Asianet Suvarna News Asianet Suvarna News

Politics Over Kashi Project: ಅಖಿಲೇಶ್‌ ಹೇಳಿಕೆಗೆ ಯೋಗಿ ಆದಿತ್ಯನಾಥ್‌ ತಿರುಗೇಟು

  • ಇಂದು ಉದ್ಘಾಟನೆಯಾಗಲಿರುವ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ
  • ಇದಕ್ಕೆ ತಮ್ಮ ಅವಧಿಯಲ್ಲಿ ಅನುಮೋದನೆ ನೀಡಲಾಗಿತ್ತು ಎಂದಿದ್ದ ಅಖಿಲೇಶ್‌
  • ಅಖಿಲೇಶ್‌ ಹೇಳಿಗೆ ಸಿಎಂ ಯೋಗಿ  ಆದಿತ್ಯನಾಥ್‌ ತಿರುಗೇಟು
Yogi Adityanath and akhilesh yadav talk war about Kashi Project akb
Author
Bangalore, First Published Dec 13, 2021, 11:02 AM IST

ಉತ್ತರಪ್ರದೇಶ(ಡಿ.13):  ವಾರಣಾಸಿಯ(Varanasi)ಲ್ಲಿ ಪ್ರವಾಸೋದ್ಯಮವನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸುವ  ಉದ್ದೇಶದಿಂದ ಆರಂಭಿಸಿದ ಬೃಹತ್ ಯೋಜನೆಯಾದ ಕಾಶಿ ವಿಶ್ವನಾಥ ಕಾರಿಡಾರ್ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ(Grand Kashi Project) ಪೂರ್ಣಗೊಂಡಿದ್ದು ಈ ಯೋಜನೆಗೆ ತಮ್ಮ ಅವಧಿಯಲ್ಲಿ ಅನುಮೋದನೆ ನೀಡಲಾಗಿತ್ತು ಎಂದು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌( Akhilesh Yadav) ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಈಗ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌(Yogi Adityanath) ತಿರುಗೇಟು ನೀಡಿದ್ದಾರೆ. 

ಇಟಾಹ್‌ನ ಬ್ರಜ್‌ ಪ್ರದೇಶದಲ್ಲಿ  ಬಿಜೆಪಿಯ ಬೂತ್ ಅಧ್ಯಕ್ಷರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯ ಹೃದಯಭಾಗದಲ್ಲಿರುವ ಮಹತ್ವಾಕಾಂಕ್ಷಿ ಯೋಜನೆಯಾದ ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಜನರಿಗೆ ಅರ್ಪಿಸಲಿದ್ದಾರೆ ಎಂದರು. ಕಾಂಗ್ರೆಸ್ ಅಥವಾ ಬುವಾ ಅಂದರೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯನ್ನು ಬುವಾ  ಎಂದು ಸಂಬೋಧಿಸಿ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು  ಬಬುವಾ ಎಂದು ಸಂಬೋಧಿಸಿದ ಆದಿತ್ಯನಾಥ್‌, ಬುವಾ  ಕಾಶಿ ವಿಶ್ವನಾಥ ಧಾಮವನ್ನು ನಿರ್ಮಿಸಿದ್ದಾರೆಯೇ? ಅಥವಾ ಬಾಬುವಾ ಭಗವಾನ್ ಶಿವನ ಹಾಡುಗಳನ್ನು ಹಾಡಿದ್ದಾರೆಯೇ? ಎಂದು ಪ್ರಶ್ನಿಸಿದರು. ಮಾಜಿ ಸಿಎಂ ಅಖಿಲೇಶ್ ಯಾದವ್, ಅವರು ತಮ್ಮ ಅವಧಿಯಲ್ಲಿ ಈ ಯೋಜನೆಯನ್ನು ಅನುಮೋದಿಸಲಾಗಿದೆ ಮತ್ತು ಅದಕ್ಕೆ ಸಾಕ್ಷ್ಯಗಳಿವೆ ಎಂದು ಹೇಳಿದ ನಂತರ  ಆದಿತ್ಯನಾಥ್‌ ಹೀಗೆ ತಿರುಗೇಟು ನೀಡಿದ್ದಾರೆ.

Kashi Vishwanath Dham ಪ್ರಧಾನಿ ಮೋದಿ ಕನಸಿನ ಯೋಜನೆ ಪೂರ್ಣ, ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಡಿ.13ಕ್ಕೆ ಉದ್ಘಾಟನೆ!

