ಭೋಪಾಲ್‌(ಜೂ.22): ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ತೀವ್ರ ಕಿರುಕುಳ ನೀಡಿದ ಪರಿಣಾಮ ಆರೋಗ್ಯ ಹದಗೆಟ್ಟಿದೆ, ದೃಷ್ಟಿಯೂ ಸರಿಯಾಗಿ ಕಾಣುತ್ತಿಲ್ಲ ಎಂದು ಭೋಪಾಲ್‌ ಬಿಜೆಪಿ ಲೋಕಸಭಾ ಸದಸ್ಯೆ ಪ್ರಜ್ಞಾ ಸಿಂಗ್‌ ಠಾಕೂರ್‌ ಭಾನುವಾರ ಆರೋಪಿಸಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನ ನಿಮಿತ್ತ ರಾಜ್ಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಭಾಗವಹಿಸಿದ್ದ ಪ್ರಜ್ಞಾ ಠಾಕೂರ್‌, ‘2008ರ ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಕಾಂಗ್ರೆಸ್‌ 9 ವರ್ಷಗಳ ಕಾಲ ನೀಡಿದ ಕಿರುಕುಳದಿಂದಾಗಿ ಅಕ್ಷಿಪಟಲದಿಂದ ಮೆದುಳಿನವರೆಗೆ ಊತ ಮತ್ತು ಕೀವು ಕಾಣಿಸಿಕೊಳ್ಳುತ್ತಿದೆ, ಎಡಗಣ್ಣು ದೃಷ್ಟಿಯನ್ನೇ ಕಳೆದುಕೊಂಡಿದೆ ಮತ್ತು ಬಲಗಣ್ಣೂ ಮಬ್ಬಾಗಿ ಕಾಣಿಸುತ್ತಿದೆ’ ಎಂದು ಹೇಳಿದ್ದಾರೆ.

ಪ್ರಜ್ಞಾ ಠಾಕೂರ್‌ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್‌ಗಳು ಭೋಪಾಲ್‌ನಲ್ಲಿ ಕಾಣುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಲಾಕ್‌ಡೌನ್‌ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ, ದೆಹಲಿಯಿಂದ ಭೋಪಾಲ್‌ಗೆ ಬರಲಾಗಲಿಲ್ಲ ಎಂದು ಉತ್ತರಿಸಿದ್ದಾರೆ.