ಸುಪ್ರೀಂ ತೀರ್ಪಿಗೂ ಮುನ್ನ ಸೋಲೊಪ್ಪಿಕೊಂಡಿದ್ದ ಕಪಿಲ್ ಸಿಬಲ್ ಪೋಸ್ಟ್ ವೈರಲ್; ದುಯೋಧನನಿಗೆ ಹೋಲಿಸಿದ ನೆಟ್ಟಿಗರು!
ಕೆಲವು ಯುದ್ಧಗಳಲ್ಲಿ ಸೋಲಲು ಹೋರಾಡಬೇಕಾಗುತ್ತದೆ. ಇತಿಹಾಸವು ತಲೆಮಾರುಗಳಿಗೆ ಅಹಿತಕರವಾದ ಸಂಗತಿಗಳನ್ನು ದಾಖಲಿಸಬೇಕು. ಸಾಂಸ್ಥಿಕ ಕ್ರಮಗಳ ಸರಿ ಮತ್ತು ತಪ್ಪುಗಳು ಮುಂಬರುವ ವರ್ಷಗಳಲ್ಲಿ ಚರ್ಚೆಯಾಗುತ್ತವೆ ಎಂದು ಕಪಿಲ್ ಸಿಬಲ್ ಎಕ್ಸ್‌ನಲ್ಲಿ ಸೋಮವಾರ ಬೆಳಗ್ಗೆ ತೀರ್ಪು ಬರುವ ಮುನ್ನವೇ ಪೋಸ್ಟ್ ಮಾಡಿದ್ದಾರೆ.
ನವದೆಹಲಿ (ಡಿಸೆಂಬರ್ 11, 2023): ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕೇಂದ್ರದ ಕ್ರಮವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಆದರೆ, ಸರ್ವೋಚ್ಛ ನ್ಯಾಯಾಲಯದ ಸಾಂವಿಧಾನಿಕ ಪೀಠ ಈ ತಿರ್ಫು ನೀಡುವ ಮೊದಲೇ ಕಪಿಲ್ ಸಿಬಲ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ವೈರಲ್ ಆಗಿದೆ.
ಸುಪ್ರೀಂಕೋರ್ಟ್ ತೀರ್ಪಿಗೂ ಸುಮಾರು 2 ಗಂಟೆಗಳ ಮುನ್ನ ಅಂದರೆ 9. 39 ಕ್ಕೆ ಕಪಿಲ್ ಸಿಬಲ್ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ‘ಕೆಲವು ಯುದ್ಧಗಳಲ್ಲಿ ಸೋಲುವುದಕ್ಕೆ ಹೋರಾಡಬೇಕು’ ಎಂದು ಪೋಸ್ಟ್ ಮಾಡಿದ್ದಾರೆ. ಆಗಸ್ಟ್ 2019 ರಲ್ಲಿ ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವುದನ್ನು ಪ್ರಶ್ನಿಸಿದ ಅರ್ಜಿದಾರರ ಪರ ವಕೀಲರಾಗಿದ್ದರು.
ಇದನ್ನು ಓದಿ: Article 370: ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮೋದಿ, ಅಮಿತ್ ಶಾ, ಕಾಶ್ಮೀರಿ ನಾಯಕರು ಹೇಳಿದ್ದೀಗೆ..
