ಭಾರಿ ಮಳೆಯಿದಂ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುರಂತಗಳು ಸಂಭವಿಸಿದೆ. ಇದರ ನಡುವೆ ಭಾರಿ ಮಳೆಯಿಂದ ಜಲಾಶಗಳು ಭರ್ತಿಯಾಗಿರುವುದು ರೈತರ ಸಂತಸಕ್ಕೆ ಕಾರಣಾಗಿದೆ. ಹೀಗೆ ಜಲಾವೃತಗೊಂಡಿರುವ ಪ್ರದೇಶದಲ್ಲಿ ಅಪ್ಪ ಹಾಗೂ ಮಗ ನೀರಿನಲ್ಲಿ ನಿಂತು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. 

ಕಚ್(ಜು.26) ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಬಹುತೇಕ ಭಾಗದಲ್ಲಿ ಗುಡ್ಡ ಕುಸಿತ ಸೇರಿದಂತೆ ಹಲವು ಅನಾಹುತಗಳು ಸಂಭವಿಸಿದೆ. ಇನ್ನು ಜಲಾಶಗಳು ಭರ್ತಿಗೊಂಡಿದೆ. ಹಲವರ ಜಮೀನು ಜಲಾವೃತಗೊಂಡಿದೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಳೆಕೊರತೆಯಿಂದ ಸೊರಗಿದ್ದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಇಲ್ಲೊಬ್ಬ ರೈತ ಹಾಗೂ ಆತನ ಮಗ ಮಳೆಯಿಂದ ಫುಲ್ ಖುಷಿಯಾಗಿದ್ದಾರೆ. ಕಾರಣ ನೀರಿಲ್ಲದೆ ಒಣಗಿದ್ದ ಪ್ರದೇಶ ಇದೀಗ ಜಲಾವೃತಗೊಂಡಿದೆ. ಇದೇ ನೀರಿನಲ್ಲಿ ನಿಂತು ಕೊಂಡು ಅಪ್ಪ ಮಗ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಈ ಘಟನೆ ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ನಡೆದಿದೆ.

ಧೋತಿ, ಬಿಳಿ ಉಡುಪು ಧರಿಸಿರುವ ರೈತ ಹಾಗೂ ಆತನ ಮಗ ಕಪ್ಪು ಟಿ ಶರ್ಟ್ ಹಾಗೂ ಪ್ಯಾಂಟ್ ಧರಿಸಿ ಜಲಾವೃತ ನೀರಿನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಗುಜರಾತಿ ಹಾಡಿಗೆ ಈ ಜೋಡಿಯ ಅದ್ಭುತ ಡ್ಯಾನ್ಸ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಮಳೆಯಲ್ಲಿ ರೈನ್ ಡ್ಯಾನ್ಸ್, ಯುವತಿಯರ ವಯ್ಯಾರದ ಡ್ಯಾನ್ಸ್ ಭಾರಿ ವೈರಲ್ ಆಗುವುದು ಸಾಮಾನ್ಯ. ಆದರೆ ಈ ಡ್ಯಾನ್ಸ್ ವಿಡಿಯೋ ನೋಡಿದ ನೆಟ್ಟಿಗರು ಫುಲ್ ಮಾರ್ಕ್ಸ್ ನೀಡಿದ್ದಾರೆ.

ರೈನ್ ಡ್ಯಾನ್ಸ್ ರೀಲ್ಸ್ ಮಾಡುತ್ತಿದ್ದ ವೇಳೆ ಬಡಿದ ಸಿಡಿಲು, ಕೊದಲೆಳೆ ಅಂತರದಲ್ಲಿ ಯವತಿ ಪಾರು!

ಕಚ್ ಜಿಲ್ಲೆಯ ಕೆಲ ಭಾಗದಲ್ಲಿ ಸಮಪರ್ಕದ ಮಳೆ ಕೊರತೆಯಿಂದ ಪ್ರತಿ ವರ್ಷ ರೈತರು ಸಮಸ್ಯೆ ಅನುಭವಿಸುತ್ತಿದ್ದರು. ಈ ಪ್ರದೇಶದಲ್ಲಿನ ಸಣ್ಣ ಡ್ಯಾಮ್ ಭರ್ತಿಯಾಗದೆ ಜನರು ಹೈರಾಣಾಗುತ್ತಿದ್ದರು. ಆಧರೆ ಈ ಬಾರಿ ಡ್ಯಾಮ್ ಭರ್ತಿಯಾಗಿದೆ. ಜಮೀನುಗಳಿಗೆ ನೀರು ನುಗ್ಗಿದೆ. ಅವಾಂತರಗಳು ಸೃಷ್ಟಿಯಾಗಿದೆ. ಆದರೆ ಭಾರಿ ಮಳೆ ಬಳಿಕ ನಾಟಿ ಮಾಡುವ ರೈತರು ಸಂಪೂರ್ಣ ಖುಷಿಯಾಗಿದ್ದಾರೆ. ಈ ಬಾರಿ ಎಪ್ರಿಲ್, ಮೇ ತಿಂಗಳಲ್ಲೂ ನೀರಿನ ಕೊರತೆಯಾಗುವುದಿಲ್ಲ ಎಂದು ರೈತರು ಸಂತಸ ಪಡುತ್ತಿದ್ದಾರೆ. 

Scroll to load tweet…

ಕಚ್ ಜಿಲ್ಲೆಯ ರೈತ ಹಾಗೂ ಆತನ ಮಗ ಈ ಜಲಾವೃತಗೊಂಡಿರುವ ಪ್ರದೇಶದಲ್ಲಿ ಗುಜರಾತಿ ಸಾಂಪ್ರಾದಾಯಿಕ ಡ್ಯಾನ್ಸ್ ಮಾಡಿ ಗಮನಸೆಳೆದಿದ್ದಾರೆ. ಈ ವಿಡಿಯೋ ಭರ್ಜರಿ ಕಮೆಂಟ್ಸ್ ವ್ಯಕ್ತವಾಗಿದೆ. ಈ ಬಾರಿ ಭಾರಿ ಮಳೆಯಾಗಿದೆ. ಬೇಸಿಗೆ ಕಾಲದಲ್ಲಿನ ಬೆಳೆಗಳಿಗೆ ನೀರಿನ ಕೊರತೆಯಾಗುವುದಿಲ್ಲ. ಭಾರತದಲ್ಲಿ ಬಹುತೇಕ ರೈತರು ಮಳೆಗಾಲವನ್ನೇ ನೆಚ್ಚಿಕೊಂಡಿದ್ದಾರೆ. ಕೆಲವೆಡೆ ಸಮಸ್ಯೆಗಳು ಎದುರಾಗಿದೆ. ಆದರೆ ನೀರು ನೋಡಿ ರೈತರ ಮೊಗದಲ್ಲಿ ಸಂತಸ ಡಬಲ್ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಳೆಯಲ್ಲಿ ಸೊಂಟ ಬಳುಕಿಸಿದ ಶಮಾ ಸಿಕಿಂದರ್, ಹಾಟ್ ವಿಡಿಯೋ ಹರಿಬಿಟ್ಟ ನಟಿ!

ಗುಜರಾತ್‌ನ ಹಲವು ಪ್ರದೇಶದಲ್ಲಿ ಭಾರಿ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿದೆ. ಈವರೆಗೆ 9 ಮಂದಿ ಮಳೆಗೆ ಬಲಿಯಾಗಿದ್ದಾರೆ. ದ್ವಾರಕದಲ್ಲಿ ಮೂವರು ಬಲಿಯಾಗಿದ್ದಾರೆ.