Asianet Suvarna News Asianet Suvarna News

ಡ್ರೋನ್‌ ಎಂಬ ಆಯುಧ, ಭಾರತಕ್ಕೀಗ ಹೊಸ ಸವಾಲು!

* ಕಳೆದೊಂದು ವಾರದ ಹಿಂದೆ ಜಮ್ಮುವಿನಲ್ಲಿ ನಡೆದ ಡ್ರೋನ್ ದಾಳಿ

* ಆತಂಕ ಸೃಷ್ಟಿಸಿದ ದಾಳಿ ಹಿಂದಿನ ಉದ್ದೇಶವೇನು?

* ಭಾರತಕ್ಕೆ ಡ್ರೋನ್ ಆಯುಧವೆಂಬ ಹೊಸ ಸವಾಲು? ಎದುರಿಸೋದು ಹೇಗೆ?

Drones as weapons: India is facing a new challenge by Lt General Syed Ata Hasnain pod
Author
Bangalore, First Published Jul 5, 2021, 12:59 PM IST

ಲೇಖಕರು: ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೈನ್ (ನಿವೃತ್ತ)
ಶ್ರೀನಗರ: 15 ಕಾರ್ಪ್ಸ್ ಮಾಜಿ ಕಮಾಂಡರ್ ಮತ್ತು ಕಾಶ್ಮೀರದ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಭಾರತದಲ್ಲಿ ಅನೇಕ ಕಠಿಣ ನಿಲುವು  ತೆಗೆದುಕೊಳ್ಳಲಾಗಿದೆ. ಆದರೆ ಇಂತಹ ಕ್ರಮ ಕೈಗೊಂಡಾಗೆಲ್ಲಾ ಕೆಲವು ಮಹತ್ವದ ಘಟನೆಗಳು ಸಂಭವಿಸುತ್ತವೆ. ಆದರೆ ಇಂತಹ ಘಟನೆಗಳು ಮಿಲಿಟರಿ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅನೇಕ ರೀತಿಯ ಸಂಘರ್ಷಗಳಿಗೆ ಕಾರಣವಾಗುತ್ತವೆ ಹಾಗೂ ಅನೇಕ ಬಗೆಯ ಬದಲಾವಣೆಗೂ ಕಾರಣವಾಗುತ್ತದೆ. 

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಸಿದ್ಧ ಲಾಹೋರ್ ಭೇಟಿ, 1999ರ ಕಾರ್ಗಿಲ್ ಯುದ್ಧದೊಂದಿಗೆ ಕೊನೆಗೊಂಡಿತು. ಇದಾದ ಬಳಿಕ 2015 ರ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿಯವರು ಲೋಹರ್‌ಗೆ ಹಠಾತ್ ಭೇಟಿ ಹಾಗೂ ಆಗಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಮನೆಗೆ ಭೇಟಿ ನೀಡಿದ ಎರಡು ವಾರಗಳಳಲ್ಲೇ 2016 ರಲ್ಲಿ ಪಠಾಣ್‌ಕೋಟ್ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು.

ದಕ್ಷಿಣ ಭಾರತದ 2 ರಾಜ್ಯದ ಮೇಲೆ ಡ್ರೋನ್ ದಾಳಿ ಸಾಧ್ಯತೆ; ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ!

2017-18ರಲ್ಲಿ ಭಾರತೀಯ ಭದ್ರತಾ ಪಡೆಗಳು ಪ್ರಾರಂಭಿಸಿದ ಯಶಸ್ವಿ ಕಾರ್ಯಾಚರಣೆ "ಆಪರೇಷನ್ ಆಲ್ ಔಟ್" 2019 ರ ಆರಂಭದಲ್ಲಿ ಪುಲ್ವಾಮಾ ದಾಳಿಗೆ ನಾಂದಿಯಾಯ್ತು. ಈ ಹಿನ್ನೆಲೆಯನ್ನು ಗಮನಿಸಿದರೆ, ಭಾರತದ ಉನ್ನತ ನಾಯಕತ್ವ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳ 14 ನಾಯಕರನ್ನು ಮಾತುಕತೆ ಮತ್ತು ಸಮಾಲೋಚನೆಗಾಗಿ ಕರೆಯಲಾಯ್ತು. ಅಂತಹ ಪರಿಸ್ಥಿತಿಯಲ್ಲಿ, ಧನಾತ್ಮಕತೆಯಿಂದ ಗಮನ ಬೇರೆಡೆ ಸೆಳೆಯಲು ಕೆಲ ಕ್ರಮಗಳನ್ನು ತೆಗೆದುಕೊಳ್ಳಲಾಯ್ತು. 

