Asianet Suvarna News Asianet Suvarna News

ಜಸ್ಟ್ 11 ಸೆಕೆಂಡ್‌ನಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಯ್ತು 3 ಕೋಟಿಯ ಮನೆ

ಇರುವಷ್ಟು ದಿನ ತನ್ನ ವಾಸಿಗಳಿಗೆ ಪ್ರಕೃತಿ ಅದ್ಭುತವನ್ನು ನೀಡಿತ್ತು. ಆದ್ರೆ ಈಗ ಈ ಸುಂದರ ಮನೆ, ಸಮುದ್ರ ಅಲೆಗಳಿಗೆ ಕೊಚ್ಚಿ ಹೋಗಿದೆ. ಧರಾಶಾಹಿ ಆದ ಮನೆ ವಿಡಿಯೀ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Watch Video North Carolina home collapse into sea mrq
Author
First Published Aug 20, 2024, 4:23 PM IST | Last Updated Aug 20, 2024, 4:23 PM IST

ನಾರ್ಥ್ ಕ್ಯಾರೋಲಿನ್: ಸಮುದ್ರ ಕಿನಾರೆಯಲ್ಲಿ ಮನೆ ಇರಬೇಕು. ಬೆಳಗ್ಗೆ ಎದ್ದ ಕೂಡಲೇ ಸುಂದರವಾದ ವ್ಯೂವ್ ನೋಡಬೇಕು ಎಂದು ಎಲ್ಲರ ಬಯಸುತ್ತಾರೆ. ಈ ಕನಸು ನನಸು ಮಾಡಿಕೊಳ್ಳಲು ಜನರು ಪ್ರವಾಸಕ್ಕೆ ಹೋಗುತ್ತಾರೆ. ಶ್ರೀಮಂತರು ಎಷ್ಟೇ ಹಣ ಖರ್ಚು ಆದರೂ ಸಮುದ್ರ ಕಿನಾರೆಯಲ್ಲಿ ಸ್ಥಳ ಖರೀದಿಸಿ ಕನಸಿನ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ. ಹಣ ಇರದವರೂ ಸಮುದ್ರ ದಂಡೆಯಲ್ಲಿರುವ ಹೋಟೆಲ್, ರೆಸಾರ್ಟ್‌ಗಳಿಗೆ ಭೇಟಿ ನೀಡಿ ರಜಾದಿನಗಳನ್ನು ಕಳೆಯುತ್ತಾರೆ. ಕೆಲವೊಮ್ಮೆ ಸಮುದ್ರ ಪ್ರಕ್ಷುಬ್ದಗೊಂಡಾಗ ಕಿನಾರೆಯಲ್ಲಿರುವ ಮನೆಗಳು ಅಲೆಗಳಲ್ಲಿ ಕೊಚ್ಚಿಕೊಂಡು ಹೋಗುತ್ತವೆ. ಕಡಲ್ಕೊರತೆ ಉಂಟಾಗಿ ಮನೆಗಳು, ತೋಟಗಳು ಕೊಚ್ಚಿ ಹೋಗಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. 

ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸುಂದರವಾದ ಮನೆಯೊಂದು ಸಮುದ್ರ ಅಲೆಗಳ ಹೊಡೆತಕ್ಕೆ ಸಿಲುಕಿ ಧರಾಶಾಹಿ ಆಗಿದೆ. ಆಗಸ್ಟ್  16ರಂದು ಅಮೆರಿಕದ ನಾರ್ಥ್ ಕ್ಯಾರೋಲಿನ್ ನಲ್ಲಿ ಅರ್ನೆಸ್ಟೋ ಚಂಡಮಾರುತಕ್ಕೆ ಮೂರು ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಮನೆ ನಾಶವಾಗಿದೆ. ಮನೆ ಬೀಳುವ 11 ಸೆಕೆಂಡ್ ಅವಧಿ ಯ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

1973ರಲ್ಲಿ ರೊಡಾಂಟೆಯ 23214 ಕಾರ್ಬಿನಾ ಡ್ರೈವ್‌ನಲ್ಲಿ ಈ ಸುಂದರ ಮನೆಯನ್ನು ನಿರ್ಮಿಸಲಾಗಿತ್ತು. ಭಾರೀ ಅಲೆಗಳಿಗೆ ಸಿಲುಕಿದ ವಿಂಟೇಜ್ ಲುಕ್  ಮನೆ ಕ್ಷಣಾರ್ಧದಲ್ಲಿ ಕೊಚ್ಚಿ ಹೋಗಿದ್ದು, ಅಲೆಗಳಲ್ಲಿ ಮನೆ ತೇಲುವಂತೆ ಕಂಡು ಬಂದಿದೆ. ಅಲೆಗಳ ಜೊತೆಯಲ್ಲಿ ಮನೆಯ ಕೆಲ ಭಾಗಗಳು ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ @CollinRugg ಎಂಬ ಖಾತೆಯಲ್ಲಿ ವಿಡಿಯೋ ಶೇರ್ ಮಾಡಲಾಗಿದೆ.

