Asianet Suvarna News Asianet Suvarna News

ಜಗತ್ತಿನಾದ್ಯಂತ ಭೌಗೋಳಿಕ, ರಾಜಕೀಯ ಬದಲಾವಣೆಗೆ ಸಾಕ್ಷಿಯಾದ ಲಡಾಖ್ ಸಂಘರ್ಷ!

* ಗಲ್ವಾನ್‌ ಕಣಿವೆಯಲ್ಲಿ ಚೀನಾ ಭಾರತ ಸೈನಿಕರ ಸಂಘರ್ಷ

* ಲಡಾಖ್ ಸಂಘರ್ಷದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬದಲಾವಣೆ

* ಭಾರತದ ಆ ಒಂದು ನಡೆ ತಡೆಯಲು ರಣತಂತ್ರ ಹೆಣೆಯಿತಾ ಚೀನಾ?

Lt Gen Syed Ata Hasnain India can make China extremely uncomfortable down south pod
Author
Bangalore, First Published Jun 14, 2021, 5:34 PM IST

ಲೇಖಕರು: ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೈನ್ (ನಿವೃತ್ತ)
ಶ್ರೀನಗರ: 15 ಕಾರ್ಪ್ಸ್ ಮಾಜಿ ಕಮಾಂಡರ್ ಮತ್ತು ಕಾಶ್ಮೀರದ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ.

ಹದಿನೈದು ದಿನಗಳ ಹಿಂದೆ ಲಡಾಖ್‌ನಲ್ಲಿನ ಮಿಲಿಟರಿ ಪರಿಸ್ಥಿತಿಯನ್ನು ಪರಿಶೀಲಿಸಿ ಬಗ್ಗೆ ಬರೆದ ಲೇಖನದ ಬಳಿಕ, ಕಳೆದ ವರ್ಷ ಪ್ರಾರಂಭವಾದ ಭೌಗೋಳಿಕ ರಾಜಕೀಯ ಹಾಗೂ ಜನರಿಗೆದುರಾದ ಸಮಸ್ಯೆಗಳನ್ನು ವಿಶ್ಲೇಷಿಸುವ ಅವಶ್ಯಕತೆಯಿದೆ.

ಲಡಾಖ್‌ನ ಮಿಲಿಟರಿ ಪರಿಸ್ಥಿತಿ ತಿಳಿಸಿಕೊಡುವ ನನ್ನ ಲೇಖನದ ಬಳಿಕ, ಈಗ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಭಿನ್ನಾಭಿಪ್ರಾಯದಿಂದ ಉಂಟಾಗುವ ಭೌಗೋಳಿಕ ರಾಜಕೀಯ ಸಮಸ್ಯೆಗಳನ್ನು ವಿಶ್ಲೇಷಿಸುವ ಅವಶ್ಯಕತೆಯಿದೆ. ಭಾಗಶಃ ಇಲ್ಲಿನ ಚಟುವಟಿಕೆಗಳು ನಿಷ್ಕ್ರಿಯಗೊಂಡಿದ್ದರೂ, ಬಿಕ್ಕಟ್ಟು ಇಂದಿಗೂ ಮುಂದುವರೆದಿದೆ. ಲಡಾಖ್‌ ವಿಚಾರ ವಿಶ್ವದೆದುರು ಸದ್ಯ ಸದ್ದು ಮಾಡುತ್ತಿಲ್ಲವಾದರೂ ಅಲ್ಲಿನ ಗಲಭೆ ಅರ್ಧದಷ್ಟು ಪ್ರಪಂಚದ ಮೇಲೆ ಭೌಗೋಳಿಕ ರಾಜಕೀಯ ಪರಿಣಾಮವನ್ನು ಬೀರುತ್ತದೆ.

ಗಲ್ವಾನ್‌ ಸಂಘರ್ಷಕ್ಕೆ ಒಂದು ವರ್ಷ: ಚೀನಾ, ಭಾರತ ಸಂಬಂಧಕ್ಕೆ ತಿರುವು ಕೊಟ್ಟ ಹೋರಾಟ!

