Asianet Suvarna News Asianet Suvarna News

Android, iOSಗೆ ಪರ್ಯಾಯ ಸ್ವದೇಶಿ Mobile Operating System ಅಭಿವೃದ್ಧಿ: ರಾಜೀವ್ ಚಂದ್ರಶೇಖರ್!

ಗೂಗಲ್‌ನ ಆಂಡ್ರಾಯ್ಡ್ ಮತ್ತು ಆ್ಯಪಲ್‌ನ ಐಒಎಸ್‌ಗೆ ಪರ್ಯಾಯವಾಗಿ ಸ್ಥಳೀಯ ಆಪರೇಟಿಂಗ್ ಸಿಸ್ಟಮನ್ನು ಅಭಿವೃದ್ಧಿಗಾಗಿ ಅನುಕೂಲವಾಗುವಂತೆ  ಹೊಸ ನೀತಿಯನ್ನು ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ

Govt mulling policy to develop indigenous mobile operating system Rajeev Chandrasekhar mnj
Author
Bengaluru, First Published Jan 26, 2022, 12:48 PM IST

Tech Desk: ಗೂಗಲ್‌ನ ಆಂಡ್ರಾಯ್ಡ್ ಮತ್ತು  ಆ್ಯಪಲ್‌ನ ಐಒಎಸ್‌ಗೆ ಪರ್ಯಾಯವಾಗಿ ಸ್ಥಳೀಯ ಆಪರೇಟಿಂಗ್ ಸಿಸ್ಟಮ್  ರಚಿಸಲು ಉದ್ಯಮಕ್ಕೆ ಅನುಕೂಲವಾಗುವಂತಹ ನೀತಿಯನ್ನು ತರಲು ಸರ್ಕಾರ ಚಿಂತನೆ ನಢೆಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸೋಮವಾರ ಹೇಳಿದ್ದಾರೆ. ಪ್ರಸ್ತುತ, ಮೊಬೈಲ್ ಮಾರುಕಟ್ಟೆಯಲ್ಲಿ ಎರಡು ಆಪರೇಟಿಂಗ್ ಸಿಸ್ಟಮ್‌ ಪ್ರಾಬಲ್ಯ ಹೊಂದಿವೆ. ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ  ಗೂಗಲ್‌ನ ಆಂಡ್ರಾಯ್ಡ್ ಮತ್ತು ಆ್ಯಪಲ್‌ನ ಐಒಎಸ್ ರನ್‌ ಆಗುತ್ತವೆ, ಬೇರೆ ಆಯ್ಕೆ ಇಲ್ಲ ಎಂದು ರಾಜೀವ್‌ ಹೇಳಿದ್ದಾರೆ.

"ಇವರೆಡನ್ನು ಬಿಟ್ಟು ಮೂರನೇ ಆಯ್ಕೆ ಇಲ್ಲ.ಆದ್ದರಿಂದ, ಹೊಸ ಹ್ಯಾಂಡ್‌ಸೆಟ್ ಆಪರೇಟಿಂಗ್ ಸಿಸ್ಟಂ  ರಚಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮತ್ತು ಭಾರತ ಸರ್ಕಾರ ಬಹಳಷ್ಟು  ಆಸಕ್ತಿ ಹೊಂದಿದೆ. ನಾವು ಜನರೊಂದಿಗೆ ಮಾತನಾಡುತ್ತಿದ್ದೇವೆ. ಅದಕ್ಕಾಗಿ ನಾವು ನೀತಿ ತರಲು ಎದುರು ನೋಡುತ್ತಿದ್ದೇವೆ. ಸ್ಥಳೀಯ ಆಪರೇಟಿಂಗ್ ಸಿಸ್ಟಮ್ (OS) ಅಭಿವೃದ್ಧಿಗಾಗಿ ಸರ್ಕಾರವು ನವೋದ್ಯಮ ಮತ್ತು ಶೈಕ್ಷಣಿಕ ವ್ಯವಸ್ಥೆಗಳಲ್ಲಿನ ಸಾಮರ್ಥ್ಯಗಳನ್ನು ಹುಡುಕುತ್ತಿದೆ"  ಎಂದು ಸಚಿವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ  ತಿಳಿಸಿದ್ದಾರೆ