ಕೋವಿಡ್‌ ಸಂದರ್ಭದಲ್ಲಿ  ಜನರಿಗಾಗಿ ಏನು ಮಾಡಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು. COVID-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಬಿಜೆಪಿ ಕೆಲಸ ಮಾಡುತ್ತಿತ್ತು. ಆದರೆ  ಕಾಂಗ್ರೆಸ್(Congress) ಎಲ್ಲಿತ್ತು? ಬಿಎಸ್ಪಿ(BSP) ಎಲ್ಲಿತ್ತು? ಮತ್ತು ಬಾಬುವಾ ಬಗ್ಗೆ ಏನು ಹೇಳಬಹುದು? ಇವರಿಗೆ ಜನರ ಬಗ್ಗೆ ಏನೂ ತಿಳಿದಿಲ್ಲ. ಇವರೆಲ್ಲರೂ ಹೋಮ್ ಕ್ವಾರಂಟೈನ್‌ನಲ್ಲಿದ್ದರು ಮತ್ತು ಅವರವರ ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅವರು ದುಷ್ಪ್ರಚಾರ ಅಂದರೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಮತ್ತು ಸುಳ್ಳು ಪ್ರಚಾರದೊಂದಿಗೆ ಅವರು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು. 

ಪ್ರಧಾನಿ ಮೋದಿಯವರು  ಗಂಗಾ ಎಕ್ಸ್‌ಪ್ರೆಸ್‌ವೇ(Ganga Expressway)ಗೆ ಶಂಕುಸ್ಥಾಪನೆ ಮಾಡಲಿರುವುದನ್ನು ಇಲ್ಲಿ ಉಲ್ಲೇಖಿಸಿದ  ಆದಿತ್ಯನಾಥ್, ಡಿಸೆಂಬರ್ 18 ರಂದು ಪ್ರಧಾನ ಮಂತ್ರಿಗಳು ಗಂಗಾ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಆ ಸಮಯದಲ್ಲಿ, ಕೆಲವರು ಹೇಳುತ್ತಾರೆ ನಾವು ಕೂಡ ಗಂಗಾ ಎಕ್ಸ್‌ಪ್ರೆಸ್‌ ವೇಗೆ ಶಂಕುಸ್ಥಾಪನೆ ಮಾಡುವ ಕನಸು ಕಂಡಿದ್ದೆವು ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

UP Elections: ಕಾಶಿ ವಿಶ್ವನಾಥ ದೇಗುಲದಲ್ಲಿ ಯೋಗಿ ಸರ್ಕಾರದ ಸಚಿವ ಸಂಪುಟ ಸಭೆ!

ರೈತರ ಆದಾಯವನ್ನು ದ್ವಿಗುಣಗೊಳಿಸುವ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಸರ್ಕಾರವು ಕಾರಿಡಾರ್ ಪ್ರಾರಂಭಕ್ಕೆ ನಾಂದಿ ಹಾಡಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಮಾಜವಾದಿ ಪಕ್ಷದ ನಾಯಕರು ಆರೋಪಿಸಿದ್ದಾರೆ. 

ಇತ್ತ ಪ್ರಧಾನಿ ನರೇಂದ್ರ ಮೋದಿ(PM Narendra Modi) ಸ್ವಕ್ಷೇತ್ರ ವಾರಣಾಸಿಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಐತಿಹಾಸಿಕ, ಅತ್ಯಂತ ಪುರಾತನ ಪವಿತ್ರ ಶಿವನ ದೇಗುಲ ಕಾಶಿ ವಿಶ್ವನಾಥ ಮಂದಿರದ(Kashi Vishwanath Temple) ಸಂಕೀರ್ಣದಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮ ಕಾರಿಡಾರ್(Vishwanath Dham project) ಯೋಜನೆಯನ್ನು ಉದ್ಘಾಟಿಸಲಿದ್ದಾರೆ.

ಯೋಜನೆ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ಮೋದಿ ತಮ್ಮ ಸ್ವಕ್ಷೇತ್ರದಲ್ಲಿVaranasi)ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.  ಭಕ್ತರಿಗೆ ಪಾದಾಚಾರಿ ವ್ಯವಸ್ಥೆ, ಹಲವು ಸಭಾಂಗಣ, ಸುಸಜ್ಜಿತ ಕಟ್ಟಡ, ಮೂಲಭೂತ ಸೌಕರ್ಯ, ಆಧ್ಯಾತ್ಮಿಕ ಗ್ರಂಥಾಲಯ, ವರ್ಚುವಲ್ ಗ್ಯಾಲರಿ ಸೇರಿದಂತೆ ಹಲವು ಕಾಮಾಗಾರಿಗಳನ್ನು ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಈ ಯೋಜನೆ ಪೂರ್ಣಗೊಂಡಿದ್ದು, ಪ್ರಧಾನಿ ಮೋದಿ ಉದ್ಘಾಟನೆ 

Follow Us:
Download App:
  • android
  • ios