Asianet Suvarna News Asianet Suvarna News

ಕುರಿ ಮೇಯಿಸಲು ಹೋದವರಿಂದ ತಬ್ಬಲಿಯಾದ್ವು ಚಿರತೆ ಮರಿಗಳು: ಈ ರೀತಿ ಮಾಡದಿರಿ: IFS ಅಧಿಕಾರಿ ಮನವಿ

ಕುರಿಗಳನ್ನು ಮೇಯಿಸಲು ಕಾಡಿಗೆ ಹೋದ ಮಕ್ಕಳು ಬೆಕ್ಕಿನ ಮರಿ ಎಂದು ಚಿರತೆ ಮರಿಯನ್ನು ಮನೆಗೆ ತಂದ ಘಟನೆ ಹರ್ಯಾಣದ ನುಹ್ ಜಿಲ್ಲೆಯಲ್ಲಿ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವೀಡಿಯೋ ಗಮನಿಸಿದ ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ದಯವಿಟ್ಟು ಯಾರೂ ಈ ರೀತಿ ಮಾಡದಂತೆ ಮನವಿ ಮಾಡಿದ್ದಾರೆ.

Haryana children who went graze goats brought home leopard cub thought it be kitten IFS officer pleads people Please dont do this akb
Author
First Published Jul 17, 2023, 6:13 PM IST

ಹರ್ಯಾಣ: ಕುರಿಗಳನ್ನು ಮೇಯಿಸಲು ಕಾಡಿಗೆ ಹೋದ ಮಕ್ಕಳು ಬೆಕ್ಕಿನ ಮರಿ ಎಂದು ಚಿರತೆ ಮರಿಯನ್ನು ಮನೆಗೆ ತಂದ ಘಟನೆ ಹರ್ಯಾಣದ ನುಹ್ ಜಿಲ್ಲೆಯಲ್ಲಿ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವೀಡಿಯೋ ಗಮನಿಸಿದ ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ದಯವಿಟ್ಟು ಯಾರೂ ಈ ರೀತಿ ಮಾಡದಂತೆ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ (Social Media) ಮನವಿ ಮಾಡಿರುವ ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ (Parveen Kaswan) ಅವರು, ಇಂತಜ ಸಂದರ್ಭದಲ್ಲಿ ಯಾರೂ ಮರಿಗಳನ್ನು ತೆಗೆದುಕೊಂಡು ಹೋಗಬಾರದು. ಮಕ್ಕಳನ್ನು ಬಿಟ್ಟು ಹೋದ ತಾಯಿ ಮರಳಿ ಬಂದೇ ಬರುತ್ತದೆ. ಅದಕ್ಕೆ ಗೊತ್ತಿರುತ್ತದೆ. ತನ್ನ ಮಕ್ಕಳು ಎಲ್ಲಿವೆ ಎಂಬುದು. ಕೆಲವರು ಸೆಲ್ಫಿ ಕ್ರೇಜ್‌ಗಾಗಿ ಈ ರೀತಿಯೆಲ್ಲಾ ಮಾಡುತ್ತಿರುವುದು ಬೇಸರದ ಸಂಗತಿ. ಅವುಗಳಿಗೆ ನೀವು ಸಹಾಯ ಮಾಡಬೇಕೆಂದು ಬಯಸಿದರೆ ಅವುಳಿರುವ ಸ್ಥಳವನ್ನು ಮತ್ತಷ್ಟು ಭದ್ರಪಡಿಸಿ. ಒಮ್ಮೆ ನೀವು ಆ ಮರಿಗಳನ್ನು ಅವುಗಳಿರುವ ಜಾಗದಿಂದ ತೆಗೆದರೆ ಮತ್ತೆ ಅವುಗಳನ್ನು ತಾಯಿಯೊಂದಿಗೆ ಕೂಡಿಸುವುದು ಬಲು ಕಷ್ಟದ ಕೆಲಸ. ಇಂತಹ ಪ್ರಕರಣಗಳಲ್ಲಿ ಒಂದೋ ಚಿರತೆ ಮರಿಗಳು ಸಾಯಲ್ಪಡುತ್ತವೆ. ಅಥವಾ ಜೀವನ ಪರ್ಯಂತ ಬಂಧನದಲ್ಲಿರಬೇಕಾದಂತಹ ಸ್ಥಿತಿ ಬರುತ್ತದೆ. ಡಜನ್‌ಗೂ ಹೆಚ್ಚು ರಕ್ಷಣೆ ಹಾಗೂ ತಾಯಿಯೊಂದಿಗೆ ಮರು ಸೇರ್ಪಡೆಗೊಳಿಸಿದ ಕಾರ್ಯಾಚರಣೆ ಬಳಿಕ ಈ ವಿಚಾರವನ್ನು ಹೇಳುತ್ತಿದ್ದೇನೆ ಎಂದು ಪರ್ವೀನ್ ಕಸ್ವಾನ್ ಖೇದ ವ್ಯಕ್ತಪಡಿಸಿದ್ದಾರೆ. 