ಲಡಾಖ್ ಎಂಬ ಪ್ರದೇಶ ಟಿಬೆಟ್ ಮತ್ತು ಕ್ಸಿನ್‌ಜಿಯಾಂಗ್‌ನ ಪಕ್ಕದಲ್ಲಿರುವ ಪರ್ವತ ಶ್ರೇಣಿಗಳ ಮಧ್ಯೆ ಇರುವುದರಿಂದ ಹಾಗೂ ಹಿಂದೂ ಮಹಾಸಾಗರಕ್ಕೆ ಸಂಪರ್ಕ ಕಲ್ಪಿಸುವುದರಿಂದ ರಣತಂತ್ರ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಭಾರತದ ಉತ್ತರ ಪರ್ವತ ಪ್ರದೇಶಗಳು ಪ್ರತ್ಯೇಕವಾಗಿವೆ, ಅದರಲ್ಲೂ ವಿಶೇಷವಾಗಿ ಲಡಾಖ್‌ನಲ್ಲಿ ಇದು ಮತ್ತಷ್ಟು ಹೆಚ್ಚಿದೆ ಎಂಬುವುದು ಚೀನಾ ನಂಬಿಕೆ. ಆದರೆ ಉತ್ತರ ಪರ್ವತ ಹಾಗೂ ಹಿಂದೂ ಮಹಾಸಾಗರದ ನಡುವೆ ಆಂತರಿಕ ಸಂಪರ್ಕವಿದೆ. 

ಭಾರತಕ್ಕೆ ಉತ್ತರ ಭಾಗದಿಂದ ಅಪಾಯ ಇರಬಹುದು ಆದರೆ ಇದೇ ವಿಚಾರ ಚೀನಾಗೆ ದಕ್ಷಿಣ ಭಾಗದಿಂದ ಅನಾನುಕೂಲವುಂಟು ಮಾಡುತ್ತದೆ. ಯಾಕೆಂದರೆ ಇದು ಚೀನಾದ ಆರ್ಥಿಕ ಪರಿಸ್ಥಿತಿಯ ಜೀವಸೆಲೆಯಾಗಿದೆ. ಇದೇ ಹಾದಿ ಮೂಲಕ ಚೀನಾ ತಾನು ಸಿದ್ಧಪಡಿಸಿದ ಸಿದ್ಧಪಡಿಸಿದ ವಸ್ತುಗಳನ್ನು ವಿವಿಧ ಮಾರುಕಟ್ಟೆಗಳಿಗೆ ಸಾಗಿಸುತ್ತದೆ. ಭದ್ರತಾ ದೃಷ್ಟಿಕೋನದಿಂದ ಭಾರತ ಮಹಾದ್ವೀಪದಂತೆ ಎಂಬ ವಿಚಾರ ಚೀನಾಗೂ ತಿಳಿದಿದೆ. ಆದರೆ ವಾಸ್ತವವಾಗಿ ಭಾರತಕ್ಕೆ ಸಮುದ್ರ ಮಾರ್ಗವೇ ಹೆಚ್ಚು ಲಾಭದಾಯಕ ಹಾಗೂ ಅನುಕೂಲಕರ. ಆದರೆ ಭಾರತವು ತನ್ನ ಕಡಲ ಸಾಮರ್ಥ್ಯವನ್ನು ನಂಬಿದ್ದರಿಂದ ಮನಸ್ಥಿತಿಯನ್ನು ಬದಲಾಯಿಸುವುದು ಸುಲಭವಲ್ಲ.

ಭಾರತೀಯ ನೌಕಾಪಡೆ, ದೇಶದಲ್ಲಿ ತಂತ್ರಗಾರಿಕೆ

ಭಾರತೀಯ ನೌಕಾಪಡೆಯಲ್ಲಿ ಆತ್ಮವಿಶ್ವಾಸದ ಕೊರತೆ ಇಲ್ಲ, ಬದಲಾಗಿ ಇಡೀ ದೇಶದ ಕಾರ್ಯತಂತ್ರ ರೂಪಿಸುವ ಪಡೆ ಇದೆ. ಇಡೀ ಜಗತ್ತೇ ಇಂದು ಭೌಗೋಳಿಕ ಹಾಗೂ ರಾಜಕೀಯ ಬದಲಾವಣೆಗೆ ಸಾಕ್ಷಿಯಾಗಿದೆ. ಆದಎಡ ಈ ನಡುವೆ ಅಮೆರಿಕದ ಕಾರ್ಯತಂತ್ರದ ಕಾಳಜಿ ಹಾಗೂ ಗಮನ ಇಂಡೋ-ಪೆಸಿಫಿಕ್ ಕಡೆಗೆ ಸರಿದಿದೆ.