ಸಾಂವಿಧಾನಿಕ ನಿರ್ಧಾರದ ಬಳಿಕ ಎರಡು ವರ್ಷಗಳಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು ಮತ್ತು ಪಾಕಿಸ್ತಾನದ ಹಿಡಿತವನ್ನು ಭಾರತ ಸರ್ಕಾರ ಮುರಿಯಿತು. ತನ್ನ ಪಟ್ಟುಹಿಡಿದ ಕ್ರಮಗಳು ಮತ್ತು ಎದುರಾಳಿ ಅಂಶಗಳ ವಿರುದ್ಧದ ಯಶಸ್ವಿ ಕಾರ್ಯಕ್ರಮದಿಂದ, ಸರ್ಕಾರವು ಈ ಎಲ್ಲ ಪಾಲುದಾರರನ್ನು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಅಪ್ರಸ್ತುತಗೊಳಿಸಿದೆ.

ಹಾಗಾದ್ರೆ ಡ್ರೋನ್ ದಾಳಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಅದ್ಭುತ ಎಂದು ವರ್ಗೀಕರಿಸುವಷ್ಟು ಗಂಭೀರವೇ? ನಮ್ಮ ಮೇಲೆ ಈ ಹಿಂದೆಯೂ ಇಂತಹ ಭೀಕರ ದಾಳಿಗಳಾಗಿದ್ದು, ಇದು ಗೇಮ್‌ ಚೇಂಜರ್‌ ಆಗಿ ಪರಿಣಮಿಸಿವೆ. 2016 ರ ಉರಿ ದಾಳಿ ಮತ್ತು 2019 ರ ಪುಲ್ವಾಮಾ ಇವೆರಡೂ ಇಂತಹ ಕ್ರಮಗಳಿಗೆ ಸಾಕ್ಷಿಯಾಗಿವೆ. ನಮ್ಮಲ್ಲಿದ್ದ ಲಭ್ಯ ಸೌಲಭ್ಯವನ್ನು ಬಳಸಿಕೊಂಡು, ಸ್ವಂತ ಸಾಮರ್ಥ್ಯದ ಸಂದೇಶದೊಂದಿಗೆ ಕಾರ್ಯ ನಿರ್ವಹಿಸಿದೆವು. ಅಲ್ಲದೇ ಇದು ಇಂದಿಗೂ ಮುಂದುವರೆದಿದೆ.

ದಕ್ಷಿಣ ಭಾರತದ 2 ರಾಜ್ಯದ ಮೇಲೆ ಡ್ರೋನ್ ದಾಳಿ ಸಾಧ್ಯತೆ; ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ!

1990 ರ ದಶಕದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ ನಂತರ, ಎದುರಾಳಿಗಳು ಭಾರತೀಯ ಪಡೆಗಳ ಶಿಬಿರ ಮತ್ತು ಸರ್ಕಾರಿ ಸ್ಥಾಪನೆಗಳ ಮೇಲೆ ಆತ್ಮಹತ್ಯಾ ದಾಳಿಯ "ಫಿಡಾಯೀನ್" ತಂತ್ರವನ್ನು ಅಳವಡಿಸಿಕೊಂಡರು.ಎದುರಾಳಿಗಳು ತಮ್ಮ ಪ್ರಭಾವ ಕಡಿಮೆ ಮಾಡುವ ಉಪಾಯ ಕಂಡು ಹಿಡಿದವೋ, ಅಲ್ಲಿಯವರೆಗೆ ಇಂತಹ ದಾಳಿಗಳು ಸುಮಾರು ಐದು ವರ್ಷದವರೆಗೆ ಮುಂದುವರೆದವು. ಆದರೆ ಆತ್ಮಹತ್ಯಾ ದಾಳಿಗೆ ಕಡಿವಾಣ ಹಾಕುವುದು ಸಾಧ್ಯವಾಗಿಲ್ಲ.

