ದೇವಿಯ ದೊಡ್ಡ ಭಕ್ತೆ ಈ ಮುಸ್ಲಿಂ ಮಹಿಳೆ, 50 ವರ್ಷ ಹಿಂದೆ ಗಂಡ ಕಟ್ಟಿಸಿದ್ರು ದೇವಸ್ಥಾನ!
ಇಸ್ಲಾಮಿಕ್ ಭಯೋತ್ಪಾದನೆ ದೇಶ ಮತ್ತು ವಿಶ್ವಾದ್ಯಂತ ಅತೀ ದೊಡ್ಡ ಸಮಸ್ಯೆಯಾಗಿದೆ. ಭಾರತದಲ್ಲೂ, ಸಂಘಟನೆಗಳು ಮತ್ತು ಸಮಾಜವಿರೋಧಿಗಳೆಂದು ಕರೆಯಲ್ಪಡುವವರು ನಿರಂತರವಾಗಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿಷಬೀಜ ಬಿತ್ತುವ ಯತ್ನ ನಡೆಸುತ್ತಿದ್ದಾರೆ. ಇವೆಲ್ಲದರ ನಡುವೆ ಎರಡೂ ಧರ್ಮಗಳಲ್ಲಿ ಕೋಮು ಸೌಹಾರ್ದತೆಗೆ ಉದಾಹರಣೆಯಾಗುವಂತಹ ಜನರಿದ್ದಾರೆ. ಸದ್ಯ ಮುಸ್ಲಿಂ ಕುಟುಂಬವೊಂದು ಕೋಮು ಸೌಹಾರ್ದತೆ ಮೆರೆದಿದ್ದಾರೆ. ಈ ಘಟನೆ ಕರ್ನಾಟಕದ ಶಿವಮೊಗ್ಗದ ಸಾಗರ ನಗರದ್ದು. ಇಲ್ಲಿನ ಮುಸ್ಲಿಂ ಕುಟುಂಬವು ಹಿಂದೂ ದೇವಸ್ಥಾನವನ್ನು ನಿರ್ಮಿಸಿದ್ದು, ಈ ಕುಟುಂಬವು ಪ್ರತಿ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತದೆ.
ಈ ಚಿತ್ರವು ಹಿಂದೂ-ಮುಸ್ಲಿಂ ಐಕ್ಯತೆ ಮತ್ತು ಸಾರ್ವತ್ರಿಕ ಸಾಮರಸ್ಯದ ಒಂದು ವಿಶಿಷ್ಟ ಉದಾಹರಣೆಯಾಗಿದೆ. ಪ್ರಸ್ತುತ ನವರಾತ್ರಿ (ನವರಾತ್ರಿ 2021) ನಡೆಯುತ್ತಿದೆ. ಈ ಸಂದರ್ಭದಲ್ಲಿ, ಮುಸ್ಲಿಂ ಮಹಿಳೆಯೊಬ್ಬರು ಶಿವಮೊಗ್ಗದ ಸಾಗರ ನಗರದ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸುತ್ತಿದ್ದಾರೆ.
ಈ ಮಹಿಳೆಯ ಹೆಸರು ಫಮೀದಾ. ಆಕೆಯ ಪತಿ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರು. ಅವರ ಪತಿ ಕಳೆದ 50 ವರ್ಷಗಳ ಹಿಂದೆ ಭಗವತಿ ಅಮ್ಮನ ದೇವಸ್ಥಾನವನ್ನು ನಿರ್ಮಿಸಿದ್ದರು. ಈ ದೇವಾಲಯವು ಈ ಪ್ರದೇಶದಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಈಗ ಫಾಮಿದಾ ಈ ದೇವಸ್ಥಾನದಲ್ಲಿ ಪೂಜೆ ನಡೆಸುತ್ತಾರೆ.
ಇನ್ನು ಸುದ್ದಿ ಸಂಸ್ಥೆ ANIಗೆ ಪ್ರತಿಕ್ರಿಯಿಸಿರುವ ಫಮೀದಾ ಈ ದೇವಸ್ಥಾನವನ್ನು 50 ವರ್ಷಗಳ ಹಿಂದೆ ನನ್ನ ಗಂಡ ನಿರ್ಮಿಸಿ, ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಿದ್ದರು. ಆದರೆ ಈ ದೇವಸ್ಥಾನದ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ ಎಂದಿದ್ದಾರೆ. ಫಮೀದಾ ನವರಾತ್ರಿಯಂದು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂದಿದೆ.
ಶಿವಮೊಗ್ಗದ ಸಾಗರ ನಗರದ ಈ ದೇವಸ್ಥಾನ ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ನವರಾತ್ರಿ ಇತ್ಯಾದಿ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ.
ಕೆಲವರು ಹೀಗೂ ಇರುತ್ತಾರೆ
ಇನ್ನು ಇದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ, ಹಿಂದೂ-ಮುಸ್ಲಿಂ ವಿಚಾರವನ್ನೆತ್ತಿ ಕೋಮು ಸೌಹಾರ್ದ ಕದಡಲು ಯತ್ನಿಸಿದ ಪ್ರಕರಣ ಸಮಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವಾಸ್ತವವಾಗಿ, ಮುಸ್ಲಿಂ ದಂಪತಿ ತಮ್ಮ ಇಬ್ಬರು ಹಿಂದೂ ಸ್ನೇಹಿತರಿಗೆ ಕಾರಿನಲ್ಲಿ ಲಿಫ್ಟ್ ನೀಡಿದ್ದರು. ಈ ವಿಷಯದ ಬಗ್ಗೆ, ಮೋಟಾರ್ ಸೈಕಲ್ ನಲ್ಲಿ ಅಲ್ಲಿ ಹಾದು ಹೋಗುತ್ತಿದ್ದ ಸಮಿತರಾಜ್ ಮತ್ತು ಸಂದೀಪ್ ಪೂಜಾರಿ ಎಂಬವರು ಮುಸ್ಲಿಂಮರನ್ನು ಯಾಕೆ ಕಾರಿನಲ್ಲಿ ಲಿಫ್ಟ್ ತೆಗೆದುಕೊಂಡರು ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದಾದ ನಂತರ, ಮುಸ್ಲಿಂ ಮಹಿಳೆಯ ದೂರು ನೀಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.