ಪೂರ್ವ ಲಡಾಖ್‌ನಲ್ಲಿ ಭಾರತದ ಮೇಲೆ ಚೀನಾ ದಾಳಿ: 2020ರ ದೊಡ್ಡ ತಪ್ಪು

ಪ್ರಸ್ತುತ ಮಧ್ಯಪ್ರಾಚ್ಯದಿಂದ ಇಂಡೋ-ಪೆಸಿಫಿಕ್ ಕಡೆಗೆ ಗಮನ ಕೇಂದ್ರೀಕೃತವಾಗುತ್ತದೆ. ಈಗಾಗಲೇ ಜಪಾನ್, ತೈವಾನ್, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಪರಸ್ಪರ ಲಾಭಕ್ಕಾಗಿ ಯುಎಸ್ ಜೊತೆ ವಿವಿಧ ರೀತಿಯ ಭದ್ರತಾ ಒಪ್ಪಂದಗಳನ್ನು ಮಾಡಿವೆ. ಹೀಗಿರುವಾಗ ಭಾರತವೊಂದೇ ಅಮೆರಿಕದ ಏಕೈಕ ಪ್ರಮುಖ ರಕ್ಷಣಾ ಪಾಲುದಾರನಾಗಿದೆ. ಇಂಡೋ-ಪೆಸಿಫಿಕ್ ಭದ್ರತಾ ಮ್ಯಾಟ್ರಿಕ್ಸ್‌ನಲ್ಲಿ ಸೇರ್ಪಡೆಗೊಂಡಿದ್ದರೂ, ಭಾರತ ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ಉಳಿಸಿಕೊಂಡಿದೆ. ಇದರೊಂದಿಗೆ ನ್ಯಾಟೋ ಮತ್ತು ಕ್ವಾಡ್ ನಂತಹ ಸಂಸ್ಥೆಗಳಿಗೆ ಸೇರುವ ವಿಚಾರವಾಗಿ ಮಾತುಕತೆ ಮತ್ತು ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುತ್ತದೆ. 

Lt Gen Syed Ata Hasnain India can make China extremely uncomfortable down south pod

ಈ ಎಲ್ಲಾ ವಿಚಾರಗಳು ಮಧ್ಯಪ್ರಾಚ್ಯ ಮತ್ತು ಅಫ್ಘಾನಿಸ್ತಾನ ಕೇಂದ್ರೀಕೃತವಾಗಿರುವವರೆಗೂ ಚೀನಾಗೆ ಭಾರತದಿಂದ ಯಾವುದೇ ಅಪಾಯ ಇರಲಿಲ್ಲ ಎಂಬ ಸಂಕೇತವನ್ನೇ ನೀಡುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರವನ್ನು ದಾಟಿ ರಾಜಕೀಯವಾಗಿಯೂ ಮುಂದುವರೆಯುತ್ತಿರುವುದನ್ನು ಚೀನಾ ಮನಗಂಡಿದೆ. 

ಶತ್ರು ರಾಷ್ಟ್ರದ ಬೆದರಿಕೆ ಎದುರಿಸಲು ಭಾರತದ ಮಿಲಿಟರಿ ಶಕ್ತಿ ರೂಪಾಂತರಗೊಳ್ಳಬೇಕು: ರಾವತ್!

