ಚುನಾವಣಾ ಬಾಂಡ್‌ಗೆ ಸಂಬಂಧಪಟ್ಟಂತೆ ತನ್ನಲ್ಲಿರುವ ಎಲ್ಲಾ ಮಾಹಿತಿಯನ್ನು ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ತಿಳಿಸಿದ ಬಳಿಕ, ಚುನಾವಣಾ ಆಯೋಗವು ಬಾಂಡ್‌ನ ಡೇಟಾವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದೆ. 

ನವದೆಹಲಿ (ಮಾ.21): ಚುನಾವಣಾ ಬಾಂಡ್‌ಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನೂ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿದ ಬಳಿಕ ಗುರುವಾರದ ವೇಳೆಗೆ ತನ್ನಲ್ಲಿನ ಎಲ್ಲಾ ಡೇಟಾವನ್ನು ಚುನಾವಣಾ ಆಯೋಗಕ್ಕೆ ನೀಡಿರುವುದಾಗಿ ಸ್ಟೇಡಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತಿಳಿಸಿತ್ತು. ಇದರ ಬೆನ್ನಲ್ಲಿಯೇ ಈ ಮಾಹಿತಿಗಳನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಇದರಲ್ಲಿ ಚುನಾವಣಾ ಬಾಂಡ್‌ಗಳ ನಂಬರ್‌ಗಳನ್ನು ಕೂಡ ಉಲ್ಲೇಖಿಸಿರುವುದಾಗಗಿ ತಿಳಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ತಾನು ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಎಲ್ಲಾ ವಿವರಗಳನ್ನು ಒದಗಿಸಿದ್ದಾಗಿ ತಿಳಿಸಿತ್ತು. ಇದರಲ್ಲಿ ವಿಶಿಷ್ಟ ಬಾಂಡ್ ಸಂಖ್ಯೆ ಸೇರಿದಂತೆ ಖರೀದಿದಾರ ಮತ್ತು ಸ್ವೀಕರಿಸುವ ರಾಜಕೀಯ ಪಕ್ಷದ ನಡುವಿನ ಸಂಬಂಧವನ್ನು ಬಹಿರಂಗಪಡಿಸುತ್ತದೆ ಎಂದಿತ್ತು.

ಪ್ರಕಟಗೊಂಡ ಹೊಸ ಮಾಹಿತಿಯಲ್ಲಿ ಬಾಂಡ್‌ಅನ್ನು ಖರೀದಿ ಮಾಡಿದವರ ಹೆಸರು, ಅದರ ಮೊತ್ತ ಹಾಗೂ ಬಾಂಡ್‌ ನಂಬರ್‌ಅನ್ನು ಒಳಗೊಂಡಿದೆ. ಅದರೊಂದಿಗೆ ಯಾವ ಪಕ್ಷ ಈ ಬಾಂಡ್‌ಅನ್ನು ಎನ್‌ಕ್ಯಾಶ್‌ ಮಾಡಿಕೊಂಡಿದೆ ಎನ್ನುವ ಮಾಹಿತಿಯನ್ನೂ ನೀಡಲಾಗಿದೆ. ಬಾಂಡ್ ಅನ್ನು ರಿಡೀಮ್ ಮಾಡಿದ ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳು ಮತ್ತು ಎನ್‌ಕ್ಯಾಶ್ ಮಾಡಿದ ಬಾಂಡ್‌ನ ಮುಖಬೆಲೆ ಮತ್ತು ಅನನ್ಯ ಸಂಖ್ಯೆಯ ವಿವರವನ್ನೂ ತಿಳಿಸಲಾಗಿದೆ.

Electoral Bonds: ಎಸ್‌ಬಿಐ ನೀಡಿದ ಬಾಂಡ್‌ ವಿವರ..ಚುನಾವಣಾ ಆಯೋಗ ಪ್ರಕಟ: ಹೆಚ್ಚು ದೇಣಿಗೆ ಪಡೆದ ಪಕ್ಷಗಳು ಯಾವು?

ಆದರೆ, ಬಾಂಡ್‌ಗಳನ್ನು ರಿಡೀಮ್ ಮಾಡಿದ ರಾಜಕೀಯ ಪಕ್ಷಗಳ ಸಂಪೂರ್ಣ ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ಕೆವೈಸಿ ವಿವರಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ ಏಕೆಂದರೆ ಇದು ಈ ಖಾತೆಗಳ ಭದ್ರತೆಗೆ ರಾಜಿಯಾಗಬಹುದು ಎಂದು ಎಸ್‌ಬಿಐ ಚೇರ್ಮನ್‌ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಭದ್ರತಾ ಕಾರಣಗಳಿಗಾಗಿ ಖರೀದಿದಾರರ ಕೆವೈಸಿ ವಿವರಗಳನ್ನು ಸಹ ಸಾರ್ವಜನಿಕಗೊಳಿಸಲಾಗಿಲ್ಲ ಎಂದು ಎಸ್‌ಬಿಐ ಹೇಳಿದೆ.

'ಲೆಕ್ಕ ಬರುತ್ತಾ ನಿಮಗೆ..' ಚುನಾವಣಾ ಬಾಂಡ್‌ ವಿಚಾರದಲ್ಲಿ ವಿಪಕ್ಷಗಳ ಮೇಲೆ ಅಮಿತ್‌ ಶಾ ವಾಗ್ದಾಳಿ!

Scroll to load tweet…