ಮ್ಯೂಸಿಕ್ ಕಾನ್ಸರ್ಟ್‌ಗೆ ತೆರಳಲು ಸಿಕೋ ಲೀವ್ ಕೊಡಿ, ಮನವಿ ಮಾಡಿದ ಉದ್ಯೋಗಿ ರಾಕ್ಸ್-ಮ್ಯಾನೇಜರ್ ಶಾಕ್ಸ್, ಮುಂಬೈನಲ್ಲಿ ಆಯೋಜನೆಗೊಂಡಿದ್ದ ಟ್ರಾವಿಸ್ ಸ್ಕಾಟ್ ಮ್ಯೂಸಿಕ್ ಕಾನ್ಸರ್ಟ್‌ಗಾಗಿ ರಜೆ ಕೇಳಿದ್ದಾನೆ. ಹಲವರು ಇದೇ ವಾಸ್ತವ ಎಂದಿದ್ದಾರೆ.

ಮುಂಬೈ (ನ.20) ಉದ್ಯೋಗಿಗಳು ವಾರದ ರಜೆ ಹೊರತುಪಡಿಸಿ ಇತರ ರಜೆಗಾಗಿ ಸಾಮಾನ್ಯವಾಗಿ ನೀಡುವ ಕಾರಣ ಆರೋಗ್ಯ ಸರಿಯಿಲ್ಲ. ಹೀಗೆ ಉದ್ಯೋಗಿಯೊಬ್ಬ ತನ್ನ ಮ್ಯಾನೇಜರ್‌ಗೆ ಮಸೇಜ್ ಮಾಡಿದ್ದಾನೆ. ನಾಳೆ ನನ್ನ ಆರೋಗ್ಯ ಸರಿ ಇರುವುದಿಲ್ಲ, ಹೀಗಾಗಿ ರಜೆ ಬೇಕು, ಕಾರಣ ಟ್ರಾವಿಸ್ ಸ್ಕಾಟ್ ಮ್ಯೂಸಿಕ್ ಕಾನ್ಸರ್ಟ್‌‌ನಲ್ಲಿ ಪಾಲ್ಗೊಳ್ಳಬೇಕು. ಹೀಗಾಗಿ ಸಿಕ್ ಲೀವ್ ನೀಡಬೇಕು ಎಂದು ಮನವಿ ಮಾಡಿದ್ದಾನೆ. ಈತನ ಕಾರಣ ಹಾಗೂ ಸೀಕ್ ಲೀವ್ ನೋಡಿ ಮ್ಯಾನೇಜರ್ ದಂಗಾಗಿದ್ದಾರೆ. ಕಿರಿಯ ಉದ್ಯೋಗಿ ಕಳುಹಿಸಿದ ಸಂದೇಶವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಿಂಗರ್ ಟ್ರಾವಿಸ್ ಸ್ಕಾಟ್ ಮ್ಯೂಸಿಕ್ ಕಾನ್ಸರ್ಟ್