ಭಾರತ, ಚೀನಾ ಮತ್ತು ರಷ್ಯಾ ನಡುವಿನ ಸಂಬಂಧಗಳು ಬಲಗೊಳ್ಳುತ್ತಿದ್ದಾಗ

ಯಾವಾಗದವರೆಗೆ ಭಾರತ ಅಮೆರಿಕ ಜೊತೆಗಿನ ಕಾರ್ಯತಂತ್ರದ ಸಂಬಂಧ ಮುಂದುವರಿಯುಸುವುದರ ಬಗ್ಗೆ ಗೊಂದಲದಲ್ಲಿದ್ದು, ಮಾಸ್ಕೋ ಮತ್ತು ಬೀಜಿಂಗ್‌ನೊಂದಿಗಿನ ಬಲವಾದ ಸಂಬಂಧ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಅದರ ಬಹುಪಕ್ಷೀಯ ದೃಷ್ಟಿಕೋನಕ್ಕೆ ಮಹತ್ವ ನೀಡಿತ್ತೋ ಅಲ್ಲಿವರೆಗೆ ಚೀನಿಯರು ಸಾಕಷ್ಟು ತೃಪ್ತರಾಗಿದ್ದರು. ಭಾರತ-ಯುಎಸ್-ಜಪಾನ್ ಸಮೀಕರಣ ಚೀನಾದ ಅತೀ ದೊಡ್ಡ ಭೀತಿಯಾಗಿದ್ದು, ಇದು ಭದ್ರತಾ ತಿಳುವಳಿಕೆಯಾಗಿ ಬದಲಾಗುತ್ತಿತ್ತು. ಅದರಲ್ಲೂ ವಿಶೇಷವಾಗಿ ಇದು ಸಮುದ್ರ ಕ್ಷೇತ್ರವನ್ನು ಕೆಂದ್ರೀಕರಿಸಿತ್ತು.

ಕ್ವಾಡ್ ಸಂಘಟನೆ ಈ ಮೊದಲು  ಬಗ್ಗೆ ಹೆಚ್ಚಿನ ಒಲವು ತೋರಿಸಲಿಲ್ಲ ಮತ್ತು ಆಸ್ಟ್ರೇಲಿಯಾ ಇದಕ್ಕೆ ಸೇರ್ಪಡೆಗೊಳ್ಳುವುದಿಲ್ಲ ಎಂಬ ನಿರೀಕ್ಷೆ ಚೀನಾಗಿತ್ತು. 2017ರ ಡೋಕ್ಲಾಮ್ ಚೀನಾಕ್ಕೆ ಅಸ್ಪಷ್ಟತೆಯ ಸಂದರ್ಭವಾಗಿತ್ತು; ಅದರ ಕಾರ್ಯತಂತ್ರ ಪರಿಣಾಮ ಹೇಗೆ ಎದುರಿಸುವುದು ಎಂಬ ಖಚಿತತೆ ಇರಲಿಲ್ಲ. ಆದರೆ ಈ ಅವಧಿಯಲ್ಲಿ ಭಾರತದ ಆತ್ಮವಿಶ್ವಾಸ ಹೆಚ್ಚಾಗುತ್ತಿರುವುದು ಮಾತ್ರ ಗಮನಕ್ಕೆ ಬಂತು.

ಚೀನಾ ತಾನು ಬಲಶಾಲಿಯಾಗುತ್ತಿದ್ದೇನೆ, ತನ್ನ ಉದ್ದೇಶವೂ ಬಹಳ ದೊಡ್ಡದಿದೆ ಎಂಬ ಸಂದೇಶ ಜಗತ್ತಿಗೆ ನೀಡುವ ಸಲುವಾಗಿ ಈ ಹೆಜ್ಜೆ ಇರಿಸಿತ್ತು. ಈ ನಿಟ್ಟಿನಲ್ಲಿ ಇದು ಪೆಸಿಫಿಕ್ ಪ್ರದೆಶದ ರಾಷ್ಟ್ರಗಳ ವಿರುದ್ಧ 'ವುಲ್ಫ್ ವಾರಿಯರ್ ಡಿಪ್ಲೊಮಸಿ' ಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿತು ಆದರೆ ಭಾರತದ ವಿರುದ್ಧ ಸೀಮಿತ ಮಿಲಿಟರಿ ಬಲವನ್ನು ಬಳಸಿಕೊಂಡಿತು.

ಗಲ್ವಾನ್ ಕಣಿವೆಯಲ್ಲಾದ ಸಂಘರ್ಷದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತದ ಮೇಲಿನ ಒತ್ತಡದಲ್ಲಿ ಅಮೆರಿಕ ನೇರವಾಗಿ ಭಾಗಿಯಾಗುವುದಿಲ್ಲ

