ಸೋಶಿಯಲ್ ಮೀಡಿಯಾದಲ್ಲಿ ಮದುವೆಯೊಂದರ ವಿಡಿಯೋ ವೈರಲ್ ಆಗಿದ್ದು, ವಧು ವರನಿಗೆ ಎಲ್ಲರೆದುರು ಮುತ್ತಿಟ್ಟಿದ್ದಾಳೆ. ಹಿಂದೂ ಸಂಪ್ರದಾಯದ ಮದುವೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ಈ ಜೋಡಿಯ ವರ್ತನೆಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಂದು ಜನರು ಪಾಶ್ಚತ್ಯ ಸಂಸ್ಕೃತಿಯನ್ನು ಎಲ್ಲಾ ವಿಷಯಗಳಲ್ಲಿಯೂ ಅಳವಡಿಸಿಕೊಳ್ಳುತ್ತಿದ್ದಾರೆ. ಆದ್ರೆ ಕೆಲವು ಸಂದರ್ಭಗಳಲ್ಲಿ ಈ ಪಾಶ್ಚತ್ಯ ಸಂಸ್ಕೃತಿ ಬೇಕಾ ಎಂಬ ಪ್ರಶ್ನೆ ಮೂಡುತ್ತದೆ. ಭಾರತದಲ್ಲಿ ಮದುವೆ ಅಂದ್ರೆ ಸಂಭ್ರಮ. ಕೇವಲ ಮಾಂಗಲ್ಯಧಾರಣೆ ಮಾತ್ರವಲ್ಲ, ಮದುವೆಯಲ್ಲಿ ಅನೇಕ ವಿಶೇಷ ಶಾಸ್ತ್ರಗಳನ್ನು ಮಾಡಲಾಗುತ್ತದೆ. ಎಲ್ಲ ಶಾಸ್ತ್ರಕ್ಕೂ ಒಂದೊಂದು ಅರ್ಥವಿರುತ್ತದೆ. ವಿದೇಶದ ಮದುವೆಗಳಲ್ಲಿ ವಧು-ವರ ಚುಂಬಿಸುವ ಮೂಲಕ ಹೊಸ ಜೀವನಕ್ಕೆ ಕಾಲಿಡುತ್ತಾರೆ. ಆದ್ರೆ ಈ ಪದ್ಧತಿ ಇತ್ತೀಚೆಗೆ ಭಾರತದಲ್ಲಿಯೂ ಕಾಣಿಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲ್ಲಾ ಎಲ್ಲೆಗಳನ್ನು ಮೀರಿದ ಜೋಡಿ

ಸೋಶಿಯಲ್ ಮೀಡಿಯಾದಲ್ಲಿ ವಧು ಮತ್ತು ವರ ಚುಂಬನದ ವಿಡಿಯೋವೊಂದು ವೈರಲ್ ಆಗಿದ್ದು, ಜೋಡಿ ನೆಟ್ಟಿಗರಿಗೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುತ್ತು ಅನ್ನೋದು ಪ್ರೀತಿಯನ್ನು ತೋರಿಸುವ ಒಂದು ಮಾರ್ಗ ಎಂದು ಇಂದಿನ ಯುವ ಸಮುದಾಯ ನಂಬುತ್ತದೆ. ಮಾಂಗಲ್ಯಧಾರಣೆ ಆಗ್ತಿದ್ದಂತೆ ವಧುವಿನ ಹಣೆಗೆ ವರ, ವರನ ಹಣೆಗೆ ವಧು ಮುತ್ತಿಡೋದು ಸಾಮಾನ್ಯವಾಗಿದೆ. ಚುಂಬಿಸುವ ಮೂಲಕ ಜೀವನದ ಸುಂದರ ಕ್ಷಣವನ್ನು ಆನಂದಿಸಲಾಗುತ್ತದೆ. ಆದ್ರೆ ಇಲ್ಲೊಂದು ಜೋಡಿ ಎಲ್ಲಾ ಎಲ್ಲೆಗಳನ್ನು ಮೀರಿದೆ. ವರನಿಗೆ ಬಿಗಿಯಾಗಿ ಹಿಡಿದು ವಧು ಲೊಚ ಲೊಚ ಎಂದು ಮುತ್ತಿಟ್ಟಿದ್ದಾಳೆ.

ವಿದೇಶದಲ್ಲಿಯೂ ಹಿಂಗೆ ಕಿಸ್ ಕೊಡಲ್ಲ!

