ಒಡಲೊಳಗೆ ಬೆಂಕಿಯುಂಡೆ ಇಟ್ಟುಕೊಂಡು ಉರಿಯುತ್ತಿರುವ ಭೂಮಿ... ವಿಡಿಯೋ ವೈರಲ್
- ನೆಲದಡಿಯಿಂದ ಜ್ವಾಲಾಮುಖಿಯಂತೆ ಬರುತ್ತಿದೆ ಲಾವಾರಸ
- ಸ್ಕಾಟ್‌ಲ್ಯಾಂಡ್ ನ ಪಟ್ನಾದಲ್ಲಿ ಘಟನೆ
- ಫೇಸ್‌ಬುಕ್‌ನಲ್ಲಿ ಆತಂಕ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿ
ಸ್ಕಾಟ್‌ಲ್ಯಾಂಡ್(ಜ.26): ಸ್ಕಾಟ್‌ಲ್ಯಾಂಡ್‌ನ ಪ್ರದೇಶವೊಂದರಲ್ಲಿ ನೆಲದಡಿಯಲ್ಲಿ ಜ್ವಾಲಾಮುಖಿಯ ಲಾವಾರಸದಂತೆ ಹರಿದು ಬರುತ್ತಿದೆ. ಬಾಯ್ಬಿಟ್ಟ ಭೂಮಿ ಮಧ್ಯೆ ಕೆಂಪು ಬೆಂಕಿಯುಂಡೆಯಂತೆ ಇದು ಕಾಣಿಸುತ್ತಿದ್ದು, ಘಟನೆ ನಡೆದ ಪ್ರದೇಶದ ಸುತ್ತ ಬೆಂಕಿ ಹೊತ್ತಿ ಉರಿದಂತೆ ಕಪ್ಪಗಾಗಿದೆ. ಸ್ಕಾಟ್‌ಲ್ಯಾಂಡ್ ನ ಪಟ್ನಾದ (Patna) ಹಳೆಯ ಕಾರವಾನ್ ಪಾರ್ಕ್‌ನಲ್ಲಿ (Caravan Park) ಈ ದೃಶ್ಯ ಕಂಡು ಬಂದಿದೆ.
ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು, ವೈರಲ್ ಆಗಿದೆ. ಸ್ಥಳೀಯ ನಿವಾಸಿ ಟಾಮ್ ಪ್ಯಾಟನ್ (Tom Paton) ಫೇಸ್‌ಬುಕ್‌ನಲ್ಲಿ ಈ ಘಟನೆಯ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದು, ನಂತರ, ಅನೇಕರು ಈ ಫೋಟೋ ಮತ್ತು ವೀಡಿಯೊಗಳನ್ನು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡುತ್ತಿದ್ದಾರೆ.
ಒಡಲೊಳಗೆ ಬೆಂಕಿಯುಂಡೆ ಇಟ್ಟುಕೊಂಡು ಉರಿಯುತ್ತಿರುವ ಭೂಮಿಯ ಈ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಕಾಟಿಷ್ ಕಲ್ಲಿದ್ದಲು ಮಂಡಳಿಯು (Scottish coal board) ಈ ಪ್ರದೇಶಕ್ಕೆ ಎರಡು ತುಂಡು ತಂತಿಗಳ ಬೇಲಿಯನ್ನು ಹಾಕಿದೆ. ಘಟನೆಯಿಂದಾಗಿ ಈ ಪ್ರದೇಶದಲ್ಲಿ ತಾಪಮಾನ ಏರಿಕೆಯಾಗಿದೆ. ಅಲ್ಲದೇ ನೆಲಕ್ಕೆ ಕಾಲಿಟ್ಟಲ್ಲಿ ಕಾಲು ಸುಡುವಷ್ಟು ಬೆಚ್ಚಗಿದೆ.
ಕನಿಷ್ಠ ಮೂರು ವರ್ಷಗಳಲ್ಲಿ ಹೀಗಾಗಲು ಹೇಗೆ ಸಾಧ್ಯ ಎಂದು ನನಗೆ ಅರ್ಥವಾಗುತ್ತಿಲ್ಲ ಮತ್ತು ಅದನ್ನು ನಂದಿಸುವ ಪ್ರಯತ್ನಗಳು ಇನ್ನೂ ನಡೆದಿಲ್ಲ. ದೊಡ್ಡ ಪ್ರಾಣಾಪಾಯ ಸಂಭವಿಸುವ ಮೊದಲು ಸ್ವಲ್ಪ ವಾದರೂ ಮಾಧ್ಯಮದ ಗಮನ ಇದಕ್ಕೆ ಅಗತ್ಯವಾಗಬಹುದು, ಎಂದು ಟಾಮ್ ಪ್ಯಾಟನ್ ಫೇಸ್‌ಬುಕ್‌ನಲ್ಲಿ ಘಟನೆಯ ವೀಡಿಯೊ ಮತ್ತು ಫೋಟೋಗಳನ್ನು ಶೇರ್ ಮಾಡಿ ಬರೆದಿದ್ದಾರೆ.
