ಮಹಿಳಾ ಇನ್ಫ್ಲುಯೆನ್ಸರ್ ಫಾಲೋ ಮಾಡುತ್ತಿದ್ದ ಅಭಿಮಾನಿ, ಆಕೆ ಮೇಲೆ ಹುಚ್ಚು ಪ್ರೀತಿ ಶುರುವಾಗಿದೆ. ಆಕೆಯ ಮನೆಗೆ ನುಗ್ಗಿ ಮದುವೆಗೆ ಒತ್ತಾಯಿಸಿ ರಂಪಾಟ ಮಾಡಿದ್ದಾರೆ. ಆದರೆ ಇನ್ಫ್ಲುಯೆನ್ಸರ್ ಕುಟುಂಬದ ದಾಳಿಗೆ ಯುವಕ ಮೃತಪಟ್ಟ ಘಟನೆ ನಡೆದಿದೆ.
ದೆಹಲಿ (ನ.20) ಇನ್ಫ್ಲುಯೆನ್ಸರ್ ವಿಡಿಯೋ , ಪ್ರತಿ ಪೋಸ್ಟ್ ಲೈಕ್ ಮಾಡುತ್ತಿದ್ದ ಅಭಿಮಾನಿ ಆಕೆಯ ಮೇಲೆ ಹುಚ್ಚು ಪ್ರೀತಿ ಹುಟ್ಟಿದೆ. ಆಕೆಯ ಎಲ್ಲಾ ವಿಡಿಯೋ, ಫೋಟೋಗಳಿಗೆ ಲೈಕ್ ಮಾಡಿ ಕಮೆಂಟ್ ಮಾಡುತ್ತಿದ್ದ. ಒನ್ ಸೈಡೆಡ್ ಪ್ರೀತಿ ಹೆಚ್ಚಾಗಿದೆ. ನೇರವಾಗಿ ಚೆನ್ನೈನಿಂದ ದೆಹಲಿಗೆ ತೆರಳಿದ ಅಭಿಮಾನಿ ಆಕೆಯ ಮನೆಗೆ ನುಗ್ಗಿದ್ದಾನೆ. ಮದುವೆಯಾಗುವಂತೆ ಒತ್ತಾಯಿಸಿದ್ದಾನೆ, ರಂಪಾಟ ಶುರುವಾಗಿದೆ. ಈ ವೇಳೆ ಇನ್ಫ್ಲುಯೆನ್ಸರ್ ಕುಟುಂಬಸ್ಥರು ರಂಪಾಟ ಮಾಡುತ್ತಿದ್ದ ಯುವಕನ ಮೇಲೆ ದಾಳಿ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಯುವಕ ಆಸ್ಪತ್ರೆ ದಾಖಲಿಸಿದರೂ ಬದುಕುಳಿಯಲಿಲ್ಲ. ಪ್ರಕರಣ ಸಂಬಂಧ ಪೂರ್ವ ದೆಹಲಿಯಲ್ಲಿ ನಡೆದಿದೆ.
ಎಂಗೇಜ್ಮೆಂಟ್ನಿಂದ ಕೆರಳಿದ ಅಭಿಮಾನಿ
ನೇಹಾ ಬಿಷ್ತ್, ಸೋಶಿಯಲ್ ಮೀಡಿಯಾದಲ್ಲಿ 6 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಖ್ಯಾತ ಇನ್ಫ್ಲುಯೆನ್ಸರ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ನೇಹಾ ಬಿಷ್ತ್ ವಿಡಿಯೋಗಳಿಂದ ಉತ್ತರ ಪ್ರದೇಶಧ ಘಾಜಿಪುರ ಮೂಲದ ಅಭಿನವ್ಗೆ ಪ್ರೀತಿ ಶುರುವಾಗಿದೆ. ಚೆನ್ನೈನಲ್ಲಿ ಕೆಲಸ ಮಾಡಿಕೊಂಡಿದ್ದ ಅಭಿನವ್ ಪ್ರೀತಿ ಹೆಚ್ಚಾಗಿ ಪೂರ್ವ ದೆಹಲಿಯಲ್ಲಿರುವ ನೇಹಾ ಬಿಷ್ತ್ ಮೇಲಿನ ಪ್ರೀತಿ ಗಾಢವಾಗಿದೆ. ಇದರ ನಡುವೆ ನೇಹಾ ಬಿಷ್ತ್ ತನ್ನ ಪ್ರೀತಿಯ ಸಂಗಾತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಈ ಕುರಿತು ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾಳೆ.
