Asianet Suvarna News Asianet Suvarna News

ಬೆಂಗಳೂರು ಐಕಿಯಾದಲ್ಲಿ ಹೃದಯಾಘಾತ: ಶಾಪಿಂಗ್ ಬಂದ ವೈದ್ಯರಿಂದ ವ್ಯಕ್ತಿಯ ರಕ್ಷಣೆ

ಬೆಂಗಳೂರಿನ ನಾಗಸಂದ್ರದಲ್ಲಿರುವ ಐಕಿಯಾ ಶಾಪಿಂಗ್ ಮಾಲ್‌ಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ದಿಢೀರ್ ಹೃದಯಾಘಾತವಾಗಿದ್ದು, ಅಲ್ಲೇ ಇದ್ದ ವೈದ್ಯರೊಬ್ಬರು ಅವರಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ.

Doctor who came for shopping to IKEA saved mans life who suffers heart attack in IKEA Bengluru video viral akb
Author
First Published Jan 1, 2023, 1:11 PM IST

ಬೆಂಗಳೂರು: ಬೆಂಗಳೂರಿನ ನಾಗಸಂದ್ರದಲ್ಲಿರುವ ಐಕಿಯಾ ಶಾಪಿಂಗ್ ಮಾಲ್‌ಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ದಿಢೀರ್ ಹೃದಯಾಘಾತವಾಗಿದ್ದು, ಅಲ್ಲೇ ಇದ್ದ ವೈದ್ಯರೊಬ್ಬರು ಅವರಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ.  ಈ ವೈದ್ಯರು ಕೂಡ ಐಕಿಯಾಗೆ ಶಾಪಿಂಗ್ ಮಾಡುವ ಸಲುವಾಗಿ ಬಂದಿದ್ದಾಗ ಈ ಘಟನೆ ನಡೆದಿದೆ. ವೈದ್ಯರ ತಕ್ಷಣದ ಜೀವ ಉಳಿಸುವ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ವಿಡಿಯೋ ಚಿತ್ರೀಕರಿಸಲಾಗಿದ್ದು, ವೈದ್ಯರ ಪುತ್ರನೇ ಈ ವಿಚಾರವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವೈದ್ಯರ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವೈದ್ಯೋ ನಾರಾಯಣ ಹರಿಃ ಎಂಬ ಮಾತಿದೆ. ಅಂದರೆ ಅಪತ್ಕಾಲದಲ್ಲಿ ಜೀವ ಉಳಿಸುವ ವೈದ್ಯನೇ ನಿಜವಾದ ದೇವರು ಎಂಬುದು ಈ ಉಕ್ತಿಯ ಅರ್ಥ. ಅದರಂತೆ ವೈದ್ಯರೊಬ್ಬರು ಈಗ ಅಪತ್ಕಾಲದಲ್ಲಿ ವೈದ್ಯರ ಜೀವ ಉಳಿಸಿದ್ದಾರೆ. ಜೀವ ಉಳಿಸಿದ ವೈದ್ಯನ ಪುತ್ರ ರೋಹಿತ್ ಧಕ್ ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಅವರು ಹೀಗೆ ಬರೆದುಕೊಂಡಿದ್ದಾರೆ. ನನ್ನ ತಂದೆ ಒಬ್ಬರ ಜೀವ ಉಳಿಸಿದರು.ನಾವು ಬೆಂಗಳೂರಿನ ಐಕಿಯಾದ (IKEA) ಒಳಗೆ ಹೋಗಿದ್ದೆವು. ಅಲ್ಲಿ ಒಬ್ಬರಿಗೆ ಹೃದಯಘಾತವಾಗಿತ್ತು. ಪಲ್ಸ್ ರೇಟ್ ಕೂಡ ಇರಲಿಲ್ಲ. ಕೂಡಲೇ ಅವನ ಬಳಿ ಬಂದ ನನ್ನ ತಂದೆ ಅವನ ಜೀವ ಉಳಿಸುವ ಸಲುವಾಗಿ 10 ನಿಮಿಷಗಳಿಗೂ ಹೆಚ್ಚು ಕಾಲ ಅವನಿಗೆ ಸಿಪಿಆರ್ ಮಾಡಿ ಜೀವ ಉಳಿಸಿದರು. ಈತ ನಿಜವಾಗಿಯೂ ಅದೃಷ್ಟವಂತ ಏಕೆಂದರೆ ಈ ಘಟನೆ ಸಂಭವಿಸುವಾಗ ಮುಂದಿನ ಸಾಲಿನಲ್ಲಿಯೇ ಒಬ್ಬರು ಅರ್ಥೊಪೆಡಿಕ್ ಸರ್ಜನ್ ಒಬ್ಬರು ಶಾಪಿಂಗ್ ಮಾಡುತ್ತಿದ್ದರು. ವೈದ್ಯರು ನಿಜವಾಗಿಯೂ ನಮಗೆ ಸಿಕ್ಕಂತಹ ಆಶೀರ್ವಾದ. ಅವರ ಬಗ್ಗೆ ಗೌರವವಿರಲಿ ಎಂದು ರೋಹಿತ್ ಧಕ್ (Rohit Dhak) ಬರೆದುಕೊಂಡಿದ್ದಾರೆ. 