ಈ ಪೋಸ್ಟ್ ನೋಡಿದ ಜನ ಭಯಭೀತರಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಇದು ದೂರದಿಂದ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಹತ್ತಿರ ಹೋದರಷ್ಟೇ ಸ್ಪಷ್ಟ ಚಿತ್ರಣ ಸಿಗುವುದು. ಆದರೆ ಈ ಪ್ರದೇಶವೂ ವನ್ಯಜೀವಿಗಳಿರುವ ತಾಣವನ್ನು ಸಂಪರ್ಕಿಸುತ್ತದೆ. ಅಲ್ಲದೇ ಕೆಲವರು ನಾಯಿಗಳನ್ನು ಹಿಡಿದುಕೊಂಡು ಅಲ್ಲಿಗೆ ವಾಕ್ ಹೋಗುತ್ತಾರೆ. ಏಕೆಂದರೆ ಅದು ಅಲ್ಲಿದೆ ಎಂದು ಮೊದಲೇ ತಿಳಿದಿಲ್ಲದಿದ್ದರೆ ಅದು ದೂರಕ್ಕೆ ಕಾಣಿಸುವುದಿಲ್ಲ. ಆದರೆ ಕರಟಿದ ವಾಸನೆ ಪ್ರಬಲವಾಗಿದೆ, ಆದರೆ ನೀವು ಅದರ ಮೇಲೆ ಇರುವವರೆಗೂ ನೆಲದಡಿ ಇರುವ ಈ ರಂಧ್ರ ಹಾಗೂ ಬಿರುಕು ಚೆನ್ನಾಗಿ ಮರೆಮಾಡಲ್ಪಡುತ್ತದೆ ಎಂದು ಸ್ಕಾಟಿಷ್ ಮಾಧ್ಯಮವಾದ ದಿ ಹೆರಾಲ್ಡ್‌ಗೆ ಟಾಮ್ ಪ್ಯಾಟನ್ ಹೇಳಿದ್ದಾರೆ.
Tonga Volcano ಟೊಂಗಾದಲ್ಲಿ ಭುಗಿಲೆದ್ದ ಜ್ವಾಲಾಮುಖಿ ಹಿರೋಶಿಮಾಕ್ಕಿಂತ 100 ಪಟ್ಟು ಭೀಕರ!
ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಲ್ಲಿ (volcanic eruption) ಕನಿಷ್ಠ 13 ಮಂದಿ ಬಲಿಯಾಗಿದ್ದರು. ಜಾವಾ ದ್ವೀಪದ ಅತ್ಯಂತ ಎತ್ತರದ ಪರ್ವತವಾದ ಸೆಮೆರುನಲ್ಲಿ ಜ್ವಾಲಾಮುಖಿ ಸ್ಫೋಟಿಸಿತ್ತು. ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ಸ್ಫೋಟ ಎಂದು ಪರಿಗಣಿಸಲಾಗಿದ್ದು, ಜ್ವಾಲಾಮುಖಿಯಿಂದಾಗಿ ಆಗಸದೆತ್ತರಕ್ಕೆ ದಟ್ಟ ಹೊಗೆ ಆವರಿಸಿತ್ತು. ಜ್ವಾಲಾಮುಖಿ ಸ್ಪೋಟಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಿಪತ್ತು ನಿರ್ವಹಣಾ ತಂಡ ನೂರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿ ರಕ್ಷಣೆ ಮಾಡಿತ್ತು. ಘಟನೆಯಲ್ಲಿ ಹಲವರು ಕಣ್ಮರೆಯಾಗಿದ್ದರು.
ದ್ವೀಪದಿಂದ ಮೇಲುಕ್ಕಿ ಬಂದ ಲಾವಾ..! ಬೆಂಕಿಯ ಕೆನ್ನಾಲಿಗೆಗೆ ಗ್ರಾಮವೇ ನಾಶ
ಸೆಮೇರು ಪರ್ವತದಲ್ಲಿ (Mount Semeru) ಜ್ವಾಲಾಮುಖಿ (volcano) ಸ್ಪೋಟಗೊಂಡ ಬಳಿಕ ಲಾವಾ ರಸವು ಹತ್ತಿರದಲ್ಲಿದ್ದ ಪೂರ್ವ ಜಾವಾ ಪ್ರಾಂತ್ಯದ (East Java province) ಹಳ್ಳಿಗಳನ್ನು ಆವರಿಸಿದ ಪರಿಣಾಮ ಜನರು ಭಯಭೀತರಾಗಿ ಓಡಿ ಹೋಗಿದ್ದರು. ಜನರು ಪ್ರಾಣಾಪಾಯದಿಂದ ಪಾರಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಜ್ವಾಲಾಮುಖಿ ಸ್ಫೋಟದಿಂದಾಗಿ ಜಾವಾ ಪ್ರಾಂತ್ಯದ ಹತ್ತಿರದ ನಗರಗಳಾದ ಲಮಾಂಗ್ ಮತ್ತು ಮಲಂಗ್ ನಡುವಿನ ಸೇತುವೆ ಕುಸಿತಗೊಂಡಿತ್ತು.