ಟಾಟಾ ಗ್ರೂಪ್ ಪಾಲಾದ ಏರ್ ಇಂಡಿಯಾ ವಿಮಾನ ಸಂಸ್ಥೆ; ಭಾವುಕರಾದ ರತನ್ ಟಾಟಾ!
- ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಬಿಡ್ ಗೆದ್ದ ಟಾಟಾ ಸನ್ಸ್
- 61,562 ಸಾವಿರ ಕೋಟಿ ಸಾಲದ ಸಂಸ್ಥೆ ಖರೀದಿಸಿದ ಟಾಟಾ ಗ್ರೂಪ್
- ಕಳೆದ ಹಲವು ದಿನಗಳಿಂದ ಚರ್ಚೆಗೆ ಕಾರಣಾಗಿದ್ದ ಏರ್ ಇಂಡಿಯಾ ಬಿಡ್
ನವದೆಹಲಿ(ಅ.08): ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದ ಏರ್ ಇಂಡಿಯಾ(Air India) ವಿಮಾನಯಾನ ಸಂಸ್ಥೆಯನ್ನು ಕೇಂದ್ರ ಸರ್ಕಾರ(Government) ಕಳೆದ ಕೆಲ ವರ್ಷಗಳಿಂದ ಮಾರಾಟ ಮಾಡಲು ಹರಸಹಾಸಪಟ್ಟಿತ್ತು. ಇದೀಗ ಕೊನೆಗೂ ಕೇಂದ್ರ ಸರ್ಕಾರ ತನ್ನು ಬಹುದೊಡ್ಡ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ. ಏರ್ ಇಂಡಿಯಾ ಖರೀದಿಗೆ ಟಾಟಾ ಸನ್ಸ್(Tata Sons) ಖರೀದಿಸಿದ್ದ ಬಿಡ್(Bid) ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಈ ಮೂಲಕ ಸರ್ಕಾರದ ಏರ್ ಇಂಡಿಯಾ ಸಂಸ್ಥೆ ಇದೀಗ ಟಾಟಾ ಸನ್ಸ್ ಪಾಲಾಗಿದೆ(acquired Airline).
"
ನಾಯಿಗಾಗಿ ಇಡೀ ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್ ಬುಕ್ ಮಾಡಿದ ಮಾಲೀಕ
ಟಾಟಾ ಸನ್ಸ್ ಬಿಡ್ ಗೆದ್ದ ಬೆನ್ನಲ್ಲೇ ಟಾಟಾ ಗ್ರೂಪ್ ಮುಖ್ಯಸ್ಛ ರಚನ್ ಟಾಟಾ(Ratan Tata) ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ಟಾಟಾ ಸಮೂಹ ಸಂಸ್ಥೆ ಏರ್ ಇಂಡಿಯಾ ಬಿಡ್ ಗೆದ್ದಿದೆ ಅನ್ನೋದು ಸಂತೋಷದ ವಿಚಾರ. ಏರ್ ಇಂಡಿಯಾವನ್ನು ಮತ್ತೆ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಟಾಟಾ ವಹಿಸಿಕೊಳ್ಳುತ್ತಿದೆ. ವಿಮಾನಯಾನದಲ್ಲಿ ಟಾಟಾ ಸಂಸ್ಥೆ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಬೆಳೆಯಲಿದೆ. ಭಾವನಾತ್ಮಕವಾಗಿ ಹೇಳುವಾದರೆ, ಒಂದು ಕಾಲದಲ್ಲಿ ಏರ್ ಇಂಡಿಯಾ ಆರ್‌ಜೆಡಿ ಟಾಟಾ(RJD Tata) ಒಡೆತನದಲ್ಲಿತ್ತು. ಈ ಮೂಲಕ ಏರ್ ಇಂಡಿಯಾ ಪ್ರತಿಷ್ಠಿತ ಕಂಪನಿಯಾಗಿ ಬೆಳೆದಿತ್ತು. ಕೈತಪ್ಪಿಹೋಗಿದ್ದ ವಿಮಾನಯಾನ ಸಂಸ್ಥೆಯನ್ನು ಮರಳಿ ಪಡೆಯುವಲ್ಲಿ ಟಾಟಾ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಆರ್‌ಜೆಡಿ ಟಾಟಾ ಇದ್ದರೆ ಸಂತಸ ಇಮ್ಮಡಿಯಾಗುತ್ತಿತ್ತು. ಈ ಸಂದರ್ಭದಲ್ಲಿ ನಾನು ಏರ್ ಇಂಡಿಯಾವನ್ನು ಖಾಸಗೀಕರಣ(privatisation) ಮಾಡುವ ನಿರ್ಧಾರ ತೆಗೆದ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ರತನ್ ಟಾಟಾ ಹೇಳಿದ್ದಾರೆ.
