ಹಣ ವಸೂಲಿ ಮಾಡುವ ಉದ್ದೇಶದಿಂದ ವ್ಯಕ್ತಿಯೊಬ್ಬನ ಮೇಲೆ ಸುಳ್ಳು ಅತ್ಯಾ*ಚಾರದ ದೂರು ದಾಖಲಿಸಿದ್ದ ಮಹಿಳೆಯನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ. ಈ ಸಂಚನ್ನು ಮತ್ತೊಬ್ಬ ಅತ್ಯಾ*ಚಾರ ಆರೋಪಿ ಜಿತೇಂದ್ರ ಎಂಬಾತನ ಜೊತೆ ಸೇರಿ ರೂಪಿಸಿದ್ದು, ಪೊಲೀಸ್ ತನಿಖೆಯ ವೇಳೆ ಸತ್ಯಾಂಶ ಬಯಲಾಗಿದೆ.
ಹಣ ವಸೂಲಿಗಾಗಿ ವ್ಯಕ್ತಿಯೊಬ್ಬನ ಮೇಲೆ ಅತ್ಯಾ*ಚಾರ ಕೇಸ್ ದಾಖಲಿಸಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅತ್ಯಾ*ಚಾರ ಆರೋಪಿ ಜಿತೇಂದ್ರ ಅಲಿಯಾಸ್ ಬಿಟ್ಟು ಜೊತೆ ಸೇರಿ ಮಹಿಳೆ ಈ ಹಣ ಸುಲಿಗೆಯ ಸಂಚು ರೂಪಿಸಿದ್ದಾಳೆ. ತನ್ನ ಮೇಲೆ ಅತ್ಯಾ*ಚಾರದ ದೂರು ನೀಡಿದ ದೂರುದಾರ ಮಹಿಳೆಯ ಪತಿಯ ಮೇಲೆ ಒತ್ತಡ ಹೇರಿ ಹಣ ವಸೂಲಿ ಮಾಡುವುದಕ್ಕಾಗಿ ಈ ಜಿತೇಂದ್ರ ಅಲಿಯಾಸ್ ಬಿಟ್ಟು ಮಹಿಳೆಗೆ ಒತ್ತಡ ಹೇರಿ ಅತ್ಯಾ*ಚಾರ ಪ್ರಕರಣ ದಾಖಲಿಸಿಸುವಂತೆ ಮಾಡಿದ್ದ. ಆದರೆ ಗುರುಗ್ರಾಮ ಪೊಲೀಸರು ಈಗ ಸುಳ್ಳು ದೂರು ನೀಡಿದ ಮಹಿಳೆಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪಿತೂರಿಯನ್ನು ಅತ್ಯಾ*ಚಾರ ಆರೋಪಿ ಆಗಿರುವ ಜಿತೇಂದ್ರ ಅಲಿಯಾಸ್ ಬಿಟ್ಟು ಮಾಡಿದ್ದಾನೆ. ಪ್ರಸ್ತುತ ಈತ ಜಾಮೀನು ಪಡೆದು ಜೈಲಿನಿಂದ ಹೊರಗಿದ್ದಾನೆ. ಈತ ಮಹಿಳೆಯ ಜೊತೆ ಸೇರಿ ಹಣಕ್ಕಾಗಿ ಹಾಗೂ ತನ್ನ ಮೇಲೆ ರೇಪ್ ಕೇಸ್ ಹಾಕಿದ ಮತ್ತೊಬ್ಬ ಮಹಿಳೆಯ ಮೇಲೆ ಒತ್ತಡ ಹೇರಲು ಆಕೆಯ ಪತಿ ವಿರುದ್ಧವೇ ಈ ಮಹಿಳೆಯ ಕೈಯಿಂದ ಸುಳ್ಳು ರೇಪ್ ಕೇಸ್ ದಾಖಲಿಸುವುದಕ್ಕೆ ಒತ್ತಾಯಿಸಿ ಈ ಕೃತ್ಯವೆಸಗಿದ್ದು, ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಈಗ ಬಂಧಿತಳಾಗಿರುವ ಮಹಿಳೆ ಈ ಹಿಂದೆ ತನ್ನ ಲೀವ್ ಇನ್ ಪಾರ್ಟನರ್ ಪ್ರಸ್ತುತ ಜೈಲಿನಲ್ಲಿರುವ ವ್ಯಕ್ತಿಯ ವಿರುದ್ಧವೂ ಅತ್ಯಾ*ಚಾರ ಪ್ರಕರಣ ದಾಖಲಿಸಿದ್ದಳು.
