ಅಬ್ಬಾ ಏನ್ ಸೆಕೆ: ದಣಿವಾರಿಸಲು ಕೆಸರಿನ ಸ್ನಾನ ಮಾಡುತ್ತಿರುವ ಗಜಪಡೆ
- ಬಿರು ಬೇಸಿಗೆಯಿಂದ ಹೈರಾಣಾದ ಪ್ರಾಣಿ ಪಕ್ಷಿಗಳು
- ಕೆಸರಿನ ಸ್ನಾನ ಮಾಡಿ ದಾಹ ತೀರಿಸಿಕೊಳ್ಳುವ ಗಜಪಡೆ
- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಈ ಬಾರಿಯ ಬೇಸಿಗೆ ಸೆಖೆಯ ಉರಿ ಬರೀ ಮನುಷ್ಯರನ್ನು ಮಾತ್ರವಲ್ಲ ಪ್ರಾಣಿ ಪಕ್ಷಿಗಳನ್ನು ಬಹುವಾಗಿ ಕಾಡುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಈ ಬಾರಿ ತಾಪಮಾನ 40 ಡಿಗ್ರಿ ಗಡಿ ದಾಟಿದೆ. ಬೇಸಿಗೆಯ ದಣಿವಾರಿಸಲು ಜನ ಫಾಲ್ಸ್, ಹೊಳೆ ನದಿಗಳಲ್ಲಿ ಸಮಯ ಕಳೆಯಲು ಹೊರಟರೇ ಪ್ರಾಣಿ ಪಕ್ಷಿಗಳು ಕೂಡ ನೀರನ್ನು ಅರಸಿ ದೂರ ದೂರ ಸಾಗುತ್ತಿವೆ. ಹಾಗೆಯೇ ಗಜಪಡೆಯೊಂದು ಬೇಸಿಗೆಯ ತಾಪದಿಂದ ಪಾರಾಗಲು ಕೆಸರಿನ ಸ್ನಾನ ಮಾಡುತ್ತಿವೆ. ಆನೆಗಳು ಕೆಸರಿನ ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಸಿಲಿನ ದಾಹಕ್ಕೆ ಸಂಪೂರ್ಣ ನೀರು ಆರಿ ಕೆಸರು ಮಾತ್ರ ಇರುವ ಸಣ್ಣ ಕೊಳದ ಬಳಿ ಆನೆಗಳ ದೊಡ್ಡ ಗುಂಪು ಜಮಾಯಿಸಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ಆನೆಗಳ ದೊಡ್ಡ ಹಿಂಡಿನಲ್ಲಿ ಪುಟ್ಟ ಮರಿಯಾನೆಗಳಿಂದ ಹಿಡಿದು ದೊಡ್ಡ ಆನೆಗಳವರೆಗೆ ಎಲ್ಲಾ ವಯಸ್ಸಿನ ಆನೆಗಳು ಕಂಡು ಬರುತ್ತಿವೆ. ಎಲ್ಲಾ ಆನೆಗಳು ತಮ್ಮ ದೇಹಕ್ಕೆ ಕೆಸರಿನ ಲೇಪನ ಮಾಡಿಕೊಂಡು ಬಿಸಿಲ ದಾಹದ ಮಧ್ಯೆ ತಮ್ಮ ದೇಹವನ್ನು ತಂಪಾಗಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದಾರೆ. ಈ ಗುಂಪಿನಲ್ಲಿರುವ ಸಣ್ಣ ಮರಿಯಾನೆಗಳು ಕೆಸರಿನಲ್ಲಿ ಉರುಳಾಡುತ್ತಾ ಆಟವಾಡುವುದರಲ್ಲಿ ಮಗ್ನವಾಗಿವೆ.
ಬಂಡೀಪುರದಲ್ಲಿ ಅಪರೂಪದ ದೃಶ್ಯ ಸೆರೆ : ಅವಳಿ ಮರಿಗಳೊಂದಿಗೆ ಕಾಣಿಸಿಕೊಂಡ ಆನೆ
ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ತಮಾಷೆಯಂತೆ ಕಾಣುತ್ತೆ. ಆದರೆ ಇದು ಅವರ ಬಿಸಿಲಿನ ಬೆಗೆಯನ್ನು ಕಡಿಮೆ ಗೊಳಿಸುವ ವಿಧಾನ' ಎಂದು ಅವರು ಬರೆದಿದ್ದಾರೆ. ಒಡಿಶಾದ ಮಯೂರ್‌ಭಂಜ್‌ನ ಬರಿಪಾದ ವಿಭಾಗದ ರಾಸ್‌ಗೋವಿಂದ್‌ಪುರ ಅರಣ್ಯ ವಲಯದಲ್ಲಿ ಈ ವೀಡಿಯೊವನ್ನು ಸೆರೆಹಿಡಿಯಲಾಗಿದೆ.
