ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೋ ವ್ಯಾಯಾಮವನ್ನೇ ಡಾನ್ಸ್ ಆಗಿಸಿದ ಯುವಕ
ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಒಬ್ಬ ವ್ಯಕ್ತಿ ತನ್ನ ಸ್ನೇಹಿತನ ಮದುವೆ ಮೆರವಣಿಗೆಯಲ್ಲಿ ಸೈನಿಕನಂತೆ ನೃತ್ಯ ಮಾಡುವುದನ್ನು ಕಾಣಬಹುದು. ಈ ವೀಡಿಯೊವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು 'ಟ್ರೈನಿಂಗ್ ಖತಮ್ ಹೋತೆ ಹೈ ದೋಸ್ತ್ ಕಿ ಬಾರತ್ ಮೈನ್ ಪಹುಚಾ ಜವಾನ್' ತರಬೇತಿ ಮುಗಿಸಿ ಸ್ನೇಹಿತನ ಮದುವೆ ದಿಬ್ಬಣಕ್ಕೆ ಬಂದ ಸೈನಿಕ ಎಂದು ಶೀರ್ಷಿಕೆ ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಈ ವೀಡಿಯೊವನ್ನು ಒಂದು ಲಕ್ಷದ 97 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇನ್ನು ವಿಡಿಯೋದಲ್ಲಿ ಕಾಣಿಸುವಂತೆ ಆತ ಕೆಂಪು ಶರ್ಟ್ ಕ್ರೀಮ್ ಕಲರ್ ಪ್ಯಾಂಟ್ ಧರಿಸಿದ್ದು, ವ್ಯಾಯಾಮ ಮಾಡುವಂತೆ ಡಾನ್ಸ್ (Dance) ಮಾಡುತ್ತಿದ್ದಾನೆ. ಮದುವೆಯಲ್ಲಿ ಇಂತಹ ತರಲೆ ತುಂಟಾಟಗಳು ಸಾಮಾನ್ಯವಾಗಿವೆ. ನೆರೆದವರ ನಗುವಿಗಾಗಿ ಹಾಗೂ ಸಂತೋಷಕ್ಕಾಗಿ ಕೆಲವರು ಏನೇನೋ ಕಿತಾಪತಿ ಮಾಡುತ್ತಾರೆ. ಅದರಲ್ಲೂ ಮದುವೆಯಲ್ಲಿ ನಡೆಯುವ ಮೋಜು ಮಸ್ತಿಗೆ ಲೆಕ್ಕವೇ ಇಲ್ಲ. ಬ್ಯಾಂಡ್ ಬಾರಿಸುತ್ತಿದ್ದಂತೆ ಈತ ಸಖತ್ ಆಗಿ ಬ್ಯಾಂಡ್‌ಗೆ ತಕ್ಕಂತೆ ತನ್ನ ಕಾಲನ್ನು ಕುಣಿಸುತ್ತಾನೆ.
ಹಾಗಂತ ಸೈನಿಕರೆಲ್ಲಾ ಈ ರೀತಿ ನೃತ್ಯ ಮಾಡುವುದಿಲ್ಲ. ಈತ ಕೇವಲ ಸೈನಿಕರು ಮಾಡುವ ವ್ಯಾಯಾಮವನ್ನೇ ನೃತ್ಯವಾಗಿಸಿದ್ದಾನೆ. ಸೈನಿಕರು ಸಖತ್ ಆಗಿ ಡಾನ್ಸ್ ಮಾಡುವ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ಇದರಲ್ಲಿ ಸೈನಿಕರಾರು ಹೀಗೆ ಕುಣಿಯುವುದಿಲ್ಲ. ಆದಾಗ್ಯೂ ಈತನ ನೃತ್ಯ ಸಖತ್ ಫೇಮಸ್ ಆಗಿರುವುದಂತೂ ನಿಜ.
