ಎಟಿಎಂ ಒಳಗೆ ಯುವತಿಯ ಡಾನ್ಸ್‌ ಹಣ ಡ್ರಾ ಆಗ್ತಿದ್ದಂಗೆ ಸಖತ್ ಸ್ಟೆಪ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳು ಅದ್ಭುತ ಮತ್ತು ಆಸಕ್ತಿದಾಯಕ ವೀಡಿಯೊಗಳ ತಾಣವಾಗಿದ್ದು, ಉತ್ತಮ ಮನೋರಂಜನೆ ನೀಡುತ್ತವೆ. ಹಾಗೆಯೇ ಇಲ್ಲೊಂದು ಅದೇ ರೀತಿಯ ಮನೋರಂಜನೆ ನೀಡುವ ವಿಡಿಯೋವೊಂದು ವೈರಲ್ ಆಗಿದೆ. ಹಣ ತೆಗೆಯಲು ಎಟಿಎಂಗೆ ಹೋದ ಯುವತಿ ಎಟಿಎಂ ಯಂತ್ರದಿಂದ ಹಣ ಬರುತ್ತಿದ್ದಂತೆ ಎಟಿಎಂ ಒಳಗೆಯೇ ಸಖತ್ ಆಗಿ ಡಾನ್ಸ್ ಮಾಡುತ್ತಾಳೆ. ಇದರ ವಿಡಿಯೋ ಎಟಿಎಂ ಒಳಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ವೈರಲ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಎಟಿಎಂ ಒಳಗೆ ಇಬ್ಬರು ಹುಡುಗಿಯರು ಕಾಣಿಸಿಕೊಂಡಿದ್ದಾರೆ. ಕಪ್ಪು ಟಾಪ್ ಮತ್ತು ಕಪ್ಪು ಮಾಸ್ಕ್‌ ಧರಿಸಿರುವ ಹುಡುಗಿ ಎಟಿಎಂ ಮೆಷಿನ್‌ನಿಂದ ಹಣ ತೆಗೆಯುವ ಸಮಯದಲ್ಲಿ ಸಖತ್ ಆಗಿ ಡಾನ್ಸ್‌ ಮಾಡುತ್ತಾಳೆ. ವೀಡಿಯೊದ ಕೊನೆಯಲ್ಲಿ ಅವಳು ಹಣ ಹಿಂಪಡೆದ ನಂತರ ಕೃತಜ್ಞತೆಯಿಂದ ಎಟಿಎಂ ಯಂತ್ರಕ್ಕೆ ನಮಸ್ಕರಿಸುವುದನ್ನು ಕಾಣಬಹುದು.

ಸ್ನೇಹಿತನ ಮದುವೆ ದಿಬ್ಬಣದಲ್ಲಿ ಯುವಕನ ಸಖತ್‌ ಸ್ಟೆಪ್‌ : ವಿಡಿಯೋ ವೈರಲ್

ಅವಳ ವೇತನ ಆಗುವ ದಿನ ಅದಾಗಿತ್ತು. ಅಂತಿಮವಾಗಿ ಅವಳ ಕೈಗೆ ಹಣ ಬಂದಾಗ ಆಕೆಗೆ ಸಂತಸ ತಡೆಯಲಾಗದೆ ಡಾನ್ಸ್‌ (Dance)ಮಾಡಿರಬೇಕು ಎಂದು ಅವಳ ನೃತ್ಯವನ್ನು ನೆಟ್ಟಿಗರು ವಿಶ್ಲೇಷಿಸಿದ್ದಾರೆ. ವೀಡಿಯೊದಿಂದ ಅವಳು ಆ ಕ್ಷಣವನ್ನು ಆನಂದಿಸುತ್ತಿದ್ದಾಳೆಂದು ತೋರುತ್ತದೆ. ಎಲ್ಲರೂ ವಾಸ್ತವದಲ್ಲಿ ಉಳಿಯಬೇಕು ಮತ್ತು ಜೀವನದ ಪ್ರತಿ ಕ್ಷಣವನ್ನು ಆನಂದಿಸಬೇಕು ಎಂದು ಒಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಮೊದಲ ಸಂಬಳದ ಉತ್ಸಾಹ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮೂರನೆಯವರು ನೀವು ಎಟಿಎಂನಿಂದ ನಿಮ್ಮ ಮೊದಲ ಸಂಬಳವನ್ನು ಹಿಂಪಡೆಯುವಾಗ ಅದು ತುಂಬಾ ಅದ್ಭುತವಾಗಿರುತ್ತದೆ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು: ಮದಿರೆ ಮತ್ತಲ್ಲಿ ಮಹಿಳೆ ಡ್ಯಾನ್ಸ್:‌ ವಿಡಿಯೋ ವೈರಲ್
ಕೆಲವೊಮ್ಮೆ ಮೂರು ನಾಲ್ಕು ಎಟಿಎಂಗಳಿಗೆ ಅಲೆದಾಡಿದರು ಹಣ (Money) ಸಿಗುವುದಿಲ್ಲ. ಹಣ ಸಿಗದೇ ಕಂಗೆಟ್ಟವರಿಗೆ ಒಮ್ಮೆಲೆ ಹಣ ಸಿಕ್ಕಾಗ ಈ ರೀತಿ ಖುಷಿ ವ್ಯಕ್ತಪಡಿಸುತ್ತಾರೆ. ಬಹುಶಃ ಈ ಯುವತಿಯೂ (Girl) ಹಲವು ಎಟಿಎಂಗಳಿಗೆ(ATM) ಅಲೆದು ಈ ಎಟಿಎಂ ಗೆ ಬಂದಿದ್ದು, ಇಲ್ಲಿ ಹಣ ಸಿಕ್ಕಿದ್ದು ಆಕೆಗೆ ಅತೀವ ಸಂತೋಷ ಮೂಡಿಸಿದಂತೆ ಕಾಣುತ್ತಿದೆ. ಒಟ್ಟಿನಲ್ಲಿ ಈ ವಿಡಿಯೋ ನೆಟ್ಟಿಗರಿಗೆ ಮನೋರಂಜನೆ ನೀಡುತ್ತಿದೆ. ಹೇಳಿದ ಹಾಗೆ ಇದು 2021ರ ವಿಡಿಯೋ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್‌ ಆಗುತ್ತಿದೆ.

