ವಧುವಿನ ಮೇಲೆ ಹೂವಿನಂತೆ 8.5 ಕೋಟಿ ರೂ ಚೆಲ್ಲಿದ ವರನ ಕುಟುಂಬ, ಸುತ್ತಲು ನಿಂತು 500 ರೂಪಾಯಿ, 200 ರೂಪಾಯಿ ನೋಟುಗಳನ್ನು ಎಸೆದಿದ್ದಾರೆ. ಅದ್ಧೂರಿ ಮದುವೆಯಲ್ಲಿ ನೋಟುಗಳ ರಾಶಿ ತುಂಬಿಹೋಗಿದೆ. 

ಪಂಜಾಬ್ (ಫೆ.17) ಮದುವೆ ಸಂಭ್ರಮ ಸ್ಮರಣೀಯ ಮಾಡಲು ಎಲ್ಲರೂ ಪ್ರಯತ್ನಿಸುತ್ತಾರೆ. ತಮ್ಮ ಇತಿಮಿತಿಗಳಲ್ಲಿ ಅಚ್ಚುಕಟ್ಟಾಗಿ, ಅದ್ಧೂರಿಯಾಗಿ, ಸರಳವಾಗಿ ಮದುವೆ ಸಂಭ್ರಮ ಆಚರಿಸುತ್ತಾರೆ.ಹಲವು ಬಾರಿ ಭಾರತದಲ್ಲಿ ಅದ್ಧೂರಿ ಮದುವೆ ಭಾರಿ ಚರ್ಚೆಯಾಗುತ್ತದೆ. ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಮದುವೆಯಾಗಿರುವ ಹಲವು ಉದಾಹರಣೆಗಳಿವೆ. ಇದೀಗ ಪಂಜಾಬ್‌ನಲ್ಲಿ ನಡೆದ ಮದುವೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಮದುವೆ ಅದ್ಧೂರಿಯಾಗಿ ನಡೆದಿದೆ. ಕೋಟಿ ಕೋಟಿ ರೂಪಾಯಿ ಮದುವೆಗಾಗಿ ಖರ್ಚು ಮಾಡಿದ್ದಾರೆ. ಮದುವೆ ಮಂಟಪದಲ್ಲಿ ವಧುವಿನ ಮೇಲೆ ಬರೋಬ್ಬರಿ 8.5 ಕೋಟಿ ರೂಪಾಯಿ ನಗದು ಹಣವನ್ನು ವರನ ಕುಟಂಬಸ್ಥರು ಹೂವಿನಂತೆ ಚೆಲ್ಲಿದ ವಿಡಿಯೋ ಒಂದು ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋಟುಗಳ ರಾಶಿಯಲ್ಲಿ ಸಂಭ್ರಮ

ವರ ಹಾಗೂ ವಧು ವೇದಿಕೆ ಮೇಲಿದ್ದರೆ, ಸುತ್ತಲು ನಿಂತ ವರನ ಕುಟುಂಬಸ್ಥರು ನೋಟುಗಳ ಕಂತೆಗಳನ್ನು ವಧುವಿನ ಮೇಲೆ ಎಸೆದಿದ್ದಾರೆ. ಚೀಲ ಚೀಲದಲ್ಲಿ ನೋಟು ತಂದು ವಧುವಿನ ಮೇಲೆ ಚೆಲ್ಲಿದ್ದಾರೆ. ಇತ್ತ ವರ ಕೂಡ ಒಂದು ಚೀಲದಲ್ಲಿನ ಕಂತೆ ಕಂತೆ ನೋಟುಗಳನ್ನು ವಧುವಿನ ಮೇಲೆ ಚೆಲ್ಲಿವು ಮೂಲಕ ಅದ್ಧೂರಿಯಾಗಿ ಮದುವೆ ಸಂಭ್ರಮ ಆಚರಿಸಿದ್ದಾರೆ. ವೇದಿಕೆ ತುಂಬಾ ನೋಟುಗಳ ರಾಶಿ ತುಂಬಿಕೊಂಡಿದೆ. ಎತ್ತ ನೋಡಿದರು ನೋಟುಗಳು ರಾಶಿಯ ಕಾಣುತ್ತಿದೆ. ಬರೋಬ್ಬರಿ 8.5 ಕೋಟಿ ರೂಪಾಯಿ ಹಣವನ್ನು ವಧುವಿನ ಮೇಲೆ ಚೆಲ್ಲಲಾಗಿದೆ ಎಂದು ವಿಡಿಯೋಗಳು ಹೇಳುತ್ತಿದೆ.