ಮನೆಗೆ ನುಗ್ಗಿದ ಅಭಿಮಾನಿ
ನೇಹಾ ಬಿಷ್ತ್ ಪ್ರೀತಿಸುತ್ತಿದ್ದ ಅಭಿಮಾನಿ ಅಭಿನವ್ಗೆ ನಿಶ್ಚಿತಾರ್ಥ ಸುದ್ದಿ ತಡೆಯಲು ಸಾಧ್ಯವಾಗಲಿಲ್ಲ. ಒಂದು ಕ್ವಾರ್ಟರ್ ಮೈದ್ಯ ಏರಿಸಿಕೊಂಡು ನೇರವಾಗಿ ಚೆನ್ನೈನಿಂದ ಪೂರ್ವ ದೆಹಲಿಗೆ ಪ್ರಯಾಣ ಮಾಡಿದ್ದಾನೆ. ಬಳಿಕ ಆಕೆಯ ಮನೆಗೆ ನುಗ್ಗಿದ್ದಾನೆ. ಕೆಲ ತಿಂಗಳ ಹಿಂದೆ ಕಟ್ಟಾ ಅಭಿಮಾನಿ ಎಂದು ನೇಹಾ ಬಿಷ್ತ್ನ ಭೇಟಿ ಮಾಡಿದ್ದು. ಈ ಬಾರಿ ನೇರವಾಗಿ ಮನೆಗೆ ನುಗ್ಗಿ ರಂಪಾಟ ಶುರು ಮಾಡಿದ್ದಾನೆ. ನೇಹಾಳನ್ನು ನಾನು ಯಾರಿಗೂ ಬಿಟ್ಟುಕೊಡುವುದಿಲ್ಲ. ನಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ರಂಪಾಟ ಶುರು ಮಾಡಿದ್ದಾರೆ.
ಅಭಿನವ್ ರಂಪಾಟಕ್ಕೆ ನೇಹಾ ಆತಂಕಗೊಂಡಿದ್ದಾಳೆ. ಪೋಷಕರು ಸೇರಿದಂತೆ ಕುಟುಂಬಸ್ಥರು ಜಮಾಯಿಸಿದ್ದಾರೆ. ಕುಟುಂಬದ ಕೆಲ ಸದಸ್ಯರು ಸೇರಿ ಅಭಿನವ್ ಮೇಲೆ ದಾಳಿ ಮಾಡಿದ್ದಾರೆ. ಮೊದಲೇ ಮದ್ಯದ ನಶೆಯಲ್ಲಿದ್ದ ಅಭಿನವ್ ಒಂದೆರೆಡು ಎಟಿಗೆ ನೆಲಕ್ಕೆ ಉರುಳಿದ್ದಾನೆ. ಬಿದ್ದವನ ಮೇಲೆ ಎಲ್ಲರೂ ದಾಳಿ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆ ಅಭಿನವ್ ಗಂಭೀರವಾಗಿ ಗಾಯಗೊಂಡಿದ್ದ. ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಪ್ರಯತ್ನಗಳು ನಡೆಯಿತು. ಆಧರೆ ಯುವಕ ಗಂಭೀರ ಗಾಯದಿಂದ ಮೃತಪಟ್ಟಿದ್ದಾನೆ. ನೇಹಾ ಬಿಷ್ತ್ ಕುಟುಂಬಸ್ಥರ ಮೇಲೆ ಪ್ರಕರಣ ದಾಖಲಾಗಿದೆ. ನೇಹಾ ಬಿಷ್ತ್ ತಂದೆ, ಪಕ್ಕದ ಮನೆಯವರ ಮೇಲೂ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.















