ನವ​ದೆ​ಹ​ಲಿ(ಫೆ.22): ದೇಶಾ​ದ್ಯಂತ ಜನ ಸಾಮಾ​ನ್ಯರ ಸಂಕ​ಷ್ಟಕ್ಕೆ ಕಾರ​ಣ​ವಾ​ಗಿ​ರುವ ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌​ಪಿಜಿ ದರ ಇಳಿ​ಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜ​ಧರ್ಮ ಪಾಲನೆ ಮಾಡ​ಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಒತ್ತಾ​ಯಿ​ಸಿ​ದ್ದಾರೆ.

ತನ್ಮೂ​ಲಕ ಆರ್ಥಿ​ಕ​ತೆಯ ಮಹಾ​ಕು​ಸಿತ, ನಿರು​ದ್ಯೋ​ಗ​ದಿಂದ ತತ್ತ​ರಿ​ಸಿ​ರುವ ಮಧ್ಯ​ಮ​ವರ್ಗ, ಕೂಲಿ ಕಾರ್ಮಿ​ಕರು, ರೈತರು ಮತ್ತು ಬಡ​ವ​ರ ನೆರ​ವಿಗೆ ನಿಲ್ಲ​ಬೇಕು ಎಂದು ಕೇಂದ್ರ ಸರ್ಕಾ​ರಕ್ಕೆ ಪತ್ರ ಮುಖೇನ ಒತ್ತಾ​ಯಿ​ಸಿ​ದ್ದಾರೆ.

'ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಈ ಕ್ಷಣದಿಂದ ಅಧಿಕಾರ'

ಈ ಸಂಬಂಧ ಭಾನು​ವಾರ ಪ್ರಧಾನಿ ನರೇಂದ್ರ ಮೋದಿ ಅವ​ರಿಗೆ 3 ಪುಟ​ಗಳ ಪತ್ರ ಬರೆ​ದಿ​ರುವ ಸೋನಿಯಾ ಅವರು, ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌​ಪಿಜಿ ದರವು ಅನಿ​ಯಂತ್ರಿ​ತ​ವಾಗಿ ಏರಿ​ಕೆ​ಯಾ​ಗು​ತ್ತಿದೆ. ಆದರೆ ದೇಶದ ಜಿಡಿಪಿ ಮಾತ್ರ ಪಾತಾ​ಳಕ್ಕೆ ಕುಸಿ​ಯು​ತ್ತಿದೆ ಎಂಬುದು ಮಾತ್ರವೇ ವಾಸ್ತವ. ದರ ಏರಿ​ಕೆಯ ಹೊಡೆ​ತ​ದಿಂದ ದೇಶದ ಜನತೆ ಅತೀವ ಸಂಕಷ್ಟಮತ್ತು ಕಳ​ವ​ಳಕ್ಕೆ ಸಿಲು​ಕಿ​ದ್ದಾರೆ.

ಒಂದೆಡೆ ಉದ್ಯೋ​ಗ​ಗಳು, ವೇತನ ಕಡಿತ ಮತ್ತು ಕುಟುಂಬದ ಆದಾ​ಯವು ವ್ಯವ​ಸ್ಥಿ​ತ​ವಾಗಿ ಕುಸಿ​ಯು​ತ್ತಿವೆ. ಮಧ್ಯಮ ವರ್ಗ ಮತ್ತು ಹಿಂದು​ಳಿದ ವರ್ಗ​ಗ​ಳ ಜೀವ​ನ ನಿರ್ವ​ಹ​ಣೆ​ಯೂ ದುಸ್ತ​ರ​ವಾ​ಗಿ​ದೆ. ಇಂಥ ಸಂದ​ರ್ಭ​ದಲ್ಲಿ ಜನ​ರಿಗೆ ನೆರ​ವಾ​ಗ​ಬೇ​ಕಿದ್ದ ಸರ್ಕಾರ ತನ್ನ ಲಾಭ​ಕ್ಕಾಗಿ ಜನರ ಮೇಲೆ ಮತ್ತಷ್ಟುಹೊರೆ​ ಹಾಕು​ತ್ತಿ​ರು​ವುದು ಮಾತ್ರ ಬೇಸ​ರದ ಸಂಗತಿ ಎಂದು ಉಲ್ಲೇಖಿ​ಸಿ​ದ್ದಾರೆ.

ರಾಷ್ಟ್ರೀಯತೆಯ ಸರ್ಟಿಫಿಕೇಟ್ ಹಂಚುವವರ ಮುಖವಾಡ ಕಳಚಿದೆ: ಸೋನಿಯಾ ಕಿಡಿ!

ದೇಶಾ​ದ್ಯಂತ ಪೆಟ್ರೋಲ್‌ ದರ 100ರ ಗಡಿ ವ್ಯಾಪ್ತಿಗೆ ತಲು​ಪಿರುವ ಬೆನ್ನಲ್ಲೇ, ಸೋನಿಯಾ ಅವರ ಈ ಪತ್ರವು ಮಹತ್ವ ಪಡೆ​ದಿದೆ.