Asianet Suvarna News Asianet Suvarna News

ರೈನ್ ಡ್ಯಾನ್ಸ್ ರೀಲ್ಸ್ ಮಾಡುತ್ತಿದ್ದ ವೇಳೆ ಬಡಿದ ಸಿಡಿಲು, ಕೊದಲೆಳೆ ಅಂತರದಲ್ಲಿ ಯವತಿ ಪಾರು!

ಎಲ್ಲೆಡೆ ಭಾರಿ ಮಳೆ ಸುರಿಯುತ್ತಿದೆ. ಇದರ ನಡುವೆ ರೈನ್ ಡಾನ್ಸ್ ರೀಲ್ಸ್ ಮಾಡಲು ಹೊರಟ ಯುವತಿ ಕೂದಲೆಳೆ ಅಂತರದಲ್ಲಿ ಬದುಕುಳಿದ ಘಟನೆ ನಡೆದಿದೆ. ಭೀಕರ ಸಿಡಿಲು ಬಡಿಯುವ ದೃಶ್ಯ ಸೆರೆಯಾಗಿದೆ.
 

Bihar girl narrow escape from lightning strikes while making Romantic rain dance reels ckm
Author
First Published Jun 27, 2024, 2:58 PM IST

ಪಾಟ್ನಾ(ಜು.27) ರೀಲ್ಸ್ ಭರದಲ್ಲಿ ಜೀವ ಕಳೆದುಕೊಂಡು ಹಲವು ಉದಾಹರಣೆಗಳಿವೆ. ಇದೀಗ ಹುಡುಗಿಯೊಬ್ಬಳು ಮಳೆಯಲ್ಲಿ ರೋಮ್ಯಾಂಟಿಕ್ ರೈನ್ ಡ್ಯಾನ್ಸ್ ಮಾಡಲು ಹೋಗಿ ಅದೃಷ್ಠವಶಾತ್ ಬಚಾವ್ ಆದ ಘಟನೆ ನಡೆದಿದೆ. ಮಳೆ ಬರುತ್ತಿದ್ದಂತೆ ಮನೆಯ ಟೆರೆಸ್ ಮೇಲೆ ಹತ್ತಿ ರೈನ್ ಡ್ಯಾನ್ಸ್ ಮಾಡಲು ಮುಂದಾಗಿದ್ದಾಳೆ. ಆದರೆ ಡ್ಯಾನ್ಸ್ ಆರಂಭಿಸುತ್ತಿದ್ದಂತೆ ಭೀಕರ ಸಿಡಿಲು ಬಡಿದಿದೆ. ಕೆಲವೇ ಕೆಲವು ಅಡಿಗಳ ಅಂತರದಲ್ಲಿ ಸಿಡಿಲು ಬಡಿದಿದೆ. ತಕ್ಷಣವೇ ಅಲ್ಲಿಂದ ಓಡಿದ ಹುಡುಗಿ ಬದುಕಿಕೊಂಡಿದ್ದಾಳೆ. ಈ ಭಯಾನಕ ಡ್ಯಾನ್ಸ್ ವಿಡಿಯೋ ಭಾರಿ ವೈರಲ್ ಆಗಿದೆ.

ಬಿಹಾರದ ಸೀತಾಮಾರ್ಹಿಯ ಹುಡುಗಿ ಸಾನಿಯಾ ಕುಮಾರಿ ಅದೃಷ್ಠ ಚೆನ್ನಾಗಿತ್ತು. ಹೀಗಾಗಿ ಪ್ರಾಣಪಾಯವಿಲ್ಲದೆ ಪಾರಾಗಿದ್ದಾಳೆ. ಬಿಹಾರದಲ್ಲೆಡೆ ಮಳೆಯಾಗುತ್ತಿದೆ. ಗಾಳಿ, ಗುಡುಗು ಮಿಂಚು ಸಹಿತ ಮಳೆಯಿಂದ ಕೆಲವೆಡೆ ಅನಾಹುತಗಳು ನಡೆದಿದೆ. ಇತ್ತ ಸಾನಿಯಾ ಕುಮಾರಿ ಇದೇ ಮಳೆಯಲ್ಲಿ ರೀಲ್ಸ್ ಮಾಡಲು ಮುಂದಾಗಿದ್ದಾಳೆ. ಸಿನಿಮಾಗಳಲ್ಲಿ ರೋಮ್ಯಾಂಟಿಕ್ ಡ್ಯಾನ್ಸ್ ಮಳೆ ಇಲ್ಲದೆ ಪೂರ್ಣವಾಗುವುದಿಲ್ಲ. ಇತ್ತ ಸಾನಿಯಾ ಕುಮಾರಿ ಕೂಡ ಮಳೆಯಲ್ಲಿ ರೋಮ್ಯಾಂಟಿಕ್ ರೈನ್ ಡ್ಯಾನ್ಸ್ ಮಾಡಲು ಮುಂದಾಗಿದ್ದಾಳೆ.