ಮನೆಯಲ್ಲಿ ಒಂದು ಮದುವೆ ನಡೆಯುತ್ತೆ ಅಂದ್ರೆ ಮದ್ವೆ ಆಗೋರಿಗಿಂತ ಜಾಸ್ತಿ ಖುಷಿ ಪಡುವವರು ಆಕೆಯ ಅಥವಾ ಆತನ ಅಣ್ಣ ತಮ್ಮಂದಿರು ಅಕ್ಕ ತಂಗಿಯರು. ಅವರೆಲ್ಲರಿಗೂ ಕುಟುಂಬದವರೊಂದಿಗೆ ಸೇರಿ ಸಂಭ್ರಮಿಸಲು ಒಂದು ಸುಸಂದರ್ಭ. ಇನ್ನು ವಧುವಿನ ತಂಗಿಯರ ಸಂಭ್ರಮಕ್ಕಂತು ಎಲ್ಲೆಯೇ ಇರುವುದಿಲ್ಲ. ಹಾಗೆಯೇ ಇಲ್ಲೊಂದು ಕಡೆ ಅಕ್ಕನ ಮದುವೆಯಲ್ಲಿ ತಂಗಿ ಹಾಗೂ ಆಕೆಯ ಸ್ನೇಹಿತರ ಜಬರ್ದಸ್ತ್ ಡಾನ್ಸ್ ಎಲ್ಲರ ಗಮನ ಸೆಳೆಯುತ್ತಿದೆ.
ಸೀಟ್ ಬೆಲ್ಟ್ ಹಾಕದೇ ಡಾನ್ಸ್... ಮೂವರು ಡಾನ್ಸಿಂಗ್ ಪೊಲೀಸರಿಗೆ ಅಮಾನತಿನ ಶಿಕ್ಷೆ
ವಧುವಿನ ಸ್ನೇಹಿತರು ಮತ್ತು ಸಹೋದರಿ, ರಣವೀರ್ ಸಿಂಗ್ (Ranveer Singh) ಮತ್ತು ಅನುಷ್ಕಾ ಶರ್ಮಾ (Anushka Sharma) ಅಭಿನಯದ 2010 ರ ಬ್ಯಾಂಡ್ ಬಾಜಾ ಬಾರಾತ್ (Band Baaja Baaraat) ಚಿತ್ರದ ಸುನಿಧಿ ಚೌಹಾಣ್ (Sunidhi Chauhan) ಮತ್ತು ಮಾಸ್ಟರ್ ಸಲೀಂ (Saleem) ಅವರು ಹಾಡಿರುವ ಐನ್ವಯಿ ಐನ್ವಾಯಿ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಈ ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ (Instagram)'theweddingministry' ಎಂಬ ಖಾತೆ ಹೊಂದಿರುವ ಬಳಕೆದಾರರು ಪೋಸ್ಟ್ ಮಾಡಿದ್ದು, 'ನಿಮ್ಮ ಸಹೋದರಿ ವಿವಾಹವಾಗುತ್ತಿರುವಾಗ ನಿಮ್ಮ ಎಕ್ಸೈಟ್‌ಮೆಂಟ್ ಲೆವೆಲ್' ಹೇಗಿರುತ್ತೆ ಎಂಬುದಾಗಿ ಬರೆಯಲಾಗಿದೆ. ಈ ಪೋಸ್ಟ್‌ನ್ನು 15,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ವಧುವಿನ ಮೆಹಂದಿ ದಿನ ಚಿತ್ರೀಕರಣಗೊಂಡ ವಿಡಿಯೋ ಇದಾಗಿದೆ. ವಿಡಿಯೋದಲ್ಲಿರುವ ಹೆಣ್ಣು ಮಕ್ಕಳೆಲ್ಲ ಸುಂದರವಾದ ಬಣ್ಣಗಳ ಭಾರತೀಯ ಶೈಲಿಯ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಜೊತೆಗೆ ಮದುವೆಗೆ ಮಾಡಿದ್ದ ಸುಂದರವಾದ ಅಲಂಕಾರ (decoration) ಕೂಡ ವಿಡಿಯೋದಲ್ಲಿ ಗಮನ ಸೆಳೆಯುತ್ತಿದೆ. ಇತ್ತ ಇವರ ಸರ್‌ಪ್ರೈಸ್ ಡಾನ್ಸ್‌ಗೆ ಕುಟುಂಬ ಹಾಗೂ ಸ್ನೇಹಿತರು ಪ್ರೋತ್ಸಾಹಿಸಿ ಚಪ್ಪಾಳೆ ತಟ್ಟುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇತ್ತ ಡಾನ್ಸ್ ಮಾಡುತ್ತಿರುವ ಹುಡುಗಿಯರು ಕೂಡ ಸಖತ್ ಆಗಿ ಸ್ಟೆಪ್ ಹಾಕುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಸ್ಟೆಪ್ಸ್ ಹಾಕಿದ IAS ಅಧಿಕಾರಿ, ವೈರಲ್ ಆಯ್ತು ಡಾನ್ಸ್!