Air India ಮಾರಾಟ: ಒಪ್ಪಂದಕ್ಕೆ ಸಹಿ ಹಾಕಿದ ಕೇಂದ್ರ ಸರ್ಕಾರ!
*ಏರ್ ಇಂಡಿಯಾ ಮಾರಾಟ : ಒಪ್ಪಂದಕ್ಕೆ ಸಹಿ ಹಾಕಿದ ಸರ್ಕಾರ!
*ಏರ್ ಇಂಡಿಯಾದ ಶೇ.100ರಷ್ಟು ಪಾಲು ಖರೀಸಿದ ಟಾಟಾ
*ಸಾಲದ ಸುಳಿಯಲ್ಲಿ ಒದ್ದಾಡುತ್ತಿದ್ದ ಏರ್ ಇಂಡಿಯಾ ಸಂಸ್ಥೆ
ನವದೆಹಲಿ (ಅ .26) : ಏರ್ ಇಂಡಿಯಾ (Air India) ಮಾರಾಟ ಪ್ರಕ್ರಿಯೆ ಸಂಬಂಧ ಟಾಟಾ ಸಮೂಹದ (Tata Group) ಜೊತೆಗೆ ಕೇಂದ್ರ ಸರ್ಕಾರ ಸೋಮವಾರ (ಅ .25) ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅನ್ವಯ ಏರ್ ಇಂಡಿಯಾದ ಶೇ.100ರಷ್ಟು ಪಾಲು ಟಾಟಾ ಸಮೂಹಕ್ಕೆ ಹೋಗಲಿದೆ. ಅದಕ್ಕೆ ಬದಲಿಯಾಗಿ ಟಾಟಾ ಸಮೂಹ ಏರ್ ಇಂಡಿಯಾದ 15,300 ಕೋಟಿ ರು. ಸಾಲ ತೀರಿಸಲಿದೆ ಮತ್ತು ಸರ್ಕಾರಕ್ಕೆ 2700 ಕೋಟಿ ರು. ನಗದು ಹಣ ಪಾವತಿ ಮಾಡಲಿದೆ. ಅ.11ರಂದು ಏರ್ ಇಂಡಿಯಾದ ಶೇ.100ರಷ್ಟು ಶೇರುಗಳನ್ನು ಟಾಟಾ ಗ್ರೂಪ್‌ಗೆ ಮಾರಾಟ ಮಾಡುವುದಾಗಿ ಸರ್ಕಾರ ಹೇಳಿತ್ತು.
ಟಾಟಾ ಗ್ರೂಪ್ ಪಾಲಾದ ಏರ್ ಇಂಡಿಯಾ ವಿಮಾನ ಸಂಸ್ಥೆ; ಭಾವುಕರಾದ ರತನ್ ಟಾಟಾ!
ಈ ಬಗ್ಗೆ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (Department of Investment and Public Asset Management) ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ 'ಟಾಟಾ ಸನ್ಸ್‌ನೊಂದಿಗೆ ಸರ್ಕಾರವು ಇಂದು ಶೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ' ಎಂದು ತಿಳಿಸಿದ್ದಾರೆ . ಇದು 2003-04 ರಿಂದ ಮೊದಲ ಖಾಸಗೀಕರಣವಾಗಿದೆ. ಏರ್‌ಏಷ್ಯಾ ಇಂಡಿಯಾ (Air Asia India) ಮತ್ತು ವಿಸ್ತಾರಾ (Vistara) ವಿಮಾನಯಾನ ಸಂಸ್ಥೆಯೊಂದಿಗೆ ಈಗಾಗಲೇ ಸಿಂಗಾಪುರ್ ಏರ್‌ಲೈನ್ಸ್ ಲಿಮಿಟೆಡ್‌ನ ಜತೆ ಟಾಟಾ ಜಂಟಿ ಉದ್ಯಮವನ್ನುಯ ಹೊಂದಿದೆ. ಹಾಗಾಗಿ ಏರ್ ಇಂಡಿಯಾ ಟಾಟಾ ಸಂಸ್ಥೆಯ ಅಧೀನದಲ್ಲಿರುವ ಮೂರನೇ ಏರಲೈನ್ ಸಂಸ್ಥೆ ಆಗಲಿದೆ.
ಟಾಟಾ ಪಾಲಾದ ಏರ್ ಇಂಡಿಯಾ!