ಇದನ್ನೂ ಓದಿ:Education in India: ಕೌಶಲ್ಯಾಧಾರಿತ ಶಿಕ್ಷಣವೇ ದೇಶದ ಭವಿಷ್ಯ: ಕೇಂದ್ರ ಸಚಿವ ಆರ್‌ಸಿ

ಸ್ವದೇಶಿ OS: ಆಪರೇಟಿಂಗ್ ಸಿಸ್ಟಮ್ ಯಾವುದೇ ಕಂಪ್ಯೂಟರ್ ಮತ್ತು ಮೊಬೈಲ್ ಸಾಧನದ ಮುಖ್ಯ ಸಾಫ್ಟ್‌ವೇರ್ ಆಗಿದ್ದು ಅದು ಓಎಸ್‌ನ ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ಸಂಪೂರ್ಣ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಿಸ್ಟಮ್‌ನಲ್ಲಿ ಅಳವಡಿಸಲಾಗಿರುತ್ತದೆ. "ಹೊಸ ಅಪರೇಟಿಂಗ ಸಿಸ್ಟಮ್‌ ರಚಿಸಲು  ಸಾಧ್ಯವಿದ್ದರೆ, ಅದನ್ನು ಅಭಿವೃದ್ಧಿಪಡಿಸಲು ನಾವು ತುಂಬಾ ಆಸಕ್ತಿ ಹೊಂದಿದ್ದೇವೆ. ಇದು ಐಒಎಸ್ ಮತ್ತು ಆಂಡ್ರಾಯ್ಡ್‌ಗೆ ಪರ್ಯಾಯವನ್ನು ರಚಿಸುತ್ತದೆ ಮತ್ತು ನಂತರ ಭಾರತೀಯ ಬ್ರ್ಯಾಂಡಾಗಿ ಇದು ಬೆಳೆಯಬಹುದು" ಎಂದು ಚಂದ್ರಶೇಖರ್ ತಿಳಿಸಿದ್ದಾರೆ.

ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಮರುರೂಪಿಸುವ ನಿಟ್ಟಿನಲ್ಲಿ ಹೆಚ್ಚಿನ ನೀತಿಗಳು ಮತ್ತು  ಕಾರ್ಯವಿಧಾನಗಳನ್ನು ಮರುಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. “ಸ್ಪಷ್ಟ ಗುರಿಗಳನ್ನು ಹೊಂದಿರುವುದು ಮುಖ್ಯ. ಒಮ್ಮೆ ನಾವು ಸ್ಪಷ್ಟವಾದ ಗುರಿಗಳನ್ನು ಹೊಂದಿದ್ದೇವೆ ಮತ್ತು ನಾವು ಏನನ್ನು ಸಾಧಿಸಬೇಕು ಎಂಬುದು ಸ್ಪಷ್ಟವಾದಾಗ ಎಲ್ಲಾ ನೀತಿಗಳು ಮತ್ತು ಕ್ರಮಗಳು ಅದಕ್ಕೆ ಹೊಂದಿಕೆಯಾಗುತ್ತವೆ" ಎಂದು ಚಂದ್ರಶೇಖರ್ ಹೇಳಿದ್ದಾರೆ.

