ಎಲಾನ್ ಮಸ್ಕ್‌ರ ಸ್ಟಾರ್‌ಲಿಂಕ್ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಆರಂಭಿಸಲು ಸರ್ಕಾರದಿಂದ ಪರವಾನಗಿ ಪಡೆದಿದೆ. ಈ ಮೂಲಕ ಟವರ್‌ಗಳ ಅಗತ್ಯವಿಲ್ಲದೇ, ಉಪಗ್ರಹದ ಮೂಲಕ ನೇರವಾಗಿ ಇಂಟರ್ನೆಟ್ ಸಂಪರ್ಕ ಒದಗಿಸಲಿದೆ.
ನವದೆಹಲಿ (ಜೂ.7): ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಭಾರತದಲ್ಲಿ ಉಪಗ್ರಹ ಆಧರಿತ ಇಂಟರ್ನೆಟ್ ಸೇವೆ ಒದಗಿಸುವ ಕಾಲ ಸನ್ನಿಹಿತವಾಗಿದೆ. ಭಾರತದಲ್ಲಿ ಸೇವೆ ಸಲ್ಲಿಸಲು ಕೇಂದ್ರ ಸರ್ಕಾರದಿಂದ ಕಂಪನಿ ಲೈಸೆನ್ಸ್ ಪಡೆದುಕೊಂಡಿದೆ.
ಈಗಾಗಲೇ ಭಾರತದಲ್ಲಿ ಸ್ಟಾರ್‌ಲಿಂಕ್ ಸಹಾಯದಿಮದ ಉಪಗ್ರಹ ಆಧರಿತ ಅಂತರ್ಜಾಲ ಸೇವೆ ಒದಗಿಸಲು ಏರ್‌ಟೆಲ್ ಹಾಗೂ ಜಿಯೋ ಒಪ್ಪಂದ ಮಾಡಿಕೊಂಡಿವೆ. ಇದಾದ ನಂತರ ಟೆಲಿಕಾಂ ಇಲಾಖೆಯಿಂದ ಪರವಾನಗಿ ಪಡೆದ ಮೂರನೇಯ ಕಂಪನಿ ಸ್ಟಾರ್‌ಲಿಂಕ್ ಆಗಿದೆ ಹಾಗೂ ಯಾವುದೇ ಇತರ ಕಂಪನಿ ಸಹಾಯವಿಲ್ಲದೇ ನೇರವಾಗಿ ಉಪಗ್ರಹ ಅಂತರ್ಜಾಲ ಸೇವೆ ನೀಡಲಿದೆ.
ಇದನ್ನೂ ಓದಿ: ನಾನಿಲ್ಲದಿದ್ದರೆ ಚುನಾವಣೆಯಲ್ಲಿ ಟ್ರಂಪ್ ಸೋಲುತ್ತಿದ್ದರು, ಎಲಾನ್ ಮಸ್ಕ್ ಬಾಂಬ್
ಲೈಸೆನ್ಸ್ ದೊರೆತಿರುವುದರ ಬಗ್ಗೆ ಟೆಲಿಕಾಂ ಇಲಾಖೆಯೇ ದೃಢಪಡಿಸಿದ್ದು, ಇನ್ನು ಸ್ಟಾರ್‌ಲಿಂಕ್ ಅರ್ಜಿ ಸಲ್ಲಿಸಿದ 15-20 ದಿನಗಳಲ್ಲಿ ಪ್ರಾಯೋಗಿಕ ತರಂಗಾಂತರ ಪರೀಕ್ಷೆ ನಡೆಯಲಿದೆ ಎಂದಿದೆ.
ಉಪಗ್ರಹ ಆಧರಿತ ಇಂಟರ್ನೆಟ್ ಸೇವೆ ಇದಾಗಲಿದ್ದು, ಟವರ್‌ಗಳ ಅಳವಡಿಕೆ ಬೇಕಿಲ್ಲ. ಉಪಗ್ರಹದ ಮೂಲಕವೇ ಫೋನ್‌ಗೆ ಇಂಟರ್ನೆಟ್ ಸಂಪರ್ಕ ಸಿಗಲಿದೆ. ಹೀಗಾಗಿ ಕುಗ್ರಾಮಗಳಿಗೆ ಕೂಡ ಅಂತರ್ಜಾಲ ಸೇವೆ ಸುಲಭ ಸಾಧ್ಯವಾಗಲಿದೆ.
