ಗುಜರಾತ್ ನಗರ ಪಾಲಿಕೆ, ತಾಲೂಕ್ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಇತ್ತ ಕಾಂಗ್ರೆಸ್ ಧೂಳೀಪಟವಾಗಿದ್ದು, ಇದೀಗ ಸೋಲಿನ ಹೊಣೆ ಹೊತ್ತು ರಾಜೀನಾಮೆ ಪರ್ವಗಳು ನಡೆಯುತ್ತಿದೆ. ಚುನಾವಣೆ ಫಲಿತಾಂಶ ಬಳಿಕ ಪ್ರಧಾನಿ ಮೋದಿ , ಗುಜರಾತ್ ಜನತೆ ಬಿಜೆಪಿ ಹಾಗೂ ಅಭಿವೃದ್ಧಿಯ ಜೊತೆಗಿದ್ದಾರೆ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.

ನವದೆಹಲಿ(ಮಾ.02): ಗುಜರಾತ್ ಜನತೆ ಬಿಜೆಪಿ ಜೊತೆಗಿದ್ದಾರೆ. ಉತ್ತಮ ಆಡಳಿತ, ಉತ್ತಮ ಸರ್ಕಾರಕ್ಕೆ ಪರವಾಗಿದ್ದಾರೆ. ಇದು ಪ್ರದಾನಿ ನರೇಂದ್ರ ಮೋದಿ ಗುಜರಾತ್ ಚುನಾವಣೆ ಫಲಿತಾಂಶ ಕುರಿತು ಮಾಡಿರುವ ಟ್ವೀಟ್. ಗುಜರಾತ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. 2015ಕ್ಕೆ ಹೋಲಿಸಿದರೆ, ಈ ಬಾರಿ ಮತ್ತಷ್ಟು ಅತ್ಯುತ್ತಮ ಪ್ರದರ್ಶನ ನೀಡಿದೆ.

ಗುಜರಾತ್‌ನಲ್ಲಿ ಕಾಂಗ್ರೆಸ್ ಧೂಳೀಪಟ; ಆದರೂ ರಾಹುಲ್ ಗಾಂಧಿ ಒಡೆದು ಆಳುವ ನೀತಿ ಬಿಟ್ಟಿಲ್ಲ ಎಂದ ನಡ್ಡಾ!.

ಗುಜರಾತ್‌ನಾದ್ಯಂತ ನಗರ ಪಾಲಿಕಾ, ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳ ಫಲಿತಾಂಶಗಳು ಸ್ಪಷ್ಟವಾದ ಸಂದೇಶವನ್ನು ನೀಡುತ್ತಿದೆ.ಗುಜರಾತ್ ಜನತೆ ಬಿಜೆಪಿ, ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಜೊತೆಗಿದ್ದಾರೆ ಅನ್ನೋದಕ್ಕೆ ಈ ಫಲಿತಾಂಶವೇ ಸಾಕ್ಷಿ. ಬಿಜೆಪಿ ಮೇಲಿಟ್ಟಿರುವ ಅಚಲ ನಂಬಿಕೆ ಮತ್ತು ವಾತ್ಸಲ್ಯಕ್ಕಾಗಿ ನಾನು ಗುಜರಾತ್ ಜನತಗೆ ತಲೆಬಾಗುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Scroll to load tweet…

ಇತ್ತೀಚಿಗೆ ದೊರೆತ ಪುರಸಭೆಗಳ ಫಲಿತಾಂಶಗಳ ಪ್ರಕಾರ, ಬಿಜೆಪಿ 1,182 ಸ್ಥಾನಗಳನ್ನು ವಶಪಡಿಸಿಕೊಂಡರೆ, ನಂತರದ ಸ್ಥಾನದಲ್ಲಿ ಕಾಂಗ್ರೆಸ್ (214), ಸ್ವತಂತ್ರರು (73), ಆಮ್ ಆದ್ಮಿ ಪಕ್ಷ (2), ಬಹುಜನ ಸಮಾಜವಾದಿ ಪಕ್ಷ (2), ಮತ್ತು ಇತರರು (10) ). ಸ್ಥಾನ ಗೆದ್ದುಕೊಂಡಿದ್ದಾರೆ

171 ನಾಯಕರು ಠೇವಣಿ ಕಳೆದುಕೊಂಡ ಖುಷಿಗೆ ಕೇಜ್ರಿವಾಲ್ ರೋಡ್‌ಶೋ; ವ್ಯಂಗ್ಯವಾಡಿದ BJP!

ಗುಜರಾತ್‌ನಲ್ಲಿ ನಗರ ಪಾಲಿಕೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ಸ್ಥಳೀಯ ಚುನಾವಣೆಯಲ್ಲಿ ಒಟ್ಟು 8474 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಸದ್ಯದ ವರದಿ ಪ್ರಕಾರ ಬಿಜೆಪಿ ಒಟ್ಟು 2085 ಸ್ಥಾನಗಳನ್ನು ಗೆದ್ದುಕೊಂಡಿದೆ. ಇನ್ನು ಕಾಂಗ್ರೆಸ್ 602 ಸ್ಥಾನ ಗೆದ್ದುಕೊಂಡಿದೆ.