ಏರ್ ಇಂಡಿಯಾ ಸಂಸ್ಥೆಯ ಬಿಡ್‌ಗೆ ಟಾಟಾ ಸನ್ಸ್ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿತ್ತು. 18,000 ಕೋಟಿ ರೂಪಾಯಿಗೆ ಟಾಟಾ ಸನ್ಸ್, ಏರ್ ಇಂಡಿಯಾ ಖರೀದಿಗೆ ಬಿಡ್ ಸಲ್ಲಿಸಿತ್ತು. ಇದರ ಜೊತೆಗೆ ಇನ್ನು 5 ಸಂಸ್ಥೆಗಳು ಕೂಡ ಬಿಡ್ ಸಲ್ಲಿಸಿದ್ದವು. ಅಂತಿಮವಾಗಿ ಟಾಟಾ ಸನ್ಸ್ ಬಿಡ್ ಗೆದ್ದುಕೊಂಡಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ(DIPAM) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದರು. ಬಿಡ್ ಪ್ರಕ್ರಿಯೆ ಅಂತ್ಯಗೊಂಡ ಬಳಿಕ ತುಹಿನ್ ಕಾಂತ ಪಾಂಡೆ ಹಾಗೂ ನಾಗರೀಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಜಂಟಿಯಾಗಿ ಸುದ್ಧಿಗೋಷ್ಠಿ ನಡೆಸಿದ್ದರು.
ಏರ್ ಇಂಡಿಯಾ ಖಾಸಗೀಕರಣ; ಪ್ರಧಾನಿ,VVIP ಪ್ರಯಾಣ, ಹಜ್ ಯಾತ್ರೆ ಹೇಗೆ? ಹಲವು ಪ್ರಶ್ನೆಗೆ ಇಲ್ಲಿದೆ ಉತ್ತರ!
ಒಪ್ಪಂದದ ಪ್ರಕಾರ ಕೇಂದ್ರ ಸರ್ಕಾರ, ಏರ್ ಇಂಡಿಯಾದ ಶೇಕಡಾ 100ರಷ್ಟು ಪಾಲನ್ನು ಟಾಟಾ ಸನ್ಸ್ ಸಂಸ್ಥೆಗೆ ಮಾರಾಟ ಮಾಡಿದೆ. ಏರ್ ಇಂಡಿಯಾ ಮೇಲಿನ ಸಾಲದ ಪೈಕಿ 15,300 ಕೋಟಿ ರೂಪಾಯಿ ಸಾಲದ ಜವಾಬ್ದಾರಿಯನ್ನು ಟಾಟಾ ಹೊತ್ತುಕೊಳ್ಳಲಿದೆ. ಇನ್ನು ಬಾಕಿ ಇರುವ 46,262 ಕೋಟಿ ರೂಪಾಯಿ ಸಾಲದ ಜವಾಬ್ದಾರಿ ಸರ್ಕಾರದ ಮೇಲಿದೆ.
ಅನೇಕ ಷರತ್ತು, ನಷ್ಟದಲ್ಲಿದ್ದರೂ ಏರ್ ಇಂಡಿಯಾ ಖರೀದಿಸಿದ್ದೇಕೆ ಟಾಟಾ?
ಸಾಲದ ಸುಳಿಯಲ್ಲಿ ಒದ್ದಾಡುತ್ತಿದ್ದ ಏರ್ ಇಂಡಿಯಾ ಸಂಸ್ಥೆಯ ನಿರ್ವಹಣೆ ಸರ್ಕಾರಕ್ಕೆ ತೀವ್ರ ತಲೆನೋವಾಗಿತ್ತು. ಪ್ರತಿ ವರ್ಷ ಸಾಲದ ಹೊರೆ ಹೆಚ್ಚಾಗುತ್ತಲೇ ಹೋಗಿತ್ತು. ಸದ್ಯ ಏರ್ ಇಂಡಿಯಾ ಮೇಲೆ ಬರೋಬ್ಬರಿ 61,562 ಸಾವಿರ ಕೋಟಿ ರೂಪಾಯಿ ಸಾಲ ಇದೆ. 2018ರಿಂದ ಏರ್ ಇಂಡಿಯಾ ಮಾರಾಟಕ್ಕೆ ಕೇಂದ್ರ ಸರ್ಕಾರ ತಯಾರಿ ಮಾಡಿತ್ತು. ಆದರೆ ಭಾರಿ ವಿರೋಧದಿಂದ ಪ್ರಸ್ತಾವನೆಯನ್ನು ಕೈಬಿಟ್ಟಿತು. ಇದೀಗ ಆರ್ಥಿಕ ಹೊರೆಯಿಂದ ಬಚಾವಾಗಲು ಕೇಂದ್ರ ಸರ್ಕಾರ ಕೊನೆಗೂ ಏರ್ ಇಂಡಿಯಾವನ್ನು ಟಾಟಾ ಸನ್ಸ್ ಸಂಸ್ಥೆಗೆ ಮಾರಾಟ ಮಾಡಿದೆ.