ವಿಮೆಯ ಹಣಕ್ಕಾಗಿ ವಾಹನಗಳ ಮೇಲೆ ದಾಳಿ ಮಾಡ್ತಿತ್ತು ಈ ವಿಚಿತ್ರ ಕರಡಿ! ಹೀಗೊಂದು ಕುತೂಹಲದ ಘಟನೆ...

ವಾಹನಗಳಿಗೆ ಮಾಡಿಸಲಾದ ವಿಮೆ ಹಣವನ್ನು ಪಡೆಯುವುದಕ್ಕಾಗಿ ಕರಡಿಯೊಂದು ವಾಹನಗಳ ಮೇಲೆ ದಾಳಿ ಮಾಡಿ ಹಾನಿ ಮಾಡ್ತಿತ್ತು. ಕೊನೆಗೆ ಆಗಿದ್ದೇನು? 
 

Man Dressed In Bear Costume Stages Car Vandalism To Trick Insurance Company suc

ವಿಮಾ ಕಂಪೆನಿಗಳಿಗೆ ಮೋಸ ಮಾಡಿ ಹಣ ಪಡೆಯಲು ಸಾಕಷ್ಟು ಮಂದಿ ಹಲವಾರು ರೀತಿಯ ಮೋಸ, ವಂಚನೆ ಮಾಡುತ್ತಲೇ ಇದ್ದಾರೆ. ಲಕ್ಷ ಲಕ್ಷ, ಕೋಟಿ ಕೋಟಿ ಹಣವನ್ನು ವಂಚನೆ ಮಾಡಿರುವ ಪ್ರಕರಣಗಳೂ ಇದಾಗಲೇ ನಡೆದಿವೆ. ಕೆಲವು ಬಾರಿ ಖದೀಮರು ಸಿಕ್ಕಿಬಿದ್ದರೆ, ಮತ್ತೆ ಕೆಲವು ಸಲ ಸುಲಭದಲ್ಲಿ ತಪ್ಪಿಸಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲೊಂದು ವಿಚಿತ್ರ ಘಟನೆಯಲ್ಲಿ, ವಿಮೆ ಹಣವನ್ನು ಪಡೆಯುವುದಕ್ಕಾಗಿ ವಾಹನಗಳ ಮೇಲೆ ಕರಡಿಯೊಂದು ದಾಳಿ ಮಾಡಿ ಹೋಗುತ್ತಿತ್ತು. ವಿಮಾ ಕಂಪೆನಿಗಳಿಗೆ ತಲೆನೋವಾಗಿದ್ದ ಈ ಕರಡಿಯ ಅಸಲಿಯತ್ತನ್ನು ಕೊನೆಗೂ ಕಂಡುಹಿಡಿಯಲಾಗಿದೆ! ವಿಚಿತ್ರ ಮತ್ತು ಕುತೂಹಲ ಎನ್ನುವ ಈ ಘಟನೆ ನಡೆದಿರುವುದು ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿ. 


