ಭಾರತ-ಚೀನಾ ನಡುವಿನ ಗಲ್ವಾನ್ ಸಂಘರ್ಷಕ್ಕೆ ಒಂದು ವರ್ಷ ಕರ್ನಲ್ ಸಂತೋಷ್ ಬಾಬು ಸೇರಿ ಭಾರತದ 20 ಯೋಧರು ಹುತಾತ್ಮ ಈ ಘಟನೆಯಿಂದ ಕೆರಳಿದ ಭಾರತೀಯರಿಂದ ಚೀನಾ ಉತ್ಪನ್ನ ಬಹಷ್ಕಾರ ಕಳೆದೊಂದು ವರ್ಷದಲ್ಲಿ ಭಾರತೀಯರ ಪ್ರತಿಜ್ಞೆ ಕುರಿತ ಸಮೀಕ್ಷಾ ವರದಿ ಬಹಿರಂಗ

ನವದೆಹಲಿ(ಜೂ.15): ಕಳೆದ ವರ್ಷ ಫೆಬ್ರವರಿಯಿಂದ ಭಾರತ ಹಾಗೂ ಚೀನಾ ಗಡಿ ಸಮಸ್ಯೆ ಉಲ್ಬಣಗೊಂಡಿತ್ತು. ಮಾತುಕತೆ, ಅತಿಕ್ರಮಣ, ರಸ್ತೆ ಕಾಮಾಗಾರಿ ಸೇರಿದಂತೆ ಹಲವು ರೀತಿಯಲ್ಲಿ ಚೀನಾ ಉಪಟಳ ನೀಡುತ್ತಲೇ ಇತ್ತು. ಆದರೆ ಜೂನ್ 15, 2020ಕ್ಕೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪರಿಣಾಮ ಭಾರತದ 20 ವೀರ ಯೋಧರು ಹುತಾತ್ಮರಾಗಿದ್ದರು. ಅತ್ತ ಚೀನಾ 40ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡಿತ್ತು. ಗಲ್ವಾನ್ ಕಣಿವೆಯಲ್ಲಿ ನಡೆದ ಈ ಘರ್ಷಣೆ ಸೇನೆ ಭಾರತೀಯರನ್ನು ಕೆರಳಿಸಿತ್ತು. ಸೇನೆ ತನ್ನ ಶಕ್ತಿಯಿಂದಲೇ ಉತ್ತರ ನೀಡಿದರೆ, ಭಾರತೀಯರು ಚೀನಾ ವಸ್ತುಗಳನ್ನು ಬಹಿಷ್ಕರಿಸೋ ಮೂಲಕ ಹೋರಾಟ ಆರಂಭಿಸಿದರು.

ಗಲ್ವಾನ್ ಸಂಘರ್ಷಕ್ಕೆ ಒಂದು ವರ್ಷ: ಹುತಾತ್ಮರ ಜೀವನ ಪ್ರೇರಣೆಯಾಗಲಿ: ಆರ್‌ಸಿ!

ಇದೀಗ ಗಲ್ವಾನ್ ಘರ್ಷಣೆಗೆ ಒಂದು ವರ್ಷ ಸಂದಿದೆ. ಕಳೆದೊಂದು ವರ್ಷದಲ್ಲಿ ಶೇಕಡಾ 43 ರಷ್ಟು ಭಾರತೀಯರು ಸಂಪೂರ್ಣವಾಗಿ ಚೀನಾ ಉತ್ಪನ್ನಕ್ಕೆ ಗುಡ್ ಬೈ ಹೇಳಿದ್ದಾರೆ. ಇನ್ನು ಶೇಕಡಾ 60 ರಷ್ಟು ಭಾರತೀಯರು ಚೀನಾದ ಕೇವಲ 1 ಉತ್ಪನ್ನ ಖರೀದಿಸಿದ್ದಾರೆ. ಲೋಕಲ್ ಸರ್ಕಲ್ ಹಾಗೂ ಕಮ್ಯೂನಿಟಿ ಸೋಶಿಯಲ್ ಮೀಡಿಯಾ ಸಮೀಕ್ಷೆ ಮಾಡಿ ಇದೀಗ ವರದಿ ಬಹಿರಂಗ ಪಡಿಸಿದೆ.

ಈ ಸಮೀಕ್ಷೆ ಪ್ರಕಾರ ಶೇಕಡಾ 43 ರಷ್ಟು ಭಾರತೀಯರು ಸಂಪೂರ್ಣವಾಗಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ಚೀನಾದ ಯಾವುದೇ ಉತ್ಪನ್ನ ಖರೀದಿಸಿಲ್ಲ ಎಂದು ವರದಿ ಹೇಳುತ್ತಿದೆ. ಇನ್ನು ಶೇಕಡಾ 34 ರಷ್ಟು ಭಾರತೀಯರು ಕಳೆದೊಂದು ವರ್ಷದಲ್ಲಿ ಅನಿವಾರ್ಯವಾಗಿ ಒಂದರಿಂದ ಎರಡು ಚೀನಾ ಉತ್ಪನ್ನ ಖರೀದಿ ಮಾಡಿದ್ದಾರೆ ಎಂದು ವರದಿ ಹೇಳುತ್ತಿದೆ.

ಜಗತ್ತಿನಾದ್ಯಂತ ಭೌಗೋಳಿಕ, ರಾಜಕೀಯ ಬದಲಾವಣೆಗೆ ಸಾಕ್ಷಿಯಾದ ಲಡಾಖ್ ಸಂಘರ್ಷ!

ಶೇಕಡಾ 4 ರಷ್ಟು ಭಾರತೀಯರು 5 ರಿಂದ 10 ಚೀನಾ ಉತ್ಪನ್ನ ಖರೀದಿಸಿದ್ದಾರೆ. ಶೇಕಡಾ 3 ರಷ್ಟು ಮಂದಿ 10 ರಿಂದ 15 ಉತ್ಪನ್ನಗಳನ್ನು ಖರೀದಿಸಿದ್ದಾರೆ. ಇನ್ನು ಶೇಕಡಾ 6 ರಷ್ಟು ಮಂದಿ ತಾವು ಚೀನಾ ಅಥವಾ ಇತರ ದೇಶಗಳ ಉತ್ಪನ್ನವೇ ಎಂಬುದನ್ನು ನೋಡಿಲ್ಲ. ಈ ಕುರಿತು ನಮಗೆ ಯಾವುದೇ ಅಭಿಪ್ರಾಯವಿಲ್ಲ ಎಂದಿದ್ದಾರೆ.

ಭಾರತದ 281 ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಬರೊಬ್ಬರಿ 17,800 ಮಂದಿಯನ್ನು ಸಂದರ್ಶಿಸಿ ಅಂಕಿ ಅಂಶ ಕಲೆಹಾಕಲಾಗಿದೆ. ಇದರಲ್ಲಿ ಶೇಕಡಾ 67 ರಷ್ಟು ಪುರುಷರು ಹಾಗೂ ಶೇಕಡಾ 37 ರಷ್ಟು ಮಹಿಳೆಯರು ಸೇರಿದ್ದಾರೆ.