ನನ್ನ ತಂದೆಯನ್ನ ಜೈಲಿನೊಳಗೆ ಹಾಕಿ- ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ 5ರ ಪೋರ

ಐದು ವರ್ಷದ ಬಾಲಕ ಪೊಲೀಸ್ ಠಾಣೆಗೆ ಬಂದು ತಂದೆಯನ್ನು ಜೈಲಿಗೆ ಹಾಕುವಂತೆ ಹೇಳಿದ್ದಾನೆ. ಪೊಲೀಸರ ಮುಂದೆ ಬಾಲಕ ಮಾತನಾಡಿದ ವಿಡಿಯೋ ವೈರಲ್ ಆಗಿದೆ.

Five Year Old boy complaint against father in police  station Madhya Pradesh  mrq

ಭೋಪಾಲ್: ನನ್ನ ತಂದೆಯನ್ನ ಜೈಲಿಗೆ ಹಾಕಿ ಎಂದು ಐದು ವರ್ಷದ ಬಾಲಕನೋರ್ವ ಪೊಲೀಸ್ ಠಾಣೆಗೆ ಬಂದು ಅಪ್ಪನ ವಿರುದ್ಧ ದೂರು ಸಲ್ಲಿಸಿದ್ದಾನೆ. 80-90ರ ದಶಕದಲ್ಲಿ ಜನರು ಪೊಲೀಸ್ ಠಾಣೆ ಅಂದ್ರೆ ಹೆದರುತ್ತಿದ್ದರು. ಪೊಲೀಸ್ ಠಾಣೆಗೆ ಹೋಗುವುದು ಅಗೌರವ ಎಂದು ಭಾವಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು, ನಾನಾ ಕಾರಣಗಳಿಗೆ ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ. ಇಂದು ಚಿಕ್ಕ ಮಕ್ಕಳು ತಮ್ಮ ತಂದೆ-ತಾಯಿಯ ವಿರುದ್ದವೇ ದೂರು ಸಲ್ಲಿಸುವ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಬೆಂಗಳೂರಿನಲ್ಲಿ ಮಗುವೊಂದು ತಾಯಿ ಹೊಡೆಯುತ್ತಾಳೆ ಎಂದು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿತ್ತು. ಕೆಲ ಮಕ್ಕಳು ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಕೊಡ್ತಿಲ್ಲ ಎಂದು ಫೋನ್ ಮಾಡಿ ಆಟದ ಮೈದಾನಕ್ಕೆ ಪೊಲೀಸರನ್ನು ಕರೆಸಿಕೊಂಡಿದ್ದ ವಿಡಿಯೋಗಳು ವೈರಲ್ ಆಗಿದ್ದವು. 

ಇದೀಗ ಇಂತಹುವುದೇ ಒಂದು ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಠಾಣೆಗೆ ಅಳುತ್ತಾ ಬಂದ ಬಾಲಕ ಕೊಂಚವೂ ಹೆದರದೇ ಪೊಲೀಸರ ಮುಂದೆ ಕುಳಿತು ದೂರು ಸಲ್ಲಿಸಿದ್ದಾನೆ. ಈ ಎಲ್ಲಾ ಘಟನೆಯನ್ನು ಠಾಣೆಯಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ದೂರು ಸಲ್ಲಿಸಿದ ಬಳಿಕ ಬಾಲಕ ಖುಷಿಯಿಂದ ಅಲ್ಲಿಂದ ಹಿಂದಿರುಗಿ ಹೋಗಿದ್ದಾನೆ.

ಪಾರ್ಕ್‌ನ ಪೊದೆಯಲ್ಲಿ ತಗ್ಲಾಕೊಂಡ ಜೋಡಿ... ಇಬ್ಬರ ಕುಚ್‌ ಕುಚ್ ವಿಡಿಯೋ ವೈರಲ್ 

ಈ ಘಟನೆ ಮಧ್ಯ ಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಠಾಣೆಯಲ್ಲಿದ್ದ ಅಧಿಕಾರಿ ಬಾಲಕನ ಮಾತುಗಳನ್ನು  ತಾಳ್ಮೆಯಿಂದ ಕೇಳಿ ಆತನನ್ನು ಸಮಾಧಾನಗೊಳಿಸಿ ಅಲ್ಲಿಂದ ಕಳುಹಿಸಿದ್ದಾರೆ. ನನ್ನ ಹೆಸರು ಹಸನೈನ್, ತಂದೆ ಇಕ್ಬಾಲ್. ಅಪ್ಪ ನದಿಗೆ ಬಳಿ ಹೋಗಲು ಬಿಡಲ್ಲ. ರಸ್ತೆ ಹತ್ರ ಹೋಗಲು ಸಹ ಬಿಡಲ್ಲ. ಹಾಗಾಗಿ ತಂದೆ ವಿರುದ್ಧ ತನಿಖೆ ನಡೆಸಿ. ಅವರನ್ನು ಜೈಲಿನೊಳಗೆ ಹಾಕಬೇಕು ಎಂದು ಹೇಳಿದ್ದಾನೆ. ಬಾಲಕನ ಮಾತು ಕೇಳುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿ ನಕ್ಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಈ ವಿಡಿಯೋ ನೋಡಿದ ನೆಟ್ಟಿಗರು, ಪೊಲೀಸರು ಬಾಲಕನ ಪೋಷಕರನ್ನು ಭೇಟಿಯಾಗಿದ್ದಾರೆ ಎಂದು ಭಾವಿಸುತ್ತೇನೆ. ನಾವು ಚಿಕ್ಕವರಿದ್ದಾಗ ಪೊಲೀಸರನ್ನ ಕಂಡರೆ ನಮಗೆ ಭಯ ಆಗುತ್ತಿತ್ತು. ಈಗಿನ ಮಕ್ಕಳನ್ನು ನೋಡಿದ್ರೆ ನಮಗೆ ಆಶ್ಚರ್ಯವಾಗುತ್ತದೆ. ಮಕ್ಕಳ ಧೈರ್ಯವನ್ನು ಮೆಚ್ಚಬೇಕು. ಆ ಮಗುವಿನ ತೊದಲು ಮಾತುಗಳು ಕೇಳಲ ಚೆಂದ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಜಸ್ಟ್ 11 ಸೆಕೆಂಡ್‌ನಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಯ್ತು 3 ಕೋಟಿಯ ಮನೆ

Latest Videos
Follow Us:
Download App:
  • android
  • ios