ಈಗ ಸುಳ್ಳು ರೇಪ್ ಕೇಸ್ ಹಾಕಿ ಪೊಲೀಸರ ಅತಿಥಿಯಾಗಿರುವ ಮಹಿಳೆ ತನ್ನ ಲೀವಿಂಗ್ ಪಾರ್ಟನರ್ ಮೂಲಕವೇ ಸಂಚುಕೋರ ಜಿತೇಂದ್ರ ಅಲಿಯಾಸ್ ಬಿಟ್ಟುಗೆ ಪರಿಚಿತಳಾಗಿದ್ದಳು. ಡಿಸೆಂಬರ್ 11ರಂದು ರಾಜಸ್ಥಾನ ಮೂಲದ ಹಾಗೂ ದೆಹಲಿಯಲ್ಲಿ ನೆಲೆಸಿರುವ ಮಹಿಳೆಯೊಬ್ಬಳು ಡಿಎಲ್‌ಎಫ್ ಫೇಸ್-2ನ ಪೊಲೀಸ್ ಠಾಣೆಯಲ್ಲಿ ದೂರು ಅತ್ಯಾ*ಚಾರ ದೂರು ದಾಖಲಿಸಿದ್ದಳು. ನವೆಂಬರ್ 15 ರಂದು ಉದ್ಯೋಗ ಸಂದರ್ಶನಕ್ಕೆಂದು ಕರೆದು ತನ್ನ ಮೇಲೆ ಅತ್ಯಾ*ಚಾರ ಮಾಡಲಾಗಿದೆ. ಎಂಜಿ ರೋಡ್ ಮೆಟ್ರೋ ಸ್ಟೇಷನ್ ಸಮೀಪ ಈ ಕೃತ್ಯ ನಡೆದಿದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಳು.
ಎಂಜಿ ರೋಡ್ ಮೆಟ್ರೋ ಸ್ಟೇಷನ್ ಬಳಿ ಪುರುಷನೋರ್ವ ಇದು ಕಚೇರಿಯ ವಾಹನ ಎಂದು ಹೇಳಿ ನನ್ನ ಕಾರಿಗೆ ಹತ್ತಿಸಿಕೊಂಡಿದ್ದ. ನಂತರ ಮತ್ತೊಬ್ಬ ವ್ಯಕ್ತಿ ಆ ಕಾರನ್ನು ಡ್ರೈವ್ ಮಾಡಿದ್ದು, ನನ್ನನ್ನು ಮಾಲೊಂದರ ಸಮೀಪ ಸಂದರ್ಶನಕ್ಕೆಂದು ಕರೆದೊಯ್ದ ನಂತರ ಇಬ್ಬರು ಪುರುಷರು ಕಾರಿನ ಬಳಿ ಬಂದರು ಅವರಲ್ಲಿ ಓರ್ವ ನನ್ನನ್ನು ಕಾರಿನ ಒಳಭಾಗದಲ್ಲೇ ಅತ್ಯಾ*ಚಾರವೆಸಗಿದ್ದಾನೆ. ವಿರೋಧ ವ್ಯಕ್ತಪಡಿಸಿದಾಗ ಇಬ್ಬರು ನನಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಆಕೆ ಆರೋಪಿಸಿದ್ದಳು.
