Asianet Suvarna News Asianet Suvarna News

Chamarajanagara: ಚಿರತೆಯೊಂದಿಗೆ ಅಪ್ಪ ವೀರಾವೇಶದಿಂದ ಹೋರಾಡಿ ರಕ್ಷಿಸಿದರೂ ಬದುಕಿ ಬರಲಿಲ್ಲ ಮಗಳು!

ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಕಗ್ಗಲಿಗುಂದಿ ಸೋಲಿಗರ ಹಾಡಿಯಲ್ಲಿ  ಚಿರತೆ ದಾಳಿಗೆ ಒಳಗಾಗಿದ್ದ ಬಾಲಕಿ  ಸಾವನ್ನಪ್ಪಿದ್ದಾಳೆ. ಚಿರತೆ ಜೊತೆ ಹೋರಾಡಿ ತಂದೆ ಮಗಳನ್ನು ರಕ್ಷಿಸಿದ್ದರು.

chamarajanagar Dad chases leopard saves daughter after many days she died in hospital gow
Author
First Published Jul 15, 2023, 1:50 PM IST

ಚಾಮರಾಜನಗರ (ಜು.15): ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಕಗ್ಗಲಿಗುಂದಿ ಸೋಲಿಗರ ಹಾಡಿಯಲ್ಲಿ  ಚಿರತೆ ದಾಳಿಗೆ ಒಳಗಾಗಿದ್ದ ಬಾಲಕಿ 6 ವರ್ಷದ ಸುಶೀಲ  ಸಾವನ್ನಪ್ಪಿದ್ದಾಳೆ. ಜೂನ್ 26 ರಂದು  ಮನೆಯಿಂದ ಹೊರಬಂದಿದ್ದ ವೇಳೆ ಚಿರತೆ ದಾಳಿ ನಡೆಸಿತ್ತು. ಈ ವೇಳೆ ಚಿರತೆ ಜೊತೆಗೆ ತಂದೆ ಹೋರಾಡಿ ಬಾಲಕಿಯನ್ನು ರಕ್ಷಿಸಿದ್ದರು. ತೀವ್ರ ಗಾಯಗೊಂಡ ಬಾಲಕಿಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ.

Chamarajanagar: ಅಪರಿಚಿತ ಶವ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಯುವಕರು

ಘಟನೆ ಹಿನ್ನೆಲೆ:
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ (BRT Tiger Reserve) ಕೊಳ್ಳೇಗಾಲ ವನ್ಯಜೀವಿ (wildlife sanctuary kollegal) ವಿಭಾಗದ ಕಗ್ಗಲಿಗುಂಡಿ ಪೋಡುವಿನ ಅರಣ್ಯಕ್ಕೆ  ತನ್ನ 6 ವರ್ಷದ ಮಗಳನ್ನು ಚಿರತೆ ಎಳೆದೊಯ್ಯಲು  ಮುಂದಾದಾಗ ಎಚ್ಚೆತ್ತ ತಂದೆ ಮಗಳನ್ನು ಚಿರತೆಯ ದವಡೆಯಿಂದ ರಕ್ಷಿಸಿದ್ದರು. ಹನೂರು ತಾಲೂಕಿನ ಚಿಕ್ಕ ಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಗುಂದಿ ಗ್ರಾಮದಲ್ಲಿ ಜೂನ್ 26 ರಂದು ರಾತ್ರಿ  ಈ ಘಟನೆ ನಡೆದಿತ್ತು.

 ರಾತ್ರಿ ಬಾಲಕಿ ಮೊಬೈಲ್ ನೋಡಿಕೊಂಡಿದ್ದಾಗ ಚಿರತೆ ಆಕೆಯ ಕತ್ತು ಹಿಡಿದು ಎಳೆದೊಯ್ಯಲು ಯತ್ನಿಸಿತ್ತು. ಬಾಲಕಿ ಸಹಾಯಕ್ಕಾಗಿ ಕೂಗಿಕೊಂಡಿದ್ದರಿಂದ ಆಕೆಯ ತಂದೆ ರಾಮು ಮತ್ತು ಇತರ ಗ್ರಾಮಸ್ಥರು ಚಿರತೆಯನ್ನು ಬೆನ್ನಟ್ಟಲು ಮುಂದಾದರು. ರಾಮು ಅವರ ಓಡಾಟದಿಂದ ಬೆಚ್ಚಿಬಿದ್ದ ಚಿರತೆ ಬಾಲಕಿಯನ್ನು ಮನೆ ಸಮೀಪದ 10 ಅಡಿ ಆಳದ ಕಂದಕಕ್ಕೆ ಹಾಕಿ ಓಡಿ ಹೋಗಿತ್ತು.

ಆ ಪ್ರದೇಶದಲ್ಲಿ ವಾಸಿಸುವ 45 ಕುಟುಂಬಗಳ ಮೇಲೆ ಕಾಡು ಪ್ರಾಣಿಗಳು, ವಿಶೇಷವಾಗಿ ಆನೆಗಳು ಮತ್ತು  ಚಿರತೆ, ಇತರ ಕಾಡು ಪ್ರಾಣಿಗಳು ಊರಿಗೆ ಬರದಂತೆ ತಡೆಯಲು ಕಂದಕವನ್ನು ನಿರ್ಮಿಸಲಾಗಿದೆ. ಬಾಲಕಿಯನ್ನು ಅಂದು ಚಿರತೆ ಬಾಯಿಯಿಂದ ರಕ್ಷಿಸಲಾಯಿತಾದರೂ ಇಂದು ಆಕೆ ಬದುಕಿಲ್ಲ. ಘಟನೆ ಬಳಿಕ ರಾಮು, ಆತನ ಪತ್ನಿ ಲಲಿತಾ ಮತ್ತು ಇತರ ಗ್ರಾಮಸ್ಥರು ಇನ್ನೂ ಆಘಾತದಿಂದ ಹೊರಬಂದಿಲ್ಲ. ಬಾಲಿಕಿಯ ಕೆಳಗಿನ ದವಡೆ ಮುರಿದು ಮುಖ ಮತ್ತು ಕುತ್ತಿಗೆಗೆ ತೀವ್ರ ಗಾಯವಾಗಿತ್ತು.

Chamarajanagara: ಕಣ್ಣೆದುರೇ ಮಗಳನ್ನು ಎಳೆದೊಯ್ದ ಚಿರತೆ, ವೀರಾವೇಶದಿಂದ ಓಡಿಸಿ ರಕ್ಷಿಸಿದ ತಂದೆ!

ಘಟನೆ ನಡೆದ ಬಳಿಕ ಸ್ಥಳದ ಸುತ್ತಮುತ್ತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸ್ಥಳದಲ್ಲಿ ಪ್ರಾಣಿಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಸಹಿತ ಬೋನುಗಳನ್ನು ಅಳವಡಿಸಿದ್ದಾರೆ. ಚಿರತೆಯ ಮೇಲೆ ಕಣ್ಣಿಡಲು ಅನೇಕ ಕಡೆಗಳಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಸಹ ಇರಿಸಲಾಗಿದೆ.  ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.  ಮುಸ್ಸಂಜೆಯ ನಂತರ ತಮ್ಮ ಮನೆಗಳಿಂದ ಏಕಾಂಗಿಯಾಗಿ ಹೊರಬರದಂತೆ  ಸಲಹೆ ನೀಡಲಾಗಿದೆ.

Follow Us:
Download App:
  • android
  • ios