ಬಂಡೀಪುರದಲ್ಲಿ ಅಪರೂಪದ ದೃಶ್ಯ ಸೆರೆ : ಅವಳಿ ಮರಿಗಳೊಂದಿಗೆ ಕಾಣಿಸಿಕೊಂಡ ಆನೆ

  • ಅವಳಿ ಮರಿಗಳೊಂದಿಗೆ ಕಾಣಿಸಿಕೊಂಡ ಆನೆ
  • ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ಅಪರೂಪದ ದೃಶ್ಯ
  • ಮೂರ್ಕೆರೆ ದಾರಿಯಲ್ಲಿ ಮರಿಗಳೊಂದಿಗೆ ಕಾಣಿಸಿಕೊಂಡ ತಾಯಾನೆ 
wild Elephant Appeared with twin cub in Bandipur Karnataka akb

ಪುಟ್ಟರಾಜು. ಆರ್.ಸಿ. ಏಷಿಯಾನೆಟ್  ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ: ಕಾಡಾನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ.  ಚಾಮರಾಜನಗರ (Chamarajanagara) ಜಿಲ್ಲೆ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ಈ ಅಪರೂಪದ ದೃಶ್ಯ ಕಂಡು ಬಂದಿದೆ. ಇಲ್ಲಿನ ಮೂರ್ಕೆರೆ ದಾರಿಯಲ್ಲಿ ಈ ಕಾಡಾನೆ (wild Elephant)ತನ್ನ ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಆನೆಗಳು ಕೇವಲ ಒಂದು ಮರಿಗಳಿಗೆ ಜನ್ಮ  ನೀಡುತ್ತವೆ. ಅವಳಿ ಮರಿಗಳಿಗೆ ಜನ್ಮ ನೀಡುವುದು ಅಪರೂಪವಾಗಿದ್ದು ಬಂಡೀಪುರ ಅರಣ್ಯದಲ್ಲಿ ಇದೇ ಪ್ರಥಮ ಎಂದು ಹೇಳಲಾಗಿದೆ.

ಹುಲಿ (Tiger), ಹಂದಿ (Pig), ಕುರಿ  ನಾಯಿ ಸೇರಿದಂತೆ ಇತರ ಪ್ರಾಣಿಗಳು  ಅವಳಿ ಮರಿಗಳನ್ನು ಹಾಕುವುದು  ಸಾಮಾನ್ಯ. ಆದರೆ ಆನೆಗಳು ಅವಳಿ(Twin) ಮರಿಗಳಿಗೆ ಜನ್ಮ ನೀಡುವುದು ತೀರಾ ಅಪರೂಪವಾಗಿದೆ. ಇಂತಹ ಅಪರೂಪದ ಘಟನೆಗೆ ಬಂಡೀಪುರ ಸಾಕ್ಷಿಯಾಗಿದೆ. ಆನೆಗಳು 22 ರಿಂದ 23 ತಿಂಗಳ ಕಾಲ ಗರ್ಭ ಧರಿಸಿರುತ್ತವೆ. ನವಜಾತ ಆನೆ ಮರಿ 90 ರಿಂದ 100 ಕೆಜಿ ತೂಕ ಇರುತ್ತದೆ. ಇದೇ  ತಿಂಗಳು  17 ರಂದು ಸಫಾರಿ ಜನರಿಗೆ ಈ ತಾಯಾನೆ ದರ್ಶನ ನೀಡಿದ್ದು, ಬಂಡಿಪುರದಲ್ಲಿ(Bandipura) ಸೋಲಿಗರು (Soliga Tribal community) ಕೂಡ 40 ವರ್ಷದಿಂದ ಇಂತಹ ಅವಳಿ ಆನೆ ಮರಿ ಜನನ ನೋಡಿಲ್ಲ ಎನ್ನುತ್ತಾರೆ.