ಮತ್ತೊಂದು ಕುತೂಹಲಕಾರಿ ವಿಚಾರ ಇಲ್ಲಿ ಉಲ್ಲೇಖಿಸಲೇಬೇಕು. ಶ್ರೀಲಂಕಾದಲ್ಲಿ ಎಲ್‌ಟಿಟಿಇ ಬಳಸುವ ಸುಧಾರಿತ ಸ್ಫೋಟಕ ಸಾಧನಗಳಿಂದ ನಾವು ತೀವ್ರವಾಗಿ ಪ್ರಭಾವಿತರಾಗಿದ್ದೇವೆ. 1990 ರ ದಶಕದಲ್ಲಿ ಕಾಶ್ಮೀರದಲ್ಲೂ ಆ ಬೆದರಿಕೆ ನಮ್ಮ ಮೇಲೆ ಬಂತು. ಇದನ್ನು ಕಚ್ಚಾ ತಂತ್ರಜ್ಞಾನವೆಂದು ಪರಿಗಣಿಸಲಾಗಿತ್ತು, ಇದನ್ನು ಎಲೆಕ್ಟ್ರಾನಿಕ್ ಸ್ಪೆಕ್ಟ್ರಮ್ ಮೂಲಕ ಅತ್ಯಾಧುನಿಕ ತಟಸ್ಥಗೊಳಿಸುವಿಕೆಯಿಂದ ಎದುರಿಸಬೇಕಾಗಿತ್ತು, ವಿಶೇಷವಾಗಿ ಪ್ರಚೋದಕ ವ್ಯವಸ್ಥೆಯು ದೂರಸ್ಥ ಮೊಬೈಲ್ ಪ್ರಕಾರಕ್ಕೆ ಸ್ಥಳಾಂತರಗೊಂಡಾಗ.

Drones as weapons: India is facing a new challenge by Lt General Syed Ata Hasnain pod

ದೀರ್ಘಕಾಲದವರೆಗೆ, ಸೈನ್ಯವು ಹಲವಾರು ನ್ಯೂಟ್ರಾಲೈಜರ್‌ಗಳನ್ನು ಪ್ರಯತ್ನಿಸಿತು, ಆದರೆ ಐಇಡಿ ಪುಲ್ವಾಮಾ ತನಕ ಅಪಾಯವಾಗಿತ್ತು. ಆದರೆ ಅತ್ತ ಯುನೈಟೆಡ್ ಸ್ಟೇಟ್ಸ್, ಅಫ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿ ಕಾರ್ ಬಾಂಬ್‌ಗಳನ್ನು  ಬಳಸಲಾಯಿತು. ಇದಕ್ಕೆ ಯಾವುದೇ ವಿಶ್ವಾಸಾರ್ಹ ಪ್ರತಿದಾಳಿ ಈವರೆಗೆ ಇನ್ನೂ ಅಭಿವೃದ್ಧಿಪಡಿಸಲಾಗಿಲ್ಲ. ನಾನು ಪ್ರಸ್ತಾಪಿಸುತ್ತಿರುವ ಸಂಗತಿಯೆಂದರೆ, ಉದಯೋನ್ಮುಖ ತಂತ್ರಜ್ಞಾನದ ಅಥವಾ ಸಾಕಷ್ಟು ಹಳೆಯ ತಂತ್ರಜ್ಞಾನವನ್ನು ಎದುರಿಸುವ ತಂತ್ರಜ್ಞಾನ ಯಾವತ್ತೂ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಇದೇ ರೀತಿ ಡ್ರೋನ್ ಅಪಾಯ ಕೂಡಾ ಕೊನೆಗಾಣಿಸಬಹುದು. ನಮ್ಮ ಪರಿಸರದಲ್ಲಿ, ಭಯೋತ್ಪಾದಕ ಪ್ರದೇಶದಲ್ಲಿ ಡ್ರೋನ್ ದಾಳಿಯನ್ನು ನೊಡುತ್ತಿರುತ್ತೇವೆ ಹಾಗೂ ಇದಕ್ಕೆ ಸೈನ್ಯದ ಸಡಿಲತೆ ಕಾರಣ ಎಂದು ಆರೋಪಿಸಿ ಅನಗತ್ಯವಾಗಿ ಬೆರಳು ತೋರಿಸುತ್ತಿದ್ದೇವೆ. ಸಶಸ್ತ್ರ ಪಡೆಗಳಲ್ಲಿ, ಡ್ರೋನ್‌ಳಿಂದ ಎದುರಾಗುವ ಅಪಾಯವನ್ನು ಅಧ್ಯಯನ ಮಾಡಲು ಕಳೆದ ಒಂದು ದಶಕದಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ, ಆದರೆ ಸಾಂಪ್ರದಾಯಿಕ ಯುದ್ಧ ಕ್ಷೇತ್ರದಲ್ಲಿ ಸಶಸ್ತ್ರ ಸ್ಥಿರ-ವಿಂಗ್ ಡ್ರೋನ್‌ಗಳನ್ನು ಬಳಸುವುದು ಹೆಚ್ಚು.

