Asianet Suvarna News Asianet Suvarna News

Republic Day: ಮಣಿಪುರಿ ಶಾಲ್‌ ಉತ್ತರಾಖಂಡ್ ಟೋಪಿ... ಪ್ರಧಾನಿ ಧಿರಿಸಿನ ಬಗ್ಗೆ ಭಾರಿ ಚರ್ಚೆ

ಗಣರಾಜ್ಯೋತ್ಸವ ದಿನ ಪ್ರಧಾನಿ ಧರಿಸಿದ ಧಿರಿಸಿನ ಬಗ್ಗೆ ಚರ್ಚೆ
ಮಣಿಪುರಿ ಶಾಲ್‌ ಉತ್ತರಾಖಂಡ್ ಟೋಪಿ ಧರಿಸಿದ ಪ್ರಧಾನಿ
ಚುನಾವಣೆ ಸನ್ನಿಹಿತವಾಗಿರುವ ಮಣಿಪುರ ಹಾಗೂ ಉತ್ತರಾಖಂಡ್‌

Prime Minister Narendra Modis Republic Day 2022 attire presented some surprises akb
Author
Bangalore, First Published Jan 26, 2022, 1:42 PM IST

ನವದೆಹಲಿ(ಜ.26): ಪ್ರತಿ ವರ್ಷದ ಗಣರಾಜ್ಯೋತ್ಸವದಂದು ಪ್ರಧಾನಿ ವರ್ಣರಂಜಿತ ಪೇಟ ಧರಿಸುತ್ತಿದ್ದರು.  ಈ ಬಾರಿಯೂ ಅವರ ಧಿರಿಸು ಎಲ್ಲರನ್ನು ಸೆಳೆಯುತ್ತಿದೆ. ಪ್ರಧಾನಿ ಈ ಬಾರಿ ಮಣಿಪುರಿ ಶಾಲ್‌ ಹಾಗೂ ಉತ್ತರಾಖಂಡ್‌ ಟೋಪಿ ಧರಿಸಿದ್ದಾರೆ. ಆದರೆ ಈ ಎರಡು ರಾಜ್ಯಗಳಲ್ಲಿ ಮುಂದೆ ವಿಧಾನಸಭಾ ಚುನಾವಣೆ ಇದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಜನರ ಗಮನ ಸೆಳೆಯುವ ಸಲುವಾಗಿ ಪ್ರಧಾನಿ ಈ ವೇಷಭೂಷಣ ತೊಟ್ಟಿದ್ದಾರೆ ಎಂಬ ಊಹಾಪೋಹಾಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಹಿಂದೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಇದ್ದ ಸಂದರ್ಭದಲ್ಲಿ ಪ್ರಧಾನಿ ಕೋವಿಡ್‌ ಲಸಿಕೆ ತೆಗೆದುಕೊಳ್ಳಲು ಬಂದಾಗ ಬೆಂಗಾಲಿ ಶಾಲ್‌ ಧರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 

ಇನ್ನು ಪ್ರಧಾನಿ ಧರಿಸಿದ ಟೋಪಿಯಲ್ಲಿ ಚುನಾವಣಾ ಕಣದಲ್ಲಿರುವ ಉತ್ತರಾಖಂಡದ ಅಧಿಕೃತ ಪುಷ್ಪವಾದ ಬ್ರಹ್ಮಕಮಲ (Brahma Kamal) ವನ್ನು ಚಿತ್ರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ( Ajay Bhatt) ಕೂಡ ಅದೇ ರೀತಿಯ ಟೋಪಿ ಧರಿಸಿದ್ದರು. ಇತ್ತ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ರಾಜ್ಯದ ಪರಂಪರೆಯನ್ನು ವಿಶ್ವದ ಮುಂದೆ ಪ್ರತಿನಿಧಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Republic Day 2022: ಹಲವು ಹೊಸತನಗಳ ಗಣರಾಜ್ಯ ಸಂಭ್ರಮ

ಇಂದು, 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರು ಬ್ರಹ್ಮಕಮಲದಿಂದ ಅಲಂಕರಿಸಲ್ಪಟ್ಟ ದೇವಭೂಮಿ ಉತ್ತರಾಖಂಡದ (Uttarakhand) ಟೋಪಿಯನ್ನು ಧರಿಸುವ ಮೂಲಕ ನಮ್ಮ ರಾಜ್ಯದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಉತ್ತರಾಖಂಡದ 1.25 ಕೋಟಿ ಜನರ ಪರವಾಗಿ, ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