ಹೃದಯಾಘಾತ: ಸಿಪಿಆರ್ ಮಾಡಿ ವ್ಯಕ್ತಿಯ ಜೀವ ಉಳಿಸಿದ ಯೋಧ

ವಿಡಿಯೋದಲ್ಲಿ ಕಾಣಿಸುವಂತೆ ಐಕಿಯಾ ಫರ್ನಿಚರ್ ಸ್ಟೋರ್‌ನಲ್ಲಿ(furniture store) ವ್ಯಕ್ತಿಯೊಬ್ಬರು ನಿಶ್ಚಲರಾಗಿ ಮಲಗಿದ್ದು, ವೈದ್ಯರು ಹೃಯಘಾತದಿಂದ ಪ್ರಜ್ಞೆ ತಪ್ಪಿದ ವ್ಯಕ್ತಿಯನ್ನು ಕೆಳಗೆ ಮಲಗಿಸಿ ಸಿಪಿಆರ್ ಮಾಡುವುದನ್ನು ಕಾಣಬಹುದು. ಇದೇ ವೇಳೆ ಸುತ್ತಲು ಜನರು ಸೇರಿರುವುದನ್ನು ನೋಡಬಹುದು. ಪ್ರಜ್ಞೆ ತಪ್ಪಿದ ವ್ಯಕ್ತಿ ಸಿಪಿಆರ್ ನಂತರ ಎಚ್ಚರವಾಗಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ವೈದ್ಯರ ಕಾರ್ಯಕ್ಕೆ 23 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತ ವೈದ್ಯರ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ. ಅನೇಕರು ಸಿಪಿಆರ್(PCR) ಬಗ್ಗೆ ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ನೀಡಬೇಕು. ಜನ ಸಾಮಾನ್ಯರಿಗೆ ಅದರ ಅರಿವಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ದಿಢೀರ್ ಹೃದಯಾಘಾತಕ್ಕೀಡಾಗಿ ಎಳೆಯ ಪ್ರಾಯದ ಯುವಕ ಯುವತಿಯರು ಕೂಡ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ನಟ ಪುನೀತ್ ರಾಜ್‌ಕುಮಾರ್ (Puneeth Rajkumar), ಸಚಿವ ಉಮೇಶ್ ಕತ್ತಿ(Umesh Katti), ಹಿಂದಿ ಹಾಸ್ಯನಟ ರಾಜು ಶ್ರೀವಾಸ್ತವ್(Raju Srivastava), ಗಾಯಕ ಕೆಕೆ (singer KK) ಸೇರಿದಂತೆ ಕೋರೋನಾ ನಂತರದ ಕಾಲಘಟದಲ್ಲಿ ದಿಢೀರ್ ಹೃದಯಾಘಾತಕ್ಕೀಡಾಗಿ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಸಾಕು ನಾಯಿ ಜೊತೆ ಜಾಗಿಂಗ್ ವೇಳೆ ಥಾಯ್ಲೆಂಡ್ ರಾಣಿಗೆ ತೀವ್ರ ಹೃದಯಾಘಾತ, ಫಲಿಸಲಿಲ್ಲ ಪ್ರಾರ್ಥನೆ!

 

 

Follow Us:
Download App:
  • android
  • ios