ಸಾಲದ ಸುಳಿಯಲ್ಲಿ ಒದ್ದಾಡುತ್ತಿದ್ದ ಏರ್ ಇಂಡಿಯಾ ಸಂಸ್ಥೆಯ ನಿರ್ವಹಣೆ ಸರ್ಕಾರಕ್ಕೆ ತೀವ್ರ ತಲೆನೋವಾಗಿತ್ತು. ಪ್ರತಿ ವರ್ಷ ಸಾಲದ ಹೊರೆ ಹೆಚ್ಚಾಗುತ್ತಲೇ ಹೋಗಿತ್ತು. ಸದ್ಯ ಏರ್ ಇಂಡಿಯಾ ಮೇಲೆ ಬರೋಬ್ಬರಿ 61,562 ಸಾವಿರ ಕೋಟಿ ರೂಪಾಯಿ ಸಾಲ ಇದೆ. 2018ರಿಂದ ಏರ್ ಇಂಡಿಯಾ ಮಾರಾಟಕ್ಕೆ ಕೇಂದ್ರ ಸರ್ಕಾರ ತಯಾರಿ ಮಾಡಿತ್ತು. ಆದರೆ ಭಾರಿ ವಿರೋಧದಿಂದ ಪ್ರಸ್ತಾವನೆಯನ್ನು ಕೈಬಿಟ್ಟಿತು. ಇದೀಗ ಆರ್ಥಿಕ ಹೊರೆಯಿಂದ ಬಚಾವಾಗಲು ಕೇಂದ್ರ ಸರ್ಕಾರ ಕೊನೆಗೂ ಏರ್ ಇಂಡಿಯಾವನ್ನು ಟಾಟಾ ಸನ್ಸ್ ಸಂಸ್ಥೆಗೆ ಮಾರಾಟ ಮಾಡಿದೆ.
ಸ್ಯಾನ್‌ಫ್ರಾನ್ಸಿಸ್ಕೋದಿಂದ 16 ತಾಸಲ್ಲಿ ಪ್ರಯಾಣಿಕರ ಹೊತ್ತು ತಂದು ಏರ್ ಇಂಡಿಯಾ ಲೇಡಿ ಪೈಲಟ್‌ಗಳು
ಏರ್ ಇಂಡಿಯಾ ಸಂಸ್ಥೆಯ ಬಿಡ್‌ಗೆ ಟಾಟಾ ಸನ್ಸ್ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿದೆ. 18,000 ಕೋಟಿ ರೂಪಾಯಿಗೆ ಟಾಟಾ ಸನ್ಸ್, ಏರ್ ಇಂಡಿಯಾ ಖರೀದಿಗೆ ಬಿಡ್ ಸಲ್ಲಿಸಿತ್ತು. ಇದರ ಜೊತೆಗೆ ಇನ್ನು 5 ಸಂಸ್ಥೆಗಳು ಬಿಡ್ ಸಲ್ಲಿಸಿತ್ತು. ಅಂತಿಮವಾಗಿ ಟಾಟಾ ಸನ್ಸ್ ಬಿಡ್ ಗೆದ್ದುಕೊಂಡಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ(DIPAM) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.
ಬಿಡ್ ಪ್ರಕ್ರಿಯೆ ಅಂತ್ಯಗೊಂಡ ಬಳಿಕ ತುಹಿನ್ ಕಾಂತ ಪಾಂಡೆ ಹಾಗೂ ನಾಗರೀಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಜಂಟಿಯಾಗಿ ಸುದ್ಧಿಗೋಷ್ಠಿ ನಡೆಸಿದ್ದಾರೆ.
ಒಪ್ಪಂದದ ಪ್ರಕಾರ ಕೇಂದ್ರ ಸರ್ಕಾರ, ಏರ್ ಇಂಡಿಯಾದ ಶೇಕಡಾ 100ರಷ್ಟು ಪಾಲನ್ನು ಟಾಟಾ ಸನ್ಸ್ ಸಂಸ್ಥೆಗೆ ಮಾರಾಟ ಮಾಡಿದೆ. ಏರ್ ಇಂಡಿಯಾ ಮೇಲಿನ ಸಾಲದ ಪೈಕಿ 15,300 ಕೋಟಿ ರೂಪಾಯಿ ಸಾಲದ ಜವಾಬ್ದಾರಿಯನ್ನು ಟಾಟಾ ಹೊತ್ತುಕೊಳ್ಳಲಿದೆ. ಇನ್ನು ಬಾಕಿ ಇರುವ 46,262 ಕೋಟಿ ರೂಪಾಯಿ ಸಾಲದ ಜವಾಬ್ದಾರಿ ಸರ್ಕಾರದ ಮೇಲಿದೆ.
ಏರಿಂಡಿಯಾದ ಆಯ್ದ ಸಿಬ್ಬಂದಿಗೆ 5 ವರ್ಷ ವೇತನ ರಹಿತ ರಜೆ!
ಏರ್ ಇಂಡಿಯಾ ಖರೀದಿಗೆ ಟಾಟಾ ಸೇರಿದಂತೆ 7 ಸಂಸ್ಥೆಗಳು ಬಿಡ್ ಸಲ್ಲಿಸಿತ್ತು. ಕೊನೆಗೂ ಏರ್ ಇಂಡಿಯಾ ಟಾಟಾ ಗ್ರೂಪ್ ಪಾಲಾಗಿದೆ. ಏರ್ ಇಂಡಿಯಾ ಮಾರಾಟಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟಾಟಾ ಸಂಸ್ಥೆಯಡಿ ಏರ್ ಇಂಡಿಯಾ ದೇಶದ ಪ್ರತಿಷ್ಠಿತ ಹಾಗೂ ಲಾಭದಾಯಕ ಕಂಪನಿಯಾಗಲಿದೆ ಎಂದಿದ್ದಾರೆ. ಆದರೆ ಮತ್ತೆ ಕೆಲವರು ಸರ್ಕಾರ ಎಲ್ಲವನ್ನು ಖಾಸಗೀಕರಣ ಮಾಡುತ್ತಾ ದೇಶವನ್ನೇ ಖಾಸಗಿ ಕೈಗೆ ನೀಡುತ್ತಿದೆ ಎಂದು ಟೀಕಿಸಿದ್ದಾರೆ.