ಈ ವಿಡಿಯೋ ನೋಡಿದ ನೆಟ್ಟಿಗರು, ಹಿಂದೂ ಮದ್ವೆಯಲ್ಲಿ ವೆಸ್ಟರ್ನ್ ಸಂಸ್ಕೃತಿ. ಇನ್ನು ಸ್ವಲ್ಪ ಸಮಯ ಇವರಿಬ್ಬರನ್ನು ಇಲ್ಲೇ ಬಿಟ್ರೆ ಫಸ್ಟ್‌ನೈಸ್ ಸಹ ಮಾಡಿಕೊಳ್ತಾರೆ. ಆದಷ್ಟು ಬೇಗ ಇಬ್ಬರನ್ನು ಕೋಣೆಗೆ ಕಳುಹಿಸಿ. ಇದು ಮದುವೆನಾ ಅಥವಾ ಸಿನಿಮಾ ಚಿತ್ರೀಕರಣ ನಡೆಯುತ್ತಿದೆಯಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ನಾಚಿಕೆಗೇಡಿತನದ ಕೆಲಸ. ವಿದೇಶದ ಮದುವೆಗಳಲ್ಲಿಯೂ ಹೀಗೆ ಮುತ್ತು ಕೊಡಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ವಧು-ವರ ವೇಷಭೂಷಣ ಗಮನಿಸಿದ್ರೆ ಇದೊಂದು ಬಂಗಾಳ ಸಂಪ್ರದಾಯದಂತೆ ನಡೆಯುತ್ತಿರುವ ಮದುವೆ ಎಂದು ಗೊತ್ತಾಗುತ್ತದೆ. ಇಲ್ಲಿಯೇ ವಧು ಆಕ್ರಮಣಕಾರಿಯಾಗಿ ವರನಿಗೆ ಚುಂಬಿಸುತ್ತಿರೋದನ್ನು ಗಮನಿಸಬಹುದು. ವರ ಸಹ ತಾನೇನು ಕಡಿಮೆ ಇಲ್ಲ ಎಂಬಂತೆ ಕಿಸ್ ಮಾಡಲು ಅಡ್ಡಿಯಾದ ಕನ್ನಡಕ ತೆಗೆದು ಸೈಡ್‌ನಲ್ಲಿಡುತ್ತಾನೆ. ಸ್ವಲ್ಪ ಸಮಯದ ಬಳಿಕ ವಧು ಕಿಸ್ ಮಾಡೋದನ್ನು ನಿಲ್ಲಿಸುತ್ತಾಳೆ. ನಂತರ ಮತ್ತೆ ಮುತ್ತು ಕೊಡಲು ಮುಂದಾಗುತ್ತಾಳೆ. ಮುಂದೆ ನಿಂತಿದ್ದ ವ್ಯಕ್ತಿ, ತನ್ನ ಕ್ಯಾಮೆರಾದಲ್ಲಿ ಜೋಡಿಯ ಏಕಾಂತದ ಕ್ಷಣಗಳನ್ನು ಸೆರೆ ಹಿಡಿದಿದ್ದಾನೆ.

ಇದನ್ನೂ ಓದಿ: ಕೊಟ್ಟೂರಿನ 'ಕಂಪ್ಯೂಟರ್' ಮ್ಯಾನ್‌ ಲೆಕ್ಕದ ಮಾಯಾಜಾಲ; ಗುಟ್ಟು ರಟ್ಟು ಮಾಡಿದ ಮಗ್ಗಿ ಅಜ್ಜಯ್ಯ

ಈ ವಿಡಿಯೋವನ್ನು vibenewzz ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಮಾರ್ಚ್ 13ರಂದು ಈ ವಿಡಿಯೋ ಪೋಸ್ಟ್ ಮಾಡಿಕೊಳ್ಳಲಾಗಿದ್ದು, ಈವರೆಗೆ 8 ಲಕ್ಷಕ್ಕೂ ಅಧಿಕ ವ್ಯೂವ್, 3 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ.

ಇದನ್ನೂ ಓದಿ: Video: ಪೈಲಟ್ ಪತಿಯ ಕ್ಯೂಟ್ ವಿಡಿಯೋ ನೋಡಿ ಗಂಡ ಅಂದ್ರೆ ಹಿಂಗಿರಬೇಕು ಅಂದ್ರು ಮಹಿಳೆಯರು

View post on Instagram