ಟ್ರಾಫಿಕ್ ಪೊಲೀಸ್ ತರ ಬಸ್‌ ನಿಲ್ಲಿಸಿದ ಆನೆ : ವಿಡಿಯೋ ನೋಡಿ

ಆನೆಗಳ ಸಾಕಷ್ಟು ವಿಡಿಯೋಗಳನ್ನು ನೀವು ಈಗಾಗಲೇ ನೋಡಿರಬಹುದು. ದಟ್ಟಾರಣ್ಯಗಳ ನಡುವೆ ಸಾಗುವ ರಸ್ತೆಗಳಲ್ಲಿ ಆನೆಗಳು ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆನೆಗಳು ಸೌಮ್ಯ ಪ್ರಾಣಿಗಳು. ತಮ್ಮನ್ನು ಯಾರೂ ಕೆರಳಿಸದ ಹೊರತು ಅವುಗಳು ಯಾರಿಗೂ ಏನು ಮಾಡುವುದಿಲ್ಲ. ಆದರೆ ಮದವೇರಿದರೆ ಅವುಗಳ ಮುಂದೆ ಉಳಿಯಲು ಸಾಧ್ಯವಿಲ್ಲ. ಆದರೆ ಕಾಡಾನೆಗಳ ಬಗ್ಗೆ ಭಯ ಮಾತ್ರ ಜನರಿಗೆ ಇದ್ದೇ ಇದೆ. ಆದಾಗ್ಯೂ ರಸ್ತೆಯಲ್ಲಿ ಪ್ರಯಾಣಿಸುತ್ತಿರುವಾಗ ಧುತ್ತನೇ ಆನೆಯೊಂದು ಎದುರಾದರೆ ಹೇಗಿರುತ್ತದೆ. ನಿಜವಾಗಿಯೂ ಎದೆ ಢವ ಢವನೇ ಹೊಡೆದುಕೊಳ್ಳಲು ಶುರು ಮಾಡುತ್ತದೆ ಅಲ್ಲವೇ ಹಾಗೆಯೇ ಕೇರಳದ ಮುನ್ನಾರ್‌ನಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ಕೇರಳ ಸಾರಿಗೆ ಇಲಾಖೆಗೆ ಸೇರಿದ ಬಸ್‌ ಮುಂದೆ ಆನೆಯೊಂದು ಧುತ್ತನೇ ಎದುರಾಗಿದೆ.

ಬಂಡೀಪುರ: ಪ್ರವಾಸಿಗರ ಪುಂಡಾಟಕ್ಕೆ ಕೆರಳಿದ ಕಾಡಾನೆ! ಮುಂದೆ ಮಾಡಿದ್ದಿದು...
ಆನೆಯನ್ನು ನೋಡಿ ಬಸ್‌ನಲ್ಲಿ ಇದ್ದ ಪ್ರಯಾಣಿಕರೆಲ್ಲಾ ಬೊಬ್ಬೆ ಹೊಡೆಯಲು ಶುರು ಮಾಡುತ್ತಾರೆ. ಜೊತೆಗೆ ತಮ್ಮ ಫೋನ್‌ಗಳನ್ನು ಕೈಗೆ ತೆಗೆದುಕೊಂಡು ವಿಡಿಯೋ ಮಾಡಲು ಶುರು ಮಾಡುತ್ತಾರೆ. ವಿಡಿಯೋದಲ್ಲಿ ಕಾಣಿಸುವಂತೆ ಎರಡು ದಂತಗಳ ದೊಡ್ಡ ಕಾಡಾನೆಯನ್ನು (wild elephant) ನೋಡಿ ಬಸ್ ಚಾಲಕ ಬಸ್‌ನ್ನು ನಿಲ್ಲಿಸುತ್ತಾನೆ. ಇತ್ತ ಬಸ್‌ ನಿಂತಲ್ಲಿಗೆ ಬರುವ ಆನೆ ಒಮ್ಮೆ ಡ್ರೈವರ್‌ ಇದ್ದಲ್ಲಿಗೆ ತನ್ನ ಸೊಂಡಿಲನ್ನು ತೂರಿಸುತ್ತದೆ. ನಂತರ ಸ್ವಲ್ಪ ಕಾಲ ಬಸ್‌ ಮುಂದೆಯೇ ನಿಲ್ಲುತ್ತದೆ. ನಂತರ ನಿಧಾನಕ್ಕೆ ರಸ್ತೆಯಿಂದ ದೂರ ಸರಿದು, ಬಸ್‌ ಮುಂದೆ ಹೋಗಲು ಅವಕಾಶ ಮಾಡಿಕೊಡುತ್ತದೆ.

ಈ ಒಂದು ನಿಮಿಷ 34 ಸೆಕೆಂಡ್‌ಗಳ ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು (Supriya Sahu) ಅವರು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನೆಯ (Elephant) ಆಗಮನದ ವೇಳೆ ಬಸ್‌ (Bus) ಚಾಲಕ (Driver) ಆ ಪರಿಸ್ಥಿತಿಯನ್ನು ನಿರ್ವಹಿಸಿದ ರೀತಿಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಈ ಸರ್ಕಾರಿ ಬಸ್ಸಿನ ಚಾಲಕ ಯಾರೆಂದು ಗೊತ್ತಿಲ್ಲ ಆದರೆ ಅವನು ಖಂಡಿತವಾಗಿಯೂ ಮಿಸ್ಟರ್ ಕೂಲ್.  ಆನೆಯ ಮೇಲ್ವಿಚಾರಣೆ ತಪಾಸಣೆಯನ್ನು ಅವರು ನಿರ್ವಹಿಸಿದ ರೀತಿ, ಇದು ಅವರ ನಡುವೆ ಎಂದಿನಂತೆ ವ್ಯವಹಾರದಂತಿದೆ ಎಂದು ಬರೆದಿದ್ದಾರೆ.

Latest Videos
Follow Us:
Download App:
  • android
  • ios