Chamarajanagara: ಚಿರತೆಯೊಂದಿಗೆ ಅಪ್ಪ ವೀರಾವೇಶದಿಂದ ಹೋರಾಡಿ ರಕ್ಷಿಸಿದರೂ ಬದುಕಿ ಬರಲಿಲ್ಲ ಮಗಳು!

ಕಳೆದ ವಾರ ಹರ್ಯಾಣದ (Haryana) ನುಹ್ ಜಿಲ್ಲೆಯಲ್ಲಿ ಕುರಿಗಳನ್ನು ಮೇಯಿಸಲು  ಕಾಡಿಗೆ ಹೋದ ಮಕ್ಕಳಿಗೆ ಎರಡು ಚಿರತೆ ಮರಿಗಳು ಕಾಣಿಸಿಕೊಂಡಿದ್ದು, ಅವರು ಅದನ್ನು ಬೆಕ್ಕಿನ ಮರಿ ಎಂದು ಭಾವಿಸಿ ಮನೆಗೆ ತಂದಿದ್ದಾರೆ. ಅಷ್ಟೇ ಅಲ್ಲದೇ ಅದಕ್ಕೆ ಮೇಕೆಯ ಹಾಲನ್ನು ಕುಡಿಸಿದ್ದಾರೆ. ಆದರೆ ನಂತರದಲ್ಲಿ ಅವರಿಗೆ ಇವು ಬೆಕ್ಕಲ್ಲ, ಚಿರತೆ ಎಂಬುದು ಗೊತ್ತಾಗಿದೆ. ಇದಾದ ನಂತರ ಅವರು ಈ ವಿಚಾರವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದು, ಅವರು ಹೋಗಿ ಚಿರತೆ ಮರಿಗಳನ್ನು ಕರೆದುಕೊಂಡು ಬಂದಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿ ಪರ್ವೀನ್ ಕಸ್ವಾನ್‌ ಈ ಬಗ್ಗೆ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. 

ದಾಳಿ ಮಾಡಿದ ಚಿರತೆಯನ್ನು ಹೆಡೆಮುರಿಕಟ್ಟಿ ಹಂದಿಮರಿ ರೀತಿ ಹೊತ್ತೊಯ್ದ ಹಾಸನದ ಶೂರ!

ಪರ್ವೀನ್ ಕಸ್ವಾನ್ ಅವರ ಬರಹ ಓದಿದ ಬಳಕೆದಾರರು ಕೂಡ ಬಹಳ ಬೇಸರ ವ್ಯಕ್ತಪಡಿಸಿದ್ದು, ಇದು ನನ್ನ ಹೃಯದ ಒಡೆಯುತ್ತಿದೆ, ಇಷ್ಟು ಪುಟ್ಟ ಮರಿಗಳು ತಾಯಿಯೊಂದಿಗೆ ಸೇರಲು ಸಾಧ್ಯವಿಲ್ಲ ಎಂದಾದರೆ ಅವುಗಳು ಬದುಕುವುದು ಕೂಡ ಕಷ್ಟ, ಕೆಲ ಬೇಜಾವಾಬ್ದಾರಿಯುತ ವ್ಯಕ್ತಿಗಳು ಇದಕ್ಕೆ ಜವಾಬ್ದಾರರಾಗುತ್ತಾರೆ ಎಂದು ಬೇಸರದಿಂದ ಕಾಮೆಂಟ್ ಮಾಡಿದ್ದಾರೆ.

ಅನೇಕ ಬಾರಿ ಮನುಷ್ಯರು ಮುಟ್ಟಿದ ಮರಿಗಳನ್ನು ತಾಯಿ ತಿರಸ್ಕರಿಸಿ ಹೋದ ಘಟನೆಗಳನ್ನು ನಾನು ಕೇಳಿದ್ದೇನೆ. ಬಹುಶಃ ತಾಯಿ ಆಹಾರಕ್ಕಾಗಿ ಹೋದ ವೇಳೆ ಇವರು ಮರಿಯನ್ನು ಕರೆತಂದಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ  ಕುರಿ ಮೇಯಿಸಲು ಹೋದವರ ಕಿತಾಪತಿಯಿಂದಾಗಿ ತಬ್ಬಲಿ ಮಕ್ಕಳಿಗೆ ಅಮ್ಮನಿಲ್ಲದಂತೆ ಆಗಿದ್ದು, ಇದಕ್ಕೆ ಜವಾಬ್ದಾರಿ ಯಾರು? 

 

 

 

Follow Us:
Download App:
  • android
  • ios