ಹೆಂಡ್ತಿನ ತವರಿಗೆ ಕಳಿಸೋಕೆ ಒಲ್ಲೆ ಅನ್ಬೇಡಿ... ಇಲ್ಲೇನಾಯ್ತು ನೋಡಿ

ಸಹೋದರಿಯನ್ನು ಅತ್ತೆ ಮನೆಯಿಂದ ತವರಿಗೆ ಕರೆದೊಯ್ಯಲು ಬಂದಾಗ ಅತ್ತೆ ಮನೆಯವರು ವಿರೋಧಿಸಿದ ಹಿನ್ನೆಲೆ ಭಾಮೈದ ಓರ್ವ ಅವರ ಮೇಲೆ ಆಡಿ ಕಾರು ಹತ್ತಿಸಿ ಪರಾರಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

family dispute Uttar Pradesh Man runs Audi Car Over relatives of his sister akb

ಲಕ್ನೋ:  ಸಹೋದರಿಯನ್ನು ಅತ್ತೆ ಮನೆಯಿಂದ ತವರಿಗೆ ಕರೆದೊಯ್ಯಲು ಬಂದಾಗ ಅತ್ತೆ ಮನೆಯವರು ವಿರೋಧಿಸಿದ ಹಿನ್ನೆಲೆ ಭಾಮೈದ ಓರ್ವ ಅವರ ಮೇಲೆ ಆಡಿ ಕಾರು ಹತ್ತಿಸಿ ಪರಾರಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ವೈರಲ್ ಆಗಿದೆ. ಜೋಡಿಯ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯ ಸಹೋದರ ತನ್ನ ಸಹೋದರಿಯನ್ನು ಕರೆದೊಯ್ಯಲು ಆಕೆಯ ಮನೆಗೆ ಬಂದಿದ್ದಾನೆ. ಈ ವೇಳೆ ಮಹಿಳೆಯ ಗಂಡನ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

ಈ ವೇಳೆ ಮಹಿಳೆಯ ಸಹೋದರ ಸಹೋದರಿಯನ್ನು ಕರೆದುಕೊಂಡು ಕಾರು ಚಲಾಯಿಸಿದ್ದಾನೆ. ಅಷ್ಟರಲ್ಲಿ  ಗಂಡನ ಮನೆಯವರು ಕಾರಿಗೆ ಅಡ್ಡ ಬಂದಿದ್ದಾರೆ. ಈ ವೇಳೆ ಅವರ ಮೇಲೆಯೇ ಆಡಿ ಕಾರು (Audi Car)ಚಲಾಯಿಸಿಕೊಂಡು ಭಾಮೈದ ಹೊರಟು ಹೋಗಿದ್ದಾನೆ.  ಉತ್ತರಪ್ರದೇಶದ (Uttar Pradesh) ಗಾಜಿಯಾಬಾದ್‌ನ (Ghaziabad) ವಸುಂಧರಾ ಸೆಕ್ಟರ್‌ (Vasundhara Sector) 10 ರಲ್ಲಿ ಈ ಘಟನೆ ನಡೆದಿದೆ.  ಡಿಸೆಂಬರ್ 8 ರಂದು ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ  ಜಾಲತಾಣದಲ್ಲಿ ವೈರಲ್ ಆಗಿದೆ.  ಘಟನೆಯಲ್ಲಿ ಓರ್ವ ವ್ಯಕ್ತಿ ಮೇಲೆ ಕಾರು ಹರಿದಿದೆ. ಕಾರು ಹೊರಟು ಹೋದಾಗ ಸಮೀಪದಲ್ಲಿದ್ದ ಸ್ಕೂಟಿಗೂ ಡಿಕ್ಕಿ ಹೊಡೆದಿದ್ದು, ಅದೂ ಪಲ್ಟಿಯಾಗಿದೆ. 

Dharwad: ಕ್ಷುಲ್ಲಕ ಕಾರಣಕ್ಕೆ ಮಾವನಿಗೆ ಚಾಕುವಿನಿಂದ ಇರಿದ ಅಳಿಯ

ಮೂಲತಃ ಗಂಡ ಹೆಂಡತಿ ನಡುವಿನ ಕಲಹ ಇದಾಗಿದ್ದು,  ಇಬ್ಬರ ಜಗಳದ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲು ಮಹಿಳೆಯ ಸಹೋದರ ಮನೆಗೆ ಬಂದಿದ್ದಾನೆ. ಈ ವೇಳೆ ಜಗಳ ತಾರಕಕ್ಕೇರಿದ್ದು, ಆಕೆಯನ್ನು  ತವರಿಗೆ ಕಳುಹಿಸಲು ಅತ್ತೆ ಮನೆಯವರು ಹಿಂದೇಟು ಹಾಕಿದ್ದಾರೆ.  ಈ ವೇಳೆ ಆತ ತನ್ನ ಸಹೋದರಿಯನ್ನು ಕರೆದುಕೊಂಡು ಕಾರು ಹತ್ತಿ ಹೋಗಲು ಮುಂದಾಗಿದ್ದು,  ಈ ವೇಳೆ ಅಡ್ಡ ಬಂದವರ ಮೇಲೆ ಕಾರು ಹತ್ತಿಸಿ ಪರಾರಿಯಾಗಿದ್ದಾರೆ.  ಈ ವೇಳೆ ಕಾರು ಕೆಳಗೆ ಬಿದ್ದವನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಬಗ್ಗೆ ಎರಡು ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. 

ಮದ್ದೂರಿನಲ್ಲಿ ಘೋರ ದುರಂತ: 3 ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಾಯಿ

 

Latest Videos
Follow Us:
Download App:
  • android
  • ios