ಹೆದ್ದಾರಿ ಪಕ್ಕದಲ್ಲಿಯೇ ಕಾರ್ ನಿಲ್ಲಿಸಿ ಇಬ್ಬರು ಯುವತಿಯರ ಜೊತೆ ಯುವಕನ ರೊಮ್ಯಾನ್ಸ್; ಓಯೋ ರೂಮ್‌ಗೆ ಹೋಗಿ ಎಂದ ಜನರು

ನಾರ್ಥ್ ಕ್ಯಾರೋಲಿನ್ ಔಟರ್ ಬಾಕ್ಸ್ ಬಳಿಯ ಅಂಟ್ಲಾಟಿಕ್ ಸಮುದ್ರ ಕಿನಾರೆಯಲ್ಲಿ ಈ ಮನೆ ನಿರ್ಮಾಣ ಮಾಡಲಾಗಿತ್ತು. ಅಟ್ಲಾಂಟಿಕ್ ಸಮುದ್ರ ತೀರಕ್ಕೆ ಅರ್ನೆಸ್ಟೊ ಚಂಡಮಾರುತ ಅಪ್ಪಳಿಸಿತ್ತು. 1973ರಲ್ಲಿ ನಿರ್ಮಾಣವಾಗಿದ್ದ ಮನೆಯನ್ನು 2018ರಲ್ಲಿ ಓರ್ವ ವ್ಯಕ್ತಿ  $339,000 (ಸುಮಾರು ರೂ 3 ಕೋಟಿ) ನೀಡಿ ಖರೀದಿಸಿದ್ದರು. ಇದು ನಾಲ್ಕು ಕೋಣೆ  ಹಾಗೂ ಎರಡು ಬಾತ್‌ರೂಮ್ ಹೊಂದಿತ್ತು. ಕಟ್ಟಡ ಅಪಾಯದ ಸ್ಥಿತಿಯಲ್ಲಿದ್ದ ಕಾರಣ ಮನೆಯಲ್ಲಿ ಯಾರೂ ಇರಲಿಲ್ಲ.

ಈ ವಿಡಿಯೋ 14 ಲಕ್ಷಕ್ಕೂ ಅಧಿಕ ವ್ಯೂವ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ಬಳಕೆದಾರರು ಸಮುದ್ರದ ಕಿನಾರೆಯಲ್ಲಿ ಅದು ಇಷ್ಟು ಹತ್ತಿರದಲ್ಲಿ ಮನೆ ನಿರ್ಮಾಣ ಮಾಡಿರೋದು ಮೂರ್ಖತನ. ಹಾಗಾಗಿ ಆ ಮನೆ ಬಿದ್ದಿದೆ ಎಂದಿದ್ದಾರೆ. ಮತ್ತೋರ್ವ ಬಳಕೆದಾರ 1973ರಲ್ಲಿ ನಿರ್ಮಾಣವಾದ ಮನೆಯ ಇನ್ನೆಷ್ಟು ದಿನ ಬರಬೇಕು? ಈ ಮನೆ ಎಷ್ಟು ಅಲೆಗಳ ಹೊಡೆತವನ್ನು ಎದುರಿಸಿರಬೇಕು. ಅದನ್ನು ಊಹಿಸಲು ಸಾಧ್ಯವಿಲ್ಲ. ಎಲ್ಲದಕ್ಕೂ ಒಂದು ಅಂತ್ಯ ಬೇಕಲ್ಲವೇ ಎಂದಿದ್ದಾರೆ. ಈ ಮನೆಯಲ್ಲಿದ್ದವರು ಇರುವಷ್ಟು ದಿನ ಪ್ರಕೃತಿಯನ್ನು ಹತ್ತಿರದಿಂದ ನೋಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಬಹುತೇಕರು ಮನೆ ಧರಾಶಾಹಿ ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಪಾರ್ಕ್‌ನ ಪೊದೆಯಲ್ಲಿ ತಗ್ಲಾಕೊಂಡ ಜೋಡಿ... ಇಬ್ಬರ ಕುಚ್‌ ಕುಚ್ ವಿಡಿಯೋ ವೈರಲ್ 

Latest Videos
Follow Us:
Download App:
  • android
  • ios