ವರನ ತಂದೆ ಸೇರಿದಂತೆ ಸಂಬಂಧಿಕರು ಕೆಲ ಗಂಟೆಗಳ ಕಾಲ ಈ ರೀತಿ ನೋಟು ಚೆಲ್ಲಿದ್ದಾರೆ. ನೋಟಿನ ಅಭಿಷೇಕದ ಬಳಿಕ ಕುಟುಂಬಸ್ಥರು ಚೀಲದಲ್ಲಿ ನೋಟು ತುಂಬಲು ಹರಹಾಸ ಮಾಡಿದ್ದಾರೆ. ಹಲವರು ವೇದಿಕೆ, ನೆಲದ ಮೇಲೆ ರಾಶಿ ರಾಶಿಯಾಗಿ ಬಿದ್ದಿರುವ ನೋಟುಗಳನ್ನು ಬಾಚಿಕೊಂಡು ಚೀಲದಲ್ಲಿ ತುಂಬಿಸಿದ್ದಾರೆ. 40ಕ್ಕೂ ಹೆಚ್ಚು ಚೀಲಗಳಲ್ಲಿ ನೋಟುಗಳನ್ನು ತುಂಬಲಾಗಿದಿ. ನೋಟು ಚೆಲ್ಲುವ ಮೊದಲು ಕಂತೆ ಕಂತೆಯಾಗಿದ್ದ ನೋಟುಗಳು ಸುಲಭವಾಗಿ ಚೀಲದಲ್ಲಿ ತುಂಬಿಸಿಡಲಾಗಿತ್ತು. ಆದರೆ ನೋಟು ಚೆಲ್ಲಿದ ಬಳಿಕ ಬಾಚಿಕೊಂಡು ಚೀಲಗಳಲ್ಲಿ ತುಂಬಿಸಲಾಗಿದೆ.

ನಮ್ಮನ್ನು ಕರೆಯಬಾರದೇ

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಪ್ರತಿಕ್ರಿಯೆಸಿದ್ದಾರೆ. ಈ ಮದುವೆಗೆ ನಮ್ಮನ್ನೂ ಕರೆಯಬಾರದೆ. ನಾವು ಊಟ ಬಡಿಸುವ, ಆತಿಥಿಗಳಿಗೆ ಸತ್ಕಾರ ನೀಡಲು ಸಹಾಯ ಮಾಡುತ್ತಿದ್ದೇವು. ಕೊನೆಯಲ್ಲಿ ನವ ಜೋಡಿಗಳಿಗೆ ಆಶೀರ್ವಾದ ಮಾಡಿ ನೀವು ಬೇಡ ಎಂದು ಎಸೆದ ಸ್ವಲ್ಪ ನೋಟು ಹೆಕ್ಕಿ ನಮ್ಮ ಪಾಡಿಗೆ ಬರುತ್ತಿದ್ದೆವು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಕೆಲವರು ಈ ರೀತಿಯ ಶೋಕಿ ಜೀವನ ಒಳ್ಳೆಯದಲ್ಲ. ನಿಮ್ಮಲ್ಲಿ ದುಡಿದ್ದರೆ, ಮದುವೆ ಖರ್ಚು ಮಾಡಿ, ಆದರೆ ನೋಟು ಚೆಲ್ಲಿ ಅದ್ಧೂರಿತನ , ಶ್ರೀಮಂತಿಕೆ ತೋರ್ಪಡಿಸುವುದು ಉತ್ತಮವಲ್ಲ ಎಂದು ಸಲಹೆ ನೀಡಿದ್ದಾರೆ.

View post on Instagram