ಚೀನಾ ಈ ನಡೆ ಹಿಂದೆಯೂ ಕಾರಣವಿತ್ತು ಯಾಕೆಂದರೆ ಈ ರಾಷ್ಟ್ರಗಳ ವಿರುದ್ಧ ಮಿಲಿಟರಿ ಸಂಘರ್ಷ ನಡೆಸಿದರೆ ಯುಎಸ್ ಜೊತೆ ನೇರ  ಕಾದಾಟ ಆರಂಭಿಸಿದಂತೆ. ಆದರೆ ಭಾರತದ ಮೇಲೆ ಪರೋಕ್ಷ ಒತ್ತಡ ತಂದರೆ ಅಮೆರಿಕ ಕೂಡಾ ಪರೋಕ್ಷವಾಗಿ ಭಾಗಿಯಾಗುತ್ತದೆ. ಭಾರತವು ಎತ್ತರದ ಹಿಮಾಲಯದಲ್ಲಿ ಪ್ರತ್ಯೇಕವಾಗಿದೆ ಹಾಗೂ ಬಹುದೊಡ್ಡ ಸಂಘರ್ಷವೆದುರಿಸುವ ಅಪಾಯದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತದೆ ಎಂದು ಚೀನಾ, ಪಾಕ್‌ ಸಹಾಯದಿಂದ ತಿಳಿದುಕೊಳ್ಳುತ್ತದೆ. ಹೀಗಿರುವಾಗ ಅತ್ತ ಕ್ವಾಡ್ ದೇಶಗಳು ಸಮುದ್ರ ಮಾರ್ಗವಾಗಿ ಸಂಪರ್ಕ ಹೊಂದಿವೆ, ನೇರವಾಗಿ ಹಿಮಾಲಯದೊಂದಿಗೆ ಅಲ್ಲ ಎಂಬುವುದನ್ನೂ ಅರಿತುಕೊಳ್ಳುತ್ತದೆ.

ಈ ಪ್ರದೇಶದಾದ್ಯಂತ ವಿವಿಧ ಭದ್ರತಾ ವ್ಯವಸ್ಥೆಗಳಿರುವುದನ್ನು ಕಂಡು, ಸೈನ್ಯವನ್ನಿಟ್ಟುಕೊಂಡು ಯಾವುದೇ ರೀತಿಯ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಚೀನಾಕ್ಕೆ ತಿಳಿದಿತ್ತು. ಅದೇ ಸಮಯದಲ್ಲಿ, ಕ್ಸಿ ಜಿನ್‌ಪಿಂಗ್ ಅವರು ಚೀನಾಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಮನವಿ ಮಾಡಿಕೊಂಡಿದ್ದರು.. ಆದರೆ ಇದು ನಿಜಕ್ಕೂ ಮನವಿ ಮತ್ತೊಂದು ಕಾರ್ಯತಂತ್ರಕ್ಕೆ ಕಾರಣವಾಗಬಹುದೆನ್ನಲಾಗಿದೆ. ಹೀಗಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ರಣತಂತ್ರ ಏನು ಎಂಬುವುದನ್ನು ನೋಡಬೇಕಿದೆ.

ಇನ್ನು ಅತ್ತ ಇಂಡೋ-ಪೆಸಿಫಿಕ್ ಭದ್ರತಾ ಮ್ಯಾಟ್ರಿಕ್ಸ್‌ನಲ್ಲಿ ಭಾರತ ಸೇರ್ಪಡೆಗೊಳ್ಳುವುದರಿಂದ ಹೆಚ್ಚಿನ ಸಮುದ್ರ ಮಾರ್ಗದಿಂದ ಹೆಚ್ಚಿನ ಸಹಕಾರ ಸಿಕ್ಕಂತ್ತಾಗುತ್ತದೆ. ಹಿಗಾಗಿ ಚೀನಾ ಇದಕ್ಕೆ ತಡೆಯೊಡ್ಡುವ ಯತ್ನ ಮಾಡಲಿದೆ. ಪಾಕಿಸ್ತಾನದೊಂದಿಗೆ ಸೇರಿ ಉತ್ತರದ ಗಡಿಯಲ್ಲಿ ಭಾರತದೊಂದಿಗೆ ಭಿನ್ನಾಭಿಪ್ರಾಯ ಹುಟ್ಟಿಕೊಳ್ಳುವಂತೆ ಮಾಡಿದ್ದು, ಭಾರತ ಇದರಲ್ಲಿ ಶಾಮೀಲಾಗದಂತೆ ತಡೆಯುವ ಉದ್ದೇಶದಿಂದ ಎಂಬುವುದು ಸ್ಪಷ್ಟ.

ಈ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ: India can make China extremely uncomfortable down south

Follow Us:
Download App:
  • android
  • ios