ ರಕ್ಷಿಸಿದ ನಾಯಿ, ಮೈ ಜುಮ್ಮೆನಿಸುವ ದೃಶ್ಯ ಸೆರೆ!

ಮೆಟ್ಟೂರ್ ಡ್ಯಾಮ್‌ನಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ಮೆಟ್ಟೂರು ಡ್ಯಾಮ್ ಗೇಟ್ ತೆರೆಯುವ ವೇಳೆ ವಿಡಿಯೋ ಹಾಗೂ ಫೋಟೋಗಳನ್ನು ಚಿತ್ರೀಕರಿಸಲಾಗಿತ್ತು. ಈ ವೇಳೆ ನದಿಯ ಒಂದು ಭಾಗದಲ್ಲಿ ಕೆಲ ನಾಯಿಗಳು ಸಿಲುಕಿಕೊಂಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಈ ನಾಯಿಗಳ ರಕ್ಷಣೆಗೆ ಜಿಯೋಟ್‌ಟೆಕ್ನೋವ್ಯಾಲಿ ಕಂಪನಿ ಡ್ರೋನ್ ಮೂಲಕ ಆಗಮಿಸಿ ನಾಯಿಗೆ ಬಿರಿಯಾನಿ ಒದಗಿಸಿದೆ.

30 ಕೆಜಿ ಸಾಮರ್ಥ್ಯ ಡ್ರೋನ್ ಮೂಲಕ 7 ನಾಯಿಗಳಿಗೆ ಬಿರಿಯಾನಿ ಆಹಾರ ಪೂರೈಕೆ ಮಾಡಲಾಗಿದೆ. ಆರಂಭದಲ್ಲೇ ಒಂದು ನಾಯಿ ಸಿಲುಕಿಕೊಂಡಿದೆ ಎಂಬ ಮಾಹಿತಿ ಇತ್ತು. ಆದರೆ ಕ್ಯಾಮೆರಾ ಬಳಸಿ ನೋಡಿದಾಗ 7 ನಾಯಿಗಳು ಈ ಜಾಗದಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ಮೆಟ್ಟೂರು ಡ್ಯಾಮ್ ಅಧಿಕಾರಿಗಳು ಹಾಗೂ ಟೆಕ್ನೋವ್ಯಾಲಿ ಕಂಪನಿ ನಿರ್ದೇಶಕ ಪಿ ಸರ್ವೇಶ್ವರನ್ ಡ್ರೋನ್ ಮೂಲಕ ನಾಯಿಗೆ ಆಹಾರ ಒದಗಿಸಿದ್ದಾರೆ.

Wayanad landslide ಮಣ್ಣಿನಡಿ ಸಿಲುಕಿದವರ ರಕ್ಷಣೆಗೆ ಶ್ವಾನದಳ, ಹೇಗೆ ಕೆಲಸ ಮಾಡುತ್ತೆ ಶ್ವಾನಗಳು?

ಇದೀಗ ಟೆಕ್ನೋವ್ಯಾಲಿ ಸಂಸ್ಥೆ ಈ ನಾಯಿಗಳನ್ನು ರಕ್ಷಣೆಗೆ ಮುಂದಾಗಿದೆ. ತಂತ್ರಜ್ಞಾನ, ಡ್ರೋನ್ ಬಳಸಿ ಕಾವೇರಿ ತಟದಲ್ಲಿ ಸಿಲುಕಿರುವ ಈ 7 ನಾಯಿಗಳನ್ನು ಭಾನುವಾರ(ಆ.04)ಸುರಕ್ಷಿತವಾಗಿ ರಕ್ಷಣೆ ಮಾಡಲು ಮುಂದಾಗಿದೆ. ಇದಕ್ಕಾಗಿ ಭಾರಿ ಸಾಮರ್ಥ್ಯದ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಬಳಿಕ ಡ್ರೋನ್ ಮೂಲಕ ಗೇಜ್ ಇಳಿಸಲಾಗುತ್ತದೆ. ಈ ಗೇಜ್ ಒಳಗೆ ಆಹಾರವಿಟ್ಟು ನಾಯಿಯನ್ನು ರಕ್ಷಿಸಲು ತಯಾರಿ ನಡೆಸಲಾಗಿದೆ.

Latest Videos
Follow Us:
Download App:
  • android
  • ios