Marriage Age Law : ಮಧ್ಯಪ್ರದೇಶದಲ್ಲಿ ಮುಸ್ಲಿಂ ಮದುವೆ ಪ್ರಮಾಣ ಶೇ. 700ರಷ್ಟು ಏರಿಕೆ!
ಒಂದೇ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ಮುಸ್ಲಿಂ ಮದುವೆಗಳ ಸಂಖ್ಯೆಯಲ್ಲಿ ಏರಿಕೆ
ರೈಸನ್ ನಗರವೊಂದರಲ್ಲೇ ಮದುವೆಗಳ ಸಂಖ್ಯೆಯುಲ್ಲಿ ಶೇ. 700ರಷ್ಟು ಹೆಚ್ಚಳ
ಮದುವೆ ವಯಸ್ಸಿನ ಮಿತಿ ಏರಿಕೆ ಕಾನೂನು ಬರುವ ನಿಟ್ಟಿನಲ್ಲಿ ನಿಕಾಹ್ ಸಂಖ್ಯೆಯಲ್ಲಿ ಏರಿಕೆ
ಭೋಪಾಲ್ (ಜ. 22): ಮಹಿಳೆಯರ ಮದುವೆಯ (Wedding) ವಯಸ್ಸಿನ ಮಿತಿಯನ್ನು 18 ರಿಂದ 21ಕ್ಕೆ ಏರಿಸುವ ಕೇಂದ್ರ ಸರ್ಕಾರದ (Central Government) ನಿರ್ಧಾರದ ಘೋಷಣೆಯ ಬೆನ್ನಲ್ಲಿಯೇ ದೇಶದಲ್ಲಿ ಮದುವೆಗಳ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಏರಿಕೆ ಕಾಣಲಾಗುತ್ತಿದೆ. ಅದರಲ್ಲೂ ಮಧ್ಯಪ್ರದೇಶದಲ್ಲಿ(Madhya Pradesh) ಕಳೆದ ಒಂದು ತಿಂಗಳಲ್ಲಿ ಇದರ ಪ್ರಮಾಣ ಶೇ. 700ರಷ್ಟು ಏರಿಕೆಯಾಗಿದೆ ಎನ್ನುವುದನ್ನು ಅಂಕಿ-ಅಂಶಗಳು ತೋರಿಸಿವೆ. ಮಧ್ಯಪ್ರದೇಶದ ಪ್ರಮುಖ ಜಿಲ್ಲೆಗಳಾದ ಭೋಪಾಲ್ (Bhopal) ಹಾಗೂ ಗ್ವಾಲಿಯರ್ ಗಳಲ್ಲಿ (Gwalior ) ಇದರ ಪ್ರಮಾಣ ಶೇ.42 ರಿಂದ ಶೇ.700ಕ್ಕೂ ಅಧಿಕ ಮಟ್ಟದಲ್ಲಿ ಏರಿಕೆಯಾಗಿದೆ. ಅಕ್ಟೋಬರ್ ಹಾಗೂ ಡಿಸೆಂಬರ್ ನಡುವೆ ಮಸೀದಿಗಳಲ್ಲಿ ಆದ ಮದುವೆಯ ಪ್ರಮಾಣವನ್ನು ಲೆಕ್ಕ ಹಾಕಲಾಗಿದ್ದು ನಿರೀಕ್ಷೆಗೂ ಮೀರಿ ಇದರಲ್ಲಿ ಏರಿಕೆಯಾಗಿದೆ. ಅದರಲ್ಲೂ ರೈಸನ್ ನಗರವೊಂದರಲ್ಲೇ ಇದರ ಪ್ರಮಾಣ ಶೇ. 700ರ ಗಡಿ ದಾಟಿದೆ.
ಡಿಸೆಂಬರ್ ತಿಂಗಳಿನ ಕೊನೆಯ ವಾರ ಮದುವೆಗಾಗಿ ನಾವು ಅಂದಾಜು 1 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಅದರಲ್ಲೂ ಬಹುತೇಕ ಅರ್ಜಿದಾರರು ಮುಂದಿನ ಕೆಲವೇ ದಿನಗಳಲ್ಲಿ ಮದುವೆ ಮುಗಿಸಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಭೋಪಾಲ್ ನಗರವೊಂದರಲ್ಲಿಯೇ 950 ನಿಕಾಹ್ ಗಳನ್ನು ಮಾಡಲಾಗಿದೆ. ಇದು ಈ ಹಿಂದೆ ಆಗುತ್ತಿದ್ದ ಮದುವೆಗಳ ಸರಾಸರಿಗಿಂತ ದೊಡ್ಡ ಮಟ್ಟದ ಏರಿಕೆ ಎಂದು ಭೋಪಾಲ್ ಮಸೀದಿ ಸಮಿತಿಯ ಕಾರ್ಯದರ್ಶಿ ಯಾಸಿರ್ ಅರಾಫತ್ (Bhopal's Masajid Committee secretary Yasir Arafat)ಹೇಳಿದ್ದಾರೆ.
ವಿಪಕ್ಷಗಳ ಸಾಕಷ್ಟು ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಹುಡುಗಿಯರ ವಿವಾಹದ ವಯಸ್ಸಿನ ಮಿತಿಯನ್ನು 18 ರಿಂದ 21 ವರ್ಷಕ್ಕೆ ಏರಿಸುವ ಘೋಷಣೆ ಮಾಡಿದ್ದು, ಇದರ ತಿದ್ದುಪಡಿ ಮಾಡುವ ಹೋರಾಟದಲ್ಲಿದೆ. ಅದಲ್ಲದೆ, ಕೋವಿಡ್ ನಿಯಮಾವಳಿಗಳಲ್ಲಿ ಇನ್ನಷ್ಟು ಕಠಿಣ ನಿರ್ಬಂಧ ಜಾರಿಯಾಗುವ ಸಂಭವ ಇರುವ ಕಾರಣ ವಿವಾಹದ ಸಂಖ್ಯೆಯುಲ್ಲಿ ಗಣನೀಯ ಏರಿಕೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Marriage Age: ಹರ್ಯಾಣ, ಪಂಜಾಬ್, ರಾಜಸ್ಥಾನದಲ್ಲಿ ಮದುವೆ ತರಾತುರಿ!