ಚಿಕ್ಕೋಡಿಯಲ್ಲಿ ಸಿಡಿಲು ಬಡಿದು ಇಬ್ಬರು ಸಾವು..ಒಬ್ಬ ವ್ಯಕ್ತಿ, ಓರ್ವ ಮಹಿಳೆ ಬಲಿ

ಇದಕ್ಕಾಗಿ ಮನೆಯ ಟೆರೆಸ್ ಮೇಲೆ ಹತ್ತಿದ್ದಾಳೆ. ಮನೆಯ ಮೇಲ್ಬಾಗದಲ್ಲಿ ಮಳೆ ಸುರಿಯುತ್ತಿದ್ದರೆ, ಕ್ಯಾಮಾರ ಆನ್ ಮಾಡಿ ರೀಲ್ಸ್ ಶೂಟ್ ಮಾಡಲು ತಯಾರಿ ನಡೆಸಿದ್ದಾಳೆ. ಅತ್ತ ಕ್ಯಾಮರಾ ಆನ್ ಮಾಡಿ ಮಳೆಯಲ್ಲಿ ನಿಂತು ಒಂದು ಸುತ್ತು ರೋಮ್ಯಾಂಟಿಕ್ ಆಗಿ ತಿರುಗಲು ಆರಂಭಿಸಿದ ಬೆನ್ನಲ್ಲೇ ಸಾನಿಯಾ ಕುಮಾರಿ ಪಕ್ಕದಲ್ಲೇ ಸಿಡಿಲು ಬಡಿದಿದೆ.

ಸಿಡಿಲು ಬಡಿಯುತ್ತಿದ್ದಂತೆ ಒಂದೇ ರಭಸದಲ್ಲಿ ಸಾನಿಯಾ ಕುಮಾರಿ ಸ್ಥಳದಿಂದ ಕಳೆಗೆ ಓಡಿದ್ದಾಳೆ. ಸಿಡಿಲು ಪಕ್ಕದಲ್ಲೇ ಬಡಿದರೆ ಇತ್ತ ಸಾನಿಯಾ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾಳೆ. ರೀಲ್ಸ್ ಆರಂಭಿಸಿದ 11 ಸೆಕೆಂಡ್‌ಗಲ್ಲಿ ಸಿಡಿಲು ಬಡಿದಿದೆ. ಅದೃಷ್ಠವಶಾತ್ ಸಾನಿಯಾ ಕುಮಾರಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾಳೆ. 

 

 

ಈ ಘಟನೆ ವಿಡಿಯೋ ಭಾರಿ ವೈರಲ್ ಆಗಿದೆ. ಇತ್ತ ಅಧಿಕಾರಿಗಳ ಕಣ್ಣಿಗೂ ಬಿದ್ದಿದೆ. ಇದೀಗ ಬಿಹಾರದ ಅಧಿಕಾರಿಗಳು ಮಳೆಯಲ್ಲಿ ಯಾವುದೇ ಸಾಹಸಕ್ಕೆ ಮುಂದಾಗಬೇಡಿ ಎಂದಿದ್ದಾರೆ. ಭಾರಿ ಗುಡುಗು ಸಹಿತ ಮಳೆ ಆಗುತ್ತಿರುವ ಕಾರಣ ಅಪಾಯ ಸಾಧ್ಯತೆ ಹೆಚ್ಚಿದೆ. ಮರದ ಕೆಳಗೆ, ಕೌಂಪೌಂಡ್ ಬದಿಯಲ್ಲಿ ಆಶ್ರಯ ಪಡೆಯದಂತೆ ಸೂಚಿಸಲಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಮರದ ಕೆಳಗೆ ಆಶ್ರಯ ಪಡೆಯದಂತೆ ಸೂಚಿಸಲಾಗಿದೆ. ಮಳೆ ಸಂದರ್ಭದಲ್ಲಿ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದು ಬಳಿಕ ತೆರಳುವಂತೆ ಸೂಚಿಸಲಾಗಿದೆ.

ಯಾದಗಿರಿ: ಸಿಡಿಲು ಬಡಿದು ದೇವಸ್ಥಾನಕ್ಕೆ ಹಾನಿ!
 

Latest Videos
Follow Us:
Download App:
  • android
  • ios