Malegaon Blast: ಪ್ರಕರಣದಲ್ಲಿ ಭಾರಿ ಟ್ವಿಸ್ಟ್‌: ಉಲ್ಟಾ ಹೊಡೆದ ಸಾಕ್ಷಿ

ಮಹಾರಾಷ್ಟ್ರದ ಮಾಲೇಗಾಂವ್‌ ಮಸೀದಿ ಹೊರಗೆ 2008ರಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಮಂಗಳವಾರ ಮಹತ್ವದ ತಿರುವು ಲಭಿಸಿದೆ. ಪ್ರಕರಣದಲ್ಲಿ ಈ ಹಿಂದೆ ಸಾಕ್ಷ್ಯ ನುಡಿದಿದ್ದ ಪ್ರಮುಖ ಸಾಕ್ಷಿ ಸಮೀರ್‌ ಕುಲಕರ್ಣಿ ಈಗ ಉಲ್ಟಾ ಹೊಡೆದಿದ್ದಾನೆ.
 

Forced to name BJP leaders in Malegaon blast case says witness gvd

ಮುಂಬೈ: ಮಹಾರಾಷ್ಟ್ರದ ಮಾಲೇಗಾಂವ್‌ (Malegaon) ಮಸೀದಿ ಹೊರಗೆ 2008ರಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ (Bomb Blast) ಪ್ರಕರಣಕ್ಕೆ ಮಂಗಳವಾರ ಮಹತ್ವದ ತಿರುವು ಲಭಿಸಿದೆ. ಪ್ರಕರಣದಲ್ಲಿ ಈ ಹಿಂದೆ ಸಾಕ್ಷ್ಯ ನುಡಿದಿದ್ದ ಪ್ರಮುಖ ಸಾಕ್ಷಿ ಸಮೀರ್‌ ಕುಲಕರ್ಣಿ (Sameer Kulakarni) ಈಗ ಉಲ್ಟಾ ಹೊಡೆದಿದ್ದು, 'ಈ ಪ್ರಕರಣದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಹಾಗೂ ಇತರ 4 ಆರೆಸ್ಸೆಸ್‌ ಮುಖಂಡರು ಭಾಗಿಯಾಗಿದ್ದಾರೆ ಎಂದು ಹೇಳುವಂತೆ ನನಗೆ ಮಹಾರಾಷ್ಟ್ರ ಎಟಿಎಸ್‌ (Maharashtra ATS) ಚಿತ್ರಹಿಂಸೆ ನೀಡಿತ್ತು' ಎಂದು ಆರೋಪಿಸಿದ್ದಾನೆ.

ಮಂಗಳವಾರ ಎನ್‌ಐಎ ಕೋರ್ಟ್‌ ಮುಂದೆ ಹಾಜರಾದ ಕುಲಕರ್ಣಿ, 'ಪ್ರಕರಣದಲ್ಲಿ ಯೋಗಿ ಆದಿತ್ಯನಾಥ್‌, ಆರೆಸ್ಸೆಸ್‌ ನಾಯಕರಾದ ಇಂದ್ರೇಶ್‌ ಕುಮಾರ್‌, ಸ್ವಾಮಿ ಅಸೀಮಾನಂದ, ಕಾಕಾಜಿ ಹಾಗೂ ದೇವಧರಜಿ ಅವರ ಹೆಸರು ಹೇಳಬೇಕು ಎಂದು ಅಂದಿನ ಎಟಿಎಸ್‌ ಹೆಚ್ಚುವರಿ ಆಯುಕ್ತ ಪರಮ್‌ಬೀರ್‌ ಸಿಂಗ್‌ ನನಗೆ ಬೆದರಿಕೆ ಹಾಕಿದ್ದರು. ಅಕ್ರಮವಾಗಿ ಎಟಿಎಸ್‌ ಕಚೇರಿಗೆ ಕರೆದೊಯ್ದು ಪೊಲೀಸರು ಚಿತ್ರಹಿಂಸೆ ನೀಡಿದ್ದರು' ಎಂದು ಹೇಳಿದ್ದಾನೆ. ಈ ಹೇಳಿಕೆ ರಾಜಕೀಯ ಸಂಚಲನ ಮೂಡಿಸಿದೆ.

