ಬರೋಬ್ಬರಿ 10 ದಿನಗಳ ಕಾಲ ಐಟಿ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಹಣ ವಶಪಡಿಸಿಕೊಳ್ಳಲಾಗಿದೆ. ಹಣ ಎಣಿಕೆಗೆ 36 ಯಂತ್ರಗಳನ್ನು ಬಳಸಲಾಗಿದ್ದು, ಬ್ಯಾಂಕ್ ನೌಕರರ ಸಹಾಯ ಪಡೆಯಲಾಗಿದೆ.

ನವದೆಹಲಿ: ದೇಶದಲ್ಲಿ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಸುದ್ದಿಗಳನ್ನು ಕೇಳುತ್ತಿರುತ್ತೀರಿ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ವೇಳೆ ವಶಕ್ಕೆ ಪಡೆದುಕೊಂಡಿರುವ ಚಿನ್ನಾಭರಣ ಮತ್ತು ಕೋಟ್ಯಂತರ ಹಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ದೇಶದ ಇತಿಹಾಸದಲ್ಲಿ ಐಟಿ ದಾಳಿಯಲ್ಲಿ ಇದು ಅತ್ಯಂತ ದೊಡ್ಡದಾಗಿದ್ದು, ಬರೋಬ್ಬರಿ 10 ದಿನ ಕಾರ್ಯಾಚರಣೆ ನಡೆದಿದೆ. 10 ದಿನದಲ್ಲಿ ಅಧಿಕಾರಿಗಳಿಗೆ ಸಿಕ್ಕ ಹಣ ಎಷ್ಟು ಅಂತ ಕೇಳಿದ್ರೆ ಒಂದು ಕ್ಷಣ ನೀವು ಶಾಕ್ ಆಗ್ತೀರಿ. ಆರಂಭದಿಂದ ಕೊನೆಯವರೆಗೆ ಈ ಐಟಿ ದಾಳಿಯಲ್ಲಿ ಏನೇನಾಯ್ತು ಎಂಬುದರ ಮಾಹಿತಿ ಈ ಲೇಖನದಲ್ಲಿದೆ. 

ದೇಶದ ಅತಿ ದೊಡ್ಡ ದಾಳಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಒಡಿಶಾ ರಾಜ್ಯದಲ್ಲಿ ನಡೆಸಿದ್ದಾರೆ. ಒಡಿಶಾ ರಾಜ್ಯದ ಮದ್ಯ ತಯಾರಿಕಾ ಕಂಪನಿ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ನ ಬಹುತೇಕ ಎಲ್ಲಾ ಬ್ರಾಂಚ್‌ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಬರೋಬ್ಬರಿ 10 ದಿನ ನಡೆದ ದಾಳಿಯಲ್ಲಿ ಅಧಿಕಾರಿಗಳು 352 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡಡೆದುಕೊಂಡಿದ್ದಾರೆ. ನೆಲದಡಿಯಲ್ಲಿ ಸಂಗ್ರಹಿಸಿದ್ದ ಬೆಲೆಬಾಳುವ ವಸ್ತುಗಳನ್ನು ಪತ್ತೆ ಮಾಡಲು ಅಧಿಕಾರಿಗಳು ವಿಶೇಷ ಸ್ಕ್ಯಾನಿಂಗ್ ವ್ಹೀಲ್ ಎಂಬ ಯಂತ್ರ ಬಳಸಿಕೊಂಡಿದ್ದರು ಎಂದು ವರದಿಯಾಗಿದೆ. ಈ ಮೂಲಕ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ನ ಮೂಲೆ ಮೂಲೆಯನ್ನು ಜಾಲಾಡಿದ್ದಾರೆ. 