ಇದನ್ನೂ ಓದಿ: ಲಂಡನ್‌ನಲ್ಲಿ ವಿಜಯ್ ಮಲ್ಯ 70ನೇ ಬರ್ತ್‌ಡೇಗೆ ಲಲಿತ್ ಮೋದಿಯಿಂದ ಅದ್ದೂರಿ ಪಾರ್ಟಿ: ಕಿರಣ್ ಮಜುಂದಾರ್ ಭಾಗಿ
ಹೀಗೆ ಆಕೆ ದೂರು ನೀಡಿದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿದ್ದರು. ವಿಚಾರಣೆಗಿಳಿದ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನು ಹಾಗೂ ಫೋನ್ ಕರೆಗಳ ಬಗ್ಗೆ ಮಾಹಿತಿ ಪಡೆಯುವುದರ ಜೊತೆಗೆ ಹಲವು ತಾಂತ್ರಿಕ ಸಾಕ್ಷ್ಯಗಳು ಹಾಗೂ ಇತರ ಮಾಹಿತಿಯನ್ನು ಕಲೆ ಹಾಕಿದಾಗ, ಆಕೆಯ ದೂರಿಗೂ ಈ ಮಾಹಿತಿಗೂ ತಾಳೆಯಾಗದ ಹಿನ್ನೆಲೆಯಲ್ಲಿ ವಿಚಾರಣೆ ತೀವ್ರಗೊಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಜಿತೇಂದ್ರ, ಮಹಿಳೆಯ ಜೊತೆ ಸೇರಿ, ಹಣ ಸುಲಿಗೆ ಮಾಡಲು ಮತ್ತು ತನ್ನ ಮೇಲೆ ಅತ್ಯಾ*ಚಾರದ ಆರೋಪ ಹೊರಿಸಿದ ಮಹಿಳೆಯ ಮೇಲೆ ಒತ್ತಡ ಹೇರಲು ಈ ಕಥೆ ಹೆಣೆದಿದ್ದಾನೆ ಎಂದು ತಿಳಿದು ಬಂದಿದೆ. ಹೀಗಾಗಿ ಸುಳ್ಳು ದೂರು ನೀಡಿದ ಮಹಿಳೆಯ ವಿರುದ್ದ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಇವರೇನು ಅಭಿಮಾನಿಗಳ ಅಥವಾ ರಣಹದ್ದುಗಳ: ಮುಗಿಬಿದ್ದ ಜನರಿಂದ ನಟಿಯ ರಕ್ಷಿಸಲು ಪಡಿಪಾಟಲು ಪಟ್ಟ ಬಾಡಿಗಾರ್ಡ್
ಡಿಸೆಂಬರ್ 14ರಂದು ಆಕೆಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಆಕೆಯನ್ನು ಪೊಲೀಸರ ಕಸ್ಟಡಿಗೆ ನೀಡಿದ್ದರು. ಕಸ್ಟಡಿ ಮುಗಿದ ನಂತರ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ವಿಚಾರಣೆ ವೇಳೆ ಆಕೆ ತಾನು ತನ್ನ ಲೀವಿಂಗ್ ಪಾರ್ಟನರ್ ವಿರುದ್ಧ ಕಳೆದ ಜುಲೈನಲ್ಲಿ ಅತ್ಯಾ*ಚಾರ ಪ್ರಕರಣ ದಾಖಲಿಸಿದ್ದೆ ನಂತರ ಫರಿದಾಬಾದ್‌ನ ಜಿತೇಂದ್ರನ ಸಲಹೆಯಂತೆ ಈ ಸುಳ್ಳು ದೂರು ದಾಖಲಿಸಿದ್ದೆ ಎಂದಿದ್ದಾಳೆ. ಘಟನೆಯ ಬಳಿಕ ಪ್ರಮುಖ ಆರೋಪಿ ಜಿತೇಂದ್ರಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಗುರುಗ್ರಾಮ್ ಪೊಲೀಸ್ ವಕ್ತಾರರು ಹೇಳಿದ್ದಾರೆ.


