Asianet Suvarna News Asianet Suvarna News

ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಉದ್ಯಮಿ ಸಾವು: ವಿಡಿಯೋ

ಕೋವಿಡ್ ನಂತರ ಇತ್ತೀಚೆಗೆ ವ್ಯಾಯಾಮ ಮಾಡುತ್ತಲೇ ಕುಸಿದು ಬಿದ್ದು ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ.  ಜಿಮ್‌ನಲ್ಲಿ  ಕುಳಿತಲ್ಲಿ ನಿಂತಲ್ಲಿ ಕುಸಿದು ಬಿದ್ದು ಮೃತಪಡುವವರ ಸಂಖ್ಯೆ ಹೆಚ್ಚಾಗಿದೆ.

Heart Attack Businesman died while doing workout in gym at Indoor akb
Author
First Published Jan 6, 2023, 12:20 PM IST

ಇಂದೋರ್‌: ಕೋವಿಡ್ ನಂತರ ಇತ್ತೀಚೆಗೆ ವ್ಯಾಯಾಮ ಮಾಡುತ್ತಲೇ ಕುಸಿದು ಬಿದ್ದು ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ.  ಜಿಮ್‌ನಲ್ಲಿ  ಕುಳಿತಲ್ಲಿ ನಿಂತಲ್ಲಿ ಕುಸಿದು ಬಿದ್ದು ಮೃತಪಡುವವರ ಸಂಖ್ಯೆ ಹೆಚ್ಚಾಗಿದ್ದು,  ಇಂತಹ ಹಲವು ಘಟನೆಗಳ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  ಈಗ ಮಧ್ಯಪ್ರದೇಶದ ಇಂದೋರ್‌ನಲ್ಲಿ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.  ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬರು ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 

ಟ್ರೆಡ್‌ಮಿಲ್‌ನಲ್ಲಿ (Treademill)ಕಸರತ್ತು ನಡೆಸಿ ಇನ್ನೇನು  ಹೊರಹೋಗಬೇಕು ಎನ್ನುವಷ್ಟರಲ್ಲಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಅಲ್ಲಿದ್ದ ಜನರು ಆಸ್ಪತ್ರೆಗೆ ಕರೆದೊಯ್ದರಾದರೂ ಜೀವ ಉಳಿಸಲಾಗಲಿಲ್ಲ.  ಆಸ್ಪತ್ರೆಯಲ್ಲಿ ವೈದ್ಯರು ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಮೃತ ವ್ಯಕ್ತಿ ಹೊಟೇಲ್ (Hotel Owner) ಉದ್ಯಮಿಯಾಗಿದ್ದರು. 

 

ಮೃತ ವ್ಯಕ್ತಿಯನ್ನು ಪ್ರದೀಪ್ ರಘುವಂಶಿ (Pradeep Raghuvamshi) ಎಂದು ಗುರುತಿಸಲಾಗಿದ್ದು, ಹೊಟೇಲ್ ಉದ್ಯಮ ನಡೆಸುತ್ತಿದ್ದ ಇವರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದಾರೆ.  ಇವರನ್ನು ಚಿಕಿತ್ಸೆಗೆ ದಾಖಲಿಸಿದ ಆಸ್ಪತ್ರೆಯ ವೈದ್ಯರು,  ಮಾಧ್ಯಮದೊಂದಿಗೆ ಮಾತನಾಡಿದ್ದು, ಜಿಮ್‌ನಲ್ಲಿ ವರ್ಕೌಟ್ (Workout)ಮಾಡುವ ಮೊದಲು ಆರೋಗ್ಯವನ್ನು ತಪಾಸಣೆ (Health checkup) ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.  ಮಧ್ಯವಯಸ್ಕ ಹಾಗೂ ಹಿರಿಯ ವ್ಯಕ್ತಿಗಳು ವ್ಯಾಯಾಮ ಮಾಡುವ ಮೊದಲು ವೈದ್ಯಕೀಯ ತಪಾಸಣೆ ಮಾಡಿಕೊಳ್ಳುವುದು ಒಳಿತು.  ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ವ್ಯಾಯಾಮ  ಮಾಡಲು ಜಿಮ್‌ಗೆ ಹೋಗುತ್ತಾರೆ.  ಆದರೆ  ವೈದ್ಯರ ಸಲಹೆ ಇಲ್ಲದೇ ಯಾವುದೇ ಪ್ರೊಟಿನ್ ಅನ್ನು ಸೇವಿಸಬಾರದು ಎಂದು ವೈದ್ಯರು ಹೇಳಿದರು.

ಬೆಂಗಳೂರು ಐಕಿಯಾದಲ್ಲಿ ಹೃದಯಾಘಾತ: ಶಾಪಿಂಗ್ ಬಂದ ವೈದ್ಯರಿಂದ ವ್ಯಕ್ತಿಯ ರಕ್ಷಣೆ

ರಘುವಂಶಿ ಹೋಗುತ್ತಿದ್ದ ಜಿಮ್‌ನ ಮಾಲೀಕ ಮಾತನಾಡಿ, ಪ್ರದೀಪ್ ರಘುವಂಶಿ ನಮ್ಮ ಹಳೆಯ ಗ್ರಾಹಕನಾಗಿದ್ದು,  ಪ್ರತಿದಿನವೂ ಜಿಮ್‌ಗೆ ಬಂದು ವ್ಯಾಯಾಮ ಮಾಡುತ್ತಿದ್ದರು.  ಅವರಿಗೆ ಒಮ್ಮೆಲೆ ಎದೆನೋವು ಕಾಣಿಸಿಕೊಂಡಿದ್ದು, ಜಿಮ್‌ನಲ್ಲಿ ಒಮ್ಮೆಲೆ ಕುಸಿದು ಬಿದ್ದರು. ಕೇವಲ ಮೂರು ನಿಮಿಷದಲ್ಲಿ ಎಲ್ಲವೂ ಮುಗಿದು ಹೋಯ್ತು ಎಂದು ಅವರು ಹೇಳಿದ್ದಾರೆ. ಹೀಗಾಗಿ ಜಿಮ್ ಮಾಡುವ ಮೊದಲು ನಿಮ್ಮ ರಕ್ತದೊತ್ತಡ, ಸಕ್ಕರೆ ಪ್ರಮಾಣವನ್ನು ತಪಾಸಣೆ ಮಾಡಿಸಿಕೊಳ್ಳುವುದೊಳಿತು. ಇದಕ್ಕಾಗಿ ವೈದ್ಯರ ಬಳಿಯೇ ಹೋಗಬೇಕೆಂದೇನಿಲ್ಲ. ಮನೆಯಲ್ಲೇ ಬಿಪಿ ಶುಗರ್ ತಪಾಸಣೆ ನಡೆಸುವಂತಹ ವೈದ್ಯಕೀಯ ಉಪಕರಣಗಳು ಈಗ ಲಭ್ಯವಿದೆ.

ಹೃದಯಾಘಾತಕ್ಕೊಳಗಾದ ಚಾಲಕ; ನಿಯಂತ್ರಣ ತಪ್ಪಿ ಎಸ್‌ಯುವಿಗೆ ಗುದ್ದಿದ ಬಸ್‌: 9 ಜನರ ದಾರುಣ ಸಾವು

Follow Us:
Download App:
  • android
  • ios