ಭಾರತದ ಮುಸ್ಲಿಮರು ಸೂರ್ಯ-ನದಿ ಪೂಜಿಸಬೇಕು, RSS ನಾಯಕನ ಹೇಳಿಕೆಯಿಂದ ಚರ್ಚೆ ಶುರುವಾಗಿದೆ. ಸೂರ್ಯ ನಮಸ್ಕಾರ ಮಾಡುವುದು, ನದಿಯನ್ನು ಗೌರವಿಸಿ ಪೂಜಿಸುವುದು ಉತ್ತಮ ಎಂದು ದತ್ತಾತ್ರಯ ಹೊಸಬಾಳೆ ಹೇಳಿದ್ದಾರೆ.

ಲಖನೌ (ಡಿ.12) ರಾಷ್ಟ್ರೀಯ ಸ್ವಯಂ ಸೇವಕ ಸಂಘ ( RSS) ದತ್ತಾತ್ರೆಯ ಹೊಸಬಾಳೆ ನೀಡಿರುವ ಹೇಳಿಕೆ ಭಾರಿ ಚರ್ಚೆಯಾಗುತ್ತಿದೆ. ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬೇಕು, ಭಾರತದ ನದಿಗಳನ್ನು ಪೂಜಿಸಬೇಕು ಎಂದಿದ್ದಾರೆ. ಉತ್ತರ ಪ್ರದೇದ ಸಂತ ಕಬೀರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹೊಸಬಾಳೆ, ಹಿಂದೂ ಧರ್ಮ ಅತ್ಯಂತ ಶ್ರೇಷ್ಠ ಧರ್ಮವಾಗಿದೆ. ಹಿಂದೂ ಧರ್ಮ ಎಲ್ಲರ ಒಳಿತು ಬಯಸುತ್ತದೆ ಎಂದಿದ್ದಾರೆ. ಹೊಸಬಾಳೆ ಹೇಳಿಕೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಮುಸ್ಲಿಮರು ಸೂರ್ಯ-ನದಿಗಳನ್ನು ಪೂಜಿಸುವುದು ಎಷ್ಟು ಸರಿ ಅನ್ನೋ ಪ್ರಶ್ನೆಗಳು, ಚರ್ಚೆಗಳು ಶುರುವಾಗಿದೆ.

ಸೂರ್ಯನಮಸ್ಕಾರದಿಂದ ನಷ್ಟವಾಗುವುದಿಲ್ಲ

ಭಾರತೀಯ ಮುಸ್ಲಿಮರು ಈ ಮಣ್ಣಿನ ಮಕ್ಕಳು. ಸೂರ್ಯ ನಮಸ್ಕಾರ ಮಾಡುವುದರಿಂದ ಅವರ ಧರ್ಮಕ್ಕೆ, ಅವರ ಸಂಪ್ರದಾಯಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಪರಿಸರದ ದೃಷ್ಟಿಯಿಂದ ಸೂರ್ಯ ನಮಸ್ಕಾರ, ನದಿಗಳನ್ನ ಪೂಜಿಸುವುದು ಅತ್ಯಂತ ಅಶ್ಯಕವಾಗಿದೆ. ಸೂರ್ಯ ನಮಸ್ಕಾರ ಮುಸ್ಲಿಮರ ಯಾವುದೇ ಆಚರಣೆಗೆ ಅಡ್ಡಿಯಲ್ಲ, ಅವರನ್ನು ಮಸೀದಿಗೆ ಹೋಗುವುದನ್ನು ತಡೆಯುವುದಿಲ್ಲ. ನಾವು ಪ್ರಕೃತಿಯಲ್ಲಿ ದೇವರನ್ನು ಕಾಣುತ್ತೇವೆ. ಇದರಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ ಎಂದು ಹೊಸಬಾಳೆ ಹೇಳಿದ್ದಾರೆ.