 ಕ್ಯಾಲಿಫೋರ್ನಿಯಾದ ಸ್ನೇಹಿತರ ಗುಂಪು ವಾಹನಗಳಿಂದ ವಿಮೆ ಹಣ ಪಡೆಯುವ ಸಲುವಾಗಿ ಕರಡಿಯ ವೇಷ ಧರಿಸಿ ವಾಹನಗಳ ಮೇಲೆ ದಾಳಿ ಮಾಡುತ್ತಿದ್ದರು.  ಐಷಾರಾಮಿ ಕಾರುಗಳನ್ನು ಧ್ವಂಸಗೊಳಿಸಿ ನಕಲಿ ವಿಮೆ ಕ್ಲೈಮ್‌ಗಳನ್ನು ಸಲ್ಲಿಸುವಲ್ಲಿ ಯಶಸ್ವಿಯೂ ಆಗುತ್ತಿದ್ದರು. ವಿಮೆ ನೀಡುವ ಸಂದರ್ಭದಲ್ಲಿ ಸ್ಥಳೀಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದರೆ ಅಲ್ಲಿ ಕರಡಿ ದಾಳಿ ಮಾಡುತ್ತಿರುವುದು ಕಾಣಿಸುತ್ತಿತ್ತು. ಅದ್ದರಿಂದ ವಿಮೆ ಹಣವನ್ನು ಸುಲಭದಲ್ಲಿ ಪಡೆದುಕೊಳ್ಳುತ್ತಿದ್ದರು ಈ ಖದೀಮರು. ಸಿಸಿಟಿವಿ ಇಲ್ಲದ ಕಡೆಗಳಲ್ಲಿ ತಾವೇ ವಿಡಿಯೋ ರೆಕಾರ್ಡ್​ ಮಾಡಿ ಅದನ್ನು ಕೋರ್ಟ್​ಗೆ ಸಲ್ಲಿಸುತ್ತಿದ್ದರು. ಇದನ್ನು ನಂಬಿ ವಿಮಾ ಕಂಪೆನಿ ಹಣವನ್ನು ನೀಡುತ್ತಿತ್ತು. 

ನಿನ್ನ ಕಥೆ ಹೊರಗೆ ಬಂದಿದೆ... ಜೈಲಿನಲ್ಲಿ ನೋಡ್ಕೋತೀನಿ... ದೀಪಾವಳಿ ಗಿಫ್ಟ್​ ಹೆಸರಲ್ಲಿ ತಮನ್ನಾಗೆ ಕೈಕೋಳ!

ಆದರೆ ಖದೀಮರು ಒಂದಲ್ಲ ಒಂದು ದಿನ ತಗ್ಲಾಕ್ಕೊಳ್ಳೇ ಬೇಕಲ್ವಾ? ಪದೇ ಪದೇ ಇದೇ ರೀತಿಯ ಘಟನೆ ನಡೆಯುತ್ತಿರುವುದರಿಂದ ವಿಮಾ ಕಂಪೆನಿಗಳಿಗೆ ಡೌಟ್​ ಬಂದಿದೆ. ಬಳಿಕ ಸಿಸಿಟಿವಿ ಮತ್ತು ವಿಡಿಯೋಗಳನ್ನು ಸರಿಯಾಗಿ ಪರಿಶೀಲಿಸಿದಾಗ, ಇದು ಕರಡಿಯಲ್ಲ, ಬದಲಿಗೆ ಕರಡಿ ವೇಷ ಧರಿಸಿರುವ ಮನುಷ್ಯರು ಎನ್ನುವುದು ತಿಳಿದು ಬಂದಿದೆ.  ಘಟನೆಗೆ ಸಂಬಂಧಿಸಿದಂತೆ,  ರೂಬೆನ್ ತಮ್ರಾಜಿಯಾನ್, ಅರರಾತ್ ಚಿರ್ಕಿನಿಯನ್, ವಾಹೆ ಮುರಾದ್ಖಾನ್ಯನ್ ಮತ್ತು ಅಲ್ಫಿಯಾ ಜುಕರ್‌ಮ್ಯಾನ್ ಎಂಬುವವರನ್ನು ಅರೆಸ್ಟ್​ ಮಾಡಲಾಗಿದೆ. 

