ಭಾರತದಲ್ಲಿ ಸೆಲೆಬ್ರೆಟಿಗಳ ಸಂಖ್ಯೆ ದೊಡ್ಡದಿದೆ. ಈ ಪೈಕಿ ಗರಿಷ್ಠ ಬ್ರ್ಯಾಂಡ್ ವಾಲ್ಯೂ ಹೊಂದಿರುವ ಸೆಲೆಬ್ರೆಟಿ ಯಾರು? ವಿಶೇಷ ಅಂದರೆ ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಸಚಿನ್ ತೆಂಡೂಲ್ಕರ್ ಸೇರಿದಂತೆ ದಿಗ್ಗಜರನ್ನೇ ಹಿಂದಿಕ್ಕಿದ ಈ ಸೆಲೆಬ್ರೆಟಿ ಯಾರು?

ನವದೆಹಲಿ (ನ.20) ಭಾರತದ ಸೆಲೆಬ್ರೆಟಿಗಳ ಪೈಕಿ ಗರಿಷ್ಠ ಮೌಲ್ಯಯುತ ಸೆಲೆಬ್ರೆಟಿ ಯಾರು? ಈ ಪ್ರಶ್ನೆಗೆ ಫಾರ್ಚೂನ್ ಇಂಡಿಯಾ- ಇಂಟರ್‌ಬ್ರ್ಯಾಂಡ್ ಉತ್ತರ ನೀಡಿದೆ. ಬಾಲಿವುಡ್ ನಟ ಶಾರೂಖ್ ಖಾನ್, ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್, ಅಲ್ಲು ಅರ್ಜುನ್ ಸೇರಿದಂತೆ ಹಲವು ಟಾಪ್ ಸೆಲೆಬ್ರೆಟಿಗಳನ್ನು ಹಿಂದಿಕ್ಕಿ ನಂ.1 ಸ್ಥಾನವನ್ನು ವಿರಾಟ್ ಕೊಹ್ಲಿ ಆಕ್ರಮಿಸಿಕೊಂಡಿದ್ದಾರೆ. ಫಾರ್ಚೂನ್ ಇಂಡಿಯಾ ಇಂಟರ್‌ಬ್ರ್ಯಾಂಡ್ ಪ್ರಕಾರ ವಿರಾಟ್ ಕೊಹ್ಲಿ ಬ್ರ್ಯಾಂಡ್ ವಾಲ್ಯು ಬರೋಬ್ಬರಿ 3542 ಕೋಟಿ ರೂಪಾಯಿ.

ಫಾರ್ಚೂನ್ ಇಂಡಿಯಾ ಹಾಗೂ ಇಂಟರ್‌ಬ್ರ್ಯಾಂಡ್ ನಡೆಸಿದ ಅಧ್ಯಯನ ವರದಿಯಲ್ಲಿ ಹಲವು ಕುತೂಹಲ ಮಾಹಿತಿ ಬಹಿರಂಗವಾಗಿದೆ. ಹೆಸರು, ಜನಪ್ರಿಯತೆ, ಫಾಲೋವರ್ಸ್, ಗ್ರಾಹಕರ ಮೇಲೆ ಪ್ರಭಾವ ಬೀರುವ ಮತ್ತು ಬ್ರ್ಯಾಂಡ್ ವಿಶ್ವಾಸಾರ್ಹತೆ ಸೇರಿದಂತೆ ಹಲವು ಆಧಾರಗಳ ಮೇಲೆ ಬ್ರ್ಯಾಂಡ್ ವಾಲ್ಯೂ ನಿರ್ಧರಿಸಲಾಗಿದೆ. ಈ ಪೈಕಿ ವಿರಾಟ್ ಕೊಹ್ಲಿ ಎಲ್ಲಾ ದಿಗ್ಗಜರ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದಿದ್ದಾರೆ. ಕೊಹ್ಲಿ ಹಾಗೂ ಶಾರುಖ್ ಖಾನ್ ನಡುವೆ ಭಾರಿ ಪೈಪೋಟಿ ಇದೆ.