ಸೂರ್ಯ ನಮಸ್ಕಾರ ಮಾಡಿ ನಮಾಜ್ ಬಿಡಿ ಎಂದಲ್ಲ

ಸೂರ್ಯ ನಮಸ್ಕಾರ ಯೋಗದ ಒಂದು ಭಾಗ. ಇದು ಆರೋಗ್ಯಕ್ಕೂ ಉತ್ತಮ. ಸೂರ್ಯ ನಮಸ್ಕಾರದಿಂದ ಮುಸ್ಲಿಮರಿಗೆ ಯಾವ ಸಮಸ್ಯೆ ಎದುರಾಗಲಿದೆ? ಏನೂ ಸಮಸ್ಯೆಯಿಲ್ಲ. ಪ್ರಾಣಾಯಾಮಾ ಮಾಡುವುದರಿಂದ ಮುಸ್ಲಿಮರಿಗೆ ಏನಾಗಲಿದೆ? ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಿ, ನಮಾಜ್ ಮಾಡುವುದು ಬಿಡಿ ಎಂದು ಹೇಳುತ್ತಿಲ್ಲ. ನಮಾಜ್ ನಿಮ್ಮ ಮತದ ಆಚರಣೆ. ಇದು ದೇಶ, ಪ್ರಕೃತಿಯನ್ನು ಗೌರವಿಸುವ ಜೊತೆಗೆ ವೈಯುಕ್ತಿಕ ಆರೋಗ್ಯಕ್ಕೂ ಉತ್ತಮ ಎಂದು ಹೊಸಬಾಳೆ ಹೇಳಿದ್ದಾರೆ.

ಭಾರತದ ಪ್ರತಿಯೊಬ್ಬ ನಾಗರೀಕ ಅವರವರ ಧರ್ಮ ಪಾಲನೆ ಮಾಡುವುದರಲ್ಲಿ ಯಾವ ಅಡ್ಡಿ ಆತಂಕವೂ ಇಲ್ಲ. ಇದಕ್ಕಿಂತ ಮಿಗಿಲಾಗಿ ಮಾನವ ಧರ್ಮ, ದೇಶ ಅನ್ನೋದು ಇದೆ. ಅದು ಮಖ್ಯವಾಗಬೇಕು ಎಂದು ಹೊಸಬಾಳೆ ಹೇಳಿದ್ದಾರೆ. ಹಿಂದೂ ಸಂಸ್ಕೃತಿ, ಹಿಂದೂ ಧರ್ಮ ಪ್ರಕೃತಿಯನ್ನು ಆರಾಧಿಸುತ್ತಾ, ಪೂಜಿಸುತ್ತಾ ಬಂದಿದೆ. ಇದು ಪ್ರಕೃತಿ ಮೇಲಿಟ್ಟಿರುವ ಗೌರವ ಹಾಗೂ ಪ್ರಕೃತಿಯಿಂದ ನಾವು ಅನ್ನೋ ಮಹತ್ವದ ಸಂದೇಶವನ್ನು ನೀಡುತ್ತದೆ. ನಮ್ಮ ಎಲ್ಲಾ ಹಬ್ಬಗಳು ಪ್ರಕೃತಿಗೆ ಅನುಗುಣವಾಗಿ ಇದೆ. ಪ್ರಕೃತಿ ಜೊತೆಗೆ ಹೊಂದಿಕೊಂಡೇ ಹಬ್ಬಗಳ ಆಚರಣೆಗಳು ಇದೆ. ಶ್ರೇಷ್ಠ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಹೊಸಬಾಳೆ ಹೇಳಿದ್ದಾರೆ. ಹೊಸಬಾಳೆ ಹೇಳಿಕೆಯಿಂದ ಚರ್ಚೆಗಳು ಶುರುವಾಗಿದೆ. ಪರ ವಿರೋಧಗಳು ವ್ಯಕ್ತವಾಗುತ್ತಿದೆ.