ಹಣ ಎಣಿಕೆಗಾಗಿ 36 ಯಂತ್ರಗಳ ಬಳಕೆ
ಈ ದಾಳಿಯಲ್ಲಿ ಸಿಕ್ಕ ಹಣದ ಎಣಿಕೆಗಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬರೋಬ್ಬರಿ 3 ಡಜನ್ (36) ಯಂತ್ರಗಳನ್ನು ತರಿಸಿಕೊಂಡಿದ್ದರು. ದಾಳಿಯಲ್ಲಿ ಅಪಾರ ನಗದು ಪತ್ತೆಯಾಗಿದ್ದರಿಂದ ಹಣ ಎಣಿಕೆಯ ಯಂತ್ರಗಳ ಸಂಖ್ಯೆ ಹೆಚ್ಚಾಗತೊಡಗಿತು. ಅಷ್ಟು ಮಾತ್ರವಲ್ಲ ಹಣ ಎಣಿಸಲು ವಿವಿಧ ಬ್ಯಾಂಕ್‌ಗಳ ನೌಕರರನ್ನು ಬಳಸಿಕೊಳ್ಳಲಾಗಿತ್ತು.ಹಣ ಎಣಿಕೆಯದ್ದು ಎನ್ನಲಾದ ಕೆಲ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಶೀರ್ಷಿಕೆಯಡಿಯಲ್ಲಿ ವೈರಲ್ ಆಗುತ್ತಿವೆ. 

ಇದನ್ನೂ ಓದಿ: 80 ಲಕ್ಷ ಜನರ ಮೊಬೈಲ್‌ನಲ್ಲಿವೆ 15 ನಕಲಿ ಲೋನ್ ಆ್ಯಪ್‌ಗಳು; ಇದ್ರೆ ಇಂದೇ ಡಿಲೀಟ್ ಮಾಡಿ, ಎಚ್ಚರಿಕೆ ಸಂದೇಶ

ದಾಳಿಯಲ್ಲಿ ವಶಕ್ಕೆ ಪಡೆಯಲಾದ ಹಣ ವರ್ಗಾವಣೆಗಾಗಿ ವಿಶೇಷ ವಾಹನ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಾರೀ ಭದ್ರತೆಯಲ್ಲಿ ಹಣವನ್ನು ಮೂಟೆಗಳಲ್ಲಿ ತುಂಬಿಸಿ ಸಾಗಿಸಲಾಗಿದೆ. ಸದ್ಯ ಈ ಹಣವನ್ನು ಬಿಗಿ ಭದ್ರತೆಯಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಠೇವಣಿ ಇರಿಸಲಾಗಿದೆ. ದಾಳಿಯ ಪ್ರತಿಯೊಂದು ಕ್ಷಣವನ್ನು ಆದಾಯ ತೆರಿಗೆ ಅಧಿಕಾರಿಗಳು ರೆಕಾರ್ಡ್ ಮಾಡಿಕೊಂಡಿದ್ದರು.

ಈ ಐಟಿ ದಾಳಿ ಆಗಸ್ಟ್‌ನಲ್ಲಿ ನಡೆದಿತ್ತು. ಕೇಂದ್ರ ಸರ್ಕಾರ ದಾಳಿ ನಡೆಸಿದ ಅಧಿಕಾರಿಗಳನ್ನು ಗೌರವಿಸಿದೆ. ಈ ಮಹಾ ಐಟಿ ದಾಳಿ ದಾಯ ತೆರಿಗೆ ತನಿಖಾ ಅಧಿಕಾರಿ ಎಸ್‌ಕೆ ಝಾ ಮತ್ತು ಹೆಚ್ಚುವರಿ ನಿರ್ದೇಶಕ ಗುರುಪ್ರೀತ್ ಸಿಂಗ್ ಅವರ ನೇತೃತ್ವದಲ್ಲಿ ನಡೆದಿತ್ತು.

ಇದನ್ನೂ ಓದಿ: ಡಿಸೆಂಬರ್ 1ರಿಂದ ಈ ಹಣಕಾಸಿನ ನಿಯಮಗಳಲ್ಲಿ ಮಹತ್ವದ ಬದಲಾವಣೆ