YouTube video player

'ಸ್ನೇಹಿತನೇ ಸ್ನೇಹಿತನೇ' ಹಾಡಿಗೆ ಭರತನಾಟ್ಯಂ ಮಾಡಿದ ಫ್ರೆಂಚ್ ನರ್ತಕಿ
ಸಂಗೀತವು ಭಾಷೆ ಗಡಿಗಳನ್ನು ಮೀರಿದೆ. ಇದಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳಿವೆ. ಈಗ ಜನಪ್ರಿಯ ಫ್ರೆಂಚ್ ನರ್ತಕರು ಭಾರತೀಯ ತಮಿಳು ಸಿನಿಮಾದ ಸ್ನೇಹಿತನೇ ಸ್ನೇಹಿತನೇ ಹಾಡಿಗೆ ಭರತನಾಟ್ಯ ಮಾಡುವ ಮೂಲಕ ನೆಟ್ಟಿಗರ ಹೃದಯ ಸೊರೆಗೊಳಿಸುತ್ತಿದ್ದಾರೆ. ಜನಪ್ರಿಯ Instagram ಪ್ರಭಾವಿಯಾಗಿರುವ ಜಿಕಾ, ಈ ಹಿಂದೆಯೂ ಬಾಲಿವುಡ್‌ನ ಹಲವು ಹಾಡುಗಳಿಗೂ ಡಾನ್ಸ್‌ ಮಾಡಿದ್ದಾರೆ. ಇತ್ತೀಚೆಗೆ ಅವರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಪ್ರಯತ್ನಿಸುವ ಮೂಲಕ ಅನೇಕರನ್ನು ಅಚ್ಚರಿಗೊಳಿಸಿದರು. ಜನಪ್ರಿಯ ಭಾರತೀಯ ನರ್ತಕಿ ಮತ್ತು ನೃತ್ಯ ಸಂಯೋಜಕಿ ಶಾಂತಿ ಅವರೊಂದಿಗೆ ಸೇರಿಕೊಂಡು, ಎಮಿಲ್ ಟ್ರಾವಿಸ್ ಅವರೊಂದಿಗೆ ಇವರು ತೆರೆದ ಉದ್ಯಾನದಲ್ಲಿ ಪ್ರದರ್ಶನ ನೀಡುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.

2000 ರ ಹಿಟ್ ತಮಿಳು ಚಿತ್ರ ಅಲೈಪಾಯುತೇ ಮತ್ತು 'ಇನ್ ಮೈ ಬೆಡ್' ನಿಂದ 'ಸ್ನೇಹಿತನೇ ಸ್ನೇಹಿತನೇ' ಹಾಡಿನ ಮ್ಯಾಶ್‌ಅಪ್ ಆವೃತ್ತಿಗೆ ಫ್ಯೂಷನ್ ಕೊರಿಯೋಗ್ರಫಿ ಮಾಡುವ ಮೂಲಕ ಮೂವರು ನರ್ತಕರು ತಮ್ಮ ಶೈಲಿಗೆ ಸ್ವಲ್ಪ ಹೊಸತನವನ್ನು ನೀಡಿ ಆನ್‌ಲೈನ್‌ನಲ್ಲಿ ಎಲ್ಲರನ್ನೂ ಮೆಚ್ಚಿಸಿದರು. ವಿವಿಧ ಭಾರತೀಯ ಪ್ರಾದೇಶಿಕ ಭಾಷೆಗಳ ಹಾಡುಗಳನ್ನು ಆಯ್ಕೆ ಮಾಡಿ ಅವುಗಳಿಗೆ ಕಷ್ಟಕರವಾದ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಅವರು ಸಂಯೋಜಿಸಿ ಡಾನ್ಸ್‌ ಮಾಡುವುದನ್ನು ನೋಡಿದ ನೆಟ್ಟಿಗರು ಅವರ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅನೇಕರು ಅವರ ಫಾರ್ಮ್ ಮತ್ತು ಕಲಿಯುವ ಉತ್ಸಾಹದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.