ಉಪವಾಸ ಮುರಿಯಲು ಅವಕಾಶ ನೀಡಿದ ದೇಗುಲ ಮುಸ್ಲಿಂ ಸಮುದಾಯಕ್ಕೆ ಇಫ್ತಾರ್ ಕೂಟ ಆಯೋಜನೆ ದೇಗುಲದ ಆವರಣದಲ್ಲಿ ನಮಾಜ್, ಇಫ್ತಾರ್‌

ನವದೆಹಲಿ: ದೇಶದೆಲ್ಲೆಡೆ ಧರ್ಮ ಧರ್ಮಗಳ ನಡುವೆ ಕೋಮು ದ್ವೇಷ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಕೋಮು ಸಾಮರಸ್ಯ ಸಾರುವ ಘಟನೆಯೊಂದು ಗುಜರಾತ್‌ನಲ್ಲಿ ನಡೆದಿದೆ. ಗುಜರಾತ್ ದೇವಾಲಯವೊಂದು ತನ್ನ ಆವರಣದಲ್ಲಿ ಮುಸಲ್ಮಾನ ಸಮುದಾಯದ ಜನರಿಗೆ ನಮಾಜ್ ಮಾಡಲು ಹಾಗೂ ರಂಜಾನ್ ಉಪವಾಸವನ್ನು ಮುರಿಯಲು ಅವಕಾಶ ನೀಡಿ ದ್ವೇಷದ ಬದಲು ಪ್ರೀತಿ ಸಾರುವ ಕೆಲಸ ಮಾಡಿದೆ.

ಪವಿತ್ರ ರಂಜಾನ್ ಮಾಸವನ್ನು ಆಚರಿಸಲು ಗುಜರಾತ್‌ನ (Gujarat) ದಲ್ವಾನಾ (Dalvana) ಗ್ರಾಮದ ಐತಿಹಾಸಿಕ ಹಿಂದೂ ದೇವಾಲಯವು ಉಪವಾಸದಲ್ಲಿರುವ ಮುಸಲ್ಮಾನರನ್ನು ಸ್ವಾಗತಿಸಲು ಗೇಟು ಹಾಗೂ ತನ್ನ ಬಾಹುಗಳನ್ನು ತೆರೆಯಿತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ವರದಿಯ ಪ್ರಕಾರ, ಉಪವಾಸ ಮಾಡುತ್ತಿದ್ದ ಗ್ರಾಮದ ಸುಮಾರು 100 ಮುಸ್ಲಿಮರಿಗೆ ಮಗ್ರಿಬ್ ನಮಾಜ್ (ಜುಮ್ಮಾ ನಮಾಜ್) ಸಲ್ಲಿಸಲು ಮತ್ತು ತಮ್ಮ ದಿನದ ಉಪವಾಸವನ್ನು ಮುರಿಯಲು 1,200 ವರ್ಷಗಳಷ್ಟು ಹಳೆಯದಾದ ದೇವಾಲಯದ ಆವರಣಕ್ಕೆ ಆಹ್ವಾನ ನೀಡಲಾಯಿತು. 
ಮುಸ್ಲಿಮರಿಗಾಗಿ ಇದೇ ಮೊದಲ ಬಾರಿಗೆ ಈ ದೇವಸ್ಥಾನದ ಬಾಗಿಲು ತೆರೆಯಲಾಗಿದೆ ಎಂದು ದೇವಸ್ಥಾನದ ಅರ್ಚಕ ಪಂಕಜ್ ಠಾಕರ್ (Pankaj Thakar)ಹೇಳಿದ್ದಾರೆ.

ದೇವಿಯ ದೊಡ್ಡ ಭಕ್ತೆ ಈ ಮುಸ್ಲಿಂ ಮಹಿಳೆ, 50 ವರ್ಷ ಹಿಂದೆ ಗಂಡ ಕಟ್ಟಿಸಿದ್ರು ದೇವಸ್ಥಾನ!

ಈ ವರ್ಷ ದೇವಸ್ಥಾನದ ಟ್ರಸ್ಟ್ ಮತ್ತು ಗ್ರಾಮ ಪಂಚಾಯತ್ ಮುಸ್ಲಿಂ ಉಪವಾಸ ಮಾಡುವವರನ್ನು(ಸ್ಥಳೀಯವಾಗಿ ರೋಜೆದಾರರು ಎಂದು ಕರೆಯಲಾಗುತ್ತದೆ.) ಅವರ ಉಪವಾಸ ಮುರಿಯಲು ಈ ದೇವಸ್ಥಾನದ ಆವರಣಕ್ಕೆ ಆಹ್ವಾನಿಸಲು ನಿರ್ಧರಿಸಿತು. ನಮ್ಮ ಗ್ರಾಮದ 100ಕ್ಕೂ ಹೆಚ್ಚು ಮುಸ್ಲಿಂ ರೋಜೆದಾರರಿಗೆ ಐದರಿಂದ ಆರು ಬಗೆಯ ಹಣ್ಣು (fruits), ಖರ್ಜೂರ (dates) ಮತ್ತು ಶರಬತ್ತುಗಳ (sherbet)ವ್ಯವಸ್ಥೆ ಮಾಡಿದ್ದೇವೆ. ನಾನು ಇಂದು ನಮ್ಮ ಸ್ಥಳೀಯ ಮಸೀದಿಯ ಮೌಲಾನಾ ಸಾಹಿಬ್ ಅವರನ್ನು ವೈಯಕ್ತಿಕವಾಗಿ ಸ್ವಾಗತಿಸಿದ್ದೇನೆ ಎಂದು ದೇಗುಲದ ಅರ್ಚಕ ಠಾಕರ್ ಹೇಳಿರುವುದನ್ನು ಆಂಗ್ಲ ಮಾಧ್ಯಮ ಇಂಡಿಯನ್‌ ಎಕ್ಸ್‌ಪ್ರೆಸ್‌ ಉಲ್ಲೇಖಿಸಿದೆ.

