Asianet Suvarna News Asianet Suvarna News

Dharwad: ಕ್ಷುಲ್ಲಕ ಕಾರಣಕ್ಕೆ ಮಾವನಿಗೆ ಚಾಕುವಿನಿಂದ ಇರಿದ ಅಳಿಯ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾವನಿಗೆ ಅಳಿಯನೊಬ್ಬ ಚಾಕುವಿನಿಂದ ಇರಿದ ಘಟನೆ ಧಾರವಾಡದ ಕಮಲಾಪುರದಲ್ಲಿ ನಡೆದಿದೆ.  ಗಾಯಗೊಂಡ ಮಾವನನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

son-in-law stabbed the father-in-law with a knife in dharwad gow
Author
First Published Dec 13, 2022, 3:31 PM IST

ಧಾರವಾಡ (ಡಿ.13) : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾವನಿಗೆ ಅಳಿಯನೊಬ್ಬ ಚಾಕುವಿನಿಂದ ಇರಿದ ಘಟನೆ ಧಾರವಾಡದ ಕಮಲಾಪುರದಲ್ಲಿ ನಡೆದಿದೆ. ಕೌಟುಂಬಿಕ ವಿಚಾರವಾಗಿ ಜಗಳ ತೆಗೆದ ಅಳಿಯ ಹೇಮಂತ ಗುಮ್ಮಗೋಳ ಎಂಬುವವರ ಮಾವನಾದ ಯಲ್ಲಪ್ಪ ಧೂಳಪ್ಪನವರ ಅವರಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮೂಲತಃ ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದವರಾದ ಗಾಯಗೊಂಡ ಯಲ್ಲಪ್ಪ ಧೂಳಪ್ಪನವರ ಅವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.  ಧಾರವಾಡ ಉಪ ನಗರ ಪೊಲೀಸ್ ಠಾಣೆಯಲ್ಲಿ ಗಾಯಗೊಂಡ ಮಾವನ ವಿರುದ್ದ ಅಳಿಯನೇ ದೂರು ದಾಖಲು ಮಾಡಿದ್ದಾರೆ.  ಪ್ರಕರಣ ದಾಖಲಿಸಿಕೊಂಡಿರುವ ಧಾರವಾಡ ಉಪನಗರ ಪೊಲೀಸರು ತನಿಖೆ ನಡೆಸುವ ನಿಟ್ಟಿನಲ್ಲಿ ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನೂ ಪ್ರಕರಣ ಸತ್ಯಾ ಸತ್ಯತೆ ಏನು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಾಗಿದೆ.

ಅಣ್ಣ-ತಂಗಿ ಮನಸ್ಸಲ್ಲಿ ಮೂಡಿತ್ತು ಪ್ರೇಮ: ಪ್ರೀತಿ ಫಲಿಸಲ್ಲ ಎಂದು 'ಜೋಡಿ' ಆತ್ಮಹತ್ಯೆ

ಆಸ್ತಿಗಾಗಿ ತಂದೆ ಹತ್ಯೆಗೆ ಮಕ್ಕಳಿಂದಲೇ ಸುಪಾರಿ, ಐವರ ಸೆರೆ
ಶಿವಮೊಗ್ಗ: ಆಸ್ತಿಯಲ್ಲಿ ಪಾಲು ಕೊಡದೆ ಎರಡನೇ ಮದುವೆಯಾಗಿ ಮಗು ಮಾಡಿಕೊಂಡ ಅಪ್ಪನ ಕೊಲೆಗೆ ಮಕ್ಕಳೆ 5 ಲಕ್ಷ ರು. ಸುಪಾರಿ ನೀಡಿ ಕೊಲೆ ಮಾಡಿಸಿರುವ ಘಟನೆ ಶಿರಾಳಕೊಪ್ಪದ ಬೋಗಿ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಸುಪಾರಿ ಕೊಟ್ಟಇಬ್ಬರು ಮಕ್ಕಳ ಜೊತೆ ಕೊಲೆ ಮಾಡಿದ ಮೂವರು ಸೇರಿ ಒಟ್ಟು ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿಕಾರಿಪುರ ನಿವಾಸಿ ನಾಗೇಂದ್ರಪ್ಪ, ತಮ್ಮ ಮಕ್ಕಳಿಂದಲೇ ಕೊಲೆಯಾದ ದುರ್ದೈವಿ. ನಾಗೇಂದ್ರಪ್ಪನ ಮೊದಲ ಹೆಂಡತಿ ಮೃತರಾದ ಬಳಿಕ 2ನೇ ಮದುವೆಯಾಗಿದ್ದರು. ಇವರಿಗೆ ಕಳೆದ ಆರು ತಿಂಗಳ ಹಿಂದೆ ಗಂಡು ಮಗುವಾಗಿತ್ತು. ನಾಗೇಂದ್ರಪ್ಪಗಿದ್ದ ಐದೂವರೆ ಎಕರೆ ಜಮೀನನ್ನು ಭಾಗ ಮಾಡಿಕೊಡುವಂತೆ ಮಕ್ಕಳಾದ ಮಂಜುನಾಥ್‌ ಹಾಗೂ ಉಮೇಶ್‌ ಕೇಳಿದ್ದರು. ಆದರೆ ನಾಗೇಂದ್ರಪ್ಪ ಒಪ್ಪಿರಲಿಲ್ಲ. ಹೀಗಾಗಿ ಸುಪಾರಿ ನೀಡಿದ್ದರು.

ಮೂರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಕೊರಳೊಡ್ಡಿದ ತಾಯಿ: ಗಂಡನ 'ಆ' ಸಂಬಂಧಕ್ಕೆ ನಾಲ್ಕು

ಸುಪಾರಿ ಪಡೆದ ಮೂವರು ನ.29ರಂದು ಗೂಡ್ಸ್ ವಾಹನದಲ್ಲಿ ನಾಗೇಂದ್ರಪ್ಪಗೆ ಡಿಕ್ಕಿ ಹೊಡೆದು, ಕೊಲೆಗೆ ಯತ್ನಿಸಿದ್ದರು. ಈ ಅಪಘಾತದಲ್ಲಿ ನಾಗೇಂದ್ರಪ್ಪಗೆ ಸಣ್ಣಪುಟ್ಟಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದರು. ಬಳಿಕ, ನಾಗೇಂದ್ರಪ್ಪನನ್ನು ವಾಹನದಲ್ಲಿ ಕರೆದೊಯ್ದು, ಬಲವಂತವಾಗಿ ವಿಷ ಕುಡಿಸಿ, ಉಸಿರುಗಟ್ಟಿಸಿ, ಕೊಲೆ ಮಾಡಿ, ಬೋಗಿ ಗ್ರಾಮದ ಚರಂಡಿಯಲ್ಲಿ ಎಸೆದು ಹೋಗಿದ್ದರು.

Follow Us:
Download App:
  • android
  • ios