Asianet Suvarna News Asianet Suvarna News

Goa Election 2022: ಗೋವಾ ಚುನಾವಣೆ ಅಖಾಡಕ್ಕೆ ಸತೀಶ್ ಜಾರಕಿಹೊಳಿ ಎಂಟ್ರಿ, ಕನ್ನಡಿಗರ ಮತ ಸೆಳೆಯಲು ಕಾರ್ಯತಂತ್ರ

ಗೋವಾ ವಿಧಾನಸಭೆ ಚುನಾವಣೆ ಅಖಾಡಕ್ಕೆ ಮಾಸ್ಟರ್‌ಮೈಂಡ್ ಸತೀಶ್ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದಾರೆ. ಗೋವಾದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಪಣಜಿಯ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಜೊತೆ ಸಭೆ ನಡೆಸಿದ್ದಾರೆ. 

 

Goa Election 2022 kpcc leader satish jarkiholi campaign in Goa gow
Author
Bengaluru, First Published Jan 26, 2022, 2:17 PM IST

ಪಣಜಿ(ಜ.26): ಫೆಬ್ರವರಿ 14 ರಂದು ಗೋವಾ ವಿಧಾನಸಭೆ ಚುನಾವಣೆ (goa assembly election) ನಡೆಯಲಿದ್ದು, ಈ ಹಿನ್ನೆಲೆಯಲ್ಲಿ  ಗೋವಾ(Goa) ವಿಧಾನಸಭೆ ಚುನಾವಣೆ ಅಖಾಡಕ್ಕೆ ಮಾಸ್ಟರ್‌ಮೈಂಡ್ ಸತೀಶ್ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದಾರೆ. ಗೋವಾದಲ್ಲಿ ಚುನಾವಣಾ ಪ್ರಚಾರದಲ್ಲಿ (Election Campaign) ಭಾಗಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (satish jarkiholi), ಪಣಜಿಯ (Panaji) ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಗೋವಾದ ಕನ್ನಡಿಗ ಮುಖಂಡರ ಜೊತೆಯೂ ಮಾತುಕತೆ ನಡೆಸಿದ್ದು, ಸಿದ್ದಣ್ಣ ಮೇಟಿ ಸೇರಿ ಹಲವು ಕನ್ನಡಿಗ ಮುಖಂಡರು ಈ ಚರ್ಚೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ  ಗೋವಾ ಕನ್ನಡಿಗರ ಮತ ಸೆಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ.

ಇದೇ ವೇಳೆ ಗೋವಾದ ಪಣಜಿಯಲ್ಲಿ (panaji) ಮಾತನಾಡಿರುವ ಸತೀಶ್ ಜಾರಕಿಹೊಳಿ , ಗೋವಾದ ಬಹುತೇಕ 40 ಕ್ಷೇತ್ರಗಳಲ್ಲಿ ಹೆಚ್ಚು ಕಡಿಮೆ ಕನ್ನಡಿಗ ಮತದಾರರೇ ನಿರ್ಣಾಯಕರಾಗಿದ್ದಾರೆ. ಗೋವಾ ಕನ್ನಡಿಗರು ಮೊದಲಿನಿಂದಲೂ ಕಾಂಗ್ರೆಸ್ ಪರವಾಗಿ ಇದ್ದಾರೆ, ಈಗಲೂ ಕಾಂಗ್ರೆಸ್ ಪರವಾಗಿಯೇ ಇದ್ದಾರೆ. ಗೋವಾ ಕನ್ನಡಿಗರು (goa kannadigas) ಶಾಶ್ವತ ಮೂಲಭೂತ ಸೌಕರ್ಯ ಕೇಳ್ತಾರೆ, ಅವರದ್ದು ಅಂತಹ ದೊಡ್ಡ ಬೇಡಿಕೆ ಏನಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಮಾಜಿ ರಕ್ಷಣಾ ಸಚಿವ, ಗೋವಾದ ಮಾಜಿ ಮುಖ್ಯಮಂತ್ರಿ ದಿವಗಂತ ಮನೋಹರ್ ಪರಿಕ್ಕರ್ ಪುತ್ರ ಉತ್ಪಾಲ್​ ಪರಿಕ್ಕರ್​ ಗೆ (utpal parrikar) ಪಣಜಿ ಬಿಜೆಪಿ (BJP) ಟಿಕೆಟ್ ನೀಡದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ ಬಿಜೆಪಿಯದ್ದು ಯೂಸ್ & ಥ್ರೋ  ಪಾಲಿಟಿಕ್ಸ್‌ ಬಿಜೆಪಿಗೆ ಮನೋಹರ್ ಪರಿಕ್ಕರ್ ಸೇವೆ ಬಹಳ ಇದೆ. ಅವರು ಹಲವು ಬಾರಿ ಗೋವಾದ ಸಿಎಂ ಆಗಿದ್ದಾರೆ. ಅವರದ್ದೇ ಆದಂತಹ ಕೊಡುಗೆ ಇದೆ, ಆದರೂ ಅವರ ಪುತ್ರನಿಗೆ ಟಿಕೆಟ್ ತಪ್ಪಿಸುವ ಪ್ರಯತ್ನ ಆಗಿದೆ. ಬಿಜೆಪಿ ಯೂಸ್ & ಥ್ರೋ ಮಾಡುವಂತಹ ಪ್ರಯತ್ನ ಗೋವಾಗಷ್ಟೇ ಸೀಮಿತ ಆಗಿಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಬಂದರೂ ಅವರನ್ನೇ ಮೂಲೆಗುಂಪು ಮಾಡುವ ಪ್ರಯತ್ನ ಆಗಿದೆ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.