ಕೆಲವು ಯುದ್ಧಗಳಲ್ಲಿ ಸೋಲಲು ಹೋರಾಡಬೇಕಾಗುತ್ತದೆ. ಇತಿಹಾಸವು ತಲೆಮಾರುಗಳಿಗೆ ಅಹಿತಕರವಾದ ಸಂಗತಿಗಳನ್ನು ದಾಖಲಿಸಬೇಕು. ಸಾಂಸ್ಥಿಕ ಕ್ರಮಗಳ ಸರಿ ಮತ್ತು ತಪ್ಪುಗಳು ಮುಂಬರುವ ವರ್ಷಗಳಲ್ಲಿ ಚರ್ಚೆಯಾಗುತ್ತವೆ ಎಂದು ಕಪಿಲ್ ಸಿಬಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅವರ ಈ ಟ್ವೀಟ್‌ಗೆ 2 ಸಾವಿರಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದರೆ, 4 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ. ಹಾಗೆ, ಸುಮಾರು 1,300 ಜನರು ರೀಟ್ವೀಟ್ ಮಾಡಿದ್ದಾರೆ. ನಾನಾ ಜನರು ನಾನಾ ರೀತಿಯ ಪೋಸ್ಟ್ ಮಾಡಿದ್ದು, ಈ ಪೈಕಿ ನಿಮ್ಮ ಹೇಳಿಕೆ ಮಹಾಭಾರದ ಬಗ್ಗೆ ದುರ್ಯೋಧನ ನೀಡಿದ ಹೇಳಿಕೆಯಂತಿದೆ ಎಂದಿದ್ದಾರೆ. ಅಲ್ಲದೆ, ಸ್ವಾತಂತ್ರ್ಯ ಹೋರಾಟಗಾರನಂತೆ ಬಿಂಬಿಸಿಕೊಳ್ಳಬೇಡಿ, ನೀವು ಈ ಯುದ್ಧವನ್ನು ಹಣಕ್ಕಾಗಿ ಹೋರಾಡಿದ್ದೀರಾ ಎಂದು ಕಪಿಲ್ ಸಿಬಲ್ ಕಾಲೆಳೆದಿದ್ದಾರೆ.
Article 370 Verdict: ಲಡಾಖ್ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನಕ್ಕೂ ಸುಪ್ರೀಂ ಅಸ್ತು
ಐತಿಹಾಸಿಕ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ಆದೇಶ ಎತ್ತಿಹಿಡಿದಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಶೀಘ್ರ ಮರುಸ್ಥಾಪಿಸಬೇಕು ಮತ್ತು ಮುಂದಿನ ವರ್ಷ ಸೆಪ್ಟೆಂಬರ್ 30 ರೊಳಗೆ ಚುನಾವಣೆಗಳನ್ನು ನಡೆಸಬೇಕು ಎಂದೂ ಹೇಳಿದೆ. ಹಾಗೆ, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ರಚಿಸುವ ನಿರ್ಧಾರದ ಸಿಂಧುತ್ವವನ್ನು ಸಹ ಎತ್ತಿಹಿಡಿದಿದೆ.
ಇನ್ನು, ಕೇಂದ್ರವು ತನ್ನ ನಿರ್ಧಾರಗಳನ್ನು ಕಾನೂನು ಚೌಕಟ್ಟಿನೊಳಗೆ ತೆಗೆದುಕೊಂಡಿದೆ ಎಂದು ವಾದಿಸಿತ್ತು. ಜಮ್ಮು ಮತ್ತು ಕಾಶ್ಮೀರ ಮುಖ್ಯವಾಹಿನಿಗೆ ಬಂದಿರುವುದರಿಂದ ಭಯೋತ್ಪಾದನೆಯನ್ನು ಕಡಿಮೆ ಮಾಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ಇದು ಕೇಂದ್ರಾಡಳಿತ ಪ್ರದೇಶವನ್ನು ವೇಗವಾಗಿ ಅಭಿವೃದ್ಧಿಯತ್ತ ಸಾಗಲು ಸಹಾಯ ಮಾಡಿದೆ ಎಂದೂ ಸರ್ಕಾರ ವಾದಿಸಿತ್ತು. ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಪತನಗೊಂಡ ಒಂದು ವರ್ಷದ ನಂತರ ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು.
ಇದನ್ನು ಓದಿ: ಸೆಪ್ಟೆಂಬರ್ 2024ರೊಳಗೆ ಜಮ್ಮು ಕಾಶ್ಮೀರದಲ್ಲಿ ಎಲೆಕ್ಷನ್ ನಡೆಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಡೆಡ್‌ಲೈನ್
ಇದನ್ನು ಓದಿ: ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್: ಮೋದಿ ಸರ್ಕಾರಕ್ಕೆ ಜಯ