ಸಿಂಗರ್ ಟ್ರಾವಿಸ್ ಸ್ಕಾಟ್ ದೆಹಲಿಯಲ್ಲಿ ಭರ್ಜರಿ ಮ್ಯೂಸಿಕ್ ಕಾನ್ಸರ್ಟ್ ನಡೆಸಿಕೊಟ್ಟಿದ್ದರು. ಇದರ ಬೆನ್ನಲ್ಲೇ ಮುಂಬೈನಲ್ಲಿ ಮ್ಯೂಸಿಕ್ ಕಾನ್ಸರ್ಟ್ ಆಯೋಜನೆಗೊಂಡಿತ್ತು. ಟ್ರಾವಿಸ್ ಸ್ಕಾಟ್ ಅಭಿಮಾನಿಯೊಬ್ಬ, ರಜೆ ಪಡೆದು ಕಾನ್ಸರ್ಟ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾನೆ. ವಾರದ ರಜೆ ಇಲ್ಲ, ಸರ್ಕಾರಿ ರಜೆಯೂ ಇಲ್ಲ, ಹೀಗಾಗಿ ಸುಲಭವಾಗಿ ರಜೆ ಸಿಗಬೇಕು, ಆದರೆ ಬಾಸ್ ಕಾರಣವನ್ನು ಪ್ರಶ್ನಿಸುವತಿರಬಾರದು. ಇದಕ್ಕಾಗಿ ಬಾಸ್ ಸಿಕ್ ಲೀವ್ ಕೇಳಿದ್ದಾನೆ. ಆದರೆ ಆರೋಗ್ಯ ಸತ್ಯ ಕಾರಣವನ್ನು ಬಹಿರಂಗಪಡಿಸಿದ್ದಾನೆ. ಕಾರಣದಲ್ಲಿ ತಾನು ಟ್ರಾವಿಸ್ ಸ್ಕಾಟ್ ಮ್ಯೂಸಿಕ್ ಕಾನ್ಸರ್ಟ್‌ಗೆ ತೆರಳಲು ಸಿಕ್ ಲೀವ್ ನೀಡಲು ಕೇಳಿದ್ದಾನೆ. ಇದೇ ಕಾರಣದಿಂದ ಬಾಸ್ ಮಾತ್ರವಲ್ಲ ಹಲವರು ಅಚ್ಚರಿಗೊಂಡಿದ್ದಾರೆ.

ಬಾಸ್ ಶಾಕ್, ಉದ್ಯೋಗಿ ರಾಕ್ಸ್

ಕಂಪನಿ ಬಾಸ್ ಗೌರವ್ ಶರ್ಮಾ ಈ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಅಧಿಕೃತವಾಗಿ ನನಗೆ ವಯಸ್ಸಾಗುತ್ತಿದೆ ಎಂದು ಈ ಕ್ಷಣದಲ್ಲಿ ನನಗೆ ಅನಿಸಿತು. ಕಾರಣ ಇಂದು ಬೆಳಗ್ಗೆ ನನ್ನ ತಂಡದ ಕಿರಿಯ ಉದ್ಯೋಗಿಯೋಬ್ಬ ಸಿಕೋ ಲೀವ್‌ಗೆ ಮೆಸೇಜ್ ಮಾಡಿದ್ದಾನೆ. ನಾನು ಸ್ಪೆಲ್ಲಿಂಗ್ ಮಿಸ್ಟೇಕ್ ಎಂದುಕೊಂಡಿದ್ದ, ಆದರೆ ಅಲ್ಲ ಆತ ಕೇಳಿದ್ದು ಸಿಕ್ ಲೀವ್ ಎಂದು ಗೌರವ್ ಶರ್ಮಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಉದ್ಯೋಗಿಯ ಇಮೇಲ್ ಸಂದೇಶ ಬಂದ ಬಳಿಕ ನನಗೆ ಅಚ್ಚರಿ ಜೊತೆ ಆಘಾತವಾಗಿತ್ತು. ಹೀಗಾಗಿ ತಕ್ಷಣವೇ ಮತ್ತೆ ಉದ್ಯೋಗಿಗೆ ಕರೆ ಮಾಡಿ ರಜೆ ಕುರಿತು ಸ್ಪೆಲ್ಲಿಂಗ್ ಮಿಸ್ಟೇಕ್ ಅಥವಾ ಏನು ಎಂದು ವಿಚಾರಿಸಿದ್ದಾರೆ. ಈ ವೇಳೆ ಉದ್ಯೋಗಿ ತಾಳ್ಮೆಯಿಂದ ನಗುತ್ತಲೇ ಇಲ್ಲಾ ಸಾರ್ ನಾನು ಕೇಳಿದ್ದು ಸೀಕೋ ಲೀವ್ ಎಂದಿದ್ದಾನೆ.