ಮಹವಿಯಾದ ಜಿನ್ಸಿಯ ನಿವಾಸಿಯಾಗಿರುವ ರಿಯಾಜ್ ಖುರೇಷಿ, ಕೆಲ ವರ್ಷಗಳ ನಂತರ ಮದುವೆಯಾಗಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ, ಕೇಂದ್ರ ಸರ್ಕಾರ ವಿವಾಹದ ವಯಸ್ಸಿನ ಮಿತಿಯನ್ನು ಏರಿಸುವ ಘೋಷಣೆ ಮಾಡಿರುವ ಕಾರಣ ಎರಡೂ ಕುಟುಂಬಸ್ಥರು ಸೇರಿ ಕಳೆದ ತಿಂಗಳಿನಲ್ಲಿಯೇ ಮದುವೆ ಮಾಡಿ ಮುಗಿಸಿದ್ದಾರೆ ಎಂದು ಹೇಳಿದರು.
ಭೋಪಾಲ್ ನ ಕಾಜಿ ಕ್ಯಾಂಪ್ ನವರಾದ ಜಾವೇದ್ ಎನ್ನುವ ವ್ಯಕ್ತಿ ತಮ್ಮ ಮಗಳಿಗೆ ರೈಸನ್ ನಗರದ ಹುಡುಗನೊಂದಿಗೆ ನಿಶ್ಚಯ ಮಾಡಿದ್ದರು. ಈ ವರ್ಷದ ಮೇ ತಿಂಗಳಿನಲ್ಲಿ ವಿವಾಹವಾಗಬೇಕಿತ್ತು. ಆದರೆ, ಸರ್ಕಾರದ ಹೊಸ ನಿಯಮದ ಘೋಷಣೆ ಆಗಲಿರುವ ಕಾರಣ ಕಳೆದ ತಿಂಗಳೇ ಮದುವೆ ಮಾಡಿ ಮುಗಿಸಿದ್ದೇನೆ ಎನ್ನುತ್ತಾರೆ. ತನ್ನ ಮಗಳಿಗೆ ಕೇವಲಸ 19 ವರ್ಷ ಎಂದಿರುವ ಜಾವೇದ್, ಒಂದು ವರ್ಷದ ಹಿಂದೆಯಷ್ಟೇ ಮದುವೆ ನಿಶ್ಚಯವಾಗಿತ್ತು ಎಂದಿದ್ದಾರೆ. ಹಾಗೇನಾದರೂ ಮಯಸ್ಸಿನ ಮಿತಿ ಏರಿಕೆ ಜಾರಿಗೆ ಬಂದಲ್ಲಿ ಮಗಳ ಮದುವೆ ಮಾಡಲು ಇನ್ನೂ ಎರಡು ವರ್ಷ ನಾನು ಕಾಯಬೇಕು. ಆ ಕಾರಣಕ್ಕಾಗಿ ಬೇಗನೆ ಮದುವೆ ಮಾಡಿದ್ದೇನೆ. ಭೋಪಾಲ್ ನ ತೈಜುಲ್ ಮಸೀದಿಯಲ್ಲಿ ನಿಕಾಹ್ ನಡೆದಿದೆ ಎಂದು ತಿಳಿಸಿದ್ದಾರೆ.
ವಯೋಮಿತಿ ಏರಿಕೆ ಭೀತಿ: ತುರ್ತು ಮದುವೆಗೆ ಮುಗಿಬಿದ್ದ ಮುಸ್ಲಿಮರು!
ಈ ಕುರಿತಾಗಿ ಮಾತನಾಡಿರುವ ಸೂಫಿ ಇಸ್ಲಾಮಿಕ್ ಬೋರ್ಡ್ ನ ರಾಷ್ಟ್ರೀಯ ಉಪಾಧ್ಯಕ್ಷ ಹಫೀಜ್ ಮೊಹಮದ್ ದಾನಿಶ್ (National Vice President of Sufi Islamic Board Hafiz Mohammad Danish), "ನರೇಂದ್ರ ಮೋದಿ ಅವರು ಮಾಡಲಿರುವ ಹೊಸ ನಿರ್ಧಾರದ ಕಾರಣದಿಂದಾಗಿ ಕಳೆದೊಂದು ತಿಂಗಳಲ್ಲಿ ಸಾಕಷ್ಟು ಮದುವೆಗಳು ಆಗುತ್ತಿವೆ. ಲಾಕ್ ಡೌನ್ ಕೂಡ ಇನ್ನೊಂದು ಕಾರಣ. ಇನ್ನೊಂದೆಡೆ ಭೋಪಾಲ್ ನಲ್ಲಿ ಸಾಮಾನ್ಯವಾಗಿ ನಿಕಾಹ್ ಮೊದಲಿಗೆ ಆಗಲಿದ್ದು, ಬಿದಾಯಿ ನಂತರ ಆಗಲಿದೆ. ಇದು ಇಲ್ಲಿನ ಸಂಪ್ರದಾಯ' ಎಂದು ಹೇಳಿದ್ದಾರೆ.