ಕ್ಯಾಲಿಫೋರ್ನಿಯಾ ಡಿಪಾರ್ಟ್‌ಮೆಂಟ್ ಆಫ್ ಇನ್ಶೂರೆನ್ಸ್‌ನ ಹೇಳಿಕೆಯ ಪ್ರಕಾರ, ಈ ಆರೋಪಿಗಳು ತಮ್ಮ 2010 ರ ರೋಲ್ಸ್ ರಾಯ್ಸ್ ಘೋಸ್ಟ್‌ಗೆ ಕರಡಿಯೊಂದು ಪ್ರವೇಶಿಸಿದ್ದು, ಒಳಾಂಗಣಕ್ಕೆ  ಹಾನಿಯನ್ನುಂಟುಮಾಡಿದೆ ಎಂದು ಹೇಳಿದ್ದರು.  ತಮ್ಮ ವಿಮಾ ಕ್ಲೈಮ್‌ನೊಂದಿಗೆ ವಿಡಿಯೋ ಒದಗಿಸಿದ್ದರು.  ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಇದು ಅಸಲಿ ಕರಡಿಯಲ್ಲ, ನಕಲಿ ಎನ್ನುವುದು ತಿಲಿದಿದೆ. ಕರಡಿ ವೇಷಭೂಷಣವನ್ನು ಧರಿಸಿರುವುದು ಮನುಷ್ಯ ಎಂದು ತನಿಖಾಧಿಕಾರಿಗಳು ಕಂಡುಹಿಡಿದರು. ಬಳಿಕ, ಇದೇ ರೀತಿ ಹಿಂದೆ ವಿಮೆ ಪಡೆದುಕೊಂಡಿರುವ ಎಲ್ಲಾ ವಿಡಿಯೋಗಳನ್ನು ಪುನಃ ಪರಿಶೀಲಿಸಿದಾಗ, ಖದೀಮರು ಇದೇ ರೀತಿಯಲ್ಲಿ ವಿಡಿಯೋ ತೋರಿಸಿ ವಿಮೆಯ ಹಣ ಪಡೆದುಕೊಂಡಿರುವುದು ತ ಇಳಿದಿದೆ.  ಈ ಆರೋಪಿಗಳ ವಿರುದ್ಧ ತನಿಖೆ ಕೈಗೊಳ್ಳಲಾಯಿತು.  ಅನುಮಾನಗಳನ್ನು ಮತ್ತಷ್ಟು ಪರಿಹರಿಸಿಕೊಳ್ಳಲು, ಕ್ಯಾಲಿಫೋರ್ನಿಯಾದ ವಿಮಾ ಇಲಾಖೆಯು ಕ್ಯಾಲಿಫೋರ್ನಿಯಾದ ಮೀನು ಮತ್ತು ವನ್ಯಜೀವಿ ಇಲಾಖೆಯ ಜೀವಶಾಸ್ತ್ರಜ್ಞರಿಂದ ದೃಢೀಕರಣವನ್ನು ಕೋರಿತು. ಜೀವಶಾಸ್ತ್ರಜ್ಞರು  ಕರಡಿ ದಾಳಿಯ ವಿಡಿಯೋ ತುಣುಕನ್ನು ಪರಿಶೀಲಿಸಿದರು. ಇದು ಮನುಷ್ಯರೇ ಎನ್ನುವುದು ದೃಢಪಟ್ಟಿತು. ಕೂಡಲೇ ತನಿಖಾಧಿಕಾರಿಗಳ ಶಂಕಿತರ ಮನೆ ಮೇಲೆ ದಾಳಿ ನಡೆಸಿದಾಗ, ಅಲ್ಲಿ  ಕರಡಿ ವೇಷಭೂಷಣವನ್ನು ಕಂಡುಹಿಡಿದರು. ಸದ್ಯ ಇವರನ್ನು ಕೋರ್ಟ್​ ಸುಪರ್ದಿಗೆ ಒಪ್ಪಿಸಲಾಗಿದೆ. 

ಸೀರಿಯಲ್​ ಸೆಟ್​ನಲ್ಲಿ ಭಾರಿ ಅವಘಡ! ಶೂಟಿಂಗ್​ ವೇಳೆ ವಿದ್ಯುತ್​ ತಗುಲಿ ಕ್ಯಾಮೆರಾಮನ್​ ಸಾವು

 

Latest Videos
Follow Us:
Download App:
  • android
  • ios