ಬೇರೆ ಕೆಲ್ಸ ಇದೆ ಇಲ್ಲ ಹುಷಾರಿಲ್ಲ ಅನ್ನೋ ಕಾರಣಕ್ಕೆ ಉದ್ಯೋಗಿಗಳು ರಜೆ ತೆಗೆದುಕೊಳ್ತಾರೆ. ರಜೆ ನೀಡಿದ್ಮೇಲೂ ಕಂಡಿಷನ್ ಹಾಕಿದ್ರೆ ಏನು ಸುಖ? ಇಲ್ಲೊಬ್ಬ ಬಳಕೆದಾರ ಜಪಾನ್ ಹಾಗೂ ಭಾರತೀಯ ಬಾಸ್ ಮಧ್ಯೆ ರಜೆ ನೀಡೋ ವಿಷ್ಯದಲ್ಲಿರುವ ವ್ಯತ್ಯಾಸವನ್ನು ಹಂಚಿಕೊಂಡಿದ್ದಾರೆ.

ದೇವರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಅನ್ನೋ ಹಾಗೆ ಕಂಪನಿ (Company) ಎಂ.ಡಿ ರಜೆ ಕೊಟ್ರೂ ಮ್ಯಾನೇಜರ್ ರಜೆ ಕೊಡೊದಿಲ್ಲ ಎನ್ನುವ ಸ್ಥಿತಿ ಈಗಿದೆ. ಅದ್ರಲ್ಲೂ ಒಂದೊಂದು ಬಾಸ್ ಒಂದೊಂದು ರೀತಿ. ರಜೆ ವಿಷ್ಯ ಬಂದಾಗ ಮೂಗು ಮುರಿಯೋ ಬಾಸ್ ಗಳ ಸಂಖ್ಯೆಯೇ ಹೆಚ್ಚು. ನಮ್ಮ ರಜಾ ಸ್ಟಾಕ್ ಇದ್ರೂ ರಜೆ ಪಡೆಯೊಕೆ ಕೈಕಾಲು ಹಿಡಿಯಬೇಕು. ಅನೇಕರು ರಜೆ ಸಿಗ್ದೆ ಒದ್ದಾಡ್ತಿರುತ್ತಾರೆ. ಅವರು ತೀರಿಕೊಂಡ್ರು, ಇವರು ತೀರಿಕೊಂಡ್ರು ಅಂತ ಸಾವಿನ ಸುಳ್ಳು ಹೇಳಿ ರಜೆ ತೆಗೆದುಕೊಳ್ಳೋರಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರತ ಮತ್ತು ಜಪಾನ್ ಬಾಸ್ ಮಧ್ಯೆ ಇರುವ ವ್ಯತ್ಯಾಸವನ್ನು ಹೇಳಲಾಗಿದೆ. ಬಳಕೆದಾರರೊಬ್ಬರು ರಜೆ ಕೇಳಿದಾಗ ಭಾರತೀಯ ಬಾಸ್ ಹಾಗೂ ಜಪಾನಿ ಬಾಸ್ ನೀಡಿದ ರಿಯಾಕ್ಷನ್ ಪೋಸ್ಟ್ ಮಾಡಿದ್ದಾರೆ.

ರಜೆ (leave) ಕೇಳಿದಾಗ ಬಾಸ್ ಗಳ ರಿಯಾಕ್ಷನ್ ಹೀಗಿತ್ತು? : 

ರೆಡ್ಡಿಟ್ ನಲ್ಲಿ ಬಳಕೆದಾರರೊಬ್ಬರು ಭಾರತೀಯ ಬಾಸ್ ಹಾಗೂ ಜಪಾನಿ ಬಾಸ್ ನೀಡಿದ ರಿಯಾಕ್ಷನ್ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಇಬ್ಬರೂ ರಜೆಯನ್ನು ನೀಡಿದ್ದಾರೆ. ಆದ್ರೆ ರಜೆ ನೀಡಿದ ಮೇಲೆ ಹಾಕಿದ ಕಂಡಿಷನ್ ಗಮನ ಸೆಳೆದಿದೆ.

ಸ್ಥಳೀಯ ಭಾಷಿಕರನ್ನೇ ಬ್ಯಾಂಕ್‌ ನೌಕರಿಗಳಿಗೆ ನೇಮಿಸಿ : ನಿರ್ಮಲಾ

ಜಪಾನಿ ಬಾಸ್ : ಉದ್ಯೋಗಿ ಊರಿಗೆ ಹೋಗ್ಬೇಕು ರಜೆ ನೀಡಿ ಎಂದಾಗ, ಜಪಾನಿ ಬಾಸ್ ʻʻ ಶುಭದಿನ! ಗಮನದಲ್ಲಿದೆ. ದಯವಿಟ್ಟು ನಿಮ್ಮ ಮನೆಗೆ ಹೋಗುವಾಗ ಜಾಗರೂಕರಾಗಿರಿ” ಅಂತ ಮೆಸ್ಸೇಜ್ ಮಾಡಿದ್ದಾರೆ.