ಇದನ್ನೂ ಓದಿ: JioPhone 5G: ಭಾರತದ ಅತಿ ಅಗ್ಗದ ರಿಲಯನ್ಸ್‌ 5G ಫೋನ್ ಬಿಡುಗಡೆ ಸಾಧ್ಯತೆ: ಫೀಚರ್ಸ್‌ ಲೀಕ್!‌

ವಿಷನ್ ಡಾಕ್ಯುಮೆಂಟ್ ಬಿಡುಗಡೆ: ರಾಜೀವ್‌  ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಆಪಲ್, ಲಾವಾ, ಫಾಕ್ಸ್‌ಕಾನ್, ಡಿಕ್ಸನ್ ಇತ್ಯಾದಿಗಳನ್ನು ಒಳಗೊಂಡಿರುವ ಉದ್ಯಮ ಸಂಸ್ಥೆ ಐಸಿಇಎ ಸಿದ್ಧಪಡಿಸಿದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕುರಿತು ವಿಷನ್ ಡಾಕ್ಯುಮೆಂಟ್‌ನ ಎರಡನೇ ಸಂಪುಟವನ್ನು ಬಿಡುಗಡೆ ಮಾಡಿದರು. ಪ್ರಸ್ತುತ $75 ಶತಕೋಟಿಯಿಂದ 2026 ರ ವೇಳೆಗೆ ದೇಶದಲ್ಲಿ $300 ಬಿಲಿಯನ್ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಸಾಧಿಸುವ ಮಾರ್ಗಸೂಚಿಯನ್ನು ಡಾಕ್ಯುಮೆಂಟ್ ವಿವರಿಸುತ್ತದೆ.

ಪ್ರತಿಯೊಂದು ಪ್ರಮುಖ ಉತ್ಪನ್ನ ವಿಭಾಗಗಳಲ್ಲಿ ದೇಶೀಯ ಚಾಂಪಿಯನ್‌ಗಳನ್ನು ರಚಿಸುವುದು ಪ್ರಧಾನಿ ಮೋದಿ ಬಯಕೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ (MeitY) ಗುರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ. ಪ್ರಧಾನಮಂತ್ರಿಯವರು ಹಣಕಾಸು ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿದ್ದಾರೆ ಮತ್ತು ಭಾರತವು ವಿದೇಶಿ ನೇರ ಹೂಡಿಕೆ ಮತ್ತು ಈಕ್ವಿಟಿಯನ್ನು ಅತಿ ಹೆಚ್ಚು ಸ್ವೀಕರಿಸುವ ದೇಶಗಳಲ್ಲಿ ಒಂದಾಗಿದೆ ಎಂದು ರಾಜೀವ್‌ ತಿಳಿಸಿದ್ದಾರೆ

''ಭಾರತದಲ್ಲಿ ವಿದೇಶಿ ಬ್ಯಾಂಕ್‌ಗಳ ಸಂಖ್ಯೆ ಹೆಚ್ಚಿದೆ. ಮೊದಲ ಬಾರಿಗೆ, ಸ್ಟಾಕ್ ಮಾರುಕಟ್ಟೆ ಮತ್ತು ಸಾರ್ವಜನಿಕ ಮಾರುಕಟ್ಟೆಗಳು ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳು ಮತ್ತು ಕಂಪನಿಗಳಲ್ಲಿ ಹಣಕಾಸು ಮತ್ತು ಹೂಡಿಕೆ ಮಾಡುತ್ತಿವೆ. ಆ ರೀತಿಯ ಪರಿವರ್ತನೆ ನಡೆದಿದೆ. ಇಂದು ಲಾವಾ, ಡಿಕ್ಸನ್ ಅಥವಾ ಬೋಟ್ ಅಥವಾ ಇವುಗಳಲ್ಲಿ ಯಾವುದಾದರೂ ಕಂಪನಿಗಳು ಆರು ವರ್ಷಗಳ ಹಿಂದೆ ಹೊಂದಿರದ ಬಂಡವಾಳ, ಇಕ್ವಿಟಿಯನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ, ”ಎಂದು ಸಚಿವರು ಹೇಳಿದ್ದಾರೆ.

Follow Us:
Download App:
  • android
  • ios