ಪರೀಕ್ಷೆ ಪಾಸ್ ಮಾಡಿ ಸ್ವೀಟ್ ಬದಲು ಹಾಜ್‌ಮೊಲಾ ಹಂಚಿಕೆ, ಅಕ್ಕ ಪಕ್ಕದ ಮನೆಯವರಿಗೆ ಹಂಚಿದ್ದಾಳೆ. ಸ್ವೀಟ್ ಬದಲು ಹಾಜ್‌ಮೋಲಾ ಹಂಚುತ್ತಿರುವುದೇಕೆ, ಇದೇನು ಹೀಗೆ ಎಂದು ಪ್ರಶ್ನಿಸಿದ ಮಹಿಳೆ ಪುಟಾಣಿ ನೀಡಿದ ಉತ್ತರ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ನವದೆಹಲಿ (ಮಾ.27) ಪುಟಾಣಿ ಮಕ್ಕಳ ಪರೀಕ್ಷೆಗಳು ಮುಗಿದಿದೆ. ಕೆಲವೆಡೆ ಫಲಿತಾಂಶವೂ ಹೊರಬಿದ್ದಿದೆ. ಇನ್ನು ಕೆಲ ಮಕ್ಕಳು ಪರೀಕ್ಷೆ ಬರೆಯುತ್ತಿದ್ದು, ಎಪ್ರಿಲ್ 10ಕ್ಕೆ ಫಲಿತಾಂಶ ಹೊರಬೀಳಲಿದೆ. ಹೀಗೆ ಪುಟಾಣಿ ಮಗುವೊಂದು ಪರೀಕ್ಷೆ ಪಾಸ್ ಆದ ಸಂಭ್ರಮದಲ್ಲಿ ಎಲ್ಲರಂತೆ ಸಿಹಿ ಹಂಚಿಲ್ಲ. ಇದರ ಬದಲು ಹಾಜ್‌ಮೊಲಾ ಹಂಚಿದ್ದಾಳೆ. ಅಕ್ಕ ಪಕ್ಕದ ಮನೆವರು, ಶಾಲೆಯಲ್ಲಿ ಸಹಪಾಠಿಗಳು, ಟೀಚರ್ ಸೇರಿದಂತೆ ಹಲವರಿಗೆ ಹಾಜ್‌ಮೋಲಾ ಹಂಚಿದ್ದಾಳೆ. ಮಹಿಳೆಯೊಬ್ಬರು ಈ ಪುಟಾಣಿ ಮಗುವಿನ ಬಳಿ ಇದೇನು ಸ್ವೀಟ್ ಬದಲು ಯಾರಾದರೂ ಹಾಜ್‌ಮೊಲಾ ಹಂಚುತ್ತಾರಾ? ಇದ್ಯಾಕೆ ಹೀಗೆ ಎಂದು ಪ್ರಶ್ನಿಸಿದ್ದಾಳೆ. ನಾಚಿಕೊಂಡು ನಿಂತಿದ್ದ ಪುಟಾಣಿಗೆ ಮತ್ತೆ ಮತ್ತೆ ಈ ಪ್ರಶ್ನೆ ಕೇಳಲಾಗಿದೆ. ಆದರೆ ಕೊನೆಯಲ್ಲಿ ಪುಟಾಣಿ ನೀಡಿದ ಉತ್ತರಕ್ಕೆ ಮಹಿಳೆ ಮಾತ್ರವಲ್ಲ ಹಲವರು ದಂಗಾಗಿದ್ದಾರೆ. ಈ ಉತ್ತರ ಕೇಳಿದ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ನೋಡಿದರೆ ಈಶಾನ್ಯ ರಾಜ್ಯದಲ್ಲಿ ನಡೆದ ಘಟನೆ ಎಂದು ಕಾಣುತ್ತಿದೆ. ವಾರ್ಷಿಕ ಪರೀಕ್ಷೆ ಪಾಸ್ ಮಾಡಿದ ಹೆಣ್ಣುಮಗು ಮುಂದಿನ ತರಗತಿಗೆ ತೇರ್ಗಡೆಯಾಗಿದ್ದಾಳೆ. ಈ ಖುಷಿಗೆ ಒಂದು ಡಬ್ಬ ಹಾಜ್‌ಮೊಲಾ ತೆಗೆದುಕೊಂಡು ಹಂಚಲು ಆರಂಭಿಸಿದ್ದಳೆ. ಎಲ್ಲರಿಗೂ ಒಂದೊಂದು ಪ್ಯಾಕೆಟ್ ಹಾಜ್‌ಮೊಲಾ ಹಂಚಿಕೆ ಮಾಡಿದ್ದಾಳೆ. ಡಬ್ಬ ಹಿಡಿದು ತನ್ನ ಪರೀಕ್ಷಾ ಪಾಸ್ ಖುಷಿಯನ್ನು ಹಾಜ್‌ಮೊಲಾ ಮೂಲಕ ಸಂಭ್ರಮಿಸಿದ್ದಾಳೆ. ಮಹಿಳೆಯ ಪ್ರಶ್ನೆಗೆ ಪುಟಾಣಿ ನೀಡಿದ ಉತ್ತರ ಭಾರಿ ವೈರಲ್ ಆಗಿದೆ.