ಜಾತ್ಯಾತೀತ ಭಾರತದ ಸ್ವರೂಪ ಬದಲಾಗಿದೆ: ನುಸ್ರತ್ ಬಂದ್ಮೇಲೆ ಏನೇನಾಗಿದೆ?

ಗ್ರಾಮದ ಮುಸ್ಲಿಂ ಜನರು ಹೇಳುವಂತೆ ಈ ಸ್ಥಳದಲ್ಲಿ ಗ್ರಾಮಸ್ಥರು ಸಂಪೂರ್ಣ ಸಾಮರಸ್ಯದಿಂದ ವಾಸಿಸುತ್ತಿದ್ದಾರೆ ಮತ್ತು ಪ್ರತಿ ಹಬ್ಬವನ್ನು ಧರ್ಮ ಮತ್ತು ಸಮುದಾಯವನ್ನು ಲೆಕ್ಕಿಸದೆ ಸಮಾನ ಉತ್ಸಾಹದಿಂದ ಆಚರಿಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಂಜಾನ್ (Ramazan) ಅಥವಾ ರಮ್ದಾನ್ ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ (Islamic calendar) ಅತ್ಯಂತ ಪ್ರಮುಖ ಮತ್ತು ಪೂಜ್ಯವಾದ ಪವಿತ್ರ ತಿಂಗಳು. ಇಸ್ಲಾಂ ಬೋಧಕರು ಆಹಾರ ಮತ್ತು ನೀರಿಲ್ಲದೆ ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ನಂತರ ಇಫ್ತಾರಿ ಸಮಯದಲ್ಲಿ ಉಪವಾಸವನ್ನು ಮುರಿಯುತ್ತಾರೆ. ಈ ಪವಿತ್ರ ತಿಂಗಳು ಈದ್-ಉಲ್-ಫಿತರ್‌ನೊಂದಿಗೆ (Id-Ul-Fitr) ಕೊನೆಗೊಳ್ಳುತ್ತದೆ, ಮುಸಲ್ಮಾನರು ಹೊಸ ಬಟ್ಟೆಗಳನ್ನು ಧರಿಸಿ ಮತ್ತು ಸಿಹಿತಿಂಡಿಗಳು ಮತ್ತು ಇತರ ಭಕ್ಷ್ಯಗಳನ್ನು ಪರಸ್ಪರ ಅರ್ಪಿಸುವ ಮೂಲಕ ಈದ್ ಹಬ್ಬ ಆಚರಿಸುತ್ತಾರೆ.

ಕೋಮು ದ್ವೇಷ ವ್ಯಾಪಕವಾಗಿ ಹಬ್ಬುತ್ತಿರುವ ಇಂದಿನ ದಿನಗಳಲ್ಲಿ ಕೆಲವೆಡೆ ಸಾಮರಸ್ಯ ಸಾರುವ ಹಲವು ಘಟನೆಗಳು ನಡೆಯುತ್ತಿವೆ. 
ರಾಜ್ಯದ ಕೊಪ್ಪಳ ತಾಲೂಕಿನ ತಳಬಾಳ ಗ್ರಾಮದಲ್ಲಿ ನಿಧನರಾದ ಮುಸ್ಲಿಂ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿ ಭಾವೈಕ್ಯತೆ ಮೆರೆದ ಘಟನೆ ಜರುಗಿದೆ. ಗ್ರಾಮದ ನಾಟಿ ವೈದ್ಯರಾದ ಹುಸೇನಸಾಬ್‌ ನೂರಭಾಷಾ (87) ಅವರು ಫೆ. 6ರಂದು ನಿಧನರಾಗಿದ್ದರು. ಅಹೋರಾತ್ರಿ ಅವರ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ(Hindu Tradition) ಭಜನೆ ಹಾಡುಗಳನ್ನು ಹೇಳಲಾಯಿತು. ಅಲ್ಲದೇ ಮುಸ್ಲಿಮರು(Muslim) ಕುರಾನ್‌ ಪಠಣ ಮಾಡಿದರು. ಮರುದಿನ ಫೆ. 7ರಂದು ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ(Funeral) ನೆರವೇರಿಸಲಾಯಿತು.