ಸೋಶಿಯಲ್ ಮೀಡಿಯಾ ಸ್ಟಾರ್ ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಇತ್ತೀಚೆಗೆ ವಿವಾಹವಾಗಿದ್ದಾರೆ. ಮದುವೆಯ ನಂತರ, ಫರ್ಮಾನ್ ಖಾನ್ ಈ ಹಿಂದೆ ಮಾಡಿದ್ದ 'ಲವ್ ಫೇಲ್ಯೂರ್' ಕುರಿತಾದ ರೀಲ್ ಒಂದು ವೈರಲ್ ಆಗಿದ್ದು, ಇದರಲ್ಲಿ ಅವರ ನಟನೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಬೆಂಗಳೂರು: ಮಹಾಕುಂಭಮೇಳದಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ನಟಿಯಾಗಿ ಗುರುತಿಸಿಕೊಂಡಿದ್ದ ಮೋನಿ ಬೋಸ್ಲೆ ಅಲಿಯಾಸ್ ಮೊನಾಲಿಸಾ ಮದುವೆ ವಿಚಾರ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಮಾರ್ಚ್ 11ರಂದು ತಿರುವನಂತಪುರಂನಲ್ಲಿ ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಮದುವೆಯಾಗಿದ್ದರು. ಈ ಮದುವೆಗೆ ಕೆಲವರಿಂದ ಮೆಚ್ಚುಗೆ ವ್ಯಕ್ತವಾದರೆ, ಇನ್ನು ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಚರ್ಚೆಗಳ ನಡುವೆಯೇ, ಫರ್ಮಾನ್ ಖಾನ್ ಅವರ ಹಳೆಯ ವಿಡಿಯೋ ಒಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

Add Asianetnews Kannada as a Preferred SourcegooglePreferred

"ನನ್ನನ್ನು ಈ ಸ್ಥಿತಿಯಲ್ಲಿ ನೋಡಲು ಇಷ್ಟವಿಲ್ಲದಿದ್ದರೆ, ದಯವಿಟ್ಟು ನನಗೆ ಮೋಸ ಮಾಡಬೇಡಿ," ಎಂಬ ಕ್ಯಾಪ್ಷನ್‌ನೊಂದಿಗೆ ಫರ್ಮಾನ್ ಖಾನ್ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಲವ್ ಫೇಲ್ಯೂರ್ ಕುರಿತಾದ ಒಂದು ರೀಲ್. ಪ್ರೀತಿಯಲ್ಲಿ ನೋವು ಅನುಭವಿಸಿ, ಮಾನಸಿಕ ಸ್ಥಿಮಿತ ಕಳೆದುಕೊಂಡ ಪಾತ್ರದಲ್ಲಿ ಫರ್ಮಾನ್ ಕಾಣಿಸಿಕೊಂಡಿದ್ದಾರೆ. ಈ ಪಾತ್ರವನ್ನು ಫರ್ಮಾನ್ ಅದ್ಭುತವಾಗಿ ನಿಭಾಯಿಸಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್‌ಗಳಲ್ಲಿ ಹೊಗಳಿದ್ದಾರೆ.

ಫರ್ಮಾನ್ ವಿಡಿಯೋಗೆ ಮೊನಾಲಿಸಾ ಕಮೆಂಟ್

ಫರ್ಮಾನ್ ಈ ರೀಲ್ ಅನ್ನು 2025ರ ನವೆಂಬರ್ 4 ರಂದು ಮಾಡಿದ್ದರು. ಈಗ ಮದುವೆಯ ನಂತರ ಈ ವಿಡಿಯೋ ಮತ್ತೆ ವೈರಲ್ ಆಗಿದೆ. ಇದಕ್ಕೆ ಮೊನಾಲಿಸಾ ಕೂಡ "ವಿಭಿನ್ನವಾದ ನಟನೆ" ಎಂದು ಕಾಮೆಂಟ್ ಮಾಡಿದ್ದರು. ಈ ರೀಲ್ ಮಾತ್ರವಲ್ಲದೆ, ಫರ್ಮಾನ್ ಬೇರೆ ಬೇರೆ ರೀಲ್‌ಗಳನ್ನೂ ಮಾಡಿದ್ದು, ಅವರಿಗೆ ನಟನೆಯಲ್ಲಿ ಹೆಚ್ಚು ಆಸಕ್ತಿ ಇದೆ ಎಂಬುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: ಹಿಂದೂ ಮದ್ವೆಯಲ್ಲಿ ವೆಸ್ಟರ್ನ್ ಸಂಸ್ಕೃತಿ: ಉಸಿರಾಡಲು ಬಿಡದೇ ವರನಿಗೆ ಲೊಚ ಲೊಚ ಅಂತ ಪಪ್ಪಿ ಕೊಟ್ಟ ವಧು !

ಮದುವೆಗೆ ಮೊನಾಲಿಸಾ ತಂದೆಯ ವಿರೋಧ

ಮೊನಾಲಿಸಾ ಮತ್ತು ಅವರ ತಂಡ ಸಿನಿಮಾ ಶೂಟಿಂಗ್‌ಗಾಗಿ ಪೂವಾರ್‌ಗೆ ಬಂದಿದ್ದರು. ಆದರೆ, ಈ ಮದುವೆಗೆ ಮೊನಾಲಿಸಾ ಅವರ ತಂದೆ ವಿರೋಧ ವ್ಯಕ್ತಪಡಿಸಿದ್ದರು. ನಂತರ, ತನ್ನ ತಂದೆ ತನ್ನನ್ನು ಬಲವಂತವಾಗಿ ಮನೆಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮೊನಾಲಿಸಾ ತಂಪಾನೂರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೊನೆಗೆ ಪೊಲೀಸರೇ ಮಧ್ಯಪ್ರವೇಶಿಸಿ ಇವರಿಬ್ಬರ ಮದುವೆ ನೆರವೇರಿಸಿದರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಚಿವ ವಿ. ಶಿವನ್‌ಕುಟ್ಟಿ ಮತ್ತು ಜಿಲ್ಲಾ ಕಾರ್ಯದರ್ಶಿ ಎ.ಎ. ಹಿಮ್ ಸೇರಿದಂತೆ ಹಲವರು ಈ ಮದುವೆಗೆ ಸಾಕ್ಷಿಯಾಗಿದ್ದರು.

ಇದನ್ನೂ ಓದಿ: ಅಪ್ಪ-ಅಮ್ಮ ಇಲ್ಲ, ಅಜ್ಜನಿಗೆ ಪಿಂಚಣಿ ಬಂದ್ರೆ ಮಾತ್ರ ಹೊಸ ಬಟ್ಟೆ ಎಂದ ಕಂದಮ್ಮ; ಮಮ್ಮಲ ಮರುಗಿದ ಹೆಣ್ಮಕ್ಕಳು!

View post on Instagram