ಪುಟಾಣಿ ನೀಡಿದ ಉತ್ತರವೇನು?
ನಾನು ಮೊದಲ ಬಾರಿ ನೋಡುತ್ತಿದ್ದೇನೆ, ಪಾಸ್ ಆದ ಬಳಿಕ ಹಾಜ್‌ಮೊಲಾ ಹಂಚುತ್ತಿರುವುದು ಎಂದು ಮಹಿಳೆ ಪುಟಾಣಿಗೆ ಪ್ರಶ್ನಿಸಿದ್ದಾರೆ. ಇದ್ಯಾಕೆ ಹೀಗೆ ಎಂದು ಪ್ರಶ್ನಿಸಿದ್ದಾರೆ. ಪುಟಾಣಿ ಮಗು ಹಿಂಜರಿಕೆಯಿಂದಲೇ ಇದು ಸಿಕ್ಕಿತು ಹಂಚುತ್ತಿದ್ದೇನೆ ಎಂದಿದ್ದಾಳೆ. ಇಷ್ಟಕ್ಕೆ ಮಹಿಳೆ ಸುಮ್ಮನಾಗಲಿಲ್ಲ, ಆದರೂ ಯಾರಾದರೂ ಪಾಸ್ ಆದ ಸಂಭ್ರಮದಲ್ಲಿ ಹಾಜ್‌ಮೊಲಾ ಹಂಚುತ್ತಾರ ಎಂದು ಪ್ರಶ್ನಿಸಿದ್ದಾಳೆ. ಇದ್ಯಾವ ಹೊಸ ನಿಯಮ, ನೀನು ಮೋದಿ ರೀತಿ ಹೊಸ ಹೊಸ ನಿಯಮ ತರುತ್ತಿದ್ದಿಯಾ ಎಂದು ಮಹಿಳೆ ದರ್ಪ ತೋರಿದ್ದಾರೆ. ನೀನು ಮೋದಿ ಸರ್ಕಾರದವಳಾ ಎಂದು ಮತ್ತೆ ಪ್ರಶ್ನಿಸಿದ್ದಾರೆ. ಇದಕ್ಕೆ ಇಲ್ಲಾ ಎಂದು ಮಗು ಉತ್ತರಿಸಿದೆ. ಮಿಠಾಯಿ ನೀಡಬೇಕಿತ್ತು ಎಂದಾಗ ಪುಟಾಣಿ ನನ್ನ ಇಷ್ಟ ನನ್ನ ಜೀವ ( ಮೇರಾ ಮರ್ಜಿ ಮೇರಾ ಲೈಫ್) ಎಂದು ಹೇಳಿ ಹೊರಟು ಹೋಗಿದ್ದಾಳೆ.
ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ
ಪುಟಾಣಿ ಸ್ವೀಟ್ ಬದಲು ಹಾಜ್‌ಮೊಲಾ ಹಂಚಿದ್ದಾಳೆ. ಆಕೆಗೆ ಇಷ್ಟವಾಗಿತ್ತು ಹಂಚಿದ್ದಾಳೆ, ಅಥವಾ ಆಕೆಗೆ ಗೊತ್ತಿಲ್ಲ ಹಂಚಿದ್ಧಾಲೆ. ನಿಮಗೆ ಇಷ್ಟವಿದ್ದ್ರೆ ತಗೊಳಿ ಇಲ್ಲಾ ಬಿಟ್ಟುಬಿಡಿ ಪೊಲೀಸ್ ರೀತಿ ಪ್ರಶ್ನೆ ಮಾಡುವುದಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಹಲವು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪುಟಾಣಿ ಪಾಸ ಆಗಿದ್ದಾಳೆ ಅನ್ನೋದು ಕೆಲವರಿಗೆ ಅರಗಿಸಿಕೊಳ್ಳಲು ಆಗಲ್ಲ ಅನ್ನೋದು ಮೊದಲೇ ಗೊತ್ತಿತ್ತು. ಹೀಗಾಗಿ ಹಾಜ್‌ಮೊಲಾ ನೀಡಿದ್ದಾಳೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.