ಬಾಲಿವುಡ್ ನಟ ಶಾರೂಖ್ ಖಾನ್ ಮೌಲ್ಯಯುತ ಸೆಲೆಬ್ರೆಟಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಶಾರೂಖ್ ಖಾನ್ ಬ್ರ್ಯಾಂಡ್ ವಾಲ್ಯೂ 3017 ಕೋಟಿ ರೂಪಾಯಿ. ಸಿನಿಮಾ, ಜಾಹೀರಾತು, ಐಪಿಎಲ್ ತಂಡ ಸೇರಿದಂತೆ ಹಲವು ಸಂಸ್ಥೆಗಳ ಹೂಡಿಕೆ ಮೂಲಕ ಆದಾಯಗಳಿಸುತ್ತಿರುವ ಶಾರೂಖ್ ಖಾನ್ ಶ್ರೀಮಂತ ನಟರಲ್ಲಿ ಒಬ್ಬರು. ಭಾರತದ ಬ್ರ್ಯಾಂಡ್ ವಾಲ್ಯೂ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಟಾಪ್ 10 ಪಟ್ಟಿಯಲ್ಲಿ ದಕ್ಷಿಣ ಭಾರತದ ಏಕೈಕ ನಟ

ಭಾರತದ ಟಾಪ್ 10 ಬ್ರ್ಯಾಂಡ್ ವಾಲ್ಯೂ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಏಕೈಕ ಸೆಲೆಬ್ರೆಟಿ ಕಾಣಿಸಿಕೊಂಡಿದ್ದಾರೆ. 10ನೇ ಸ್ಥಾನದಲ್ಲಿರುವ ಅರ್ಜು ಅರ್ಜುನ್ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡ ದಕ್ಷಿಣ ಭಾರತದ ನಟ. ಅಲ್ಲು ಅರ್ಜುನ್ 1522 ಕೋಟಿ ರೂಪಾಯಿ ಬ್ರ್ಯಾಂಡ್ ವಾಲ್ಯೂ ಹೊಂದಿದ್ದಾರೆ.

ಭಾರತದ ಟಾಪ್ 10 ಬ್ರ್ಯಾಂಡ್ ವಾಲ್ಯೂ ಸೆಲೆಬ್ರೆಟಿ

  • ವಿರಾಟ್ ಕೊಹ್ಲಿ: 3,542 ಕೋಟಿ
  • ಶಾರುಖ್ ಖಾನ್: 3,017 ಕೋಟಿ
  • ಪ್ರಿಯಾಂಕಾ ಚೋಪ್ರಾ: 2,507 ಕೋಟಿ
  • ಎಂ.ಎಸ್. ಧೋನಿ: 2,141 ಕೋಟಿ
  • ರಣವೀರ್ ಸಿಂಗ್: 2,077 ಕೋಟಿ
  • ಅಕ್ಷಯ್ ಕುಮಾರ್: 2,064 ಕೋಟಿ
  • ಅಮಿತಾಭ್ ಬಚ್ಚನ್: 1,933 ಕೋಟಿ
  • ಸಚಿನ್ ತೆಂಡೂಲ್ಕರ್ : 1,676 ಕೋಟಿ
  • ಆಲಿಯಾ ಭಟ್: 1,606 ಕೋಟಿ
  • ಅಲ್ಲು ಅರ್ಜುನ್ : 1,522 ಕೋಟಿ

ಬಾಲಿವುಡ್, ಹಾಲಿವುಡ್ ಸೇರಿದಂತೆ ವಿಶ್ವದಾದ್ಯಂತ ಮಿಂಚುತ್ತಿರುವ ಪ್ರಿಯಾಂಕ ಚೋ್ರಾ 2507 ಕೋಟಿ ರೂಪಾಯಿ ಬ್ರ್ಯಾಂಡ್ ವಾಲ್ಯೂ ಜೊತೆ 3ನೇ ಸ್ಥಾನದಲ್ಲಿದ್ದಾರೆ. ವಿಶೇಷ ಅಂದರೆ ಟಾಪ್ 5 ಸೆಲೆಬ್ರೆಟಿಯಲ್ಲಿ ಕಾಣಿಸಿಕೊಂಡ ಏಕೈಕ ನಟಿ. ಇಷ್ಟೇ ಅಲ್ಲ ಭಾರತದ ಗರಿಷ್ಠ ಬ್ರ್ಯಾಂಡ್ ವಾಲ್ಯೂ ಮಹಿಳಾ ಸೆಲೆಬ್ರೆಟಿಗಳ ಪೈಕಿ ಪ್ರಿಯಾಂಕ ಮೊದಲ ಸ್ಥಾನದಲ್ಲಿದ್ದಾರೆ.