Politics Over Kashi Project: ಅಖಿಲೇಶ್‌ ಹೇಳಿಕೆಗೆ ಯೋಗಿ ಆದಿತ್ಯನಾಥ್‌ ತಿರುಗೇಟು

ಏನಿದು ಪ್ರಕರಣ?: ಮಹಾರಾಷ್ಟ್ರದ ಮಾಲೇಗಾಂವ್‍ನಲ್ಲಿ 2008ರ ಸೆಪ್ಟೆಂಬರ್ ನಲ್ಲಿ ಸ್ಫೋಟ ನಡೆದಿತ್ತು. ಈ ವೇಳೆ 7 ಜನರು ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸಂಬಂಧ ಉಗ್ರ ನಿಗ್ರಹ ದಳವು ಕಣ್ಣೀರಿಟ್ಟ ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಬಂಧಿಸಿತ್ತು. ಈ ಪ್ರಕರಣದ ಕುರಿತು 2011ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ತನಿಖೆ ಆರಂಭಿಸಿತ್ತು. ಪ್ರಜ್ಞಾ ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲದೇ ಇರುವುದರಿಂದ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಕ್ಲೀನ್ ಚಿಟ್ ನೀಡಿತ್ತು.

ಕಾಂಗ್ರೆಸ್‌ ಕಿರುಕುಳದಿಂದ ನನಗೆ ಈಗ ಕಣ್ಣುಗಳೇ ಕಾಣ್ತಿಲ್ಲ: ಸಾಧ್ವಿ ಪ್ರಜಾ
ಭೋಪಾಲ್‌: ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ತೀವ್ರ ಕಿರುಕುಳ ನೀಡಿದ ಪರಿಣಾಮ ಆರೋಗ್ಯ ಹದಗೆಟ್ಟಿದೆ, ದೃಷ್ಟಿಯೂ ಸರಿಯಾಗಿ ಕಾಣುತ್ತಿಲ್ಲ ಎಂದು ಭೋಪಾಲ್‌ ಬಿಜೆಪಿ ಲೋಕಸಭಾ ಸದಸ್ಯೆ ಪ್ರಜ್ಞಾ ಸಿಂಗ್‌ ಠಾಕೂರ್‌ ಭಾನುವಾರ ಆರೋಪಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನ ನಿಮಿತ್ತ ರಾಜ್ಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಭಾಗವಹಿಸಿದ್ದ ಪ್ರಜ್ಞಾ ಠಾಕೂರ್‌, '2008ರ ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಕಾಂಗ್ರೆಸ್‌ 9 ವರ್ಷಗಳ ಕಾಲ ನೀಡಿದ ಕಿರುಕುಳದಿಂದಾಗಿ ಅಕ್ಷಿಪಟಲದಿಂದ ಮೆದುಳಿನವರೆಗೆ ಊತ ಮತ್ತು ಕೀವು ಕಾಣಿಸಿಕೊಳ್ಳುತ್ತಿದೆ. 

ಕಾಂಗ್ರೆಸ್‌ ಕಿರುಕುಳದಿಂದ ನನಗೆ ಈಗ ಕಣ್ಣುಗಳೇ ಕಾಣ್ತಿಲ್ಲ: ಸಾಧ್ವಿ ಪ್ರಜ್ಞಾ

ಎಡಗಣ್ಣು ದೃಷ್ಟಿಯನ್ನೇ ಕಳೆದುಕೊಂಡಿದೆ ಮತ್ತು ಬಲಗಣ್ಣೂ ಮಬ್ಬಾಗಿ ಕಾಣಿಸುತ್ತಿದೆ' ಎಂದು ಹೇಳಿದ್ದಾರೆ. ಪ್ರಜ್ಞಾ ಠಾಕೂರ್‌ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್‌ಗಳು ಭೋಪಾಲ್‌ನಲ್ಲಿ ಕಾಣುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಲಾಕ್‌ಡೌನ್‌ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ, ದೆಹಲಿಯಿಂದ ಭೋಪಾಲ್‌ಗೆ ಬರಲಾಗಲಿಲ್ಲ ಎಂದು ಉತ್ತರಿಸಿದ್ದಾರೆ.

Latest Videos
Follow Us:
Download App:
  • android
  • ios