ಮತ್ತೊಂದು ಟ್ವೀಟ್‌ನಲ್ಲಿ, ಅವರು ಆನೆಗಳ ಈ ನಡವಳಿಕೆಯನ್ನು ವಾಲ್ಲೋವಿಂಗ್ ಎಂದು ಕರೆಯಲಾಗುತ್ತದೆ ಎಂದು ವಿವರಿಸಿದ್ದಾರೆ. ಇದನ್ನು ವಾಲ್ಲೋವಿಂಗ್ ಎಂದು ಕರೆಯಲಾಗುತ್ತದೆ. ಆನೆಗಳು ಇದನ್ನು ಮಾಡಲು ಇಷ್ಟಪಡುತ್ತವೆ. ಇದು ಅವರನ್ನು ತಂಪಾಗಿರಿಸುತ್ತದೆ. ಆನೆಗಳು ಬೆವರು ಗ್ರಂಥಿಗಳನ್ನು ಹೊಂದಿರುವುದಿಲ್ಲ ಆದರೆ ಹೆಚ್ಚಿನ ಪ್ರಮಾಣದ ಮೇಲ್ಮೈ ವಿಸ್ತೀರ್ಣ ಅನುಪಾತವನ್ನು ಹೊಂದಿರುತ್ತವೆ ಮತ್ತು ಆದ್ದರಿಂದ ಶಾಖವು ಉತ್ಪತ್ತಿಯಾಗುತ್ತದೆ. ಆದ್ದರಿಂದ ಈ ರೀತಿಯಲ್ಲಿ ಅಥವಾ ಅವರ ಕಿವಿಗಳನ್ನು ಬೀಸುವ ಮೂಲಕ ಶಾಖವನ್ನು ದೂರ ಮಾಡಲು ಯತ್ನಿಸುತ್ತವೆ ಎಂದು ಐಎಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಬರೆದುಕೊಂಡಿದ್ದಾರೆ.
ಬೇಲಿ ದಾಟಲು ಮರಿಗೆ ಸಹಾಯ ಮಾಡುತ್ತಿರುವ ಆನೆಗಳ ಹಿಂಡು
ಆನೆಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳು ತಮ್ಮ ಮರಿಗಳನ್ನು ತುಂಬಾ ಜಾಗರೂಕವಾಗಿ ನೋಡುವ ಅವುಗಳು ಮರಿಗಳ ರಕ್ಷಣೆಯಲ್ಲಿ ಸದಾ ಮುಂದು ಹಾಗೆಯೇ ಇಲ್ಲಿ ಆನೆಗಳ ಹಿಂಡಿನ ವಿಡಿಯೋವೊಂದು ವೈರಲ್ ಆಗಿದ್ದು, ಆನೆಗಳ ನಡೆ ಮೆಚ್ಚುಗೆಗೆ ಪಾತ್ರವಾಗಿದೆ. ಕೊಯಮತ್ತೂರಿನ ಹೊರವಲಯದ ನರಸೀಪುರಂನಲ್ಲಿ ಎರಡು ಆನೆಗಳು ಸೋಲಾರ್ ಬೇಲಿಯನ್ನು ದಾಟಲು ತಮ್ಮ ಮರಿಗೆ ಸಹಾಯ ಮಾಡಿದ ವೀಡಿಯೊ ಇದಾಗಿದೆ. ಐದು ಆನೆಗಳು ಆಹಾರ ಮತ್ತು ನೀರು ಹುಡುಕಿಕೊಂಡು ಕೃಷಿ ಭೂಮಿಗೆ ಬಂದಿರುವುದನ್ನು ವೀಡಿಯೊ ತೋರಿಸುತ್ತದೆ. ಆನೆಗಳ ಹಿಂಡಿನಲ್ಲಿ ಮೊದಲೆರಡು ಆನೆಗಳು ಸೋಲಾರ್ ಬೇಲಿಯನ್ನು ದಾಟಿದರೆ, ಇಬ್ಬರು ಮರಿ ಹಾದು ಹೋಗಲು ಬೇಲಿಯನ್ನು ತಗ್ಗಿಸುತ್ತಿರುವುದನ್ನು ಕಾಣಬಹುದು.
ಗಜಪಡೆ ನೋಡಿ ಬೆಕ್ಕಿನಂತೆ ಓಟಕಿತ್ತ ಸಿಂಹಗಳು.. ಇದೆಂಥಾ ವಿಚಿತ್ರ
ಆನೆಯ ಹಿಂಡು ತಮ್ಮ ಗುಂಪಿನಲ್ಲಿರುವ ಮರಿಯನ್ನು ತುಂಬಾ ಜೋಪಾನವಾಗಿ ಕಾಪಾಡುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಜೋರಾಗಿ ಬೊಬ್ಬೆ ಹೊಡೆಯುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ. ಈ ವಿಡಿಯೋ ಗಮನಿಸಿದರೆ ಕಾಡು ಪ್ರಾಣಿಗಳ ಬಗ್ಗೆ ಸಾರ್ವಜನಿಕರ ದೃಷ್ಟಿಕೋನ ಬದಲಾಗಿದೆ ಎಂದು ತಿಳಿದು ಬರುತ್ತದೆ.