ಗಲ್ವಾನ್ ಸಂಘರ್ಷಕ್ಕೆ ಒಂದು ವರ್ಷ: ಹುತಾತ್ಮರ ಜೀವನ ಪ್ರೇರಣೆಯಾಗಲಿ: ಆರ್‌ಸಿ!
* ಗಲ್ವಾನ್ ಸಂಘರ್ಷಕ್ಕೆ ಒಂದು ವರ್ಷ, ಮಡಿದ ಯೋಧರಿಗೆ ಆರ್‌ಸಿ ಸಲಾಂ
* ಟ್ವೀಟ್ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದ ಸಂಸದ ರಾಜೀವ್ ಚಂದ್ರಶೇಖರ್
* ಹುತಾತ್ಮರ ಬದುಕು ಪ್ರೇರಣೆಯಾಗಲಿ: ರಾಜಕೀಯ ಪಕ್ಷಗಳಿಗೂ ವಿಶೇಷ ಮನವಿ
ನವದೆಹಲಿ(ಜೂ.15): ಗಲ್ವಾನ್ ಸಂಘರ್ಷ ನಡೆದು ಬರೋಬ್ಬರಿ ಒಂದು ವರ್ಷವಾಗಿದೆ. ಹೀಗಿರುವಾಗ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಮಂಗಳವಾರದಂದು ಕರ್ನಲ್ ಸಂತೋಷ್ ಬಾಬು ಹಾಗೂ ಈ ಸಂಘರ್ಷದಲ್ಲಿ ಹುತಾತ್ಮರಾದ ಇತರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. 2020ರ ಜೂನ್ 15 ರಂದು ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ಜೊತೆಗಿನ ಹಿಂಸಾತ್ಮಕ ಸಂಘರ್ಷದಲ್ಲಿ ಆಭರೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದರು.
ಹುತಾತ್ಮರಿಂದ ಪ್ರೇರಣೆ ಪಡೆಯೋಣ
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸುಉತ್ತಾ ಅವರ ಜೀವನದಿಂದ ಪ್ರೇರಣೆ ಪಡೆಯೋಣ ಎಂದಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು, ಎಲ್ಲಾ ರೀತಿಯ ಮನಸ್ತಾಪಗಳನ್ನು ದೂರವಿಟ್ಟು, ಶತ್ರು ದೇಶಗಳೆದುರು 'ಭಾರತವೇ ಮೊದಲು' ಎಂಬ ಬದ್ಧತೆ ತೋರಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಚೀನಿಯರ ಕಪಟವನ್ನು ನೆನಪಿಸಿಕೊಂಡಿರುವ ಅವರು, ಹೇಗೆ ಒಂದು ವರ್ಷದ ಹಿಂದೆ ಗಲ್ವಾನ್ ಕಣಿವೆಯಲ್ಲಿ ಚೀನಿಯರು ಅಂತಾರಾಷ್ಟ್ರೀಯ ಮಾನದಂಡ ಉಲ್ಲಂಘಿಸಿ, ಭಾರತದ ಭೂಭಾಗ ಪ್ರವಚೇಶಿಸಿದ್ದಲ್ಲದೇ ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದ್ದರೆಂಬುವುದನ್ನೂ ತಿಳಿಸಿದ್ದಾರೆ.
ಎಂಪಿ ರಾಜೀವ್ ಚಂದ್ರಶೇಖರ್ 16ನೇ ಬಿಹಾರ ರೆಜಿಮೆಂಟ್‌ನ ಕರ್ನಲ್ ಸಂತೋಷ್ ಬಾಬು ಹಾಗೂ ಭಾರತದ ಸಾರ್ವಭೌಮತ್ವ ರಕ್ಷಿಸಿದ ವೀರ ಸೈನಿಕರಿಗೆ ಟ್ವಿಟರ್ ಮೂಲಕ ಸಲಾಂ ಎಂದಿದ್ದಾರೆ.