ಭಾರತೀಯ ಬಾಸ್ : ʻʻರಜೆ ನೀಡಲಾಗಿದೆ. ದಯವಿಟ್ಟು ಟೀಂ ಹಾಗೂ ಮೇಲ್ ಗಾಗಿ ಆನ್ಲೈನ್ ನಲ್ಲಿ ಇರಿʼʼ ಅಂತ ಪ್ರತಿಕ್ರಿಯೆ ನೀಡಿದ್ದಾರೆ.

ಈ ಎರಡೂ ಬಾಸ್ ಗಳ ಮೆಸ್ಸೇಜ್ ಪೋಸ್ಟ್ ಮಾಡಿರುವ ವ್ಯಕ್ತಿ, ತುರ್ತು ಕೆಲಸಕ್ಕಾಗಿ ತಮ್ಮ ಊರಿಗೆ ಹೋಗಬೇಕಾಗಿತ್ತು. ನನ್ನ ಬಳಿ ಇನ್ನೂ ಏಳು ಕ್ಯಾಶುಯಲ್ ರಜೆಗಳು ಉಳಿದಿವೆ. ಇಬ್ಬರೂ ನನಗೆ ರಜೆ ನೀಡಿದ್ದಾರೆ. ಆದ್ರೆ ಇಬ್ಬರ ಪ್ರತಿಕ್ರಿಯೆ ಭಿನ್ನವಾಗಿದೆ. ನನಗೆ ರಜೆ ನೀಡುವ ಮೂಲಕ ಭಾರತೀಯರು ನನಗೆ ವೈಯಕ್ತಿಕ ಉಪಕಾರ ಮಾಡಿದಂತೆ ವರ್ತಿಸುತ್ತಿದ್ದಾರೆ ಅಂತ ಬಳಕೆದಾರ ಬರೆದುಕೊಂಡಿದ್ದಾರೆ.

ಪ್ರತಿಷ್ಠಿತ ಕಂಪೆನಿಯಲ್ಲಿ ದೊಡ್ಡ ಮಟ್ಟದ ಲೇಆಫ್;‌ ಆತಂಕದಲ್ಲಿ ನಿದ್ದೆ ಬಿಟ್ಟ ಉದ್ಯೋಗಿಗಳು!

ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ :

 ರೆಡ್ಡಿಟ್ ಬಳಕೆದಾರನ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಉದ್ಯೋಗಿಗಳು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ನಾನು ಜಪಾನಿ ಕ್ಲೈಂಟ್ ಗಳ ಜೊತೆ ವ್ಯವಹರಿಸಿದ್ದೇನೆ. ಅವರು ನನ್ನ ಜೊತೆಯೂ ಹೀಗೆ ವರ್ತಿಸಿದ್ದರು. ಜಪಾನಿ ಕ್ಲೈಂಟ್ ಗಳಿಗೆ ಹೋಲಿಕೆ ಮಾಡಿದ್ರೆ ಭಾರತೀಯ ಕ್ಲೈಂಟ್ ಗಳ ಸ್ವಭಾವ ಭಿನ್ನವಾಗಿದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಫ್ರಾನ್ಸ್ ನಲ್ಲಿ ಕೆಲ್ಸ ಮಾಡ್ತಿರುವ ವ್ಯಕ್ತಿಯೊಬ್ಬರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇಲ್ಲಿ ಕೆಲ್ಸಕ್ಕಿಂತ ಮೊದಲು ಜೀವನ ಬರುತ್ತದೆ. ಆದ್ರೆ ಭಾರತದಲ್ಲಿ ಜೀವನಕ್ಕಿಂತ ಮೊದಲು ಕೆಲ್ಸ ಬರುತ್ತದೆ ಎಂದಿದ್ದಾರೆ. ಕೆಲಸದ ಸಂಸ್ಕೃತಿಯ ವ್ಯತ್ಯಾಸಗಳ ಕುರಿತು ದೊಡ್ಡ ಚರ್ಚೆಗೆ ಪೋಸ್ಟ್ ಪ್ರಚೋದಿಸುತ್ತದೆ. ರಜೆ ಪಡೆದ್ರೂ ಭಾರತೀಯರಿಗೆ ನೆಮ್ಮದಿ ಇಲ್ಲ. ಆ ಸಮಯದಲ್ಲೂ ಕೆಲ್ಸ ಬೆನ್ನ ಹಿಂದಿರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ 9 -6 ಗಂಟೆ ಕೆಲ್ಸ ಮಾಡಿ ಜನರು ಬೇಸತ್ತಿದ್ದಾರೆ. ನೌಕರಿಗಿಂತ ಸ್ವಂತ ಉದ್ಯೋಗದ ಮೊರೆ ಹೋಗ್ತಿದ್ದಾರೆ. ಇದಕ್ಕೆಲ್ಲ ಭಾರತದಲ್ಲಿರುವ ಕೆಲ್ಸದ ಶೈಲಿ, ರಜೆ ಗಲಾಟೆ ಕೂಡ ಮುಖ್ಯ ಕಾರಣವಾಗ್ತಿದೆ.