ಪಂಜಾಬ್ ಮತ್ತು ಜಮ್ಮು ವಿಭಾಗದ ಕೆಲವು ಭಾಗಗಳಲ್ಲಿ ಗಡಿಯುದ್ದಕ್ಕೂ ಲಾಜಿಸ್ಟಿಕ್ಸ್ ಡ್ರಾಫ್‌ಗಳು ಗಮನಕ್ಕೆ ಬಂದ ನಂತರ ಸಣ್ಣ ಬಗೆಯ ಕ್ವಾಡ್ ಮತ್ತು ಹೆಕ್ಸಾ ಹೆಲಿಕಾಪ್ಟರ್‌ಗಳ ಬಳಕೆಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಮಾರಕ ಪೇಲೋಡ್‌ಗಳನ್ನು ಬಿಡಲು ಅಥವಾ ಆಕಾಶದಿಂದ ರಾಮ್ಮರ್‌ಗಳಾಗಿ ಕೆಲಸ ಮಾಡಲು ಅವುಗಳನ್ನು ಬಳಸಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಈಗ ಈ ಅಪಾಯದ ಸ್ವರೂಪವು ಹೆಚ್ಚು ಕೇಂದ್ರೀಕೃತವಾಗಿದೆ, ಅವುಗಳನ್ನು ಎದುರಿಸಲು ನಿರ್ದಿಷ್ಟ ಕ್ರಮಗಳನ್ನು ಹಂತಹಂತವಾಗಿ ಪರಿಷ್ಕರಿಸಲಾಗುತ್ತದೆ.

ಜಮ್ಮು ಐಎಎಫ್‌ ಸ್ಟೇಷನ್‌ನಲ್ಲಿ ‘ಡ್ರೋನ್‌ ಜಾಮರ್‌’ ಅಳವಡಿಕೆ!

ತಂತ್ರಜ್ಞಾನದ ಹೊರತಾಗಿ, ಇದು ಸ್ಪಷ್ಟ ಉತ್ತರವಾಗಿದೆ. ಅಪಾಯ ಹೆಚ್ಚಾಗುವ ಸಾದ್ಯತೆ ಇರುವುದರಿಂದ ನಾಗರಿಕರಿಗೆ ಜಾಗೃತಿ ತರಬೇತಿ ಮತ್ತು ನಿರ್ದಿಷ್ಟ ವರದಿ ಮಾಡುವ ವಿಧಾನಗಳನ್ನು ಸಹ ಅಭಿವೃದ್ಧಿಪಡಿಸಬೇಕಾಗಿರುತ್ತದೆ. ಇದು ಮಿಲಿಟರಿ ಗುರಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ, ಬದಲಾಗಿ ಸಮಾಜದ ಮೇಲೆ ಹೆಚ್ಚಿನ ಪರಿಣಾಮ ಬೀರುವಂತಹ ವಿವಿಧ ರೀತಿಯ ಚಟುವಟಿಕೆಗಳಿಗೆ ಸೀಮಿತವಾಗಿರುತ್ತದೆ.

