Asianet Suvarna News Asianet Suvarna News

ಮದ್ದೂರಿನಲ್ಲಿ ಘೋರ ದುರಂತ: 3 ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಾಯಿ

ಕೌಟುಂಬಿಕ ಕಲಹ ಹಿನ್ನೆಲೆ ತನ್ನ 3 ಮಕ್ಕಳಿಗೆ ವಿಷ ಉಣಿಸಿ ತಾಯಿ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿದೆ. 30 ವರ್ಷದ ಉಸ್ನಾ ಕೌಸರ್ ತನ್ನ ಮೂರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

Women Killed Children And Commits Suicide At Maddur gvd
Author
First Published Dec 2, 2022, 12:30 AM IST

ಮದ್ದೂರು (ಡಿ.02): ಕೌಟುಂಬಿಕ ಕಲಹ ಹಿನ್ನೆಲೆ ತನ್ನ 3 ಮಕ್ಕಳಿಗೆ ವಿಷ ಉಣಿಸಿ ತಾಯಿ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿದೆ. 30 ವರ್ಷದ ಉಸ್ನಾ ಕೌಸರ್ ತನ್ನ ಮೂರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. 7 ವರ್ಷದ ಹಾರಿಸ್, 4 ವರ್ಷದ ಆಲಿಸಾ ಹಾಗೂ 2 ವರ್ಷದ ಕಂದಮ್ಮ ಅನಮ್ ಪಾತಿಮಾಗೆ ವಿಷುಣಿಸಿ ಕೊಂಡು ನೇಣು ಬಿಗಿದುಕೊಂಡಿದ್ದಾರೆ. 

ಮದ್ದೂರು ಪಟ್ಟಣದ ಹೊಳೆಬೀದಿಯಲ್ಲಿ ವಾಸವಿದ್ದ ಉಸ್ನಾ ಕೌಸರ್ ಕೆಲ ವರ್ಷಗಳ ಹಿಂದೆ ಅಖಿಲ್ ಅಹಮದ್ ಎಂಬುವರನ್ನು ಮದುವೆ ಆಗಿದ್ದರು. ಪತಿ ಅಖಿಲ್ ಅಹಮದ್ ಚನ್ನಪಟ್ಟಣದಲ್ಲಿ ಕಾರು ಮೆಕಾನಿಕ್ ಆಗಿ ಕೆಲಸ ಮಾಡ್ತಿದ್ದರು. ಪತ್ನಿ ಉಸ್ನಾ ಕೌಸರ್ ಕೂಡ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಮೂವರು ಮಕ್ಕಳೊಂದಿಗೆ ಅನ್ಯೋನ್ಯವಾಗಿದ್ದ ದಂಪತಿ ಸಂಸಾರದಲ್ಲಿ ಕೆಲದಿನಗಳಿಂದ ಕೌಟುಂಬಿಕ ಕಲಹ ಆರಂಭವಾಗಿತ್ತು‌. 

Mandya: ಶೋಕಿಗಾಗಿ ನಾನು ರಾಜಕೀಯ ಮಾಡಲ್ಲ: ಎನ್‌.ಚಲುವರಾಯಸ್ವಾಮಿ

ಇದರಿಂದ ಮನನೊಂದಿದ್ದ ಉಸ್ನಾ ಕೌಸರ್ ಕೆಲಸ ಮುಗಿಸಿ ಮನೆಗೆ ಬಂದ ವೇಳೆ ಯಾರು ಇಲ್ಲದ್ದನ್ನು ಗಮನಿಸಿ ಸಾಯುವ ನಿರ್ಧಾರ ಮಾಡಿದ್ದಾರೆ. ಉಸ್ನಾ ಕೌಸರ್ ಆತುರದ ನಿರ್ಧಾರಕ್ಕೆ ಮೂವರು ಮುದ್ದು ಮಕ್ಕಳು ಕೂಡ ಜೀವ ಬಿಟ್ಟಿದ್ದಾರೆ‌. ಮೊದಲು ಮಕ್ಕಳಿಗೆ ವಿಷ ನೀಡಿರುವ ಉಸ್ನಾ ಕೌಸನ್ ತನ್ನ ಕಣ್ಣೆದುರೇ ಮಕ್ಕಳು ಮೃತಪಟ್ಟ ಬಳಿಕ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯ ಕೊಠಡಿಯ ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲೇ ಮಕ್ಕಳು ಹಸುನೀಗಿದ್ರೆ, ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಉಸ್ನಾ ಕೌಸರ್ ಪ್ರಾಣ ಬಿಟ್ಟಿದ್ದಾರೆ. 

Mandya: ಕಮಿಷನ್‌ ಮೇಲಾಟ: ನಗರಾಭಿವೃದ್ಧಿ ಕಾಮಗಾರಿ ವಿಳಂಬ

ಈ ದೃಶ್ಯ ಕಂಡ ಕುಟುಂಬಸ್ಥರು, ಸ್ಥಳೀಯರ ಆಕ್ರಂಧನ ಮುಗಿಲು ಮುಟ್ಟಿದೆ. ತಾಯಿಯ ಆತುರದ ನಿರ್ಧಾರಕ್ಕೆ ಬದುಕಿ ಬಾಳ ಬೇಕಾದ ಕಂದಮ್ಮಗಳು ಕೂಡ ಪ್ರಾಣ ಬಿಟ್ಟಿದ್ದು ಘೋರ ದುರಂತ. ಸ್ಥಳಕ್ಕೆ ಮದ್ದೂರು ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನಿಸಲಾಗಿದೆ.

Follow Us:
Download App:
  • android
  • ios