ಸಿಕೋ ಮೂಡ್.., ಸಿಕೋ ಲೀವ್

ಸಿಕೋ ಮೂಡ್ ಖ್ಯಾತ ಸಿಂಗ್ ಟ್ಕಾವಿಸ್ ಸ್ಕಾಟ್ ಅವರ ಮ್ಯೂಸಿಕ್ ಆಲ್ಬಮ್ ಸಾಂಗ್. ಇದೇ ದಾಟಿಯಲ್ಲೇ ಉದ್ಯೋಗಿ ಸಿಕೋ ಲೀವ್ ಕೇಳಿದ್ದಾನೆ. ಕೆಲಸ ಎಷ್ಟು ಮುಖ್ಯವೋ ವೈಬ್ ಕೂಡ ಅಷ್ಟೇ ಮುಖ್ಯ. ಹೀಗಾಗಿ ಇದು ನನ್ನ ಸಿಕೋ ಲೀವ್ (ಸಿಕ್ ಲೀವ್) ಅಧಿಕೃತ ರಜೆ ಅರ್ಜಿ ಎಂದು ಪರಿಗಣಸಿ, ಮುಖ್ಯವಾಗಿ ನನ್ನ ವರ್ಕ್ ಲೈಫ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಬ್ಯಾಲೆನ್ಸ್‌ಗಾಗಿ ಅತ್ಯವಶ್ಯಕ ಎಂದು ಇಮೇಲ್ ಕಳುಹಿಸಿದ್ದಾನೆ. ನವೆಂಬರ್ 19ಕ್ಕೆ ಟ್ರಾವಿಸ್ ಸ್ಕಾಟ್ ಮುಂಬೈನಲ್ಲಿ ಮ್ಯೂಸಿಕ್ ಕಾನ್ಸರ್ಟ್ ಶೋ ನೀಡುತ್ತಿದ್ದಾರೆ ಎಂದು ಇಮೇಲ್‌ನಲ್ಲಿ ತನ್ನ ರಜೆ ಕಾರಣ ವಿವರಿಸಿದ್ದಾರೆ.

ಅಜ್ಜಿಯ ಸಾವು, ತೀವ್ರ ಜ್ವರ ಕಾರಣಗಳು ಹಿಂದೆ ಇತ್ತು

ನಾವು ಕೆಲಸ ಮಾಡುವಾಗ ರಜೆಗಾಗಿ ಅಜ್ಜಿ ಸಾವು, ತೀವ್ರ ಜ್ವರ, ಮನೆಯ ಪ್ರಮುಖ ಕಾರ್ಯಕ್ರಮ ಸೇರಿದಂತೆ ನಂಬುವಂತ, ಬಲವಾದ ಕಾರಣವಿತ್ತು.ಆದರೆ ಈಗ ಮ್ಯೂಸಿಕ್ ಕಾನ್ಸರ್ಟ್‌ಗೆ ತೆರಳುವುದು ಕೂಡ ರಜೆಯ ಒಂದು ಪ್ರಮುಖ ಕಾರಣವಾಗಿದೆ. ಈ ರಜೆಗೆ ಸಿಕೋ ಲೀವ್ ಸೇರಿದಂತೆ ಹೊಸ ಹೆಸರುಗಳನ್ನು ಕೊಡುತ್ತಿದ್ದೇವೆ. ನನಗೂ ಸಂಗೀತ ಇಷ್ಟ, ಆದರೆ ವಾರದ ನಡುವೆ ಸಂಗೀತ ಕೇಳಲು ರಜೆ ಪಡೆಯುವುದು ಹವ್ಯಾಸವಾದರೆ ನಾನು ತಪ್ಪು ವರ್ಕ್ ಕಲ್ಚರ್ ಬೆಳೆಸುತ್ತಿದ್ದೇನೆ ಅನ್ನೋದು ಸ್ಪಷ್ಟ ಎಂದು ಬಾಸ್ ಹೇಳಿದ್ದಾರೆ.