ಡೋನಾಲ್ಡ್ ಟ್ರಂಪ್ 2024ರ ಅಮೆರಿಕ ಚುನಾವಣೆ ಗೆದ್ದಿದ್ದು ನನ್ನಿಂದ. ನಾನು ಕೈಜೋಡಿಸದೇ ಇದ್ದರೆ ಟ್ರಂಪ್ ಸೋಲು ಕಾಣುತ್ತಿದ್ದರು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಏನಿದು ಎಲಾನ್ ಮಸ್ಕ್ ಸಿಡಿಸಿದ ಹೊಸ ಬಾಂಬ್?

ನ್ಯೂಯಾರ್ಕ್(ಜೂ.06) ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಉದ್ಯಮಿ ಎಲಾನ್ ಮಸ್ಕ್ ನಡುವಿನ ಮುಸುಕಿನ ಗುದ್ದಾಟ ಇದೀಗ ಬಹಿರಂಗವಾಗಿದೆ. ಸಾರ್ವಜನಿಕವಾಗಿ ಇಬ್ಬರು ಆರೋಪ ಪ್ರತ್ಯಾರೋಪ, ಅಸಮಾಧಾನ, ಆಕ್ರೋಶ ಹೊರಹಾಕುತ್ತಿದ್ದಾರೆ. ಟ್ರಂಪ್ ಮಸೂದೆ ಕುರಿತು ಅಸಮಾಧಾನಗೊಂಡಿರುವ ಎಲಾನ್ ಮಸ್ಕ್, ಇದೀಗ ಟ್ರಂಪ್ ವಿರುದ್ದವೇ ಹೇಳಿಕೆ ನೀಡುತ್ತಿದ್ದಾರೆ. ಇದರ ನಡುವೆ ಎಲಾನ್ ಮಸ್ಕ್ ಸಿಡಿಸಿದ ಹೊಸ ಬಾಂಬ್ ಭಾರಿ ಚರ್ಚೆಗೆ ಗ್ರಾಸವಾಸಿದೆ. 2024ರ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಟ್ರಂಪ್ ಸರ್ಕಾರ ಮರಳಿ ಅಧಿಕಾರಕ್ಕೇರಿದ್ದು ತನ್ನಿಂದ. ನಾನು ಪ್ರಯತ್ನಿಸದೇ ಇದ್ದರೆ ಟ್ರಂಪ್ ಸೋಲುತ್ತಿದ್ದರು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

ಡೋನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆದ್ದಿದ್ದೇ ನನ್ನಿಂದ. ನಾನಿಲ್ಲದಿದ್ದರೆ ಡೋನಾಲ್ಡ್ ಟ್ರಂಪ್ ಹೇಳ ಹೆಸರಿಲ್ಲದಂತೆ ನಿರ್ಗಮಿಸುತ್ತಿದ್ದರು. ಮರಳಿ ಅಧ್ಯಕ್ಷ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಸದನವನ್ನು ಡೆಮಾಕ್ರಟಿಕ್ ಪಾರ್ಟಿ ಸದನ ನಿಯಂತ್ರಿಸುತ್ತಿದ್ದದರೆ. ರಿಪಬ್ಲಿಕನ್ ಪಾರ್ಟಿ ಸದಸ್ಯರು ಸೆನೆಟ್‌ನಲ್ಲಿ 51 -49ರಷ್ಟಿದ್ದರು. ಟ್ರಂಪ್‌ಗೆ ಅದಿಕಾರ ಸಿಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಉತ್ತಮ ಸಂಬಂಧ ಈಗ ಇಲ್ಲ ಎಂದು ಟ್ರಂಪ್

ಎಲಾನ್ ಮತ್ತು ನಾನು ಉತ್ತಮ ಸಂಬಂಧವನ್ನು ಹೊಂದಿದ್ದೆವು. ಆದರೆ ಮಸ್ಕ್ ಹೇಳಿಕೆಯಿಂದ ನಾನು ಆಶ್ಚರ್ಯಚಕಿತನಾಗಿದ್ದೇನೆ. ನಾನು ಎಲಾನ್ ಬಗ್ಗೆ ತುಂಬಾ ನಿರಾಶೆಗೊಂಡಿದ್ದೇನೆ. ಈ ಮಸೂದೆಯನ್ನು ಯಾರಿಗಿಂತಲೂ ಚೆನ್ನಾಗಿ ಮಸ್ಕ್ ತಿಳಿದಿದ್ದರು. ನಾನು ಇವಿ ಮ್ಯಾಂಡೇಟ್ ಅನ್ನು ಕಡಿತಗೊಳಿಸುತ್ತೇನೆ ಎಂದಾಗ ಮಸ್ಕ್‌ಗೆ ಸಮಸ್ಯೆಯಾಯಿತು. ಅವರಿಗೆ ಶತಕೋಟಿ ಡಾಲರ್ ನಷ್ಟವಾಗುತ್ತಿದೆ ಎಂದಾಗ ತಿರುಗಿ ಬಿದ್ದರು ಎಂದು ಮಸ್ಕ್ ಹೇಳಿದ್ದಾರೆ.

ಟ್ರಂಪ್ ಸರ್ಕಾರದದಿಂದ ಹೊರಬಂದ ಬಳಿಕ ಮಸ್ಕ್ ಗರಂ

ಟೆಸ್ಲಾ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ಖರ್ಚು ಶಾಸನದ ಮೇಲೆ ಮತ್ತೊಂದು ದಾಳಿ ನಡೆಸಿದ್ದಾರೆ. ಟ್ರಂಪ್ ಆಡಳಿತದೊಳಗಿನ ತಮ್ಮ ಸ್ಥಾನವನ್ನು ತೊರೆದ ಕೆಲವೇ ದಿನಗಳಲ್ಲಿ ಅಮೆರಿಕನ್ನರು ಟ್ರಂಪ್ ಮಸೂದೆ ತಿರಸ್ಕರಿಸುವಂತೆ ಹೇಳಿದ್ದಾರೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥಾಪಕರು ಸರ್ಕಾರಿ ದಕ್ಷತಾ ಇಲಾಖೆಯ (DOGE) ಮುಖ್ಯಸ್ಥರಾಗಿ 130 ದಿನಗಳ ಕಾಲ ವಿಶೇಷ ಸರ್ಕಾರಿ ಉದ್ಯೋಗಿ ಯಾಗಿ ಸೇವೆ ಸಲ್ಲಿಸಿದರು, ಅವರು ಉಬ್ಬಿದ ಸರ್ಕಾರಿ ಕಾರ್ಯಕ್ರಮಗಳು ಎಂದು ನಿರೂಪಿಸಿದ್ದನ್ನು ತೆಗೆದುಹಾಕುವ ಆದೇಶದೊಂದಿಗೆ. ಆದಾಗ್ಯೂ, ಕಳೆದ ವಾರ ಅವರ ನಿರ್ಗಮನವು ಅವರು ಈ ಹಿಂದೆ ಪ್ರತಿಪಾದಿಸಿದ್ದ ಆಡಳಿತದ ವಿರುದ್ಧ ಖಂಡನೆಯ ಪ್ರವಾಹವನ್ನು ಪ್ರಚೋದಿಸಿದೆ.