Republic Day: ಮಣಿಪುರಿ ಶಾಲ್‌ ಉತ್ತರಾಖಂಡ್ ಟೋಪಿ... ಪ್ರಧಾನಿ ಧಿರಿಸಿನ ಬಗ್ಗೆ ಭಾರಿ ಚರ್ಚೆ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದರೂ ನೆಮ್ಮದಿ ಇಲ್ಲ. ಸಮ್ಮಿಶ್ರ ಸರ್ಕಾರ ಒಡೆದು ಶಾಸಕರ ಖರೀದಿಸಿ ಕರ್ನಾಟಕದಲ್ಲಿ ಸರ್ಕಾರ ಮಾಡಿದ್ದಾರೆ. ಸರ್ಕಾರ ಮಾಡಿದರೂ ನೆಮ್ಮದಿಯಿಲ್ಲ, ಶಾಶ್ವತವಾಗಿ ಸರ್ಕಾರದಲ್ಲಿ ಇರಲು ಇಚ್ಛೆ ಇಲ್ಲ. ಯಾವುದೇ ಜನಪರ ಕಾರ್ಯಕ್ರಮ ಇಲ್ಲ. ಹಿಂದಿನ ನಮ್ಮ ಸರ್ಕಾರದಲ್ಲಿ ಸಿದ್ದರಾಮಯ್ಯ ಹಲವು ಜನಪರ ಯೋಜನೆ ಕೊಟ್ಟಿದ್ರು, ಕರ್ನಾಟಕದ ಬಿಜೆಪಿ ಸರ್ಕಾರ ಜನಪರ ಸರ್ಕಾರವಲ್ಲ ಅಂತಾ ಹೇಳೋಕೆ ಬಯಸುವೆ ಎಂದು ಸತೀಶ್ ಜಾರಕಿಹೊಳಿ ಗೋವಾದಲ್ಲಿ ಹೇಳಿಕೆ ನೀಡಿದ್ದಾರೆ.

Android, iOSಗೆ ಪರ್ಯಾಯ ಸ್ವದೇಶಿ Mobile Operating System ಅಭಿವೃದ್ಧಿ: ರಾಜೀವ್ ಚಂದ್ರಶೇಖರ್!

ಗೋವಾದಲ್ಲಿ ಕಾಂಗ್ರೆಸ್ (Congress) ಸರ್ಕಾರ ಬರಲೇಬೇಕು ಅಂತಾ ರಾಹುಲ್ ಗಾಂಧಿ (rahul gandhi) ನೇತೃತ್ವದಲ್ಲಿ ಕ್ಯಾಂಪೇನ್ ಶುರುವಾಗಿದೆ. ಪಿ.ಚಿದಂಬರಂ, ದಿನೇಶ್ ಗುಂಡೂರಾವ್ ಸ್ಥಳೀಯ ನಾಯಕರು ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ. ಈ ಬಾರಿ ಸಂಪೂರ್ಣ ಬಹುಮತ ಕಾಂಗ್ರೆಸ್‌ಗೆ ಸಿಕ್ಕೇ ಸಿಗುತ್ತೆ ಎಂಬ ಭರವಸೆ ಇದೆ ಎಂದು ಗೋವಾದ ಪಣಜಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಒಡಲೊಳಗೆ ಬೆಂಕಿಯುಂಡೆ ಇಟ್ಟುಕೊಂಡು ಉರಿಯುತ್ತಿರುವ ಭೂಮಿ... ವಿಡಿಯೋ ವೈರಲ್

Follow Us:
Download App:
  • android
  • ios