ಹಾಗಾದ್ರೆ ಜಮ್ಮುವಿನಲ್ಲಿ ನಡೆದ ದಾಳಿ ಹಾಗೂ ಇದಾದ ಬಳಿಕ ಇಲ್ಲಿ ಕಂಡು ಬಂದ ಡ್ರೋನ್ ಹಾರಾಟದ ಹಿಂದೆ ಯಾವುದಾದರೂ ನಿರ್ದಿಷ್ಟ ಉದ್ದೇಶವಿದೆಯೇ? ನಾನಿದನ್ನು ಹತಾಶ ಯತ್ನ ಎನ್ನಲು ಬಯಸುತ್ತೇನೆ. ಹಫೀಜ್ ಸಯೀದ್ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಈ ಕಾರಣದಿಂದ ಲಷ್ಕರ್-ಎ-ತೈಬಾ ಒತ್ತಡದಲ್ಲಿದೆ. ಇತ್ತೀಚೆಗೆ, ಪಾಕಿಸ್ತಾನದಲ್ಲಿರುವ ಅವರ ಮನೆಯ ಹೊರಗೆ ಸ್ಫೋಟದಲ್ಲಿ ಸಾವುನೋವು ಸಂಭವಿಸಿದೆ. ಕಾಶ್ಮೀರದಲ್ಲಿ ಮತ್ತಷ್ಟು ಬಲಶಾಲಿಯಾಗಬೇಕೆಂಬ ಲಷ್ಕರ್-ಎ-ತೈಬಾ ಸಾಮರ್ಥ್ಯದ ಮೇಲೆ ಇದು ಪರಿಣಾಮ ಬೀರಿದೆ ಅಲ್ಲದೇ ಇದು ಮತ್ತೆ ಕಾರ್ಯ ನಿರ್ವಹಿಸಲು ಯತ್ನಿಸುತ್ತಿದೆ. ಪಾಕಿಸ್ತಾನದ ಡೀಪ್ ಸ್ಟೇಟ್ ಅಫ್ಘಾನಿಸ್ತಾನದ ಬಗ್ಗೆ ಚಿಂತೆ ಮಾಡುವಾಗ ಪ್ರತಿರೋಧವನ್ನು ಜೀವಂತವಾಗಿಡಲು ಬಯಸಿದೆ. ಆ ಕೆಲಸ ವಿಭಿನ್ನ ರೀತಿಯಲ್ಲಿ ನಡೆಯಬಹುದು. ಬಹುಶಃ ಡ್ರೋನ್ ಇದೊಂದು ವಿಧಾನವಾಗಿರಬಹುದು. 

ಜಮ್ಮುವಿನಲ್ಲಿ ಮತ್ತೆ ಡ್ರೋನ್: ದಾಳಿಯ ತನಿಖೆ NIA ವಹಿಸಿದ ಗೃಹ ಸಚಿವಾಲಯ!

ಅಂತಿಮವಾಗಿ, ಅನೇಕ ವಲಯಗಳಲ್ಲಿ ಪದೇ ಪದೇ ಕೇಳಲಾಗುವ ಪ್ರಶ್ನೆಯೆಂದರೆ, ವಾಯುಪಡೆಯ ನೆಲೆಯ ಮೇಲೆ ಡ್ರೋನ್ ದಾಳಿ ಯುದ್ಧದ ಕಾರ್ಯವೇ? ಎಂದು. ಪ್ರಾದೇಶಿಕ ಭೌಗೋಳಿಕ ರಾಜಕೀಯ ಪರಿಸರ ಮತ್ತು ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಆಂತರಿಕ ಚಲನಶೀಲತೆಯಿಂದಾಗಿ, ಆ ಪ್ರಶ್ನೆಯನ್ನು ಸದ್ಯಕ್ಕೆ ಬದಿಗಿಡುವುದು ಉತ್ತಮ. ಸಮಸ್ಯೆ ಬೂದು ವಲಯದಲ್ಲಿರುವುದರಿಂದ ಇದಕ್ಕೆ ವಿಶಿಷ್ಟ ಕಾರಣಗಳು ಸಿಗುವುದಿಲ್ಲ. ಈ ಮೂಲಕ ನಾವು ಪಾಕಿಸ್ತಾನಕ್ಕೆ ಯಾವುದೇ ವಿನಾಯಿತಿ ನೀಡುತ್ತಿದ್ದೇವೆ ಎಂದಲ್ಲ. ಬದಲಾಗಿ ಪ್ರಪಂಚ ಇಂತಹ ಘಟನೆಗಳ ಲೇಬಲಿಂಗ್ ಮೀರಿ ಮುಂದುರೆದಿದೆ. ನಮ್ಮ ಪ್ರತಿಕ್ರಿಯೆ ಕೂಡಾ ಪ್ರಾಯೋಗಿಕ ವಾಸ್ತವಿಕತೆಯ ವ್ಯಾಪ್ತಿಯಲ್ಲಿದ್ದು, ಸರಿಯಾದ ಅವಕಾಶಕ್ಕಾಗಿ ಕಾಯುತ್ತಿರಬಹುದು.

Follow Us:
Download App:
  • android
  • ios