ಮಣಿಪುರದ ಸಚಿವ ಬಿಸ್ವಜಿತ್ ಸಿಂಗ್ (Biswajit Singh) ಕೂಡ  ಪ್ರಧಾನಿ ಮೋದಿ ಅವರಿಗೆ ಈ ಧಿರಿಸು ಧರಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಪ್ರಧಾನಿ ಮೋದಿ ಧರಿಸಿರುವ ಶಾಲಿನ ಬಗ್ಗೆ ಅವರು ವಿವರಿಸಿದರು. ಈ ಶಾಲಾನ್ನು ಲೈರಮ್ ಫೀ ಎಂದು ಕರೆಯಲಾಗುತ್ತದೆ ಎಂದು ಸಚಿವರು ಹೇಳಿದರು. ಭಾರತದ 73 ನೇ ಗಣರಾಜ್ಯೋತ್ಸವದ ವೈಭವದ ಸಂದರ್ಭದಲ್ಲಿ ಮಣಿಪುರಿ ಶಾಲು 'ಲೈರಮ್ ಫೀ' ಅನ್ನು ಧರಿಸಿರುವ  ಆತ್ಮೀಯ ಪ್ರಧಾನಿ ನರೇಂದ್ರ ಮೋದಿ ಜಿಯನ್ನು ನೋಡಿದ್ದು, ಇದು ಇಡೀ ಮಣಿಪುರಕ್ಕೆ ಹೆಮ್ಮೆ ಮತ್ತು ಗೌರವದ ಕ್ಷಣವಾಗಿದೆ, ಇದು ರಾಜ್ಯದ ಸೊಗಸಾದ ಸಂಪ್ರದಾಯವನ್ನು ಪ್ರದರ್ಶಿಸುತ್ತದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ನೌಕಾಪಡೆ ಬ್ಯಾಂಡ್‌ನಲ್ಲಿ ಮೂಡಿಬಂತು ಬಾಲಿವುಡ್ ಸಾಂಗ್‌ : ಬ್ಯಾಂಡ್ ಸದ್ದಿಗೆ ಯೋಧರ ಸಖತ್ ಸ್ಟೆಪ್ಸ್

ಬ್ರಹ್ಮಕಮಲ(Brahma Kamal)ವು ಉತ್ತರಾಖಂಡದ ರಾಜ್ಯ ಪುಷ್ಪವಾಗಿದ್ದು ಹಿಮಾಲಯದಲ್ಲಿ ಹೇರಳವಾಗಿ ಕಂಡುಬರುತ್ತದೆ. ಪ್ರಧಾನಿ ಮೋದಿ ಅವರು ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದಾಗಲೆಲ್ಲಾ ಈ ಹೂವನ್ನು ಬಳಸುತ್ತಾರೆ ಎಂದು ವರದಿಗಳು ತಿಳಿಸಿವೆ. ಅವರು ಧರಿಸಿದ್ದ ಟೋಪಿಯಲ್ಲಿ ಈ ಹೂವನ್ನು ಕೆತ್ತಲಾಗಿತ್ತು. ಇನ್ನು ಈ ಲೈರಮ್ ಫೀ ಶಾಲನ್ನು ಪ್ರಧಾನಿ ಮೋದಿ ಧರಿಸಿರುವುದು ಇದೇ ಮೊದಲಲ್ಲ. ಹಲವಾರು ಸಂದರ್ಭಗಳಲ್ಲಿ, ಪಿಎಂ ಮೋದಿ ಸಾಮಾನ್ಯವಾಗಿ ಗಮುಸಾ ಎಂದು ಕರೆಯುವ ಈ ರೀತಿಯ ಶಾಲ್‌ಗಳನ್ನು ಧರಿಸಿರುವುದು ಕಂಡುಬಂದಿದೆ. ಲೈರಮ್ ಫೀ ಮಣಿಪುರದ ವಿಶೇಷತೆಯಾಗಿದೆ.

 

ಪ್ರಧಾನಿ ಮೋದಿ ಅವರು ವರ್ಣರಂಜಿತ ಪೇಟ ಅಥವಾ ಶಾಲುಗಳನ್ನು ಧರಿಸುವುದಕ್ಕೆ ಫೇಮಸ್‌ ಆಗಿದ್ದಾರೆ.  ಯಾವಾಗಲೂ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿ ಧರಿಸುವ ಉಡುಪು ಸುದ್ದಿಯಲ್ಲಿರುತ್ತದೆ. ಕಳೆದ ವರ್ಷ, 72 ನೇ ಗಣರಾಜ್ಯೋತ್ಸವದಂದು, ಪ್ರಧಾನಿ ಮೋದಿ ಅವರು ಗುಜರಾತ್‌ನ ಜಾಮ್‌ನಗರದ (Jamnagar) ರಾಜಮನೆತನದಿಂದ ಉಡುಗೊರೆಯಾಗಿ ನೀಡಿದ ಕೆಂಪು ಬಂಧೇಜ್ (red bandhej) ಪೇಟವನ್ನು ಧರಿಸಿದ್ದರು. 2020 ರಲ್ಲಿ, ಪ್ರಧಾನಿ ಮೋದಿ(PM Modi) ಅವರು ಕೇಸರಿ ಪೇಟವನ್ನು ಧರಿಸಿದ್ದರು. 

Follow Us:
Download App:
  • android
  • ios